Friday, September 23, 2016

ಅಮ್ಮಾ ನೀನು ನಮಗಾಗಿ

ಚಿತ್ರ: ಕೆರಳಿದ ಸಿಂಹ 
ರಚನೆ: ಚಿ. ಉದಯಶಂಕರ್ 
ಸಂಗೀತ: ಚೆಲ್ಲಪಲ್ಲಿ ಸತ್ಯಂ 
ಗಾಯಕರು: ಡಾ. ರಾಜಕುಮಾರ್, ಪಿ. ಬಿ. ಶ್ರೀನಿವಾಸ್ 

ರಾಜ್:   ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ 
              ಬಾಳಲೆ ಬೇಕು ಈ ಮನೆ ಬೆಳಕಾಗಿ 
ಪಿ.ಬಿ:    ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ
              ಬಾಳಲೆ ಬೇಕು ಈ ಮನೆ ಬೆಳಕಾಗಿ 
ಜೊ:     ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ

ರಾಜ್:   ಬಾಡದ ತಾವರೆ ಹೂವಿನ ಹಾಗೆ, ಎಂದಿಗು ಆರದ ಜ್ಯೋತಿಯ ಹಾಗೆ 
ಪಿ.ಬಿ:    ಗೋಪುರ ಬೇಡಿದ ಕಲಶದ ಹಾಗೆ, ಆ ಧ್ರುವತಾರೆಯೆ ನಾಚುವ ಹಾಗೆ 
ರಾಜ್:   ಜೊತೆಯಲಿ ಎಂದೆಂದು ನೀನಿರಬೇಕು 
ಜೊ:     ಬೇರೆ ಏನೂ ಬೇಡೆವು ಸಾಕು 

ಜೊ:     ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ

ರಾಜ್:   ಸಂಜೆಯ ಗಾಳಿಯ ತಂಪಿನ ಹಾಗೆ, ಮಲ್ಲಿಗೆ ಹೂವಿನ ಕಂಪಿನ ಹಾಗೆ 
ಪಿ.ಬಿ:    ಜೀವವ ತುಂಬುವ ಉಸಿರಿನ ಹಾಗೆ, ನಮ್ಮನು ಸೇರಿ ಎಂದಿಗೂ ಹೀಗೆ 
ರಾಜ್:   ನಗುತಲಿ ಒಂದಾಗಿ ನೀನಿರಬೇಕು 
ಜೊ:     ನಿನ್ನಾ ನೆರಳಲಿ ನಾವಿರಬೇಕು 

ಜೊ:     ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ

ರಾಜ್:   ಸಾವಿರ ನದಿಗಳು ಸೇರಿದರೇನು, ಸಾಗರಕೆ ಸಮನಾಗುವುದೇನು 
ಪಿ.ಬಿ:    ಶತ ಕೋಟಿ ದೇವರು ಹರಸಿದರೇನು, ಅಮ್ಮನ ಹರಕೆಗೆ ಸರಿಸಾಟಿಯೇನು 
ರಾಜ್:   ತಾಯಿಗೆ ಆನಂದ ತಂದರೆ ಸಾಕು 
ಜೊ:     ಬೇರೆ ಪೂಜೆ ಏತಕೆ ಬೇಕು 

ಜೊ:     ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ
             ಬಾಳಲೆ ಬೇಕು ಈ ಮನೆ ಬೆಳಕಾಗಿ 
             ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ

Song: Amma Neenu Namagagi
Movie: Keralida Simha

No comments:

Post a Comment