Saturday, September 24, 2016

ಹೃದಯ ಸಮುದ್ರ ಕಲಕಿ

ಚಿತ್ರ: ಅಶ್ವಮೇಧ
ರಚನೆ: ದೊಡ್ಡ ರಂಗೇಗೌಡ 
ಸಂಗೀತ: ಸಂಗೀತ ರಾಜ 
ಗಾಯಕ: ಡಾ. ರಾಜಕುಮಾರ್

।। ಹೃದಯ ಸಮುದ್ರ ಕಲಕಿ ಹುಕ್ಕಿದೆ ದ್ವೇಷದ ಬೆಂಕಿ
ರೋಷಾನಗ್ನಿ ಜ್ವಾಲೆ ಉರಿಉರಿದು ।।೨।।
ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ ಪ್ರಾಣ ಒತ್ತೆ ಇಟ್ಟು ಹೋರಾಡುವೆ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ಧೀಕ್ಷೆ ತೊಟ್ಟು ನೆಡೆಸುವೆ
ಅಶ್ವಮೇಧ ।೪।

ಸೂರ್ಯ ಚಂದ್ರರೇ ನಿನ್ನ ಕಣ್ಗಳು, ಗಿರಿ ಶೃಂಗವೇ ನಿನ್ನ ಅಂಗವೋ 
ದಿಗ್ಪಾಲಕರೇ ನಿನ್ನ ಕಾಲ್ಗಳೋ, ಮಿಂಚು ಸಿಡಿಲು ನಿನ್ನ ವೇಗವೋ 
ಜೀವ ಜೀವದಲಿ ಬೆರೆತು ಹೋದಾ, ಭಾವ ಭಾವದಲಿ ಕರಗೀ ಹೋದಾ 
ಜೀವಾಶ್ವವೇ ದೂರದೆಯಾ, ಪ್ರಾಣಾಶ್ವವೇ ಮರೆಯಾದೆಯಾ 
ದಿಟ್ಟ ಹೆಜ್ಜೆ ಇಟ್ಟು ಯಜ್ಞ ಧೀಕ್ಷೆ ತೊಟ್ಟು ನೆಡೆಸುವೆ
ಅಶ್ವಮೇಧ ।೪।

ವಿಷವ್ಯೂಹವ ಹುಟ್ಟಿಕೆಡವಲು, ವೀರ ಪುರುಷಾ ಕತ್ತಿ ಹಿಡಿದು 
ಚಕ್ರವೇಶವಾ ಹೊರಗೆಳೆಯಲೂ,  ಶತತೇಜದಾ ಕತ್ತಿ ಹಿಡಿದು 
ಕ್ರೂರ ರಾಕ್ಷಸರ ಕೊಚ್ಚಿ ನೆಡೆವೇ,  ನೀತಿ ನೇಮಗಳ ಬಿತ್ತಿ ಬೇಳೆವೆ 
ಆಕಾಶವೇ ಮೇಲ್ಬೀಳಲಿ, ಭೂತಾಯಿಯೇ ಬಾಯಿ ಬಿರಿಯಲಿ 
ದಿಟ್ಟ ಹೆಜ್ಜೆ ಇಟ್ಟು ಯಜ್ಞ ಧೀಕ್ಷೆ ತೊಟ್ಟು ನೆಡೆಸುವೆ
ಅಶ್ವಮೇಧ ।೪।

ಹೃದಯ ಸಮುದ್ರ ಕಲಕಿ ಹುಕ್ಕಿದೆ ದ್ವೇಷದ ಬೆಂಕಿ
ರೋಷಾನಗ್ನಿ ಜ್ವಾಲೆ ಉರಿಉರಿದು
ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ ಪ್ರಾಣ ಒತ್ತೆ ಇಟ್ಟು ಹೋರಾಡುವೆ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ಧೀಕ್ಷೆ ತೊಟ್ಟು ನೆಡೆಸುವೆ
ಅಶ್ವಮೇಧ ।೪।

Song: Hrudaya Samudra Kalaki
Movie: Ashwamedha

1 comment: