Saturday, September 24, 2016

ಮರೆಯದಿರು ಸ್ನೇಹ

ಚಿತ್ರ: ಪ್ರತಿಧ್ವನಿ 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಪಿ. ಬಿ. ಶ್ರೀನಿವಾಸ್ 

ಮರೆಯದಿರು ಸ್ನೇಹ ಬಗೆಯದಿರು ದ್ರೋಹ 
ನ್ಯಾಯವನ್ನು ಉಳಿಸು ಅನ್ಯಾಯವನ್ನು ಅಳಿಸು 
ಎಂದೂ ಎಂದೆಂದೂ 

ಬಾಳಿನಲೀ ಗುರಿಯ ಸಾಧಿಸುವಾ ಛಲವ 
ಬಿಡದಂತೆ ನೆಡೆಯಬೇಕು ಅದಕಾಗಿ ದುಡಿಯಬೇಕು 
ಎಂದೂ ಎಂದೆಂದೂ 

ಸತ್ಯವನೇ ನುಡಿದು ಧರ್ಮದಲೇ ನೆಡೆದು
ಸರಿಯಾದ ದಾರಿಯಲ್ಲಿ ಗುರಿಯನ್ನು ಸೇರಬೇಕು 
ಎಂದೂ ಎಂದೆಂದೂ 

ಮರೆಯದಿರು ಸ್ನೇಹ ಬಗೆಯದಿರು ದ್ರೋಹ 
ಯುಡಿಲೀ ।೩।

Song: Mareyadiru Sneha
Movie: Pratidwani

ಯಾರು ಏನು ಮಾಡುವರು

ಚಿತ್ರ: ಕ್ರಾಂತಿವೀರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಸತ್ಯಂ 
ಗಾಯಕ: ಪಿ. ಬಿ. ಶ್ರೀನಿವಾಸ್ 

ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು 
ಸತ್ಯದ ಹಾದಿಯಲಿರುವಾಗ, ಧರ್ಮವೆ ರಕ್ಷಿಸುತ್ತಿರುವಾಗ 
ಈ ನಾಡಿಗೆ ನಾಡೆ ಹಿಂದಿರುವಾಗ, ಕನ್ನಡ ನನ್ನುಸಿರಾಗಿರುವಾಗ 
ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು 

ಅನ್ನವ ತಿನ್ನದೆ ಚಿನ್ನ ತಿನುವೆಯೇನು, ಹೊನ್ನಿಗೆ ನಿನ್ನನೇ ಮಾರಿಕೊಳುವೆಯೇನು 
ಮೋಸದ ಹಾದಿಯು ಸುಖವ ತರುವುದೇನು, ಪ್ರೀತಿಯ ಮರೆತರೆ ಶಾಂತಿ ಇರುವುದೇನು 
ಧಾನವನಾಗದೆ  ಮಾನವನಾಗು, ನಗಿಸುತ ನಗುತಲಿ ಬಾಳಲಿ ಸಾಗು 
ಎಂದ ನಾನು ದ್ರೋಹಿಯೇನು, ಏಹ್! 

ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು 

ಸುಮ್ಮನೆ ಮಾತಲಿ ಕಾಲ ಕಳೆವೆ ಏಕೆ, ನಿನ್ನಯೀ ಬಾಳನು ವ್ಯರ್ಥಗೊಳಿಸಲೇಕೆ 
ತೀರದ ಆಸೆಯು ನಿನ್ನ ಮನಸಲೇಕೆ, ಜನಗಳ ತುಳಿಯುವ ನೀಚ ಬುದ್ದಿ ಏಕೆ 
ಎಲ್ಲರು ಕಲೆತು ದ್ವೇಷವ ಮರೆತು, ಸೋದರರಂತೆ ದುಡಿಯಿರಿ ಬಂದು 
ಎಂದ ನಾನು ವ್ಯರಿಯೇನು, ಏಹ್!

ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು 
ಸತ್ಯದ ಹಾದಿಯಲಿರುವಾಗ, ಧರ್ಮವೆ ರಕ್ಷಿಸುತ್ತಿರುವಾಗ 
ಈ ನಾಡಿಗೆ ನಾಡೆ ಹಿಂದಿರುವಾಗ, ಕನ್ನಡ ನನ್ನುಸಿರಾಗಿರುವಾಗ 
ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು 

Song: Yaaru Enu Maduvaru
Movie: Kranti Veera

ಆಡೋಣ ನೀನು ನಾನು

ಚಿತ್ರ: ಕಸ್ತೂರಿ ನಿವಾಸ
ರಚನೆ: ವಿಜಯ ನರಸಿಂಹ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಪಿ. ಬಿ. ಶ್ರೀನಿವಾಸ್, ಎಸ್.ಜಾನಕಿ  

।। ಆಡೋಣ ನೀನು ನಾನು, ಎನ್ನಾ ಆಸೆ ತಾರೆ ನೀನು 
ನೋಡಿ ನಿನ್ನ ಈ ಅಂದ ಚಂದ, ಚಂದಾಮಾಮ ನಾಚಿ ನಿಂದ ।।೨।।
ಆ ಚಂದಾಮಾಮ ನಾಚಿ ನಿಂದ 

ಕಣ್ಣಾ ಗೊಂಬೆ ನೀನಾದೆ, ನಿನ್ನಾ ಕೈಗೊಂಬೆ ನಾನಾದೆ ।೨।
ನಿನ್ನಂದ ಮುದ್ದಾಡಲೆಂದೇ, ಬಂದಿದೆ ಕಣ್ಣಲ್ಲಿ ನಿದ್ದೆ
ಎನ್ನೆದೆ ನೀ ಮೀಟಿ ಬಂದೆ, ಬಾಳಿನ ಬಂಧನ ನೀ ತಂದೆ 

ಆಡೋಣ ನೀನು ನಾನು, ಎನ್ನಾ ಆಸೆ ತಾರೆ ನೀನು 
ನೋಡಿ ನಿನ್ನ ಈ ಅಂದ ಚಂದ,  ಚಂದಾಮಾಮ ನಾಚಿ ನಿಂದ

।। ಇಲ್ಲೀ ಚೆಲುವಾಗಿ ನಗುವೆ, ಅಲ್ಲಿ ಕರುಳನ್ನೆ ಮಿಡಿವೆ
ಹಾಗು ಹೀಗೂ ಸೆಳೆವೆ, ನಾನಿನ್ನ ಕೈಗೊಂಬೆ ಅಲ್ಲವೆ  ।।೨।।
ನೀ ಎನ್ನ ಉಸಿರಾದೆ ಮಗುವೆ, ದೇವರ ನಿನ್ನಲ್ಲಿ ಕಾಣುವೆ

ಆಡೋಣ ನೀನು ನಾನು, ಎನ್ನಾ ಆಸೆ ತಾರೆ ನೀನು 
ನೋಡಿ ನಿನ್ನ ಈ ಅಂದ ಚಂದ,  ಚಂದಾಮಾಮ ನಾಚಿ ನಿಂದ

Song: Aadonaa Neenu Naanu
Movie: Kasturi Nivasa

ಓ ಪ್ರಿಯತಮ

ಚಿತ್ರ: ಕವಿರತ್ನ ಕಾಳಿದಾಸ
ರಚನೆ: ಚಿ. ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕರು: ಡಾ. ರಾಜಕುಮಾರ್, ವಾಣಿ ಜಯರಾಮ್ 

ಹೆ:   ಓ ಪ್ರಿಯತಮ ।೨।
       ಪ್ರಿಯತಮ, ಕರುಣೆಯ ತೋರೆಯ
       ಕರುಣೆಯ ತೋರೆಯ ।೩।
       ಸನಿಹಕೆ ಬಾರೆಯ ತೀರಿಸಿ ಬಯಕೆಯ
       ಜೀವವ ಉಳಿಸೆಯ
       ಪ್ರಿಯತಮ, ಓ ಪ್ರಿಯತಮ

ಹೆ:  ಹಗಲಲಿ ಇರುಳಲಿ ಕನಸಲಿ ಮನಸಲಿ ।೨।
       ಬಳಲಿದೆ ಬೆಚ್ಚಿದೆ  ಮನಸಿನ ಸುಳಿಯಲಿ 
       ಬೆವರುತ ಚಳಿಯಲಿ ಬೆದರುತ ಭಯದಲಿ ।೨।
       ವಿರಹದ ಉರಿಯಲಿ ನೆಂದೆನು ನೋವಲಿ 
       ಯಾರಿಗೆ ಹೇಳಲಿ ಏನನು ಮಾಡಲಿ ।೨।
       ಪ್ರಿಯತಮ, ಓ ಪ್ರಿಯತಮ

ಗಂ:  ಓ ಪ್ರಿಯತಮೆ।೨।
        ಕರುಣೆಯ ತೋರೆಯ ।೩।
        ಸನಿಹಕೆ ಬಾರೆಯ ತೀರಿಸಿ ಬಯಕೆಯ
        ಜೀವವ ಉಳಿಸೆಯ
        ಪ್ರಿಯತಮೆ, ಓ ಪ್ರಿಯತಮೆ

ಗಂ:  ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ ।೨।
        ಆಸೆಯ ಹೂಗಳ ಚೆಲ್ಲಿದೆ ಮನದಲಿ 
        ಹೃದಯದ ವೀಣೆಯ ತಂತಿಯ ಮೀಟುತ ।೨।
        ವಿರಹದಾ ಗೀತೆಯ ಹಾಡಿದೆ ಕಿವಿಯಲಿ 
        ನನ್ನೆದೆ ತಳಮಳ ಯಾರಿಗೆ ಹೇಳಲಿ ।೨।
        ಪ್ರಿಯತಮೆ, ಓ ಪ್ರಿಯತಮೆ 

ಹೆ:   ಓ ಪ್ರಿಯತಮ
ಗಂ:  ಓ ಪ್ರಿಯತಮೆ
ಹೆ:   ಓ ಪ್ರಿಯತಮ
ಗಂ:  ಓ ಪ್ರಿಯತಮೆ

Song: O Priyatama
Movie: Kaviratna Kalidasa

ಕೃಷ್ಣಾ ಮುರಾರಿ

ಚಿತ್ರ: ದಾರಿ ತಪ್ಪಿದ ಮಗ
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ: ಡಾ. ರಾಜಕುಮಾರ್

ಕೃಷ್ಣಾ ಮುರಾರೀ ಯಮುನಾ ತೀರ ವಿಹಾರೀ 
ಗೋಪಿ ಮಾನಸ ಹಾರಿ, ಶೂರೀ, ಶೂರೀ 
ಬೊಲೊ ಶ್ರೀ ಕೃಷ್ಣ ಪರಮಾತ್ಮಕಿ ಜೈ 

ನಾರಿಯ ಸೀರೆ ಕದ್ದ, ರಾಧೆಯ ಮನವ ಗೆದ್ದ 
ಕಳ್ಳರ ಕಳ್ಳ ಕೃಷ್ಣನೂ ಬಂದ, ಮೋಹದ ಮೋಡಿ ಹಾಕಿದ 
ಕೃಷ್ಣಾ ಮುರಾರೀ

ಮಗುವಾಗಿರುವಾಗ ಬೆಣ್ಣೆಯ ಕದ್ದ, ಕದ್ದ
ಮಣಿಯೊಡನೆ ರಮಣಿಭಾಮೆಯಾ ಗೆದ್ದ, ಗೆದ್ದ 
ಮದುವೆ ಮನೆಗೆ ನುಗ್ಗಿ, ಏನ್ ಮಾಡ್ದ ಗೊತ್ತೇ, ರುಕ್ಮಿಣಿಯ ಕದ್ದ 
ನರಕಾಸುರನ ಕೊಂದು, ಹದಿನಾರು ಸಾವಿರ ನಾರಿಯರ ಗೆದ್ದ, ಗೆದ್ದ 
ಕದ್ದ ಗೆದ್ದ ಗೆದ್ದ ಕದ್ದ 

ನಾರಿಯ ಸೀರೆ ಕದ್ದ, ರಾಧೆಯ ಮನವ ಗೆದ್ದ 
ಕಳ್ಳರ ಕಳ್ಳ ಕೃಷ್ಣನೂ ಬಂದ, ಮೋಹದ ಮೋಡಿ ಹಾಕಿದ 
ಕೃಷ್ಣಾ ಮುರಾರೀ

ಯಮುನಾ ತೀರದಲಿ ತಣ್ಣನೆ ಗಾಳಿಯಲಿ ।೨।
ರಾಧೆ ಕಾದಿರಲು ಮೆಲ್ಲನೆ 
ಯಮುನಾ ತೀರದಲಿ ತಣ್ಣನೆ ಗಾಳಿಯಲಿ
ರಾಧೆ ಕಾದಿರಲು ಮೆಲ್ಲನೆ
ಕೊಳಲನೂದುತಲಿ ಮನವ ಕೆಣಕುತಲಿ ।೨।
ಕಂಡೂ ಕಾಣಿಸದೆ ಮೋಹನ, ಕಾಡಿ ಓಡಿದನು 
ಬೊಲೊ ಶ್ರೀ ಕೃಷ್ಣ ಪರಮಾತ್ಮಕಿ ಜೈ 

ನಾರಿಯ ಸೀರೆ ಕದ್ದ, ರಾಧೆಯ ಮನವ ಗೆದ್ದ 
ಕಳ್ಳರ ಕಳ್ಳ ಕೃಷ್ಣನೂ ಬಂದ, ಮೋಹದ ಮೋಡಿ ಹಾಕಿದ

ಕೃಷ್ಣ ಎಲ್ಲಿರುವೆ ಏಕೆ ಕಾಡಿರುವೆ, ವಿರಹದಿ ನೊಂದಿರುವೆ ಕಾಣದೆ 
ರಾಧಾ ಮೋಹನನೆ ಬಾರೊ ಮಾಧವನೆ ।೨।
ಎಂದು ಕೂಗಿರಲು ಬಂದು, ತನುವ ಬಳಸಿ ನಿಂದನು 

ನಾರಿಯ, ನಾರಿಯ ಸೀರೆ ಕದ್ದ, ರಾಧೆಯ ಮನವ ಗೆದ್ದ 
ಕಳ್ಳರ ಕಳ್ಳ ಕೃಷ್ಣನೂ ಬಂದ, ಮೋಹದ ಮೋಡಿ ಹಾಕಿದ

ಕೃಷ್ಣ ಎನ್ನಿ, ರಾಮ ಎನ್ನಿ ।೨।
ಮುಕುಂದ ಎನ್ನಿ, ಗೋವಿಂದ ಎನ್ನಿ 
ರಾಧೇಕೃಷ್ಣ ಗೋಪಿಕೃಷ್ಣ ।೨।
ರಾಧೇಕೃಷ್ಣ ಜೈ ಜೈ ಕೃಷ್ಣ ।೫।

ಕೃಷ್ಣಾ ಮುರಾರೀ..
ಬೊಲೊ ಶ್ರೀ ಕೃಷ್ಣ ಪರಮಾತ್ಮಕಿ ಜೈ 

Song: Krishna Murari
Movie: Daari Tappida Maga

ರವಿ ನೀನು ಆಗಸದಿಂದ

ಚಿತ್ರ: ಹೊಸಬೆಳಕು 
ರಚನೆ: ಚಿ. ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ 

ಹೆ:   ।। ರವಿ ನೀನು ಆಗಸದಿಂದ, ಮರೆಯಾಗಿ ಹೋಗದೆ ನಿಲ್ಲು 
        ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ  ।।೨।।

ಹೆ:   ಕಡಲಿಂದ ನೀರನು ತರುವೆ, ಮಳೆಯಂತೆ ಭೂಮಿಗೆ ಸುರಿವೆ 
        ನೆಲದಲ್ಲಿ ಹಸಿರನು ಚೆಲ್ಲಿ, ಸಂತೋಷ ಸಂಭ್ರಮ ತರುವೆ 
ಗಂ:  ನಿನಗಾಗಿ ಲತೆಯಲಿ ಹೂವ ನಾ ನಗಿಸುವೆ ।೨।

ಹೆ:   ರವಿ ನೀನು ಆಗಸದಿಂದ, ಮರೆಯಾಗಿ ಹೋಗದೆ ನಿಲ್ಲು 
        ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ 

ಹೆ:    ರವಿ ನಿನ್ನ ಕಾಂತಿಯೆ ಜೀವ, ನೀ ನನ್ನ ಬಾಳಿನ ದೈವ 
         ನೀ ದೂರವಾದರೆ ಹೀಗೆ, ನಾ ತಾಳಲಾರೆನು ನೋವ  
ಗಂ:  ಈ ನನ್ನ ಪ್ರೇಮದ ಹೂವ ನಾ ಮರೆವೆನೇ ।೨।

ಹೆ:   ರವಿ ನೀನು ಆಗಸದಿಂದ, ಮರೆಯಾಗಿ ಹೋಗದೆ ನಿಲ್ಲು 
        ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ

Song: Ravi Neenu Aagasadinda
Movie: Hosabelaku

ಅಮ್ಮಾ ಅಮ್ಮಾ ನನ್ನಮ್ಮ

ಚಿತ್ರ: ಭಲೇ ಜೋಡಿ 
ರಚನೆ: ಚಿ. ಉದಯಶಂಕರ್ 
ಸಂಗೀತ: ಆರ್. ರತ್ನ 
ಗಾಯಕ: ಪಿ. ಬಿ. ಶ್ರೀನಿವಾಸ್ 

ಅಮ್ಮಾ ಅಮ್ಮಾ
ಅಮ್ಮಾ ಅಮ್ಮಾ ನನ್ನಮ್ಮ ।೨।
ನಾನು ಅಮ್ಮ ಎಂದಾಗ ಏನೊ ಸಂತೋಷವು ।೨।
ನಿನ್ನ ಕಂಡಾಗ ಮನಕೇನೊ ಆನಂದವು 
ಅಮ್ಮಾ ಅಮ್ಮಾ
ಅಮ್ಮಾ ಅಮ್ಮಾ ನನ್ನಮ್ಮ

।। ಹಾಲಿನ ಸುಧೆಯು ನಿನ್ನಯ ಮನಸು 
ಜೇನಿನ ಸವಿಯು ನಿನ್ನ ಮಾತು ।।೨।।
ಪುಣ್ಯದ ಫಲವೊ ದೇವರ ವರವೊ 
ಸೇವೆಯ ಭಾಗ್ಯ ನನಗಾಯಿತು 

ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ

।। ತಾಯಿಯ ಮಮತೆ ಕಂಡಾ ದೇವನು 
ಅಡಿಗದ ಎಲ್ಲೋ ಮರೆಯಾಗಿ ।।೨।।
ತಾಯಿಯ ಶಾಂತಿಗೆ ಧರಣಿಯು ನಾಚಿ 
ಮೌನದಿ ನಿಂತಳು ತಲೆಬಾಗಿ 

ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ
ನಾನು ಅಮ್ಮ ಎಂದಾಗ ಏನೊ ಸಂತೋಷವು ।೨।
ನಿನ್ನ ಕಂಡಾಗ ಮನಕೇನೊ ಆನಂದವು 
ಅಮ್ಮಾ ಅಮ್ಮಾ ನನ್ನಮ್ಮ

Song: Amma Amma
Movie: Bhale Jodi

ಹೃದಯ ಸಮುದ್ರ ಕಲಕಿ

ಚಿತ್ರ: ಅಶ್ವಮೇಧ
ರಚನೆ: ದೊಡ್ಡ ರಂಗೇಗೌಡ 
ಸಂಗೀತ: ಸಂಗೀತ ರಾಜ 
ಗಾಯಕ: ಡಾ. ರಾಜಕುಮಾರ್

।। ಹೃದಯ ಸಮುದ್ರ ಕಲಕಿ ಹುಕ್ಕಿದೆ ದ್ವೇಷದ ಬೆಂಕಿ
ರೋಷಾನಗ್ನಿ ಜ್ವಾಲೆ ಉರಿಉರಿದು ।।೨।।
ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ ಪ್ರಾಣ ಒತ್ತೆ ಇಟ್ಟು ಹೋರಾಡುವೆ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ಧೀಕ್ಷೆ ತೊಟ್ಟು ನೆಡೆಸುವೆ
ಅಶ್ವಮೇಧ ।೪।

ಸೂರ್ಯ ಚಂದ್ರರೇ ನಿನ್ನ ಕಣ್ಗಳು, ಗಿರಿ ಶೃಂಗವೇ ನಿನ್ನ ಅಂಗವೋ 
ದಿಗ್ಪಾಲಕರೇ ನಿನ್ನ ಕಾಲ್ಗಳೋ, ಮಿಂಚು ಸಿಡಿಲು ನಿನ್ನ ವೇಗವೋ 
ಜೀವ ಜೀವದಲಿ ಬೆರೆತು ಹೋದಾ, ಭಾವ ಭಾವದಲಿ ಕರಗೀ ಹೋದಾ 
ಜೀವಾಶ್ವವೇ ದೂರದೆಯಾ, ಪ್ರಾಣಾಶ್ವವೇ ಮರೆಯಾದೆಯಾ 
ದಿಟ್ಟ ಹೆಜ್ಜೆ ಇಟ್ಟು ಯಜ್ಞ ಧೀಕ್ಷೆ ತೊಟ್ಟು ನೆಡೆಸುವೆ
ಅಶ್ವಮೇಧ ।೪।

ವಿಷವ್ಯೂಹವ ಹುಟ್ಟಿಕೆಡವಲು, ವೀರ ಪುರುಷಾ ಕತ್ತಿ ಹಿಡಿದು 
ಚಕ್ರವೇಶವಾ ಹೊರಗೆಳೆಯಲೂ,  ಶತತೇಜದಾ ಕತ್ತಿ ಹಿಡಿದು 
ಕ್ರೂರ ರಾಕ್ಷಸರ ಕೊಚ್ಚಿ ನೆಡೆವೇ,  ನೀತಿ ನೇಮಗಳ ಬಿತ್ತಿ ಬೇಳೆವೆ 
ಆಕಾಶವೇ ಮೇಲ್ಬೀಳಲಿ, ಭೂತಾಯಿಯೇ ಬಾಯಿ ಬಿರಿಯಲಿ 
ದಿಟ್ಟ ಹೆಜ್ಜೆ ಇಟ್ಟು ಯಜ್ಞ ಧೀಕ್ಷೆ ತೊಟ್ಟು ನೆಡೆಸುವೆ
ಅಶ್ವಮೇಧ ।೪।

ಹೃದಯ ಸಮುದ್ರ ಕಲಕಿ ಹುಕ್ಕಿದೆ ದ್ವೇಷದ ಬೆಂಕಿ
ರೋಷಾನಗ್ನಿ ಜ್ವಾಲೆ ಉರಿಉರಿದು
ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ ಪ್ರಾಣ ಒತ್ತೆ ಇಟ್ಟು ಹೋರಾಡುವೆ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ಧೀಕ್ಷೆ ತೊಟ್ಟು ನೆಡೆಸುವೆ
ಅಶ್ವಮೇಧ ।೪।

Song: Hrudaya Samudra Kalaki
Movie: Ashwamedha

ಆಮೋಡ ಬಾನಲ್ಲಿ ತೇಲಾಡುತ

ಚಿತ್ರ: ಧ್ರುವತಾರೆ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕರು: ಡಾ. ರಾಜಕುಮಾರ್,  ವಾಣಿ ಜಯರಾಮ್, ಬೆಂಗಳೂರು ಲತ 

ಹೆ:  ।। ಆಮೋಡ ಬಾನಲ್ಲಿ ತೇಲಾಡುತ 
       ನಿನಗಾಗೆ ನಾ ಬಂದೆ ನೋಡೆನ್ನತ 
       ನಲ್ಲ ನಿನ್ನ ಸಂದೇಶವ ನನಗೆ ಹೇಳಿದೆ ।।೨।।

ಹೆ:   ನನ್ನಾ ನೋಡುವ ಚಿಂತೆ, ನಿನ್ನ ಕಾಡಿದೆಯಂತೆ 
       ನನ್ನಾ ಪ್ರೀತಿಗೆ ಸೋತೆ, ಎಂದೋ ಹೇಳಿದೆಯಂತೆ 
       ನೀನೆ ನನ್ನ, ಪ್ರಾಣವೆಂದು, ನೀನು ಅಂದ, ಮಾತನಿಂದು 
       ನಲ್ಲ ಹೇಳಿದೆ 

ಹೆ:  ।। ಆಮೋಡ ಬಾನಲ್ಲಿ ತೇಲಾಡುತ 
       ನಿನಗಾಗೆ ನಾ ಬಂದೆ ನೋಡೆನ್ನತ 
       ನಲ್ಲ ನಿನ್ನ ಸಂದೇಶವ ನನಗೆ ಹೇಳಿದೆ ।।೨।।

ಗಂ:  ।। ಆಮೋಡ ಬಾನಲ್ಲಿ ತೇಲಾಡುತ 
       ನಿನಗಾಗೆ ನಾ ಬಂದೆ ನೋಡೆನ್ನತ 
       ನಲ್ಲೆ ನಿನ್ನ ಸಂದೇಶವ ನನಗೆ ಹೇಳಿದೆ ।।೨।।

ಗಂ:  ನೂರು ಜನ್ಮವು ತಂದ, ನಮ್ಮ ಈ ಅನುಬಂಧ 
        ಸ್ನೇಹ ಪ್ರೀತಿಯು ತಂದ, ಇಂಥ ಮಹದಾನಂದ 
         ಎಂಥ ಚೆನ್ನ,ಎಂಥ ಚೆನ್ನ, ಎಂದ ನಿನ್ನ, ಮಾತ ಚಿನ್ನ
         ಇಂದು ಹೇಳಿದೆ

ಹೆ:   ಆಮೋಡ ಬಾನಲ್ಲಿ ತೇಲಾಡುತ 
       ನಿನಗಾಗೆ ನಾ ಬಂದೆ ನೋಡೆನ್ನತ 
       ನಲ್ಲ ನಿನ್ನ ಸಂದೇಶವ ನನಗೆ ಹೇಳಿದೆ

ಹೆ:   ನಿನ್ನಾ ನೋಟವೆ  ಚೆನ್ನಾ, ನಿನ್ನಾ ಪ್ರೇಮವೇ ಚೆನ್ನಾ 
        ನಿನ್ನಾ ನೆನಪಲಿ ಚಿನ್ನ, ನೊಂದು ಬೆಂದರು ಚೆನ್ನ 
        ಕಲಹ ಚೆನ್ನ, ವಿರಹ ಚೆನ್ನ, ಸನಿಹ ಚೆನ್ನ ಎಂದ ನಿನ್ನಾ 
        ಮಾತನ್ನು ಹೇಳಿದೆ 

ಹೆ:   ಆಮೋಡ ಬಾನಲ್ಲಿ ತೇಲಾಡುತ 
       ನಿನಗಾಗೆ ನಾ ಬಂದೆ ನೋಡೆನ್ನತ 
       ನಲ್ಲ ನಿನ್ನ ಸಂದೇಶವ ನನಗೆ ಹೇಳಿದೆ

ಹೆ:   ಆಮೋಡ ಬಾನಲ್ಲಿ ತೇಲಾಡುತ 
        ನಿನಗಾಗೆ ನಾ ಬಂದೆ ನೋಡೆನ್ನತ 
ಗಂ:  ನಲ್ಲೆ ನಿನ್ನ ಸಂದೇಶವ
ಹೆ:    ನನಗೆ ಹೇಳಿದೆ
ಗಂ:  ನಲ್ಲೆ ನಿನ್ನ ಸಂದೇಶವ 

Song: Aa Moda Banalli
Movie: Dhruva Taare

Friday, September 23, 2016

ಬಿಂಕದ ಸಿಂಗಾರಿ

ಚಿತ್ರ: ಕನ್ಯಾರತ್ನ 
ರಚನೆ: ಕು. ರ. ಸೀತಾರಾಮ ಶಾಸ್ತ್ರಿ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಪಿ. ಬಿ. ಶ್ರೀನಿವಾಸ್ 


।। ಬಿಂಕದ ಸಿಂಗಾರಿ ಮೈ ಡೊಂಕಿನ ವಯ್ಯಾರಿ 
ಈ ಸವಿಘಳಿಗೆ ರಸಜೀವಳಿಗೆ ನಿನ್ನಂತರಂಗ ಮಧುರಂಗ ।।೨।।

ಬಳಿ ನೀನಿರಲ ಬಿಸಿಲೆ ನೆರಳು ಮಧುಪಾನ ಪಾತ್ರ ನಿನ್ನೊಡಲು ।೨।
ಮಧುವಿಲ್ಲದೆ ಮದವೇರಿಪ ನಿನ್ನಂದ ಚಂದ ಮಕರಂದ ।೨।

ಅ ಹ ಬಿಂಕದ ಸಿಂಗಾರಿ ಮೈ ಡೊಂಕಿನ ವಯ್ಯಾರಿ 
ಈ ಸವಿಘಳಿಗೆ ರಸಜೀವಳಿಗೆ ನಿನ್ನಂತರಂಗ ಮಧುರಂಗ

ನಿನ್ನೀ ವದನ ಅರವಿಂದವನ ಹೂಬಾಣ ನಿನ್ನ ಬಿನ್ನಾಣ ।೨।
ಒಲವೆಂಬ ಧನ ಬಿಡೆ ಹುಂಭತನ ಬಾ ಚಿನ್ನ ರನ್ನ ವರಿಸೆನ್ನ ।೨।

ಅ ಹ ಬಿಂಕದ ಸಿಂಗಾರಿ ಮೈ ಡೊಂಕಿನ ವಯ್ಯಾರಿ 
ಈ ಸವಿಘಳಿಗೆ ರಸಜೀವಳಿಗೆ ನಿನ್ನಂತರಂಗ ಮಧುರಂಗ

Song: Binkada Singaari
Movie: Kanyaaratna

ಅಮ್ಮಾ ನೀನು ನಮಗಾಗಿ

ಚಿತ್ರ: ಕೆರಳಿದ ಸಿಂಹ 
ರಚನೆ: ಚಿ. ಉದಯಶಂಕರ್ 
ಸಂಗೀತ: ಚೆಲ್ಲಪಲ್ಲಿ ಸತ್ಯಂ 
ಗಾಯಕರು: ಡಾ. ರಾಜಕುಮಾರ್, ಪಿ. ಬಿ. ಶ್ರೀನಿವಾಸ್ 

ರಾಜ್:   ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ 
              ಬಾಳಲೆ ಬೇಕು ಈ ಮನೆ ಬೆಳಕಾಗಿ 
ಪಿ.ಬಿ:    ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ
              ಬಾಳಲೆ ಬೇಕು ಈ ಮನೆ ಬೆಳಕಾಗಿ 
ಜೊ:     ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ

ರಾಜ್:   ಬಾಡದ ತಾವರೆ ಹೂವಿನ ಹಾಗೆ, ಎಂದಿಗು ಆರದ ಜ್ಯೋತಿಯ ಹಾಗೆ 
ಪಿ.ಬಿ:    ಗೋಪುರ ಬೇಡಿದ ಕಲಶದ ಹಾಗೆ, ಆ ಧ್ರುವತಾರೆಯೆ ನಾಚುವ ಹಾಗೆ 
ರಾಜ್:   ಜೊತೆಯಲಿ ಎಂದೆಂದು ನೀನಿರಬೇಕು 
ಜೊ:     ಬೇರೆ ಏನೂ ಬೇಡೆವು ಸಾಕು 

ಜೊ:     ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ

ರಾಜ್:   ಸಂಜೆಯ ಗಾಳಿಯ ತಂಪಿನ ಹಾಗೆ, ಮಲ್ಲಿಗೆ ಹೂವಿನ ಕಂಪಿನ ಹಾಗೆ 
ಪಿ.ಬಿ:    ಜೀವವ ತುಂಬುವ ಉಸಿರಿನ ಹಾಗೆ, ನಮ್ಮನು ಸೇರಿ ಎಂದಿಗೂ ಹೀಗೆ 
ರಾಜ್:   ನಗುತಲಿ ಒಂದಾಗಿ ನೀನಿರಬೇಕು 
ಜೊ:     ನಿನ್ನಾ ನೆರಳಲಿ ನಾವಿರಬೇಕು 

ಜೊ:     ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ

ರಾಜ್:   ಸಾವಿರ ನದಿಗಳು ಸೇರಿದರೇನು, ಸಾಗರಕೆ ಸಮನಾಗುವುದೇನು 
ಪಿ.ಬಿ:    ಶತ ಕೋಟಿ ದೇವರು ಹರಸಿದರೇನು, ಅಮ್ಮನ ಹರಕೆಗೆ ಸರಿಸಾಟಿಯೇನು 
ರಾಜ್:   ತಾಯಿಗೆ ಆನಂದ ತಂದರೆ ಸಾಕು 
ಜೊ:     ಬೇರೆ ಪೂಜೆ ಏತಕೆ ಬೇಕು 

ಜೊ:     ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ
             ಬಾಳಲೆ ಬೇಕು ಈ ಮನೆ ಬೆಳಕಾಗಿ 
             ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ

Song: Amma Neenu Namagagi
Movie: Keralida Simha

ಈ ಮೌನವ ತಾಳೆನು

ಚಿತ್ರ: ಮಯೂರ
ರಚನೆ: ಚಿ. ಉದಯಶಂಕರ್
ಸಂಗೀತ:  ಜಿ. ಕೆ. ವೆಂಕಟೇಶ್
ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ 


ಹೆ:   ಈ ಮೌನವ ತಾಳೆನು ।೨।
       ಮಾತಾಡೆ ದಾರಿಯ ಕಾಣೆನು 
       ಓ ರಾಜ, ಈ ಮೌನವ ತಾಳೆನು
ಗಂ: ನೀ ಹೇಳದೆ ಬಲ್ಲೆನು, ನಿನ್ನಾಸೆ ಕಣ್ಣಲ್ಲೇ ಕಂಡೆನು
        ಓ ರಾಣಿ, ನೀ ಹೇಳದೆ ಬಲ್ಲೆನು

ಗಂ: ।। ನಾನಂದು ನಿನ್ನ ಕಂಡಾಗ ಚಿನ್ನ ಏನೇನೊ ಹೊಸ ಭಾವನೆ
        ಹೂವಾಗಿ ಮನಸು ಏನೇನೊ ಕನಸು ನಾ ಕಾಣದ ಕಲ್ಪನೆ  ।।೨।।
ಹೆ:   ಇಂದು ನಿನ್ನ ಬಿಡೆನು ಈ ದೂರ ಸಹಿಸೆನು 

ಗಂ:  ನೀ ಹೇಳದೆ ಬಲ್ಲೆನು ನಿನ್ನಾಸೆ ಕಣ್ಣಲ್ಲೇ ಕಂಡೆನು
         ಓ ರಾಣಿ, ನೀ ಹೇಳದೆ ಬಲ್ಲೆನು

ಹೆ:   ।। ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು 
        ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು ।।೨।।
ಗಂ:  ಅಂದೆ ನಿನಗೆ ಸೋತೆ, ನಾ ಜಗವನೆ ಮರೆತೆ

ಹೆ:   ಈ ಮೌನವ ತಾಳೆನು, ಮಾತಾಡೆ ದಾರಿಯ ಕಾಣೆನು, ಓ ರಾಜ
ಗಂ:  ಓ ರಾಣಿ
ಹೆ:   ಓ ರಾಜ 

Song: Ee Mounava Thalenu
Movie: Mayura

ಕಣ್ಣಂಚಿನ ಈ ಮಾತಲಿ

ಚಿತ್ರ: ದಾರಿ ತಪ್ಪಿದ ಮಗ
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ: ಪಿ. ಬಿ. ಶ್ರೀನಿವಾಸ್

ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ
ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ
ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ

ನವ ಯವ್ವನ ಹೊಂಗನಸಿನ ಮಳೆಬಿಲ್ಲು ತಂದಿದೆ 
ನಸುನಾಚುತೆ ಹೊಸ ಪ್ರೇಮದ ಕುಡಿಯಿಲ್ಲಿ ಚಿಗುರಿದೆ 
ನೂರಾಸೆಯ ನೆಲೆಯಾಗಿದೆ
ಮಧುಚಂದ್ರದ ಮಧು ಮೈತ್ರಿಯ ನಿರೀಕ್ಷೆ ಅಲ್ಲಿದೆ 

ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ
ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ

ಪ್ರತಿ ಪ್ರೇಮಿಯ ಬಾಳಲ್ಲಿಯು ಶುಭರಾತ್ರಿ ಹೊಂದಿದೆ 
ಅನುರಾಗದ ಆ ವೇಳೆಗೆ ಮನ ಕಾದು ನಿಂತಿದೆ 
ಸರಿ ಜೋಡಿಯ ಕಣ್ಣರಸಿದೆ
ಈ ಜೋಡಿಯು ಸವಿನೆನಪಲಿ ಜಗವನ್ನೇ ಮರೆತಿದೆ 

ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ
ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ

Song: Kannanchina Ee Maatali
Movie: Daari Tappida Maga

ಅರಳುತಿದೆ ಮೋಹ

ಚಿತ್ರ: ನಾನೊಬ್ಬ ಕಳ್ಳ 
ರಚನೆ: ಚಿ. ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ 

ಗಂ:  ಅರಳುತಿದೆ ಮೋಹ ಹೃದಯದಲಿ ದಾಹ 
        ಇಂದೇಕೆ ಹೀಗೇಕೆ ಈ ರೀತಿ ನನಗೇಕೆ 
ಹೆ:   ಒಲವಿನ ಕರೆ ವಿರಹದ ಸೆರೆ, ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ
        ಅರಳುತಿದೆ ಮೋಹ ಹೃದಯದಲಿ ದಾಹ 
        ಇಂದೇಕೆ ಹೀಗೇಕೆ ಈ ರೀತಿ ನನಗೇಕೆ 

ಗಂ:  ಈ ನಿನ್ನ ಮೊಗವು ಈ ನಿನ್ನ ನಗುವು ಬಯಕೆಯ ತುಂಬುತ ಕುಣಿಸಿದೆ 
        ಈ ನಿನ್ನ ಪ್ರೇಮ ಸೆಳೆದು ನನ್ನನು ಸನಿಹ ಕರೆಯಲು ನಾ ಬಂದೆ 
ಹೆ:   ಈ ನಿನ್ನ ಮನಸು ಈ ನಿನ್ನ ಸೊಗಸು ಹೊಸ ಹೊಸ ಕನಸನು ತರುತಿದೆ 
        ಎಂದೆಂದು ಹೀಗೆ ಸೇರಿ ಬಾಳುವ
        ಆಸೆ ಮನದಲಿ ನೀ ತಂದೆ ।೨।

ಗಂ:  ಅರಳುತಿದೆ ಮೋಹ ಹೃದಯದಲಿ ದಾಹ 
        ಇಂದೇಕೆ ಹೀಗೇಕೆ ಈ ರೀತಿ ನನಗೇಕೆ 
ಹೆ:   ಒಲವಿನ ಕರೆ ವಿರಹದ ಸೆರೆ, ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ

ಹೆ:    ಮಾತಲ್ಲಿ ರಸಿಕ ಪ್ರೀತೀಲಿ ರಸಿಕ ಬಲ್ಲೆನು ರಸಿಕರ ರಾಜನೆ
        ಈ ನನ್ನ ಹೃದಯ ರಾಜ್ಯ ನೀಡುವೆ ಸೋತು ಇಂದು ನಾನು ನಿನ್ನನ್ನೆ 
ಗಂ:  ಈ ನನ್ನಾ ಜೀವ ನಿನ್ನಲ್ಲೇ ಜೀವ ಜೀವದಿ ಜೀವವು ಬೆರೆತಿದೆ 
        ನಿನ್ನಿಂದ ನಾನು ಬೇರೆಯಾದರೆ
        ಜೀವ ಉಳಿಯದು ನನ್ನಲ್ಲಿ ।೨।

ಹೆ:    ಅರಳುತಿದೆ ಮೋಹ ಹೃದಯದಲಿ ದಾಹ 
        ಇಂದೇಕೆ ಹೀಗೇಕೆ ಈ ರೀತಿ ನನಗೇಕೆ 
ಗಂ:  ಒಲವಿನ ಕರೆ ವಿರಹದ ಸೆರೆ, ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ
        ಅರಳುತಿದೆ ಮೋಹ ಹೃದಯದಲಿ ದಾಹ ... ಆ ಆ ಅ ..... 

Song: Aralutide Moha
Movie: Nanobba Kalla

ನಗುತ ನಗುತ ಬಾಳು

ಚಿತ್ರ: ಪರಶುರಾಮ್ 
ರಚನೆ/ಸಂಗೀತ: ಹಂಸಲೇಖ 
ಗಾಯಕ: ಡಾ. ರಾಜಕುಮಾರ್ 

ನಗುತ ನಗುತ ಬಾಳು ನೀನು ನೂರು ವರುಷ 
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ 
ಬಾಳಿನ ದೀಪ ನಿನ್ನ ನಗು, ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷ 
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ
ಉಲ್ಲಾಸದ ಶುಭ ದಿನಕೆ ಸಂತೋಷವೇ ಉಡುಗೊರೆಯು 

ಹೂವು ನಕ್ಕಾಗ ತಾನೆ ಅಂದ ಇರುವುದು ದುಂಬಿ ಬರುವುದು 
ಚಂದ್ರ ನಕ್ಕಾಗ ತಾನೇ ಬೆಳಕು ಬರುವುದು ಕಡಲು ಕುಣಿವುದು 
ಸೂರ್ಯನಾಡೋ ಜಾರೊ ಆಟ ಬಾನು ನಗಲೆಂದೆ 
ಬೀಸೊ ಗಾಳಿ ತೂಗೊ ಪೈರು ಭೂಮಿ ನಗಲೆಂದೆ 
ದೇವರು ತಂದ ಶೃಷ್ಠಿಯ ಅಂದ ಎಲ್ಲರು ನಗಲೆಂದೆ 

ನಗುತ ನಗುತ ಬಾಳು ನೀನು ನೂರು ವರುಷ 
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ

ಆಕಾಶದಾಚೆ ಎಲ್ಲೋ ದೇವರಿಲ್ಲವೋ ಹುಡುಕಬೇಡವೊ 
ಆ ಮಾಯಗಾರ ತಾನು ಇಡಿಯಲಿಲ್ಲವೋ ಗುಡಿಯಲಿಲ್ಲವೋ 
ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವನು ಒಂದಾಗಿ 
ತಂಪಿನಲ್ಲೂ ಕಂಪಿನಲ್ಲೂ ಬರುವನು ಹಿತವಾಗಿ 
ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ 

ನಗುತ ನಗುತ ಬಾಳು ನೀನು ನೂರು ವರುಷ 
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ 
ಬಾಳಿನ ದೀಪ ನಿನ್ನ ನಗು, ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷ 
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ
ಉಲ್ಲಾಸದ ಶುಭ ದಿನಕೆ ಸಂತೋಷವೇ ಉಡುಗೊರೆಯು 

Song: Naguta Naguta BaaLu
Movie: Parashuram

Thursday, September 22, 2016

ನನ್ನಾಸೆಯಾ ಹೂವೆ

ಚಿತ್ರ: ನಾ ನಿನ್ನ ಮರೆಯಲಾರೆ  
ರಚನೆ: ಚಿ. ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ 

ನನ್ನಾಸೆಯಾ ಹೂವೆ ಬೆಳದಿಂಗಳಾ ಚೆಲುವೆ 
ಇನ್ನೇತಕೇ ಅಳುವೆ ಏಕಾಂತದಿ ಭಯವೆ 
ನಿನ್ನೊಲವಿಗೆ ಸೋತೆನು ಬಂದೆನು ನಾ 
ನನ್ನಾಸೆಯಾ ಹೂವೆ ಬೆಳದಿಂಗಳಾ ಚೆಲುವೆ 

ಈ ಮೌನವೇನು ನಿನ್ನಲ್ಲಿ ಈ ಕೋಪವೇಕೆ ನನ್ನಲ್ಲಿ 
ನೀ ದೂರ ಹೋದರೆ ಹೀಗೆ ನಾ ತಾಳೆ ಈ ವಿರಹದ ಬೇಗೆ 
ಕಾಣದಿರೆ ನೋಡುವಾ ಆಸೆ, ನೋಡುತಿರೆ ಸೇರುವಾ ಆಸೆ
ಸೇರಿದರೆ ಚಿನ್ನಾ ನಿನ್ನಾ ಕೆಂಪಾದ ಚೆಂದುಟಿಯ ಆಸೆ

ನನ್ನಾಸೆಯಾ ಹೂವೆ ಬೆಳದಿಂಗಳಾ ಚೆಲುವೆ 
ನಿನ್ನೊಲವಿಗೆ ಸೋತೆನು ಬಂದೆನು ನಾ 
ನನ್ನಾಸೆಯಾ ಹೂವೆ ಬೆಳದಿಂಗಳಾ ಚೆಲುವೆ 

ಬಾಳಲ್ಲಿ ನೀಲಿ ಬೆರೆತಂತೆ ಹೂವಲ್ಲಿ ಜೇನು ಇರುವಂತೆ 
ನನ್ನಲ್ಲಿ ನೀನೊಂದಾಗಿ ಇರುವಾಗ ಏಕೆ ಈ ಚಿಂತೆ 
ಕಣ್ಣಲ್ಲಿ ಕಣ್ಣ ನೀ ಬೆರೆಸು ಲತೆಯಂತೆ ನನ್ನ ಮೈ ಬಳಸು 
ನೂರೆಂಟು ಸುಂದರ ಕನಸು ಆ ನಿಮಿಷ ಬಾಳಿಗೆ ಸೊಗಸು 

ನನ್ನಾಸೆಯಾ ಹೂವೆ ಬೆಳದಿಂಗಳಾ ಚೆಲುವೆ 
ನಿನ್ನೊಲವಿಗೆ ಸೋತೆನು ಬಂದೆನು ನಾ 
ನನ್ನಾಸೆಯಾ ಹೂವೆ ಬೆಳದಿಂಗಳಾ ಚೆಲುವೆ 

Song: Nannaaseya Hoove
Movie: Naa Ninna Mareyalaare

ನಿನ್ನಾ ಮರೆಯಲಾರೆ

ಚಿತ್ರ: ನಾ ನಿನ್ನ ಮರೆಯಲಾರೆ  
ರಚನೆ: ಚಿ. ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್ 

ಗಂ:   ನಿನ್ನಾ ಮರೆಯಲಾರೆ
ಹೆ:     ನಾ ನಿನ್ನ ಮರೆಯಲಾರೆ 
ಗಂ:   ಎಂದೆಂದು ನಿನ್ನ ಬಿಡಲಾರೆ ಚಿನ್ನ ನೀನೆ ಪ್ರಾಣ ನನ್ನಾಣೆಗೂ 
ಹೆ:     ನಿನ್ನಾ ಮರೆಯಲಾರೆ
ಗಂ:   ನಾ ನಿನ್ನ ಮರೆಯಲಾರೆ 

ಗಂ:    ಜೊತೆಗೆ ನೀನು ಸೇರಿ ಬರುತಿರೆ ಜಗವ ಮೆಟ್ಟಿ ನಾ ನಿಲ್ಲುವೆ 
ಹೆ:     ಒಲಿದಾ ನೀನು ನಕ್ಕು ನಲಿದರೆ ಏನೇ ಬರಲಿ ನಾ ಗೆಲ್ಲುವೆ  
ಗಂ:    ಚೆಲುವೆ ನೀನು ಉಸಿರು ಉಸಿರಲಿ ಬೆರೆತು ಬದುಕು ಹೂವಾಗಿದೆ 
ಹೆ:     ಎಂದೂ ಹೀಗೆ ಇರುವ ಬಯಕೆಯು ಮೂಡಿ ಮನಸು ತೇಲಾಡಿದೇ 
ಗಂ:   ನಮ್ಮ  
ಹೆ:     ಬಾಳು 
ಗಂ:   ಹಾಲು 
ಹೆ:     ಜೇನು 

ಹೆ:     ನಿನ್ನಾ ಮರೆಯಲಾರೆ
ಗಂ:   ನಾ ನಿನ್ನ ಮರೆಯಲಾರೆ 
ಹೆ:     ಎಂದೆಂದು ನಿನ್ನ ಬಿಡಲಾರೆ ಚಿನ್ನ ನೀನೆ ಪ್ರಾಣ ನನ್ನಾಣೆಗೂ 
ಗಂ:   ನಿನ್ನಾ ಮರೆಯಲಾರೆ
ಹೆ:     ನಾ ನಿನ್ನ ಮರೆಯಲಾರೆ 

ಗಂ:   ನಾಳೆ ಯಾರು ಏನು ಅರಿಯರು ಇಂದು ಬದುಕು ಹಾಯಾಗಿದೆ 
ಹೆ:     ತನುವ ನೀನು ಸೋಕೆ ಎದೆಯಲಿ ಮಿಂಚೂ ಹರಿದು ಜುಮ್ ಎಂದಿದೆ
ಗಂ:    ಮನದ ಮಾತ ಎದೆಯ ಮಿಡಿತದಿ ಅರಿತು ಆಸೆ ಪೂರೈಸಿದೆ 

ಹೆ:     ಇನ್ನೂ ಸನಿಹ ಬೇರೆ ಎನ್ನಲು ಬೆರೆವ ಕನಸು ಹೊಲಾಡಿದೆ 
ಗಂ:   ಸರಸಾ 
ಹೆ:     ವಿರಸಾ 
ಗಂ:   ಎಲ್ಲಾ 
ಹೆ:     ಹರುಷಾ 

ಗಂ:   ನಿನ್ನಾ ಮರೆಯಲಾರೆ
ಹೆ:     ನಾ ನಿನ್ನ ಮರೆಯಲಾರೆ 

ಹೆ:     ನೂರು ಮಾತು ಏಕೆ ಒಲವಿಗೆ ನೋಟಾ ಒಂದೆ ಸಾಕಾಗಿದೆ 
ಗಂ:   ಕಣ್ಣಾ ತುಂಬಾ ನೀನೆ ತುಂಬಿದೆ ದಾರಿ ಕಾಣದಂತಾಗಿದೆ 
ಹೆ:     ಸಿಡಿಲೇ ಬರಲಿ ಊರೆ ಗೂಡುಗಲಿ ದೂರ ಹೋಗೆ ನಾನೆಂದಿಗೂ 
ಗಂ:   ಸಾವೇ ಬಂದು ನನ್ನ ಸೆಳೆದರು ನಿನ್ನಾ ಬಿಡೆನು ಎಂದೆಂದಿಗೂ 
ಹೆ:     ನೋವೂ 
ಗಂ:   ನಲಿವೂ 
ಹೆ:     ಎಲ್ಲಾ 
ಗಂ:   ಒಲವು 

ಗಂ:   ನಿನ್ನಾ ಮರೆಯಲಾರೆ
ಹೆ:     ನಾ ನಿನ್ನ ಮರೆಯಲಾರೆ 
ಜೊ:  ಎಂದೆಂದು ನಿನ್ನ ಬಿಡಲಾರೆ ಚಿನ್ನ ನೀನೆ ಪ್ರಾಣ ನನ್ನಾಣೆಗೂ 

Song: Ninna Mareyalaare
Movie: Naa Ninna Mareyalaare

ಅರಳಿದೆ ತನು ಮನ

ಚಿತ್ರ: ಅಪೂರ್ವ ಸಂಗಮ
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ 

ಹೆ:     ಅರಳಿದೆ ತನು ಮನ, ನೋಡುತ ನಿನ್ನಾ
          ಹೊಸತನ ನನ್ನಲ್ಲಿಯೇ, ಕಂಡೆನು ನಾ
ಗಂ:   ಅರಳಿದೆ ತನು ಮನ, ನೋಡುತ ನಿನ್ನಾ
          ಹೊಸತನ ನನ್ನಲ್ಲಿಯೇ, ಕಂಡೆನು ನಾ

ಗಂ:   ಚಲಿಸುವ ತಂಗಾಳಿಯು ಚೆಲುವೆ ನಿನ್ನಾ ನೋಡಿ 
          ನಲಿಯುತ ಓಡಿದೆ ಮುಂಗುರಳ ಬಿಗಿದು ಹಾಡಿ 
ಹೆ:     ಅರಳಿದ ಗುಲಾಬಿಯು ಸೋಕಿ ಪರಿಮಳ ಹೀರಿ 
          ಸರಸಕೆ ಬಂದಿದೆ ಈ ನಿನ್ನಾ ಅಂದ ನೋಡಿ 
ಗಂ:   ಸುಖ ತರುತಿದೆ 
ಹೆ:     ಹಿತ ಸವಿದಿದೆ, ಚೆಲುವ  

ಗಂ:   ಅರಳಿದೆ ತನು ಮನ, ನೋಡುತ ನಿನ್ನಾ
ಹೆ:     ಹೊಸತನ ನನ್ನಲ್ಲಿಯೇ, ಕಂಡೆನು ನಾ

ಹೆ:     ಎದೆಯಲಿ ಹೊಮ್ಮಿ ಹೊಮ್ಮಿ ನೂರು ಬಯಕೆ ಈಗ 
         ಕೆಣಕಲು ಸೋತೆನು ನನ್ನಿನಿಯ ನಿನ್ನಾ ನೋಡಿ 
ಗಂ:   ಪ್ರಣಯದ ಸಂಗೀತದ ಇಂಪು ಕಿವಿಯಾ ತುಂಬಿ 
         ಕನಸನು ಕಂಡೆನು ಸಂಗಾತಿಯೆ ನಿನ್ನಾ ಸೇರಿ 
ಹೆ:     ಇನ್ನು ಬಿಡುವೆನೆ 
ಗಂ:   ನಲ್ಲೆ ಕೊಡುವೆನಾ, ಚೆಲುವೇ 

ಹೆ:     ಅರಳಿದೆ ತನು ಮನ, ನೋಡುತ ನಿನ್ನಾ
ಗಂ:   ಹೊಸತನ ನನ್ನಲ್ಲಿಯೇ, ಕಂಡೆನು ನಾ

Song: Aralide Thanu Mana
Movie: Apoorva Sangama

ಶಿವಪ್ಪ ಕಾಯೋ ತಂದೆ

ಚಿತ್ರ: ಬೇಡರ ಕಣ್ಣಪ್ಪ 
ರಚನೆ: ಎಸ್. ನಂಜಪ್ಪ 
ಸಂಗೀತ: ಆರ್. ಸುದರ್ಶನಂ 
ಗಾಯಕ: ಸಿ. ಎಸ್. ಜಯರಾಮನ್ 

ಓಂಕಾರ ಓಂಕಾರ, ಓಂ ಓಂಕಾರನಾದ ರೂಪ 
ಮೋರೆಯ ನೀ ಆಲಿಸಿ, ಪಾಲಿಸೋ ಸರ್ವೇಶಾ 

ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವಾ 
ಹಸಿವೆಯನ್ನು ತಾಳಲಾರೆ, ಕಾಪಡೆಯ 

ಭಕ್ತಿಯಂತೆ ಪೂಜೆಯಂತೆ, ಒಂದು ಅರಿಯೆ ನಾ ।೨।
ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ 
ಪಾಪವಂತೆ ಪುಣ್ಯವಂತೆ ಕಾಣೆನಯ್ಯಾ 

ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವಾ 
ಹಸಿವೆಯನ್ನು ತಾಳಲಾರೆ ಕಾಪಡೆಯ 

ಶುದ್ಧನಾಗಿ ಪೂಜೆ ಗೈಯ್ಯೇ ಒಲಿವೆಯಂತೆ ನೀ ।೨।
ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ ।೨।
ನಾದವಂತೆ ವೇದವಂತೆ ಒಂದು ತಿಳಿಯೆ ನಾ ।೨।
ಬೆಂದ ಜೀವ ಮುಂದು ಕೂತೆ ಬಂದು ನೋಡಯ್ಯ ।೨।

ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವಾ 
ಹಸಿವೆಯನ್ನು ತಾಳಲಾರೆ ಕಾಪಡೆಯ 

ಏಕ ಶ್ರದ್ಧದೀ ನಂಬಿದವರ ನೀ ಸಾಕಿ ಸಲಹುವೇ ಎಂತಪ್ಪ ।೨।
ಶೋಕವ ಹರಿಸುವ ದೇವ ನೀನಾದರೆ ಬೇಟೆಯ ತೋರೊ ಎನ್ನಪ್ಪ ।೨।
ಲೋಕವನಾಳುವ ನೀನಪ್ಪಾ ಬೇಟೆಯ ತೋರೊ ಎನ್ನಪ್ಪ ।೨।
ಬೇಟೆಯ ತೋರೊ ಎನ್ನಪ್ಪ ।೨।

Song: Shivappa Kaayo Thande
Movie: Bedara Kannappa

Wednesday, September 21, 2016

ಒಂದೇ ನಾಡು ಒಂದೇ ಕುಲವು

ಚಿತ್ರ: ಮೇಯರ್ ಮುತ್ತಣ್ಣ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕ: ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ

ಗಂ:   ಒಂದೇ ನಾಡು
ಹೆ:     ಒಂದೇ ಕುಲವು
ಗಂ:   ಒಂದೇ ದೈವವು
          ಒಂದೇ ನಾಡು ಒಂದೇ ಕುಲವು ಒಂದೇ ದೈವವು
ಹೆ:     ಒಂದೇ ನಾಡು ಒಂದೇ ಕುಲವು ಒಂದೇ ದೈವವು
ಜೊ:  ಒಮ್ಮನದಿಂದ ದುಡಿದರೆ ಎಲ್ಲರು ಜಗವನೆ ಗೆಲ್ಲುವೆವು
          ಒಂದೇ ನಾಡು ಒಂದೇ ಕುಲವು ಒಂದೇ ದೈವವು

ಗಂ:   ಬಡವ ಬಲ್ಲಿಗನೆಂಬ ಆ ಬೇದ ದೇವರಿಗಿಲ್ಲ 
ಮೇ:  ಗಾಳಿ ಬೆಳಕು ನೀರು ನಮಗಾಗಿ ನೀಡಿಹನಲ್ಲ
ಹೆ:     ಆತನ ಮಕ್ಕಳು ತಾನೆ ಈ ಶೃಷ್ಠಿಯ ಜೀವಿಗಳೆಲ್ಲ
ಮೇ:  ಈ ನಿಜ ಅರಿತರೆ ಎಲ್ಲ ಕಷ್ಟವೆ ನಮಗಿನ್ನಿಲ್ಲ
ಗಂ:   ಜಡತೆಯ ನೀಗೋಣಾ
ಹೆ:     ಏಳಿರಿ ದುಡಿಯೋಣಾ
ಜೊ:  ಎಲ್ಲರು ಶ್ರಮಿಸಿ ನಮ್ಮೀ ನೆಲವನು ಸ್ವರ್ಗವ ಮಾಡೋಣಾ

ಮೇ:  ಒಂದೇ ನಾಡು ಒಂದೇ ಕುಲವು ಒಂದೇ ದೈವವು
          ಒಮ್ಮನದಿಂದ ದುಡಿದರೆ ಎಲ್ಲರು ಜಗವನೆ ಗೆಲ್ಲುವೆವು
          ಒಂದೇ ನಾಡು ಒಂದೇ ಕುಲವು ಒಂದೇ ದೈವವು ।೨।

ಗಂ:   ಸತ್ಯ ಧರ್ಮಗಳೆರಡು ನಮ್ಮ ಬಾಳಿನ ಕಣ್ಣಾಗಿರಲಿ 
ಹೆ:     ಶಾಂತಿಯೆ ಉಸಿರಾಗಿರಲಿ
ಮೇ:  ಸೇವೆಯೆ ಗುರಿಯಾಗಿರಲಿ
ಗಂ:   ಬದುಕಲಿ ಏನೇ ಬರಲಿ
ಮೇ:  ಒಗ್ಗಟ್ಟಲಿ ನಂಬಿಕೆ ಇರಲಿ
ಗಂ:   ಕನ್ನಡತನ ಬಿಡೆನೆಂಬ ಛಲವಿರಲಿ ಮನದಲ್ಲಿ
ಮೇ:  ಕನ್ನಡತನ ಬಿಡೆನೆಂಬ ಛಲವಿರಲಿ ಮನದಲ್ಲಿ
ಹೆ:     ಭೇದವ ಅಳಿಸೋಣಾ
ಗಂ:   ಸ್ನೇಹವ ಬೆಳೆಸೋಣಾ
ಮೇ:  ಭೇದವ ಅಳಿಸೋಣಾ, ಸ್ನೇಹವ ಬೆಳೆಸೋಣಾ
ಜೊ:  ಗುಡಿಸಲಿದಲ್ಲ ಗುಡಿಯೆ ಎಂದು ಭಾವಿಸಿ ಬಾಳೋಣಾ

ಮೇ:  ಒಂದೇ ನಾಡು ಒಂದೇ ಕುಲವು ಒಂದೇ ದೈವವು
          ಒಮ್ಮನದಿಂದ ದುಡಿದರೆ ಎಲ್ಲರು ಜಗವನೆ ಗೆಲ್ಲುವೆವು
          ಒಂದೇ ನಾಡು ಒಂದೇ ಕುಲವು ಒಂದೇ ದೈವವು ।೨।

Song: Onde Naadu Onde Kulavu
Movie: Mayor Muthanna

ಹಳ್ಳಿಯಾದರೇನು ಶಿವ

ಚಿತ್ರ: ಮೇಯರ್ ಮುತ್ತಣ್ಣ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕ: ಪಿ. ಬಿ. ಶ್ರೀನಿವಾಸ್

ಹಳ್ಳಿಯಾದರೇನು ಶಿವ, ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ, ಎಲ್ಲ ನಿನ್ನಂತೆ ಶಿವ
ಜಗವೆಲ್ಲ ನಿನ್ನದೇ ಶಿವ

ಎಲ್ಲಾ ಸಂಪತ್ತನಿಟ್ಟೆ ಎಲ್ಲರಿಗೆಂದೇ ಕೊಟ್ಟೆ ।೨।
ಹಂಚಿಕೊಂಡು ಬಾಳಲಾರಿಯದ ದುರಾಸೆ ಜನ
ವಂಚನೆಯ ಮಾಡುತಿರುವರೋ
ಬಡವರನ್ನು ತುಳಿದು ಅಹಂಕಾರದಲ್ಲಿ ಮೆರೆದು
ಅನ್ಯಾಯ  ಮಾಡುತಿರುವರೋ

ಹಳ್ಳಿಯಾದರೇನು ಶಿವ, ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ, ಎಲ್ಲ ನಿನ್ನಂತೆ ಶಿವ
ಜಗವೆಲ್ಲ ನಿನ್ನದೇ ಶಿವ

ಮಹಡಿಯಲ್ಲಿದ್ದರೇನು ಗುಡಿಸಲಲ್ಲಿದ್ದರೇನು ।೨।
ಹಸಿವಿಗೆ ಅಣ್ಣ ತಿನ್ನದೇ, ಚಿನ್ನವನು ತಿನ್ನಲು ಸಾಧ್ಯವೇನು
ಸ್ವಾರ್ಥದಿಂದ ಕೂಡಿ ಏನೇನೋ ಆಟವಾಡಿ
ಬರಿಗೈಲಿ ಕಡೆಗೆ ನೆಡೆವರು

ಹಳ್ಳಿಯಾದರೇನು ಶಿವ, ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ, ಎಲ್ಲ ನಿನ್ನಂತೆ ಶಿವ
ಜಗವೆಲ್ಲ ನಿನ್ನದೇ ಶಿವ
ಎಲ್ಲ ನಿನ್ನಂತೆ ಶಿವ, ಜಗವೆಲ್ಲ ನಿನ್ನದೇ ಶಿವ

Song: Halliyadarenu Shiva
Movie: Mayor Mutthanna

ಎಲ್ಲಿಗೆ ಪಯಣ

ಚಿತ್ರ: ಸಿಪಾಯಿ ರಾಮು
ರಚನೆ: ಆರ್. ಏನ್. ಜಯಗೋಪಾಲ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಪಿ. ಬಿ. ಶ್ರೀನಿವಾಸ್

ಕಥೆ ಮುಗಿಯಿತೇ, ಆರಂಭದ ಮುನ್ನ
ಲತೆ ಬಾಡಿ ಹೋಯಿತೇ, ಹೂವಾಗುವ ಮುನ್ನ

ಎಲ್ಲಿಗೆ ಪಯಣ, ಯಾವುದೋ ದಾರಿ
ಏಕಾಂಗಿ ಸಂಚಾರಿ  ।೨।
ಮಡದಿ ಮಕ್ಕಳು ಸ್ನೇಹಿತರನ್ನು ಮಣ್ಣಿನ ವಷ ಮಾಡಿ
ನೆಡೆದಿಹೆ ಇಂದು ಅಂಧನ ರೀತಿ, ಶೋಕದೇ, ಏನೊ ನಿನ್ನ ಗುರಿ

ಎಲ್ಲಿಗೆ ಪಯಣ

ಸೋಲು ಗೆಲುವು ಸಾವು ನೋವು, ಜೇವನದುಯ್ಯಾಲೆ
ಸಾಯುವ ಮುನ್ನ ಜನಿಸಿದ ಮಣ್ಣ ದರುಶನ ನೀ ಪಡೆದು
ತಾಯಿಯ ಮಡಿಲ ದೂಳಲಿ ಬೆರೆತು ಶೂನ್ಯದೆ, ಮುಗಿಸು ನಿನ್ನ ಕಥೆ

ಎಲ್ಲಿಗೆ ಪಯಣ, ಯಾವುದೋ ದಾರಿ
ಏಕಾಂಗಿ ಸಂಚಾರಿ

Song: Ellige Payana
Movie: Sipayi Ramu

Monday, September 19, 2016

ಮಾನವ ದೇಹವು ಮೂಳೆ ಮಾಂಸದ ತಳಿಕೆ

ಚಿತ್ರ: ಭಕ್ತ ಕುಂಬಾರ  
ರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ: ಪಿ. ಬಿ. ಶ್ರೀನಿವಾಸ್

ಪರಿತತ್ವವನು ಬಲ್ಲ ಪಂಡಿತನು ನಾನಲ್ಲ
ಹರಿನಾಮ ಒಂದುಳಿದು ನನಗೇನು ತಿಳಿದಿಲ್ಲ, ನನಗೇನು ತಿಳಿದಿಲ್ಲ

ಮಾನವ, ದೇಹವು, ಮೂಳೆ ಮಾಂಸದ ತಡಿಕೆ
ಮಾನವ ಮೂಳೆ ಮಾಂಸದ ತಡಿಕೆ
ಇದರ ಮೇಲಿದೆ ತೊದಲಿನ ಓದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ

ಮಾನವ ಮೂಳೆ ಮಾಂಸದ ತಡಿಕೆ

ನವಮಾಸಗಳು ಹೊಳಸಲಿ ಕಳೆದು ಅ ಅ ಆ ..
ನವ ರಂದಗಳ ತಳೆದು ಬೆಳೆದು
ಬಂದಿದೆ ಭುವಿಗೆ ಈ ನರ ಬೊಂಬೆ
ನಂಬಲು ಏನಿದೆ ಸೌಭಾಗ್ಯವೆಂಬೆ

ಮಾನವ ಮೂಳೆ ಮಾಂಸದ ತಡಿಕೆ, ದೇಹವು, ಮೂಳೆ ಮಾಂಸದ ತಡಿಕೆ

ಉಸಿರಾಡುವ ತನಕ ನಾನು ನನದೆಂಬ ಮಮಕಾರ
ನಿಂತ ಮರುಗಳಿಗೆ ಮಸಣದೆ ಸಂಸ್ಕಾರ
ಮಣ್ಣಲಿ ಬೆರೆತು ಮೆಲ್ಲಗೆ ಕೊಳೆತು
ಮುಗಿಯುವ ದೇಹಕೆ ವ್ಯಾಮೋಹವೇಕೆ

ಮಾನವ ಮೂಳೆ ಮಾಂಸದ ತಡಿಕೆ, ದೇಹವು, ಮೂಳೆ ಮಾಂಸದ ತಡಿಕೆ

ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ
ಬಂದು ಹೋಗುವ ನಡುವೆ, ಬರೀ ಕತ್ತಲೆ
ಭಕ್ತಿಯ ಬೆಳಕು, ಬಾಳಿಗೆ ಬೇಕು
ಮುಕ್ತಿಗೆ ವಿಠಲನ ಕೊಂಡಾದ ಬೇಕು

ಮಾನವ ಮೂಳೆ ಮಾಂಸದ ತಡಿಕೆ
ದೇಹವು, ಮೂಳೆ ಮಾಂಸದ ತಡಿಕೆ
ಇದರ ಮೇಲಿದೆ ತೊದಲಿನ ಓದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ

ಮಾನವ ಮೂಳೆ ಮಾಂಸದ ತಡಿಕೆ
ವಿಠಲ ವಿಠಲ ಪಾಂಡುರಂಗ ವಿಠಲ ।೪।

Song: Manava Dehavu Moole Mamsada Thalike
Movie: Bhakta Kumbara

ನಿನಗಾಗಿ ಓಡೋಡಿ ಬಂದೆ

ಚಿತ್ರ: ಸನಾದಿ ಅಪ್ಪಣ್ಣ 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಡಾ. ರಾಜಕುಮಾರ್ 

ನಿನಗಾಗಿ ಓಡೋಡಿ ಬಂದೆ ।೨।
ನಾನು, ಕಾಣದೆ ಹೀಗೇಕೆ ಮರೆಯಾಗಿ ಹೋದೆ 
ಮರೆಯಾಗಿ ಹೋದೆ, ನೀನು 
ನಿನಗಾಗಿ ಓಡೋಡಿ ಬಂದೆ 

ತಣ್ಣನೆ ಗಾಳಿ ಬೀಸಿದ ಹಾಗೆ, ಬಾಳಲಿ ಬಂದೆ ಸಂತಸ ತಂದೆ
ಕಣ್ಣಿಗೆ ಮಿಂಚು ಕಾಣುವ ಹಾಗೆ, ಬಾಳಿನ ಬಾನಲಿ ಬೆಳಕನು ತಂದೆ 
ಸ್ನೇಹದಿ ಸೇರಿ, ಮೋಹವ ತೋರಿ, ಸನಿಹಕೆ ಸಾರಿ, ಮನವನು ಸೇರಿ 
ಏಕೆ, ನೀ ಮರೆಯಾದೆ 

ನಿನಗಾಗಿ ಓಡೋಡಿ ಬಂದೆ ।೨।
ನಾನು, ಕಾಣದೆ ಹೀಗೇಕೆ ಮರೆಯಾಗಿ ಹೋದೆ 
ಮರೆಯಾಗಿ ಹೋದೆ, ನೀನು 
ನಿನಗಾಗಿ ಓಡೋಡಿ ಬಂದೆ 

ಬಿಸಿಲಿಗೆ ಹೂವು ಬಾಡುವ ಹಾಗೆ, ಕಾಣದಿ ನೊಂದೆ ವಿರಹದಿ ಬೆಂದೆ 
ಮುಳ್ಳಿನ ಬಲೆಯ ಹಿಡಿಯಲು ತಾಗಿ, ಅಳುತಿದೆ ಮನವು ನಡುಗಿದೆ ತನುವು 
ತೀರದ ನೋವ, ತಾಳದು ಜೀವ, ಕಾಣದೆ ನೀನು, ಉಳಿಯೆನು ನಾನು 
ಏಕೆ ನೀ ದೂರದೇ, ದೂರದೆ, ನೀನು 

ನಿನಗಾಗಿ ಓಡೋಡಿ ಬಂದೆ
ನಾನು, ಕಾಣದೆ ಹೀಗೇಕೆ ಮರೆಯಾಗಿ ಹೋದೆ 
ಮರೆಯಾಗಿ ಹೋದೆ, ನೀನು 
ನಿನಗಾಗಿ ಓಡೋಡಿ ಬಂದೆ 

Song: Ninagagi Ododi Bande
Movie: Sanaadi Appanna

ಚೆಲುವೆಯ ನೋಟ ಚೆನ್ನ

ಚಿತ್ರ: ಶಂಕರ್ ಗುರು
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್

।। ಚೆಲುವೆಯ ನೋಟ ಚೆನ್ನ, ಒಲವಿನ ಮಾತು ಚೆನ್ನ
     ಮಲ್ಲಿಗೆ  ಹೂವೇ ನಿನ್ನ ನಗುವು ಇನ್ನೂ ಚೆನ್ನಾ ।।೨।।
ಚೆಲುವೆಯ ನೋಟ ಚೆನ್ನ

ಕಾಮನಬಿಲ್ಲು ಚೆನ್ನ, ಸುಳಿವಾ ಮಿಂಚು ಚೆನ್ನ
ಹೊಳೆಯುವ ನಿನ್ನಾ ಕಣ್ಣಾ ಕಾಂತಿ ಇನ್ನು ಚೆನ್ನ ಅ ಆ ಅ
ತಣ್ಣನೆ ಗಾಳಿ ಚೆನ್ನ, ಹುಣ್ಣಿಮೆ ಚಂದ್ರನು ಚೆನ್ನ
ನಿನ್ನನು ಸೇರೀ ನಿಂತ ನನ್ನ ಬಾಳೆ ಚೆನ್ನ

ಚೆಲುವೆಯ ನೋಟ ಚೆನ್ನ, ಒಲವಿನ ಮಾತು ಚೆನ್ನ
ಮಲ್ಲಿಗೆ  ಹೂವೇ ನಿನ್ನ ನಗುವು ಇನ್ನೂ ಚೆನ್ನಾ
ಚೆಲುವೆಯ ನೋಟ ಚೆನ್ನ

ಜಿಂಕೆಯ ಕಣ್ಣ ಚೆನ್ನ, ಹವಳದ ಬಣ್ಣ ಚೆನ್ನ
ಅರಗಿಳಿ ನಿನ್ನ ರೂಪ ಚೆನ್ನದಲ್ಲಿ ಚೆನ್ನ
ಬೆಳಗಿನ ಬಿಸಿಲು ಚೆನ್ನ ಹೊಂಗೆಯ ನೆರಳು ಚೆನ್ನ
ಗೆಳತಿಯೆ ನಿನ್ನಾ ಸ್ನೇಹ ಚಿನ್ನಕಿಂತ ಚೆನ್ನ

।। ಚೆಲುವೆಯ ನೋಟ ಚೆನ್ನ, ಒಲವಿನ ಮಾತು ಚೆನ್ನ
     ಮಲ್ಲಿಗೆ  ಹೂವೇ ನಿನ್ನ ನಗುವು ಇನ್ನೂ ಚೆನ್ನಾ ।।೨।।
ಚೆಲುವೆಯ ನೋಟ ಚೆನ್ನ

Song: Cheluveya Nota Chenna
Movie: Shankar Guru

ಬಾಲೆ ಪ್ರೇಮ ಗೀತೆ

ಚಿತ್ರ: ಜ್ವಾಲಾಮುಖಿ 
ರಚನೆ: ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕ/ನಟ: ಡಾ. ರಾಜಕುಮಾರ್

ಬಾಲೆ ಪ್ರೇಮ ಗೀತೆ ।೨।
ನಲ್ಲ ನಲ್ಲೆ ಸೇರಿದಾಗ, ನೋಡುವ ನೋಟವೆಲ್ಲ ಆಗ
ನಾ ನೋಡುವ ನೋಟವೆಲ್ಲ ಆಗ, ಅಂದವೆ ತಾನೆ ಹೇಳೆ 


ಬಾಲೆ ಪ್ರೇಮ ಗೀತೆ, ನನ್ನ ನಲ್ಲೆ ಸೇರಿದಾಗ 

ಆಡೋ ಮಾತು ಹಾಡೇ, ಮೌನ ಕೂಡ ಹಾಡೇ ।೨।
ಕಾಣದ ಸುಖ ಹೃದಯಗಳನು ।೨।
ತೂಗಿ ತೂಗಿ ಹೀಗೆ ಹರುಷ ತರುದಿದೆ 

ಬಾಲೆ, ಬಾಲೆ ಪ್ರೇಮ ಗೀತೆ, ನನ್ನ ನಲ್ಲೆ ಸೇರಿದಾಗ 

ನೀಲೀ ಬಾನೂ ಎಲ್ಲೋ, ನಿಂತ ಭೂಮಿ ಎಲ್ಲೋ ।೨।
ತೇಲುವ ಬಿಳಿ ಮುಗಿಲೆಲೆಯಲಿ ।೨।
ಕೇಳೊ ಆಗೆ ಹಾಗಿ, ಮನವು ನಲಿದಿದೆ

ಬಾಲೆ, ಬಾಲೆ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ, ನೋಡುವ ನೋಟವೆಲ್ಲ ಆಗ
ನಾ ನೋಡುವ ನೋಟವೆಲ್ಲ ಆಗ, ಅಂದವೆ ತಾನೆ ಹೇಳೆ 
ಬಾಲೆ ಪ್ರೇಮ ಗೀತೆ, ನಲ್ಲ ನಲ್ಲೆ ಸೇರಿದಾಗ

Song: Baale Prema Geethe
Movie: Jwalamukhi

ಹೇಳುವುದು ಒಂದು, ಮಾಡುವುದು ಇನ್ನೊಂದು

ಚಿತ್ರ: ಜ್ವಾಲಾಮುಖಿ 
ರಚನೆ: ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕರು: ಡಾ. ರಾಜಕುಮಾರ್, ಬೆಂಗಳೂರು ಲತ 

ಗಂ:   ಹೇಳುವುದು ಒಂದು, ಮಾಡುವುದು ಇನ್ನೊಂದು 
         ನಂಬುವುದು ಹೇಗೋ ಕಾಣೆ
         ಪದ್ಮಾವತಿಪತಿ ತಿರುಪತಿ ಶ್ರೀವೆಂಕಟಾಚಲಪತಿ 
ಹೆ:    ಹೇಳುವುದು ಒಂದು, ಮಾಡುವುದು ಇನ್ನೊಂದು 
         ನಂಬುವುದು ಹೇಗೋ ಕಾಣೆ
         ಪದ್ಮಾವತಿಪತಿ ತಿರುಪತಿ ಶ್ರೀವೆಂಕಟಾಚಲಪತಿ 

ಗಂ:   ಸಾವಿರ ಸುಳ್ಳನು ಹೇಳಿ ಮಾಡುವೆ ಮಾಡು ಎಂದರು 
         ಗಂಡನಿಗೆ ಸುಳ್ಳನು ಹೇಳು ಎಂದು ಯಾರು ಹೇಳಿದರು 
ಹೆ:    ಮನೆಯಲ್ಲೇ ಇರುವೆನು ಎಂದ, ಅವರು ಏನು ಮಾಡಿದರು 
         ಗುಲಗಂಜಿಗೆ ಕಣ್ಣಾ ಕಪ್ಪು, ಕಾಣದೆಂದು ಹೇಳುವರು 
ಗಂ:   ಮೈಸೂರು ಎಲ್ಲಿ ಎಂದು ಏಕೆ ಮರೆತು ಹೋದರೊ 
ಹೆ:    ನಿಜವನ್ನೇ ಹೇಳಿ ಜಗಕೆ ಯಾರು ಸುಖವ ಹೊಂದಿದರು 

ಹೆ:    ಹೇಳುವುದು ಒಂದು
ಗಂ:   ಮಾಡುವುದು ಇನ್ನೊಂದು
ಜೊ:  ನಂಬುವುದು ಹೇಗೋ ಕಾಣೆ
         ಪದ್ಮಾವತಿಪತಿ ತಿರುಪತಿ ಶ್ರೀವೆಂಕಟಾಚಲಪತಿ 
ಹೆ:    ಹೇಳುವುದು ಒಂದು

ಗಂ:   ಮಾಡುವುದು ಇನ್ನೊಂದು

ಹೆ:    ಶ್ರೀಮತಿಯ ಪ್ರಶ್ನಿಸಲೆಂದೆ ಸಂಗೀತ ಕಲಿತಿದ್ದೇನು 
        ಕೈಹಿಡಿವ ಮುಂಚೆ ಕೊಟ್ಟ ಮಾತು ಮರೆತುಹೋಯಿತೇನು 
ಗಂ:   ಗಂಗೆಯಂತೆ ಮಾತನಾಡಿ ಅಂದು ಕಥೆಯ ಹೇಳಿದ್ದೇನು 
         ಅವಳ ಹಾಗೆ ಒಂದು ಮಗುವ ಕೈಗೆ ಕೊಡದೆ ಹೋದದ್ದೇನು 
ಹೆ:    ಅತ್ತೆ ಎದುರು ಈ ಮಾತಾಡಲು ಸಂಕೋಚ ಬರದೇನು ।೨।
ಗಂ:   ಮೊಮ್ಮಗು ಬೇಕು ಎಂದ ಅಮ್ಮನಿಗಾಗೆ ಕೇಳಿದೆನು ।೨।

ಗಂ:   ಹೇಳುವುದು ಒಂದು, ಮಾಡುವುದು ಇನ್ನೊಂದು 

ಜೊ:  ನಂಬುವುದು ಹೇಗೋ ಕಾಣೆ
         ಪದ್ಮಾವತಿಪತಿ ತಿರುಪತಿ ಶ್ರೀವೆಂಕಟಾಚಲಪತಿ 
ಹೆ:    ಹೇಳುವುದು ಒಂದು

ಗಂ:   ಮಾಡುವುದು ಇನ್ನೊಂದು

Song: Heluvudu Ondu
Movie: Jwalamukhi

ಈ ಸಮಯ ಆನಂದಮಯ

 ಚಿತ್ರ: ಬಬ್ರುವಾಹನ
ರಚನೆ:ಚಿ. ಉದಯಶಂಕರ್
ಸಂಗೀತ: ಟಿ. ಪಿ.
ಗಾಯಕರು:

ಹೆ:   ಈ ಸಮಯ ಆನಂದಮಯ
        ನೂತನ ಬಾಳಿನ ಶುಭೋದಯಾ
        ಈ ಸಮಯ ಆನಂದಮಯ

ಗಂ:  ಚಿತ್ರ, ಬರೀ ಆನಂದ ಮಾತ್ರ ಅಲ್ಲ
         ಈ ಸಮಯ ಶೃಂಗಾರಮಯ ।೨।
         ಒಲವಿನ ಬಾಳಿನ ನವೋದಯ

ಜೊ: ಈ ಸಮಯ ಆನಂದಮಯ

ಹೆ:    ಹೊಂಬಿಸಿಲು ಹೊಸ ಚೈತನ್ಯ ತರಲು ।೨।
         ಹೂದುಂಬಿ ಒಂದಾಗಿ ನಲಿದಾಡುತಿರಲು ।೨।
ಗಂ:  ನಿನ್ನಾಸೆ ಅತಿಯಾಗಿ ಬಳಿಸಾರಿ ಬರಲು ।೨।
         ನಾ ಪಡೆದೆ ನಿನ್ನಿಂದ ಸವಿ ಜೆನ ಹೊನಲು

ಜೊ: ಈ ಸಮಯ
ಹೆ:    ಶೃಂಗಾರಮಯ, ನೂತನ
ಜೊ: ಬಾಳಿನ ಶುಭೋದಯಾ
         ಈ ಸಮಯ ಆನಂದಮಯ

ಗಂ:  ಬೆಳ್ಳಿಯ ತೆರೆಯ ಅರಳಿದೆ ಹಿಮವು ।೨।
         ಮುತ್ತಿನ ಮಣಿಗಳ ಹೊತ್ತಿಗೆ ಸುಮವು ।೨।
ಹೆ:    ಚೆಳಿಯಲಿ ಸೋತಿದೆ ನನ್ನೀ ತನುವು ।೨।
         ತೋಳಿನ ಆಸರೆ ಬಯಸಿದೆ ಜೀವವು

ಜೊ: ಈ ಸಮಯ
ಗಂ:   ಆನಂದಮಯ
ಜೊ: ನೂತನ ಬಾಳಿನ ಶುಭೋದಯಾ
         ಈ ಸಮಯ ಆನಂದಮಯ

ಹೆ:    ನಿನ್ನೀ ಒಲವಿಗೆ ಅರಳಲು ಓಡಲು ।೨।
ಗಂ:   ನಾಳಿನ ಭಾಗ್ಯಕೆ ಕಾದಿದೆ ಮಡಿಲು ।೨।
ಹೆ:    ಬೆರತಾ ಜೀವಕೆ ಹರಕೆಯ ತರಲು ।೨।
ಗಂ:  ಮಳೆಯನು ಸುರಿಸಿದೆ ಕಪ್ಪನೆ ಮುಗಿಲು

ಹೆ:    ಈ ಸಮಯ
ಗಂ:   ಶೃಂಗಾರಮಯ
ಜೊ: ನೂತನ ಬಾಳಿನ ಶುಭೋದಯಾ
         ಈ ಸಮಯ ಆನಂದಮಯ

Song: Ee Samaya Aanandamaya 
Movie: Babruvahana

ಆರಾಧಿಸುವೆ ಮದನಾರಿ

ಚಿತ್ರ: ಬಬ್ರುವಾಹನ
ರಚನೆ:ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕ: ಡಾ. ರಾಜಕುಮಾರ್ 


ಆರಾಧಿಸುವೆ ಮದನಾರಿ ।೨।
ಆಧರಿಸು ನೀ ದಯೆತೋರಿ 
ಆರಾಧಿಸುವೆ ಮದನಾರಿ 

ಅಂತರಂಗದಲಿ ನೆಲೆಸಿರುವೆ ।೨।
ಆಂತರ್ಯ ತಿಳಿಯದೆ ಏಕಿರುವೆ ।೨।
ಸಂತಸ ನಿನ್ನ ಸಹವಾಸ ನೀಡಿ ।೨।
ಸಂತೋಷದಿಂದೆನ್ನ ನಲಿಸೆಂದು ಕೋರುವೆ  

ಆರಾಧಿಸುವೆ ಮದನಾರಿ 
ಆಧರಿಸು ನೀ ದಯೆತೋರಿ 
ಆರಾಧಿಸುವೆ ಮದನಾರಿ 

ಮೈದೋರಿ ಮುಂದೆ ಸಹಕರಿಸು 
।। ಮೈದೋರಿ ಮುಂದೆ ಸಹಕರಿಸು
    ಅಮಾರ ನೊರವನೇ ಪರಿಹರಿಸು ।।೨।।
ಪ್ರೇಮಾಮೃತವನು ನೀನುಣಿಸು ।೨। 
ತನ್ಮಯಗೊಳಿಸು ಮೈಮರೆಸು ।೨।
ಚಿನ್ಮಯ ಭಾವ ತುಂಬುತ ಜೀವ ।೨।
ಆನಂದ ಆನಂದ ಆನಂದವಾಗಲಿ 

ಆರಾಧಿಸುವೆ ಮದನಾರಿ 
ಆಧರಿಸು ನೀ ದಯೆತೋರಿ 
ಆರಾಧಿಸುವೆ ಮದನಾರಿ 

Song; Aaradhisuve Madanari
Movie: Babruvahana