Monday, July 24, 2023

ದಾಸ ದಾಸರ ಮನೆಯ

 ರಚನೆ:  ಕನಕದಾಸ'

ಸಂಗೀತ: ಎಂ. ರಂಗರಾವ್ 
ಗಾಯಕ: ಡಾ. ರಾಜಕುಮಾರ್ 

।। ದಾಸ ದಾಸರ ಮನೆಯ ದಾಸಾನು ದಾಸ ನಾನು 
ಶ್ರೀಸ ಶ್ರೀರಂಗ ನಿಮ್ಮ ಮನೆಯ ದಾಸ ।।೨।।
ದಾಸ ದಾಸರ ಮನೆಯ ದಾಸಾನು ದಾಸ ನಾನು 

।। ಕಾಳುದಾಸರ ಮನೆಯ ಆಳದಾಸ ನಾನಯ್ಯ 
ಕೀಳು ದಾಸನು ನಾನು ಕಿರಿಯ ದಾಸ ।।೨।।
ಭಾಳಾಕ್ಷ ಮುಂತಾಗಿ ಭಜಿಪ ದೇವರ ಮನೆಯ ।।೨।।
ಆಳಿನ ಆಳಿನ ಆಳಿನಡಿ ದಾಸ ನಾನು 

ದಾಸ ದಾಸರ ಮನೆಯ ದಾಸಾನು ದಾಸ ನಾನು 
ಶ್ರೀಸ ಶ್ರೀರಂಗ ನಿಮ್ಮ ಮನೆಯ ದಾಸ
ದಾಸ ದಾಸರ ಮನೆಯ ದಾಸಾನು ದಾಸ ನಾನು 

।। ಪಂಕಜನಾಭನ ಮನೆ ಮಂಕು ದಾಸನಯ್ಯ 
ಕೊಂಕುದಾಸನು ನಾನು ಕುರುಡ ದಾಸ ।।೨।।
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ।।೨।।
ಬಂಕದ ಬಾಗಿಲ ಕಾಯ್ವ ಬಡ ದಾಸ ನಾನು 

ದಾಸ ದಾಸರ ಮನೆಯ ದಾಸಾನು ದಾಸ ನಾನು 
ಶ್ರೀಸ ಶ್ರೀರಂಗ ನಿಮ್ಮ ಮನೆಯ ದಾಸ
ದಾಸ ದಾಸರ ಮನೆಯ ದಾಸಾನು ದಾಸ ನಾನು 

।। ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ 
ಕುಲವಿಲ್ಲದ ದಾಸ ಕುನ್ನಿ ದಾಸ ।।೨।।
ಮಲಹರ ರಂಗ ನಿನ್ನ ಮನೆಯ ಮಾದಿಗ ದಾಸ ।।೨।।
ಸಲೆ ಮುಕ್ತಿ ಪಾಲಿಸೋ ಆದಿಕೇಶವರಾಯ ।।೨।।

ದಾಸ ದಾಸರ ಮನೆಯ ದಾಸಾನು ದಾಸ ನಾನು 
ಶ್ರೀಸ ಶ್ರೀರಂಗ ನಿಮ್ಮ ಮನೆಯ ದಾಸ
ದಾಸ ದಾಸರ ಮನೆಯ ದಾಸಾನು ದಾಸ ನಾನು 

Daasa daasara maneya sung by Dr. Rajkumar

Friday, January 18, 2019

ಮೌನವೇ ಆಭರಣ

ಚಿತ್ರ:  ತೂಗು ದೀಪ 
ರಚನೆ: ಆರ್. ಏನ್. ಜಯಗೋಪಾಲ್  
ಸಂಗೀತ: ವಿಜಯ್ ಭಾಸ್ಕರ್ 
ಗಾಯಕ: ಪಿ. ಬಿ. ಶ್ರೀನಿವಾಸ್ 

ಮೌನವೇ ಆಭರಣ 
ಮುಗುಳ್ನಗೇ ಶಶಿಕಿರಣ 
ನೋಟವೇ ಹೂಬಾಣ 
ಚೆಲುವಿನಾ ಮಧುಬನ 

ಮೌನವೇ ಆಭರಣ 
ಮುಗುಳ್ನಗೇ ಶಶಿಕಿರಣ 

।। ಹೆಜ್ಜೆಯನಿಡಲು ಹೂವರಳುವುದು
     ಗೆಜ್ಜೆಯ ನಾದವು ಹಾಡಾಗುವುದು ।।೨।।
ಸಜ್ಜಿಗೆ ಸಿಹಿಯು ಬಾಯಲ್ಲಿಹುದು
ಲಜ್ಜೆಯು ನಿನ್ನಲಿ ಮನೆಮಾಡಿಹುದು

ಮೌನವೇ ಆಭರಣ 
ಮುಗುಳ್ನಗೇ ಶಶಿಕಿರಣ 
ನೋಟವೇ ಹೂಬಾಣ 
ಚೆಲುವಿನಾ ಮಧುಬನ 

।। ಕಡಲಿನ ಆಳವ ಅಳೆದವರಿಲ್ಲ 
    ಹೆಣ್ಣಿನ ಮನಸನು ಅರಿತವರಿಲ್ಲ ।।೨।।
ಕರೆದಿರೆ ಸನಿಹ ವರಿಸಿದ ನಲ್ಲ 
ನಾಚಿಕೆ ಏತಕೆ ಶಿವನೇ ಬಲ್ಲ 

ಮೌನವೇ ಆಭರಣ 
ಮುಗುಳ್ನಗೇ ಶಶಿಕಿರಣ 
ನೋಟವೇ ಹೂಬಾಣ 
ಚೆಲುವಿನಾ ಮಧುಬನ 

Song: Mounave abharana
Movie: Thoogu Deepa

Monday, July 31, 2017

ನಿನ್ನ ಚೆಲುವ ವದನ

ಚಿತ್ರ: ಜೀವನ ಚೈತ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್, ಮಂಜುಳಾ ಗುರುರಾಜ್

ಗಂ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 
      ನೆನೆಯಲು ಕಾಮನ ಸುಮಬಾಣನ ಅದೇ ದಿನ 
      ಕುಣಿಯಿತು ಮನ, ತಣಿಸುತ ನನ್ನಾ 
      ನಯನದಿ ನಯನ ಬೆರೆತಾ ಕ್ಷಣ ।೨।
ಹೆ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 
      ನೆನೆಯಲು ಕಾಮನ ಸುಮಬಾಣನ ಅದೇ ದಿನ 
      ಕುಣಿಯಿತು ಮನ, ತಣಿಸುತ ನನ್ನಾ 
      ನಯನದಿ ನಯನ ಬೆರೆತಾ ಕ್ಷಣ ।೨। 
ಜೊ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 

ಗಂ:  ಶೃಂಗಾರದ ಸಂಗೀತದ ಸ್ವರ ಮೂಡುತಲಿರೇ
      ಅನುರಾಗದ ನವಪಲ್ಲವಿ ಎದೆ ಹಾಡುತಲಿರೇ
ಹೆ:  ಹಣ್ಣಾದೆನು ಹೆಣ್ಣಾದೆನು ನಸುಸಾಚಿಕೆ ಬರೇ
      ನಿನ್ನ ಆಸೆಯು ನನ್ನ ಆಸೆಯು  ಜೊತೆಯಾಗುತಲಿರೇ
ಗಂ:  ನಿನ್ನ ಚಲುವಿನಲೀ, ನಿನ್ನ ಒಲವಿನಲೀ, ಹುಸಿ ನಗುವಿನಲೀ, ಮೃದು ನುಡಿಗಳಲೀ
ಹೆ:  ಸಿಹಿ ಜೇನಿನ ಸವಿ ಕಂಡೆನು ನಿನ್ನ ನೋಡುತಲಿರೇ

ಜೊ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 

ಹೆ:  ಉಲ್ಲಾಸದೀ ತಂಗಾಳಿಯು ತನು ಸೋಕುತಲಿರೇ 
      ಬಿಳಿಮೋಡವು ನಸುಗೆಂಪಿನ ರಂಗಾಗುತಲಿರೇ 
ಗಂ:  ಸಂತೋಷದ ಉಯ್ಯಾಲೆಯು ತೂಗಾಡುತಲಿರೇ 
      ಮಧುಮಾಸದ ನೆನಪಾಯಿತು ಹಿತವಾಗುತಲಿರೇ 
ಹೆ:  ಮಾಮರಗಳಲೀ, ಹಸಿರೆಲೆಗಳಲೀ, ಮನತಣಿಸುತಲೀ, ಸುಖತುಂಬುತಲೀ 
ಗಂ:  ಮರಿಕೋಗಿಲೆ ಹೊಸರಾಗದ ಧನಿ ಮಾಡುತಲಿರೇ 

ಹೆ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 
ಗಂ:  ನೆನೆಯಲು ಕಾಮನ ಸುಮಬಾಣನ ಅದೇ ದಿನ 
ಹೆ:  ಕುಣಿಯಿತು ಮನ, ತಣಿಸುತ ನನ್ನಾ 
ಗಂ:  ನಯನದಿ ನಯನ ಬೆರೆತಾ ಕ್ಷಣ
ಹೆ:  ನಯನದಿ ನಯನ ಬೆರೆತಾ ಕ್ಷಣ

Song: Ninna Cheluva Vadana
Movie: Jeevana Chaitra

ಲಕ್ಷ್ಮೀ ಬಾರಮ್ಮ

ಚಿತ್ರ: ಜೀವನ ಚೈತ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್, ಮಂಜುಳಾ ಗುರುರಾಜ್ 

ಹೆ:  ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ ।೨।
       ಬೆಳಗಲು ಮನೆಯನ್ನು ಸಿರಿದೇವಿಯೇ 
ಗಂ: ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಹೆ:  ಕಾಲಲಿ ಕೀರು ಗೆಜ್ಜೆ ಗಲು ಗಲು ಎಂದಾಗ 
ಗಂ: ಕಾಲಲಿ ಕೀರು ಗೆಜ್ಜೆ ಗಲು ಗಲು ಎಂದಾಗ 
       ಮನೆಯಲಿ ನೂರು ವೀಣೆ ನಾದ ಹೊಮ್ಮಿ ಚಿಮ್ಮಲೀ 
ಜೊ:  ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ 
       ಬೆಳಗಲು ಮನೆಯನ್ನು ಸಿರಿದೇವಿಯೇ 

ಹೆ:  ಅನುಗಾಲ ಜೊತೆಯಾಗಿ ನಮ್ಮ ಹರಿಯನ್ನು ಸೇರಲು ಬಾರಮ್ಮ 
ಗಂ: ಅನುಗಾಲ ಜೊತೆಯಾಗಿ ನಮ್ಮ ಹರಿಯನ್ನು ಸೇರಲು ಬಾರಮ್ಮ 
ಹೆ:  ನಮ್ಮ ಸೊಸೆಯಾಗಿ ನರಹರಿ ಸತಿಯಾಗಿ 
ಗಂ: ನಮ್ಮ ಸೊಸೆಯಾಗಿ ನರಹರಿ ಸತಿಯಾಗಿ, ನಮಗಾನಂದ ನೀಡುತಲೀ 
ಹೆ:  ನಮಗಾನಂದ ನೀಡುತಲೀ 
ಗಂ: ಸುಖವನು ನೀ ತಾರೆ ನಮ್ಮ ಭಾಗ್ಯದೇವತೇ 
ಜೊ:  ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ 
       ಬೆಳಗಲು ಮನೆಯನ್ನು ಸಿರಿದೇವಿಯೇ 

ಗಂ: ಹಿತವಾದ ಶ್ರುತಿಯಲ್ಲಿ ನಮ್ಮ ಬದುಕೆಂಬ ಗೀತೆಯ ಹಾಡಮ್ಮಾ 
ಹೆ:  ಹಿತವಾದ ಶ್ರುತಿಯಲ್ಲಿ ನಮ್ಮ ಬದುಕೆಂಬ ಗೀತೆಯ ಹಾಡಮ್ಮಾ 
ಗಂ: ಪ್ರೀತಿ ಸುಮವಾಗಿ ಜೇನಿನ ಹನಿಯಾಗಿ 
ಹೆ:  ಪ್ರೀತಿ ಸುಮವಾಗಿ ಜೇನಿನ ಹನಿಯಾಗಿ, ಹೊಸಸಂತೋಷ ತುಂಬುತಲೀ 
ಗಂ: ಹೊಸಸಂತೋಷ ತುಂಬುತಲೀ 
ಹೆ:  ಕೀರ್ತಿಯ ತಾರಮ್ಮ ನಮ್ಮ ಭಾಗ್ಯದೇವತೇ 
ಜೊ:  ।। ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ 
           ಬೆಳಗಲು ಮನೆಯನ್ನು ಸಿರಿದೇವಿಯೇ  ।।೨।।

Song: Lakshmi Baaramma
Movie: Jeevana Chaitra

ಅರಳಿದ ತನುವಿದು

ಚಿತ್ರ: ಜೀವನ ಚೈತ್ರ 
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್

।। ಅರಳಿದ ತನುವಿದು ಅಂದವೋ ಅಂದ 
    ನಲಿದಿರುವ ಮನವಿನ್ನೂ ಚಂದವೋ ಚಂದ ।।೨।। 
ಸಂತೋಷದೀ ನೀನಿರು ಬರುವನು ಕಂದ 
ಅರಳಿದ ತನುವಿದು ಅಂದವೋ ಅಂದ 
ನಲಿದಿರುವ ಮನವಿನ್ನೂ ಚಂದವೋ ಚಂದ

ಮೆದುವಾಗಿ ನೆಡಿ, ನಿನ್ನಾಸೆ ಏನೂ ನುಡಿ 
ಬಯಕೆಗಳ ಸರವಿರಲಿ, ಸಂಕೋಚವೇಕೇ 
ದಿನವೆಲ್ಲ ನಗು, ಆನಂದದಿಂದಾ ನಗು 
ಬೆಳೆಯುತಿಹ ಹಸುಕಂದ ನಗುವಂತೆ ನಲ್ಲೇ 
ಬದುಕೆಲ್ಲ ಹೀಗೇ ಇರು, ಉಲ್ಲಾಸದಿಂದಾ 

ಅರಳಿದ ತನುವಿದು ಅಂದವೋ ಅಂದ 
ನಲಿದಿರುವ ಮನವಿನ್ನೂ ಚಂದವೋ ಚಂದ

ಒಲವೆಂಬಾ ಲತೆ, ಹೂವೊಂದು ಬಿಡುವಾ ದಿನ 
ಸಡಗರದಿ ಬರುತಿರಲು, ಉಲ್ಲಾಸ ಕಂಡೇ 
ಮಧುಮಾಸಾ ದಿನ, ನೀ ನನಗೆ ಒಲಿದಾ ಕ್ಷಣ 
ಬಾಳಲ್ಲಿ ಹೊಸದಾದ ಸುಖವನ್ನು ತಂದೇ 
ನನ್ನ ಭಾಗ್ಯತಾನೇ ಇದು, ನಿಜ ಹೇಳು ನೀನು 

ಅರಳಿದ ತನುವಿದು ಅಂದವೋ ಅಂದ 

ನಲಿದಿರುವ ಮನವಿನ್ನೂ ಚಂದವೋ ಚಂದ
ಸಂತೋಷದೀ ನೀನಿರು ಬರುವನು ಕಂದ 

ಅರಳಿದ ತನುವಿದು ಅಂದವೋ ಅಂದ 
ನಲಿದಿರುವ ಮನವಿನ್ನೂ ಚಂದವೋ ಚಂದ

Song: Aralida Thanuvidu
Movie: Jeevana Chaitra