Thursday, September 22, 2016

ಶಿವಪ್ಪ ಕಾಯೋ ತಂದೆ

ಚಿತ್ರ: ಬೇಡರ ಕಣ್ಣಪ್ಪ 
ರಚನೆ: ಎಸ್. ನಂಜಪ್ಪ 
ಸಂಗೀತ: ಆರ್. ಸುದರ್ಶನಂ 
ಗಾಯಕ: ಸಿ. ಎಸ್. ಜಯರಾಮನ್ 

ಓಂಕಾರ ಓಂಕಾರ, ಓಂ ಓಂಕಾರನಾದ ರೂಪ 
ಮೋರೆಯ ನೀ ಆಲಿಸಿ, ಪಾಲಿಸೋ ಸರ್ವೇಶಾ 

ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವಾ 
ಹಸಿವೆಯನ್ನು ತಾಳಲಾರೆ, ಕಾಪಡೆಯ 

ಭಕ್ತಿಯಂತೆ ಪೂಜೆಯಂತೆ, ಒಂದು ಅರಿಯೆ ನಾ ।೨।
ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ 
ಪಾಪವಂತೆ ಪುಣ್ಯವಂತೆ ಕಾಣೆನಯ್ಯಾ 

ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವಾ 
ಹಸಿವೆಯನ್ನು ತಾಳಲಾರೆ ಕಾಪಡೆಯ 

ಶುದ್ಧನಾಗಿ ಪೂಜೆ ಗೈಯ್ಯೇ ಒಲಿವೆಯಂತೆ ನೀ ।೨।
ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ ।೨।
ನಾದವಂತೆ ವೇದವಂತೆ ಒಂದು ತಿಳಿಯೆ ನಾ ।೨।
ಬೆಂದ ಜೀವ ಮುಂದು ಕೂತೆ ಬಂದು ನೋಡಯ್ಯ ।೨।

ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವಾ 
ಹಸಿವೆಯನ್ನು ತಾಳಲಾರೆ ಕಾಪಡೆಯ 

ಏಕ ಶ್ರದ್ಧದೀ ನಂಬಿದವರ ನೀ ಸಾಕಿ ಸಲಹುವೇ ಎಂತಪ್ಪ ।೨।
ಶೋಕವ ಹರಿಸುವ ದೇವ ನೀನಾದರೆ ಬೇಟೆಯ ತೋರೊ ಎನ್ನಪ್ಪ ।೨।
ಲೋಕವನಾಳುವ ನೀನಪ್ಪಾ ಬೇಟೆಯ ತೋರೊ ಎನ್ನಪ್ಪ ।೨।
ಬೇಟೆಯ ತೋರೊ ಎನ್ನಪ್ಪ ।೨।

Song: Shivappa Kaayo Thande
Movie: Bedara Kannappa

No comments:

Post a Comment