Sunday, September 18, 2016

ಇನ್ನು ಹತ್ತಿರ ಹತ್ತಿರ ಬರುವೆಯಾ

ಚಿತ್ರ: ಭಾಗ್ಯದ ಲಕ್ಷ್ಮಿ ಬಾರಮ್ಮ 
ರಚನೆ: ಚಿ. ಉದಯಶಂಕರ್ 
ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್ 
ಗಾಯಕ/ನಾಟ: ಡಾ. ರಾಜಕುಮಾರ್, ಪಿ. ಸುಶೀಲ 


ಗಂ:  ಇನ್ನು ಹತ್ತಿರ ಹತ್ತಿರ ಬರುವೆಯಾ ।೨।
        ಬಳಿ ನೀನು ಬಂದಾಗ ಕಣ್ಣೋಟ ಬೆರೆತಾಗ  
        ಹೊಸ ಆಸೆ ನನ್ನೆದೆಯಲ್ಲಿ ಅರಳಿ ಅರಳಿ ಹೊಸತನವ ಕಂಡೆ  
ಹೆ:   ಇನ್ನು ಹತ್ತಿರ ಹತ್ತಿರ ಬರುವೆಯಾ
        ಬಳಿ ನೀನು ಬಂದಾಗ ಕಣ್ಣೋಟ ಬೆರೆತಾಗ  
        ಹೊಸ ಆಸೆ ನನ್ನೆದೆಯಲ್ಲಿ ಅರಳಿ ಅರಳಿ ಹೊಸತನವ ಕಂಡೆ 

ಗಂ:  ಈ ಇರುಳಲೀ ಸುಲಿಯುವಾ ಗಾಳಿಗೆ, ಮೈ ಚಳಿಯಲಿ  ನಡುಗಿದೆ ಕಾಣದೆ 
ಹೆ:    ಆ ಚಂದಿರಾ ಸುರಿಯುವಾ ಚಂದ್ರಿಕೆ, ಈ ಮನವನು ಕೆಣಕಿದೆ ಕಾಡಿದೆ
ಗಂ:   ಏಕಾಂತ ಬಂಡ ವೇಳೆ ಬಿಡು ಸಂಕೋಚವನ್ನು ನಲ್ಲೆ 
ಹೆ:    ಈ ಮಾತು ಕೇಳಿದಾಗ ಮನ ಮೊಗ್ಗಾಗಿ ಹೊಯಿತಿಲ್ಲಿ 
ಗಂ:   ಅರಿತೂ ಬೆರೆತೂ ಗೆಳತೀ ಹೊಸತನವ ಕಂಡೆ 

ಜೊ:  ಇನ್ನು ಹತ್ತಿರ ಹತ್ತಿರ ಬರುವೆಯಾ

ಗಂ:  ಈ ಬಳುಕವಾ ನಡುವನು ನೋಡಲು, ಹೂ ಲತೆಗಳೂ ಕರಗುತಾ ನಾಚಲು 
ಹೆ:    ಈ ಒಲವಿನಾ ಕವಿನುಡೀ ಕೇಳಲು, ಆ ಅರಗಿಣೀ ಮೌನದೀ ಒಡಲು 
ಗಂ:  ಬಾಳೆಲ್ಲ ಹೀಗೆ ಸೇರಿ ನಲಿದಾಡೋಣವೆನ್ನ ಆಸೆ 
ಹೆ:    ದಿನವೆಲ್ಲ ಹೀಗೆ ನಾವು ಸವಿಮಾತನ್ನು ಆಡುವಾಸೆ 
ಗಂ:   ಮನವೂ ಕುಣಿದೂ ಗೆಳತೀ ಹೊಸತನವನು ಕಂಡೆ 

ಹೆ:    ಇನ್ನು ಹತ್ತಿರ ಹತ್ತಿರ ಬರುವೆಯಾ
ಗಂ:   ಬಳಿ ನೀನು ಬಂದಾಗ ಕಣ್ಣೋಟ ಬೆರೆತಾಗ  
ಜೊ:  ಹೊಸ ಆಸೆ ನನ್ನೆದೆಯಲ್ಲಿ ಅರಳಿ ಅರಳಿ ಹೊಸತನವ ಕಂಡೆ  
         ಇನ್ನು ಹತ್ತಿರ ಹತ್ತಿರ ಬರುವೆಯಾ

Song: Innu Hattira Hattira Baruveya
Movie: Bhagyada Lakshmi Baaramma

No comments:

Post a Comment