Saturday, October 1, 2016

ಹಾಯಾದ ಈ ಸಂಜೆ

ಚಿತ್ರ: ವಸಂತ ಗೀತ
ರಚನೆ: ಚಿ. ಉದಯಶಂಕರ್ 
ಸಂಗೀತ:  ಎಂ. ರಂಗರಾವ್ 
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ 

ಹೆ:  ಹಾಯಾದ ಈ ಸಂಜೆ ಆನಂದ ತುಂಬಿರಲು ಬಾಳೆ ಸಂಗೀತ ಸುಧೆಯಾಯಿತು 
ಗಂ: ಹಾಯಾದ ಈ ಸಂಜೆ ಆನಂದ ತುಂಬಿರಲು ಬಾಳೆ ಸಂಗೀತ ಸುಧೆಯಾಯಿತು 
ಹೆ:  ಹಾಯಾದ 
ಗಂ: ಈ ಸಂಜೆ 

।। ಹೆ:  ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು 
   ಗಂ:  ನಯನವ ಸೆಳೆಯುವ ಹರುಷ ತುಂಬಿದ ಈ ನಗುವು ।।೨।।
।। ಹೆ:  ಎಂತ ಮುದ್ದಾಗಿದೇ 
   ಗಂ:  ಏನು ಸೊಗಸಾಗಿದೇ ।।೨।।
ಹೆ:  ಮಗುವಿನ ಹರುಷಕೆ ಇನಿಯನ ಸರಸಕೆ 
ಗಂ:  ಮನಸಿನ ಕುಣಿತಕೆ ಹೃದಯದ ಮಿಡಿತಕೆ 
       ಜುಮ್ಮ್ ಎಂದಿತು 
ಹೆ:  ಅ ಹ ।೩।

ಗಂ: ಹಾಯಾದ ಈ ಸಂಜೆ 
ಹೆ:  ಆನಂದ ತುಂಬಿರಲು 
ಗಂ: ಬಾಳೆ ಸಂಗೀತ ಸುಧೆಯಾಯಿತು 
ಹೆ:  ಹಾಯಾದ 
ಗಂ:  ಈ ಸಂಜೆ 

।। ಹೆ:  ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ 
   ಗಂ:  ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ  ।।೨।।
।। ಹೆ:  ಏನು ಸಂತೋಷವೂ
   ಗಂ:  ಏನು ಉಲ್ಲಸವೂ  ।।೨।।
ಗಂ: ಯುಗ ಯುಗ ಉರುಳಲಿ ಹೊಸ ಯುಗ ಉದಿಸಲಿ 
ಹೆ:  ಈ ಅನುಬಂಧವು ಹೀಗೆಯೆ ಸಾಗಲಿ 
      ಎಂಬಾಸೆಯು 
ಗಂ:  ಅ ಹ ।೩।

ಜೊ:  ಹಾಯಾದ ಈ ಸಂಜೆ ಆನಂದ ತುಂಬಿರಲು ಬಾಳೆ ಸಂಗೀತ ಸುಧೆಯಾಯಿತು 

Song: Hayada Ee Sanje
Movie: Vasantha Geeta

ರಾಗವೋ ಅನುರಾಗವೋ

ಚಿತ್ರ: ಯಾರಿವನು
ರಚನೆ: ಚಿ. ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ 

ಗಂ: ರಾಗವೋ ಅನುರಾಗವೋ
ಹೆ:  ಯೋಗವೋ ಶುಭಯೋಗವೋ 
ಗಂ: ಬಯಸದೆ ಬಂದಿಂದೆ 
ಹೆ:  ಹರುಷವ ತಂದಿದೆ 
ಗಂ: ಒಲವ ನೀಡಿದೆ 
ಹೆ:  ಒಲವ ನೀಡಿದೆ 
ಗಂ: ರಾಗವೋ 
ಹೆ:  ಅನುರಾಗವೋ
ಗಂ: ಯೋಗವೋ 
ಹೆ:  ಶುಭಯೋಗವೋ 

ಗಂ:  ಬಿಳುಪಾದ ಮಂಜು ನೆಲವೆಲ್ಲ ತುಂಬಿ ತಂಪು ಚೆಲ್ಲಿದೆ 
        ಚಳಿಯಲೂ ಏನೊ ಹಿತವನು ಇಂದು ಈ ಸ್ನೇಹ ತಂದಿದೆ 
ಹೆ:   ಭುವಿಯಲಿ  ಬೇರೆ ಹೊಸ ಲೋಕ ಕಂಡ ಭ್ರಾಂತಿ ಬಂದಿದೆ 
        ಹಿಮದಲಿ ಸೇರಿ ಜಾರುವ ಆಸೆ ನನ್ನನ್ನು ಕಾಡಿದೆ 
ಜೊ: ನನ್ನನ್ನು ಕಾಡಿದೆ

ಹೆ:  ರಾಗವೋ ಅನುರಾಗವೋ
ಗಂ:  ಯೋಗವೋ ಶುಭಯೋಗವೋ 
ಹೆ:  ಬಯಸದೆ ಬಂದಿಂದೆ 
ಗಂ:  ಹರುಷವ ತಂದಿದೆ 
ಹೆ:  ಒಲವ ನೀಡಿದೆ 
ಗಂ:  ಒಲವ ನೀಡಿದೆ 
ಹೆ:  ರಾಗವೋ 
ಗಂ: ಅನುರಾಗವೋ
ಹೆ:  ಯೋಗವೋ 
ಗಂ: ಶುಭಯೋಗವೋ 

ಹೆ:   ಸೊಗಸಾದ ನೋಟ ಹಿತವಾದ  ಆಟ ಸುಖವ ತಂದಿದೆ 
ಗಂ:  ಅನುದಿನ ಹೀಗೆ ನಲಿಯುವ ಆಸೆ ಎದೆಯಲ್ಲಿ ತುಂಬಿದೆ 
ಹೆ:   ದಿನವೆಲ್ಲ ಕೂಡಿ ಒಂದಾಗಿ ಹಾಡೊ ಬಯಕೆ ಬಂದಿದೆ 
ಗಂ:  ಜೊತಯಲಿ ಜೋಡಿ ಹಕ್ಕಿಯ ಹಾಗೆ ಹಾರೋಣ ಎನಿಸಿದೆ 

ಜೊ: ಹಾರೋಣ ಎನಿಸಿದೆ

ಗಂ: ರಾಗವೋ ಅನುರಾಗವೋ
ಹೆ:  ಯೋಗವೋ ಶುಭಯೋಗವೋ 
ಗಂ: ಬಯಸದೆ ಬಂದಿಂದೆ 
ಹೆ:  ಹರುಷವ ತಂದಿದೆ 
ಗಂ: ಒಲವ ನೀಡಿದೆ 
ಜೊ: ಒಲವ ನೀಡಿದೆ 

Song: Raagavo Anuraagavo
Movie: Yarivanu

ಥಯ್ಯಾರೆ ಥಯ್ಯ

ಚಿತ್ರ: ಶಬ್ದವೇಧಿ
ರಚನೆ/ಸಂಗೀತ: ಹಂಸಲೇಖ 
ಗಾಯಕರು: ಡಾ. ರಾಜಕುಮಾರ್, ಚಿತ್ರ 

ಗಂ:  ಥಯ್ಯಾರೆ ಥಯ್ಯ ।೨।
         ಏನೆಂದು ಹೇಳಲಯ್ಯ ಈ ಅಂದ ಚಂದವ 
ಹೆ:    ಥಯ್ಯಾರೆ ಥಯ್ಯ 
ಗಂ:  ಇವಳಂದ ಚಂದವ 
ಹೆ:    ಥಯ್ಯಾರೆ ಥಯ್ಯ 
ಗಂ:  ಅಂತರಂಗವ 
ಹೆ:    ಥಯ್ಯಾರೆ ಥಯ್ಯ 
ಗಂ:  ಇವಳಂತರಂಗವ 
ಹೆ:    ಥಯ್ಯಾರೆ ಥಯ್ಯ 
         ಥಯ್ಯಾರೆ ಥಯ್ಯ ।೨।
         ಏನೆಂದು ಹೇಳಲಯ್ಯ ಈ ಅಂದ ಚಂದವ 
ಗಂ:  ಥಯ್ಯಾರೆ ಥಯ್ಯ 
ಹೆ:    ಇವನಂದ ಚಂದವ 
ಗಂ:  ಥಯ್ಯಾರೆ ಥಯ್ಯ 
ಹೆ:    ಅಂತರಂಗವ 
ಗಂ:  ಥಯ್ಯಾರೆ ಥಯ್ಯ 
ಹೆ:    ಇವನಂತರಂಗವ 
ಗಂ:  ಥಯ್ಯಾರೆ ಥಯ್ಯ

ಗಂ:  ಈ ಕೆನ್ನೆ ಕೆಂದಾವರೆ ಅನ್ನೋದು ಕವಿಗಳ ಸವಿಮಾತು
        ಬಾಡಲ್ಲ ಎಂಬುದೆನ್ನ ಪಿಸುಮಾತು
ಹೆ:    ಥಯ್ಯಾರೆ ಥಯ್ಯ
ಗಂ:  ಥಯ್ಯಾರೆ ಥಯ್ಯ
ಹೆ:    ಈ ಕಣ್ಣು ಮೂಗಂದವು ಕಟ್ಟಾಳು ಗಂಡಸಿನ ತೋಳಂದವೊ
        ತೋಳಲ್ಲಿ ನನ್ನ ಜೀವಗಾನಂದವೊ
ಗಂ:  ಹೊಂಬಾಳೆಯೆ ಹೆಣ್ಣಾಯಿತೋ
ಹೆ:    ಬಂಗಾರವೇ ಗಂಡಾಯಿತೋ

ಗಂ:  ಥಯ್ಯಾರೆ ಥಯ್ಯ ।೨।
        ಏನೆಂದು ಹೇಳಲಯ್ಯ ಈ ಅಂದ ಚಂದವ
ಹೆ:    ಥಯ್ಯಾರೆ ಥಯ್ಯ 
ಗಂ:  ಇವಳಂದ ಚಂದವ 
ಹೆ:    ಥಯ್ಯಾರೆ ಥಯ್ಯ 
ಗಂ:  ಅಂತರಂಗವ 
ಹೆ:    ಥಯ್ಯಾರೆ ಥಯ್ಯ 
ಗಂ:  ಇವಳಂತರಂಗವ 
ಹೆ:    ಥಯ್ಯಾರೆ ಥಯ್ಯ

ಗಂ:  ಓ ಇವಳ ಕಾಲಂದವೋ ಕಾಲಲ್ಲಿ ಕಿರು ಗೆಜ್ಜೆ ಗಲ್ಲೆಂದವೋ 
        ಗಲ್ಲೆಂದ್ರೆ ನನ್ನ ಎದೆ ಜಲ್ಲೆಂದವೊ 
ಹೆ:    ಥಯ್ಯಾರೆ ಥಯ್ಯ
ಗಂ:  ಥಯ್ಯಾರೆ ಥಯ್ಯ
ಹೆ:    ಆ ಸ್ವರ್ಗ ಬಾನಲ್ಲಿದೆ ಅನ್ನೋದು ಲೋಕದ ರೂಢಿಮಾತು 
        ಪ್ರೀತಿಲ್ಲಿ ಎಂಬುದೆನ್ನ ಎದೆ ಮಾತು 
ಗಂ:  ಈ ಪ್ರೀತಿಯ  ಹೂವಾದೆ ನೀ 
ಹೆ:    ಈ ಹೂವಿನ ಜೇನಾದೆ ನೀ 

ಗಂ:  ಥಯ್ಯಾರೆ ಥಯ್ಯ ।೨।
         ಏನೆಂದು ಹೇಳಲಯ್ಯ ಈ ಅಂದ ಚಂದವ
ಹೆ:    ಥಯ್ಯಾರೆ ಥಯ್ಯ 
ಗಂ:  ಇವಳಂದ ಚಂದವ 
ಹೆ:    ಥಯ್ಯಾರೆ ಥಯ್ಯ 
ಗಂ:  ಅಂತರಂಗವ 
ಹೆ:    ಥಯ್ಯಾರೆ ಥಯ್ಯ 
ಗಂ:  ಇವಳಂತರಂಗವ 
ಹೆ:    ಥಯ್ಯಾರೆ ಥಯ್ಯ

Song: Thaiyare Thayya 
Movie: Shabdavedhi

Friday, September 30, 2016

ಜನರಿಂದ ನಾನು ಮೇಲೆ ಬಂದೆ

ಚಿತ್ರ: ಶಬ್ದವೇಧಿ
ರಚನೆ/ಸಂಗೀತ: ಹಂಸಲೇಖ 
ಗಾಯಕರು: ಡಾ. ರಾಜಕುಮಾರ್

ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
।। ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ, ಹೋರಾಡಲು ನಾ ಎಂದು ಮುಂದೆ
ಈ ದೇವರು ಮಾಡಿದ ಆಜ್ಞೆ ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ ನಾ ಮರೆಯುವುದುಂಟೇನು
ಛೆ ಛೆ ಆಗದು ಆಗದು ।।೨।।

ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ, ಹೋರಾಡಲು ನಾ ಎಂದು ಮುಂದೆ

ಹಣವನು ದೋಚುವ ದೆಸೆಯಿಂದ ಮಾರಕ ಮಾದಕ ಕೊಡುವುದೇ ಸುಖ ಪಡುವುದೇ 
ನಾಳಿನ ಪ್ರಜೆಗಳ ಕಂಗೆಡಿಸಿ ನಾಡನು ನರಕಕೆ ತಳ್ಳಲು ಹುಳಿ ತೆಗೆವುದೇ 
ಸಾತ್ಯಕೇ ಸಾವಿಲ್ಲಾ, ಮೋಸಕೇ ಉಳಿವಿಲ್ಲಾ, ನ್ಯಾಯದ ದಾರಿಗೆ ಭಯವಿಲ್ಲ 
ಈ ಜನಗಳು ಮಾಡಿದ ಆಜ್ಞೆ ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ ನಾ ಮರೆಯುವುದುಂಟೇನು
ಛೆ ಛೆ ಆಗದು ಆಗದು

ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ, ಹೋರಾಡಲು ನಾ ಎಂದು ಮುಂದೆ

ಯುವಕರ ಬೊಜಿನ ಉಪಯೋಗ ನಾಡಿಗೆ ದೊರೆತರೆ ಜಿನ್ನದ ಬೆಳೆ ಬೆಳೆವುದು 
ಯುವಜನ ಶಕ್ತಿಯು ಮನಸಿಟ್ಟು ದುಡಿದರೆ ನಡೆದರೆ ಭೂಮಿಗೆ ಸ್ವರ್ಗ ಇಳಿವುದು 
ಯುವಕರೇ ಮೇಲೆಳೀ, ಸಂಸ್ಕೃತಿ ಕಾಪಾಡೀ, ಯುವಕರೆ ನಾಡಿನ ಶಿಲ್ಪಿಗಳು 
ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ನನ್ನ ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಈ ದೇವರು ಮಾಡಿದ ಆಜ್ಞೆ ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ ನಾ ಮರೆಯುವುದುಂಟೇನು
ಛೆ ಛೆ ಆಗದು ಆಗದು

ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ, ಹೋರಾಡಲು ನಾ ಎಂದು ಮುಂದೆ

Song: Janarinda Naanu Mele Bande
Movie: Shabdavedhi

ಮಧುರ ಈ ಕ್ಷಣ

ಚಿತ್ರ: ಒಡಹುಟ್ಟಿದವರು
ರಚನೆ: ಎಂ. ಏನ್. ವ್ಯಾಸರಾವ್
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ. ರಾಜಕುಮಾರ್, ಮಂಜುಳಾ ಗುರುರಾಜ್

ಗಂ: ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ ।೨।
       ಜೊತೆ ನೀನು ಇರಲು ಆಸೆ ತರಲು ಬಿಡದೆ ಬಯಸಿದೆ ಮಿಲನ 
ಹೆ:  ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
       ಜೊತೆ ನೀನು ಇರಲು ಆಸೆ ತರಲು ಬಿಡದೆ ಬಯಸಿದೆ ಮಿಲನ 
ಗಂ: ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ

ಗಂ: ಮಧುಚಂದ್ರ ಕಂಡೇ ನಾನು ನಲಿ ತೋಳಿನಲ್ಲೇ 
       ಮಧುಮಾಸ ತಂದೆ ನೀನು ಋತು ವರ್ಷದಲ್ಲೆ 
       ಬಿಡಲಾರೆ ಎಂದು ನಿನ್ನ ಓ ಮುದ್ದು ನಲ್ಲೆ 
ಹೆ:  ಮಳೆಗಾಗಿ ಕಾದು ನಿನ್ನ ನಾವಿಲಾದೆ ನಾನು 
       ಒಲವನ್ನೆ ಧಾರೆ ಎರೆದ ಮುಗಿಲಾದೆ ನೀನು 
       ಶೃಂಗಾರ ಲಾಸ್ಯದೊಳಗೆ ರಸಕಾಮದೇನು 
ಗಂ: ಮಡದಿ ನಿನ್ನ ನುಡಿಯ ಕೇಳಿ ಕರಗಿ ಹೋದೆ ನಾ

ಹೆ:  ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
ಗಂ: ಜೊತೆ ನೀನು ಇರಲು ಆಸೆ ತರಲು ಬಿಡದೆ ಬಯಸಿದೆ ಮಿಲನ 
       ಅ ಹ ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ

ಹೆ:  ಕುಡಿಮೀಸೆ ಹೈದಾ ನೀನು ಕನ್ನಡದ ಕಂದ 
      ಪತಿಯಾಗಿ ಪಡೆದೆ ನಿನ್ನ ಶ್ರೀ ರಾಮಚಂದ್ರ 
      ಇರುವಂತೆ ರವಿಯು ಧರೆಗೆ  ನನಗಿಂದು ನೀವೆ 
ಗಂ: ಕರುನಾಡ ಚಲುವೆ ನೀನು ಸೊಗಸಾದ ಅಂದ 
       ಎದೆಯಾಸೆ ನುಡಿವಾ ನಿನ್ನ ಈ ಕಣ್ಣೆ ಚಂದ 
       ಮನ ತುಂಬಿ ಬಂದೇ ನೀನು ಅನುರಾಗದಿಂದ 
ಹೆ:  ಒಲಿದಾ ಜೋಡಿ ಹೃದಯ ಕೂಡಿ ನಲಿವ ಸಂಭ್ರಮ 

ಗಂ: ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
ಹೆ:  ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
ಗಂ: ಜೊತೆ ನೀನು ಇರಲು ಆಸೆ ತರಲು ಬಿಡದೆ ಬಯಸಿದೆ ಮಿಲನ 
ಹೆ:  ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ

Song: Madhura Ee Kshana
Movie: Odahuttidavaru

Thursday, September 29, 2016

ಸಿಗಿವೆಂ ಕ್ಷಣದಲಿ ನಿನ್ನ ನಾಂ

ಚಿತ್ರ: ಭಕ್ತ ಪ್ರಹಲ್ಲಾದ 
ರಚನೆ: ಚಿ. ಉದಯಶಂಕರ್ 
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕ: ಡಾ. ರಾಜಕುಮಾರ್ 

ಏ ಹರೀ 
ಅಂದು ನನ್ನ ತಮ್ಮನನ್ನು ಕೊಂದು 
ನನ್ನ ಎತ್ತ ತಾಯಿಯ ಒಡಲಿಗೆ ಕಿಚ್ಚನ್ನಿಟ್ಟ ಪಾತಕೀ 
ಇನ್ನು ನನ್ನಿಂದ ನೀನು ತಪ್ಪಿಸಿ ಕೊಳ್ಳಲಾರೆ 

ಸಿಗಿವೆಂ ಕ್ಷಣದಲಿ ನಿನ್ನ ನಾಂ,  ಎಲ್ಲಿ ಹೋದರೇನು ನಿನ್ನ ಉಳಿಸೆನು  ।೨।
ಧಾನವೇಂದ್ರನಾದ ನನ್ನ ಕೆಣಕಿದ ಮಧೋನ್ಮಸ್ಥ ದುರುಳ  ದುಷ್ಟ ಧೂರ್ತನೆ 
ಸಿಗಿವೆಂ ಕ್ಷಣದಲಿ ನಿನ್ನ ನಾಂ,  ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೆಂ ಕ್ಷಣದಲಿ ನಿನ್ನ ನಾಂ

।। ಆ ಹಾಲ ಕಡಲ ಕ್ಷಣದಿ ಕುಡಿಯುತ 
ಆ ಶೇಷನೊಡಲ ಸಿಗಿದು ಬಿಸುಡುತ 
ಆ ಚಕ್ರ ಕಡಿದು ಮುರಿದು ಎಸೆಯುತ 
ಆ ನಿನ್ನ ಗಧೆ ಪುಡಿ ಪುಡಿ ಮಾಡಿ  ।।೨।।
ಶಿವನು ಹೆದರುತಿರೆ ಬ್ರಹ್ಮ ಬೆವರುತಿರೆ 
ಸುರರು ನಡುಗುತಿರೆ ನರರು ಅಳುತಲಿರೆ 
ಕಣ್ಣಲಿ ರೋಷದ ಬೆಂಕಿಯ ಚೆಲ್ಲಿ ಫಳಾ ಫಳಾ 

ನಾನೀಗ 
ಸಿಗಿವೆಂ ಕ್ಷಣದಲಿ ನಿನ್ನ ನಾಂ,  ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೆಂ ಕ್ಷಣದಲಿ ನಿನ್ನ ನಾಂ

।। ಆಕಾಶ ಹೆದರಿ ಹೆದರಿ ನಡುಗಿದೆ 
ಕಾರ್ಮೋಡ ಭಯದೆ ಬೆದರಿ ಚದುರಿದೆ 
ಈ ಭೂಮಿ ಅಳುತ ಶರಣು ಎನುತಿರೆ 
ದೇವೇಂದ್ರನೆದೆಯನು ಸೀಳಿ  ।।೨।।
ಸ್ವರ್ಗ ನರಕಗಳ ಎಲ್ಲ ಲೋಕಗಳ ನನ್ನ ಕಾಲಡಿಯಲಿಟ್ಟು ಆಳುತಿರೆ 
ಎದುರಿಸಿ ನಿಲ್ಲುವ ಧೀರರು ಯಾರು ಬಿಡು ಬಿಡು 

ನಾನೀಗ 
ಸಿಗಿವೆಂ ಕ್ಷಣದಲಿ ನಿನ್ನ ನಾಂ,  ಎಲ್ಲಿ ಹೋದರೇನು ನಿನ್ನ ಉಳಿಸೆನು
ಧಾನವೇಂದ್ರನಾದ ನನ್ನ ಕೆಣಕಿದ ಮಧೋನ್ಮಸ್ಥ ದುರುಳ  ದುಷ್ಟ ಧೂರ್ತನೆ 
ಸಿಗಿವೆಂ ಕ್ಷಣದಲಿ ನಿನ್ನ ನಾಂ,  ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೆಂ ಕ್ಷಣದಲಿ ನಿನ್ನ ನಾಂ

Song: Sigivem Kshanadali
Movie: Bhakta Prahlada

ಶರಣೊ ಶಂಭೋ ಶಿವ

ಚಿತ್ರ: ಓಹಿಲೇಶ್ವರ
ರಚನೆ: ಕೆ. ಆರ್. ಸೀತಾರಾಮ ಶಾಸ್ತ್ರಿ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಡಾ. ರಾಜಕುಮಾರ್ 

**** ಚಿತ್ರರಂಗದಲ್ಲಿ ಡಾ. ರಾಜ್ ರವರು ಗಾಯಕರಾಗಿ ಹಾಡಿದ ಮೊಟ್ಟ ಮೊದಲ ಗೀತೆ ****

ಓಂ ನಮಃ ಶಿವಾಯ ।೩।
ಶರಣೊ ಶಂಭೋ ಶಿವ ಶರಣೊ ಶಂಭೋ ।೨।
ಎನ್ನ ಗುರು ತೋರಿದ ಸೋಮೇಶ ಪ್ರಭು ।೨।
ಶರಣೊ ಶಂಭೋ ಶಿವ ಶರಣೊ ಶಂಭೋ

।। ದಿನ ನೂರು ನೋವು, ಕೊನೆಗೊಂದು ಸಾವು 
ದೇಹಕೆ ಬರಲೇಕೆ ಪರಮೇಶ, ಈ ಚಿರನಾಶ ।।೨।
ಸುರುಚಿರ ಮೋಕ್ಷ ಒಂದೇ ಅವಿನಾಶ ಅದನೇ ಪಡೆದೇನೆ ಪ್ರಭು 

ಶರಣೊ ಶಂಭೋ ಶಿವ ಶರಣೊ ಶಂಭೋ

ಆದಿಮೂಲ ಕರುಣಾಲವಾಲ ಪರಿಪೂರ್ಣ ಶಾಂತಿ ಗುಣ ಸುಶೀಲ 
ನೀಲಕಂಠ ನಿಜಮಾಂತಸಾರ ಪರಪಾಶ ಕೇಶಷಯ ನಿವಾರ 
ಗುರು ತೋರಿದ ಸೋಮೇಶ ಪ್ರಭು
ಶರಣೊ ಶಂಭೋ ಶಿವ ಶರಣೊ ಶಂಭೋ

।। ಅತಿ ಸೌಖ್ಯದಿಂದ ಮತಿ ಹೇಡಿಯಾದೆ 
ಯಾಡಿಗೆ ಬರುವಲ್ಲಿ ತಡವಾದೆ ನಾ ಕಡೆಯಾದೆ ।।೨।।
ಶರಣರು ನಿಂತ ನಿನ್ನಾ ಹೊಸಿಲಲ್ಲಿ ಕಾಸವಾಗಿಸಿ ಕಾಯೊ ಪ್ರಭು 

ಗುರು ತೋರಿದ ಸೋಮೇಶ ಪ್ರಭು
ಶರಣೊ ಶಂಭೋ ಶಿವ ಶರಣೊ ಶಂಭೋ ।೨।

ಓಂ ನಮಃ ಶಿವಾಯ ।೪।

Song: Sharano Shambho Shiva
Movie: Ohileshwara

**** First song by Dr. Rajkumar in a movie ****

ಪ್ರೇಮ ಕಾಶ್ಮೀರ

ಚಿತ್ರ: ಶಬ್ದವೇಧಿ 
ರಚನೆ/ಸಂಗೀತ: ಹಂಸಲೇಖ 
ಗಾಯಕರು: ಡಾ. ರಾಜಕುಮಾರ್, ಚಿತ್ರ 

।।   ಗಂ:  ಓ ಓ ಓ ಪ್ರೇಮ ಕಾಶ್ಮೀರ 
      ಹೆ:   ಓ ಓ ಓ ಪ್ರೇಮ ಕಾಶ್ಮೀರ 
      ಗಂ:  ಕಾಶ್ಮೀರದಲ್ಲಿ ಬೇಲೂರ ಬಾಲೆ 
      ಹೆ:   ಕೈಲಾಸದಲ್ಲಿ ಮೈಸೂರ ಮಲ್ಲೆ  ।೨।।
ಗಂ:  ಈ ಪ್ರೇಮ ಕಾಮದ ತುಂಬ, ಕಸ್ತೂರಿ ಕನ್ನಡದ ಕಂಪು 
ಹೆ:   ಶೃಂಗಾರ ಸೀಮೆಯ ತುಂಬ, ಗಂಧರ್ವ ಕೋಗಿಲೆ ಇಂಪು 
ಗಂ:  ಈ ಸಂಗಮ
ಹೆ:   ಈ ಸಂಗಮ
ಗಂ:  ಹೃದಯಂಗಮ 
ಹೆ:   ಹೃದಯಂಗಮ 
ಗಂ:  ನಾನೆಂದು ಮರೆಯಲಾರೆ 
ಹೆ:   ನಾನೆಂದು ಮರೆಯಲಾರೆ 
ಗಂ:  ಓ ಓ ಓ ಪ್ರೇಮ ಕಾಶ್ಮೀರ 
ಹೆ:   ಓ ಓ ಓ ಪ್ರೇಮ ಕಾಶ್ಮೀರ 

ಗಂ:  ಕಬ್ಬಿಗರ ತಂಬೆಲರೆ, ತಬ್ಬಿಕೋ ಕನ್ನಡತಿಯ 
       ದಂತದ ಬೊಂಬೆಗೆ ಇವಳೆ ಗಂಧದ ಬೊಂಬೆಗೆ ಇವಳೆ 
       ಉಪಮಾನ ಉಪಮೇಯ 
ಹೆ:   ಹಾಲಂತ ಹಿಮಗಿರಿಯೆ, ನಮ್ಮೀ ಕಣ್ಣಲಿ ನೋಡಿಕೋ 
       ಸಹ್ಯಾದ್ರಿ ಸಂಕುಲದ ಸಹ್ಯಾದ್ರಿ ಸಂಕುಲದ
       ಹಸಿ ಹಸಿರ ವನರಾಜಿ 
ಗಂ:  ಕಾವೇರಿಯಲ್ಲಿ ಮಿಂದ ಮೈಸೂರ ಮಲ್ಲೆ ಮೈಗೆ  
ಹೆ:   ಆನಂದ ತೀರ್ಥ ಚೆಲ್ಲೋ ಗೌರೀಶನಾಳೊ ಗಂಗೆ  

ಗಂ:  ಓ ಓ ಓ ಪ್ರೇಮ ಕಾಶ್ಮೀರ 
ಹೆ:   ಓ ಓ ಓ ಪ್ರೇಮ ಕಾಶ್ಮೀರ 
ಗಂ:  ಕಾಶ್ಮೀರದಲ್ಲಿ ಬೇಲೂರ ಬಾಲೆ 
ಹೆ:   ಕೈಲಾಸದಲ್ಲಿ ಮೈಸೂರ ಮಲ್ಲೆ 

ಹೆ:   ಪ್ರೇಮಿಗಳಾ ಸಂಸಾರ, ತೆರೆಯುವುದು ನಿನ್ನೆದುರು 
       ಹೃದಯದ ಮನೆಯಿಂದ ।೨।
       ಬಿಚ್ಚೆದೆಯ ಕನಸುಗಳಾ  
ಗಂ:  ತಂಪಿನ ಮಂಜಿನ, ತೇರುವ ಮನೆಯಲ್ಲೂ 
       ಮೊದಲಿರುಳ ನೆನೆದರೆ ।೨।
       ಮಿಂಚಿನ ಸಂಚಾರ 
ಹೆ:   ಕನ್ಯಾಕುಮಾರಿಯಿಂದ ಕಾಶ್ಮೀರ ತುದಿಯವರೆಗೆ 
ಗಂ:  ಒಲವೊಂದೆ ದಾರಿದೀಪ ಈ ಸ್ನೇಹ ಸೇತುವೇಗೆ 

ಹೆ:   ಓ ಓ ಓ ಪ್ರೇಮ ಕಾಶ್ಮೀರ 
ಗಂ:  ಓ ಓ ಓ ಪ್ರೇಮ ಕಾಶ್ಮೀರ 
ಗಂ:  ಕಾಶ್ಮೀರದಲ್ಲಿ ಬೇಲೂರ ಬಾಲೆ 
ಹೆ:   ಕೈಲಾಸದಲ್ಲಿ ಮೈಸೂರ ಮಲ್ಲೆ 
ಗಂ:  ಈ ಪ್ರೇಮ ಕಾಮದ ತುಂಬ, ಕಸ್ತೂರಿ ಕನ್ನಡದ ಕಂಪು 
ಹೆ:   ಶೃಂಗಾರ ಸೀಮೆಯ ತುಂಬ, ಗಂಧರ್ವ ಕೋಗಿಲೆ ಇಂಪು 
ಗಂ:  ಈ ಸಂಗಮ
ಹೆ:   ಈ ಸಂಗಮ
ಗಂ:  ಹೃದಯಂಗಮ 
ಹೆ:   ಹೃದಯಂಗಮ 
ಗಂ:  ನಾನೆಂದು ಮರೆಯಲಾರೆ 
ಹೆ:   ನಾನೆಂದು ಮರೆಯಲಾರೆ 
ಗಂ:  ಓ ಓ ಓ ಪ್ರೇಮ ಕಾಶ್ಮೀರ 
ಹೆ:   ಓ ಓ ಓ ಪ್ರೇಮ ಕಾಶ್ಮೀರ 

Song: Prema Kashmira
Movie: Shabdavedhi

ಅಳ್ಬ್ಯಾಡ್ ಕಣೆ ಸುಮ್ಕಿರೆ

ಚಿತ್ರ: ಕವಿರತ್ನ ಕಾಳಿದಾಸ 
ರಚನೆ: ಚಿ. ಉದಯಶಂಕರ್ 
ಸಂಗೀತ: ಎಂ. ರಂಗರಾವ್  
ಗಾಯಕ: ಡಾ. ರಾಜಕುಮಾರ್ 

ಅಳ್ಬ್ಯಾಡ್ ಕಣೆ ಸುಮ್ಕಿರೆ ನನ್ನ ಮುದ್ದಿನ ರಾಣಿ 
ಅಳ್ಬ್ಯಾಡ್ ಕಣೆ ಸುಮ್ಕಿರೆ ಈ ಕುರಬನ ರಾಣಿ 
ಅಳ್ಬ್ಯಾಡ್ ಕಣೆ ಸುಮ್ಕಿರೆ
ಧೀರನಂತ ಶೂರನಂತ ಮಾರನಂತ ಗಂಡ ನಾನು 
ಯಾಕೆ ಅಳ್ತಾ ನಿಂತುಕೊಂಡೆ ಅಳಬುರ್ಕಿ ಹಂಗೆ 
ನನ್ನ ಮೇಲೆ ನಿಂಗೆ ಕೋಪ ಯಾಕೆ, ಹೇಳೆ ಇಲ್ಲೇ ನಿನ್ನ ಮುದ್ದಾಡ್ಬೇಕೆ
ನೆತ್ತಿ ಮೇಲೆ ಹೊತ್ತು ನಿನ್ನ ಬೆಟ್ಟನಾದ್ರು ಹತ್ತುತಿನಿ
ಶಾಲೆನಾದ್ರು ಓಗ್ಕೊಡ್ತೀನಿ ಸುಮ್ಕಿರು ಮತ್ತೆ 
ನೀ ಸುಮ್ಕಿರು ಮತ್ತೆ 

ಅಳ್ಬ್ಯಾಡ್ ಕಣೆ ಸುಮ್ಕಿರೆ ನನ್ನ ಮುದ್ದಿನ ರಾಣಿ 
ಅಳ್ಬ್ಯಾಡ್ ಕಣೆ ಸುಮ್ಕಿರೆ

ಬೆಟ್ಟಾದ ಕೆಳಗೆ ಆಲದ ಮರ ಒಂದೈತೆ, ಅಲ್ಲಿ ನಮ್ಮ ಬೀರಪ್ಪ ದ್ಯಾವರ ಗುಡಿ ಒಂದೈತೆ 
ಹೌದು ಚಿನ್ನ 
ಬೆಟ್ಟಾದ ಕೆಳಗೆ ಆಲದ ಮರಒಂದೈತೆ, ಅಲ್ಲಿ ನಮ್ಮ ಬೀರಪ್ಪ ದ್ಯಾವರ ಗುಡಿ ಒಂದೈತೆ 
ನಾನು ನೀನು ಕೂಡಿಕೊಂಡು, ಕುರಿಗಳ್ನಲ್ಲಿ ಮೇಯಿಸ್ಕೊಂಡು 
ಬಿಸ್ಲಾಗಾದ್ರು ಹಿಟ್ಟು ಉಂಡು ಹೊಂಗೆ ನೆರಳಾಗೆ ಕಂಬ್ಳಿ ಬೀಸಿ 
ಜೋಡಿ ಕುರಿಗಳಂಗೆ ನಾವು ಮಲಗಿಕೊಳ್ಳೋಣ 
ಸೇರಿ ಗೊರ್ಕೆ ಒಡಿಯೋಣ 

ಅಳ್ಬ್ಯಾಡ್ ಕಣೆ ಸುಮ್ಕಿರೆ ನನ್ನ ಮುದ್ದಿನ ರಾಣಿ 
ಅಳ್ಬ್ಯಾಡ್ ಕಣೆ ಸುಮ್ಕಿರೆ

ಮುಂಜಾನೆ ಸೂರ್ಯ ಅಂದ ಹಕ್ಕಿಗಳ ಚಿಳಿಪಿಳಿ ಚಂದ
ಅ ಹ ಅ ಹ.. ಏನ್ಹೇಳ್ಳಿ ಅದರಂದವ 
ಮುಂಜಾನೆ ಸೂರ್ಯ ಅಂದ ಹಕ್ಕಿಗಳ ಚಿಳಿಪಿಳಿ ಚಂದ
ಬೀಸೊ ಗಾಳಿ ತೂಗೊ ಮರವ ಹರಿಯೊ ನದಿಯ ಕಾಣೊಣ  
ಗುಡುಗೊ ಸಿಡಿಲೊ ಚಳಿಯೊ ಮಳೆಯೊ 
ದಿನವೂ ಅಲೆಯೋಣ, ಬಾ...... 

ಅಳ್ಬ್ಯಾಡ್ ಕಣೆ ಸುಮ್ಕಿರೆ ನನ್ನ ಮುದ್ದಿನ ರಾಣಿ 
ಅಳ್ಬ್ಯಾಡ್ ಕಣೆ ಸುಮ್ಕಿರೆ ಈ ಕುರಬನ ರಾಣಿ 

ಅಳ್ಬ್ಯಾಡ್ ಕಣೆ ಸುಮ್ಕಿರೆ

ಥಳಾಂಗು ಥದಿಗಿಣ ತೋಮ್ ।೩।
ಅಯ್ಯಯ್ಯಪ್ಪ 

Song: Alabyad Kane Sumkire
Movie: Kaviratna Kalidasa

ಚಿನ್ನದ ಬೊಂಬೆಯಲ್ಲ

ಚಿತ್ರ: ಸಮಯದ ಗೊಂಬೆ
ರಚನೆ: ಚಿ. ಉದಯಶಂಕರ್ 
ಸಂಗೀತ:  ಎಂ. ರಂಗರಾವ್ 
ಗಾಯಕ: ಡಾ. ರಾಜಕುಮಾರ್ 

।। ಚಿನ್ನದ ಬೊಂಬೆಯಲ್ಲ, ದಂತದ ಬೊಂಬೆಯಲ್ಲ, ಬುದ್ದಿ ಇರುವ ಬೊಂಬೆಯೂ
ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ, ಆಡುವ ಸಮಯದ ಗೊಂಬೆ
ಮಾನವ, ಆಡುವ ಸಮಯದ ಗೊಂಬೆ  ।।೨।।

ಹೇ, ಸಿಡಿಯುವ ರೋಷದಲಿ ಬಡಿಯುವ ಸೇಡಿನಲಿ ದಿನವು ಹೋರಾಟವೇ 
ಹಾಂ, ನಲಿಯುವ ಪ್ರೀತಿಯಲಿ ನಗಿಸುವ ಮಾತಿನಲಿ 
ಮನುಜ ಒಂದಾಗಿ ಜೊತೆಯಾಗಿ ಬಾಳುವ 
ಅವನು ಸಂತೋಷ ಎಲ್ಲೆಂದೆ ಹುಡುಕುವ 
ಬಿಸಿಲಲಿ ಮಳೆಯಲಿ ಚೆಳಿಯಲಿ ಬೆದರದೆ 
ವಿನೋದವೋ ವಿಷಾದವೋ ಹೊಂದಿಕೊಳ್ಳುವ 

ಚಿನ್ನದ ಬೊಂಬೆಯಲ್ಲ, ದಂತದ ಬೊಂಬೆಯಲ್ಲ, ಬುದ್ದಿ ಇರುವ ಬೊಂಬೆಯೂ
ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ, ಆಡುವ ಸಮಯದ ಗೊಂಬೆ
ಮಾನವ, ಆಡುವ ಸಮಯದ ಗೊಂಬೆ

ಹೇ, ಜನಿಸಿದ ಊರೊಂದು ಬೆಳೆಯುವ ಊರೊಂದು ಬದುಕು ಉಯ್ಯಾಲೆಯು 
ಹಾಂ, ನಡೆಯುವ ನಾಡೊಂದು ಬೆರೆಯುವ ಮಣ್ಣೊಂದು 
ಮನುಜ ಇರುವಲ್ಲೆ ಹಾಯಾಗಿ ಬಾಳುವ 
ಸುಖದ ಕನಸಲ್ಲೇ ದಿನವೆಲ್ಲ ತೇಲುವ 
ಜನದಿನ ಸುಳಿಯಲಿ ಬರಡಿನ ಮರೆಯಲಿ 
ವಿನೋದವೋ ವಿಷಾದವೋ ಹೊಂದಿಕೊಳ್ಳುವ 

ಚಿನ್ನದ ಬೊಂಬೆಯಲ್ಲ, ದಂತದ ಬೊಂಬೆಯಲ್ಲ, ಬುದ್ದಿ ಇರುವ ಬೊಂಬೆಯೂ
ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ, ಆಡುವ ಸಮಯದ ಗೊಂಬೆ
ಮಾನವ, ಆಡುವ ಸಮಯದ ಗೊಂಬೆ

Song: Chinnada Bombeyalla
Movie: Samayada Gombe

ಸಂಗೀತವೆ

ಚಿತ್ರ: ಒಲವು ಗೆಲುವು  
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ 

।। ಗಂ:   ಸಂಗೀತವೆ
    ಹೆ:     ನೀ ನುಡಿಯುವ ಮಾತೆಲ್ಲ 
    ಗಂ:   ಸಲ್ಲಾಪವೆ
    ಹೆ:     ನೀ ಎಲ್ಲಿರೆ ಅಲ್ಲೆಲ್ಲ ।।೨।।
ಗಂ:   ಸಂತೋಷವೆ
ಹೆ:     ನಿ ಜೊತೆಯಿರೆ ಬಾಳೆಲ್ಲ 
ಗಂ:   ಸರಸದಲ್ಲಿ ಸಮನಾರಿಲ್ಲ 
          ಸ್ನೇಹದಲೆ ಗೆಲ್ಲುವೆಯಲ್ಲ 
ಹೆ:     ಮೌನದಲೆ ಹೇಳಿದೆಯಲ್ಲ 
          ನೋಟದಲೆ ಹಾಡಿದೆಯೆಲ್ಲ 
          ಸಂಗೀತವೇ ..... 

ಹೆ:     ಮನಸನು ಅರಿಯುವ ಚತುರನಾದರು ಏತಕೆ ನಿಲ್ಲುವೆ ನೀ ದೂರದಿ 
ಗಂ:   ಅರಳಿದ ಒಲವಿನ ಸುಮವು ನಗುತಿರೆ ನೋಡುತ ನಿಂತೆನು ಉಲ್ಲಾಸದಿ 
ಹೆ:     ಪ್ರೇಮದಲಿ ನಿನ್ನ ಸೇರಲು, ಹೃದಯದಲಿ ಹರುಷ ತುಂಬಲು 
          ಹಾಯಾಗಿದೆ ।೨।

ಗಂ:   ಸಂಗೀತವೆ
ಹೆ:     ನೀ ನುಡಿಯುವ ಮಾತೆಲ್ಲ 
ಗಂ:   ಸಲ್ಲಾಪವೆ
ಹೆ:     ನೀ ಎಲ್ಲಿರೆ ಅಲ್ಲೆಲ್ಲ
          ಸಂಗೀತವೇ ..... 

ಗಂ:   ಚೆಲುವೆಯ ಛಲದಲಿ ಪಡೆದ ಒಲವನು ಮೋಹದ ಮೋಡಿಗೆ ನಾ ಸೋತೆನು 
ಹೆ:     ಸೋಲುವ ನೆಪದಲಿ ಗೆಲುವೆ ಹೊಂದಿದೆ ನೊಂದೆನು ಸೇರಲು ನಾ ನಿನ್ನನು 
ಗಂ:   ಮಾತಿನಲಿ ಮುದ್ದು ಅರಗಿಣಿ, ಅಂದದಲಿ ಮುತ್ತಿನ ಮಣಿ
          ಬಾ ಇಲ್ಲಿಗೆ ।೨।

ಗಂ:   ಸಂಗೀತವೆ
ಹೆ:     ನೀ ನುಡಿಯುವ ಮಾತೆಲ್ಲ 
ಗಂ:   ಸಲ್ಲಾಪವೆ
ಹೆ:     ನೀ ಎಲ್ಲಿರೆ ಅಲ್ಲೆಲ್ಲ
ಗಂ:   ಸಂತೋಷವೆ
ಹೆ:     ನಿ ಜೊತೆಯಿರೆ ಬಾಳೆಲ್ಲ 
          ಸಂಗೀತವೇ ..... 

Song: Sangeethave, Nee Nudiyuva
Movie: Olavu Geluvu

ನನ್ನೆದೆ ಕೋಗಿಲೆಯ

ಚಿತ್ರ: ಒಲವು ಗೆಲುವು 
ರಚನೆ: ಎಸ್. ಜಾನಕಿ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಎಸ್. ಜಾನಕಿ 

।। ಏ..  ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತಂದೆ ।।೨।।

।। ಏಕೊ ಏನೊ ಕಾಣೆ ನಾನು ಎದುರಲು ನೀನಿರಲು
ಮನದಲಿ ಸಂತೋಷದ ಹೊನಲು ಹರಿಯಲು  ।।೨।।
ಕಾಣುತ ನಿನ್ನಂದ ಕಾಣದ ಆನಂದ 
ಹೊಸ ಹೊಸ ಬಯಕೆಯು ನಿನ್ನಿಂದ 

..  ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತಂದೆ

ತಾಳು ತಾಳು ನಲ್ಲ ನಿಲ್ಲು
।। ತಾಳು ತಾಳು ನಲ್ಲ ನಾನು ಬರುವೆನು ನಿನ್ನೊಡನೆ 
ಕಾಡುವೆ ನನ್ನೇಕೆ ಹೀಗೆ ಸುಮ್ಮನೆ ।।೨।।
ಕಾಣದೆ ನಿನ್ನನು ಬಾಳೆನು ನಾನಿನ್ನು 
ತಾಳೆನು ವಿರಹದ ನೋವನ್ನು 

ಏ, ಎ, ಎ , ಏ...  ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತಂದೆ

Song: Nannede Kogileya
Movie: Olavu Geluvu

Wednesday, September 28, 2016

ತುಂಬಿತು ಮನವ ತಂದಿತು ಸುಖವ

ಚಿತ್ರ: ಮಹಿಷಾಸುರ ಮರ್ಧಿನಿ
ರಚನೆ: ಚಿ. ಸದಾಶಿವಯ್ಯ 
ಸಂಗೀತ: ಜಿ.  ಕೆ. ವೆಂಕಟೇಶ್ 
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ 

ಹೆ:   ತುಂಬಿತು ಮನವ ತಂದಿತು ಸುಖವ
        ಪ್ರೇಮದ ಗಾಳೀ
        ನನ್ನ ಜೀವನವರಳಿ ।೨।

ಗಂ: ಹುಣ್ಣಿಮೆ ಚಂದಿರ ತಾಣದಲೂ ಹುಟ್ಟುವುದೇತಕೆ ಆ ಕಡಲು 
        ಗೊತ್ತೇ ಗುಣಶೀಲೇ ನೀ ಕೇಳೆಲೆ ಬಾಲೆ 
ಹೆ:   ಉದೆಯಿಸಲು ಬಾನ ಸೂರ್ಯಮದನ ತಾವರೆ ವದನ ।೨।
       ಅರಳುವುದು ಏತಕೆ ಹೇಳುವಿರಾ ಕಾರಣ 
       ತುಂಬಿತು ಮನವ ತಂದಿತು ಸುಖವ
        ಪ್ರೇಮದ ಗಾಳೀ
        ನನ್ನ ಜೀವನವರಳಿ ।೨।

ಗಂ: ಎಲ್ಲೋ ಹುಟ್ಟಿದ ನದಿ ತಾನು ಹರಿವುದು ಕೂಡಲು ಜಲಧಿಯನು ।೨।
       ಮೊರೆಯುವ ಧನಿ ಕೇಳು ನೀ ಕಾರಣ ಹೇಳು 
ಹೆ:   ಹೂವರಳಿ ದುಂಬಿ ಹಾಡಿಬಂದು ಮಧುವಲಿ ನಿಂದು 
       ಭ್ರಮಿಸುವುದು ಏತಕೆ ಅದೆ ನನ್ನ ಉತ್ತರ 

ಗಂ: ಪ್ರೇಮದ ಸನ್ನಿದಿ ಗೈತಂದ ಮನಗಳು ಬೆರೆಯುವ ಆನಂದ 
       ಇದುವೆ ಜೀವನದಾ ಶಾಂತಿಯ ನಾದ 
ಹೆ:   ಜಗವೆಲ್ಲಾ ಪ್ರೇಮ ಗೀತ ಅಮೃತಧಾರಾ 
        ಅದೆ ಬಾಳ ಚಂದಿರ 
ಜೊ: ಆನಂದ ಮಂದಿರ 
        ಕುಣಿಸುತ ತನುವ ತಣಿಸುತ ಮನವ 
        ಪ್ರೇಮದ ಗಾಳೀ
        ಬಂತು ಜೀವನವರಳಿ
        ಒ ಒ ಓ ಜೀವನವರಳಿ 

Song: Thumbitu Manava Thanditu Sukhava
Movie: Mahishaasura Mardhini

Tuesday, September 27, 2016

ಬರಸಿಡಿಲು ಬಡಿದಂತೆ

ಚಿತ್ರ: ಬಬ್ರುವಾಹನ
ರಚನೆ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕ: ಡಾ. ರಾಜಕುಮಾರ್ 

ಬರಸಿಡಿಲು ಬಡಿದಂತೆ 
ಕಡುನುಡಿಗಳಿಂದೆನ್ನ ಒಡಲ ಬಿರಿದನು 
ಅಯ್ಯೋ ತಡೆಯದಾದೆ, ಅಮ್ಮಾ
ಪರಮ ಪಾವನೆ ನೀನು 
ಪಾಪಾತ್ಮಳೆಂತೆನಗೆ ಜನ್ಮವಿತ್ತೆಯಂತೆ

ಚಿತ್ರಾಂಗದ: ಕುಮಾರಾ

ಅಮ್ಮಾ, ಜಾರತನದಲಿ ನೀ  ಜನ್ಮವಿತ್ತೆಯಂತೆ

ಚಿತ್ರಾಂಗದಹರಿ ಹರೀ

ಅದಕೇಳಿ ಕ್ರೋಧಾಗ್ನಿ ಇಂದೆನ್ನ
ಅಂಗಾಂಗ ಉರಿದೆದ್ದುರೋಷಣದಿಂ ಶಪಥಗೈದೆ, ಶಪಥಗೈದೇ 
ನುಡಿದಂತೆ ನೆಡೆದು ಪಾರ್ಥನ ಗರ್ವವಂ ತೊಡೆದು 
ಸತ್ಯವೇನೆಂಬುದನು ತೊರೆದಿರೇನು 
ಬೆಚ್ಚೆದೆ ಎನ್ನೆದೆಯ ಕಿಚ್ಚನು ತೋರಿ 
ರೊಚ್ಚಿನಿಂದವನ ಕೊಚ್ಚದೆ ಬಿಡೆನಮ್ಮಾ 
ಸಚ್ಚರಿತೆ ನಿನ್ನ ಶೀಲವೇ ಹೆಚ್ಚೆಂದು ಮೆಚ್ಚಿ 
ಜಗವೆಲ್ಲ ಕೊಂಡಾಡುವುದು ಸತ್ಯಾ ಸತ್ಯಾ ಸತ್ಯಾ 

Song: Barasidilu Badidanthe
Movie: Babruvahana 

ನಾನೊಬ್ಬ ಕಳ್ಳನು

ಚಿತ್ರ: ನಾನೊಬ್ಬ ಕಳ್ಳ 
ರಚನೆ: ಚಿ. ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯಕ: ಡಾ. ರಾಜಕುಮಾರ್ 

ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು 
ಬಲು ಮೋಸಗಾರನು ಸೇರಿಯೇನು ।೨।
ನಾ ಖನ್ನ ಹಾಕಿ ನುಗ್ಗೋದೆ ಬಾಕಿ 
ದೋಚೋದೆ ದೋಚಿ ಬಾಚೋದು ಬಾಚಿ 
ನಾ ಸೂರೆ ಮಾಡುವೆ ನಿನಗೇನು 

ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು 
ಬಲು ಮೋಸಗಾರನು ಸೇರಿಯೇನು ।೨।

ಚೆಲುವೆಯನು ನೋಡಿದೆನು, ಸನಿಹದಲಿ ಸೇರಿದೆನು 
ಕಣ್ಣಿನಲೆ ಅಂದವನು, ಬಿಡಿಸದಯೇ ದೋಚಿದೆನು 
ಅಪಹರಿಸಿ ಹೃದಯವನು, ಹೇಳದೆ ಕೇಳದೆ ಹೋದವನು ।೨।
ರುಚಿಯಾದ ಹಣ್ಣನು, ಸೊಗಸಾದ ಹೆಣ್ಣನು 
ಬೇಡೆಂದು ಹೋಗವನು ನಾನೇನು ।೨।
ಎದೆಯಲ್ಲು ನಿನ್ನ ಎದುರಲ್ಲು ನೀನು ।೨।
ಇದಕ್ಕಿಂತ ಸೌಭಯ ಬೇಕೇನು 

ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು 
ಬಲು ಮೋಸಗಾರನು ಸೇರಿಯೇನು ।೨।

ಮನಸಿಗೆ ನಾ ಖನ್ನವನು ಹಾಕಿದೆನು ನುಗ್ಗಿದೆನು 
ಒಲವನ್ನು ಕದ್ದವನು ಬಳಿಯಲ್ಲೇ ಕಾದಿಹೆನು 
ಕೈ ಹಿಡಿದು ಬರಸೆಳೆದು ದಂಡನೆ ಕೊಡದಿರೆ ನಾ ಬಿಡೆನು ।೨।
ಯಾರೇನೆ ಅನ್ನಲಿ ಊರಾಚೆ ತಳ್ಳಲಿ
ನಾ ಕದ್ದ ಹೃದಯ ಕೊಡಲಾರೆ 
ನಾ ಗೆದ್ದ ಹುಡುಗಿಯ ಬಿಡಲಾರೆ 
ನಿನ್ನಿಂದ ತಾನೆ ಕಳ್ಳನಾದೆ
ನಿನ್ನಂದ ತಾನೆ ನಾ ಕದ್ದು ಹೋದೆ
ನೀ ತಾನೇ ನನಗೆ ಗುರುವಾದೆ

ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು 
ಬಲು ಮೋಸಗಾರನು ಸೇರಿಯೇನು ।೨।

Song: Naanobba Kallanu
Movie: Naanobba Kalla

ನಲಿಯುತಾ ಹೃದಯ ಹಾಡನು ಹಾಡಿದೆ

ಚಿತ್ರ: ಹೃದಯ ಹಾಡಿತು
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್

।। ನಲಿಯುತಾ ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ ।।೨।।

ಬಾಳಲ್ಲಿ ಬೆಳಕಿಂದು ಮೂಡಿದೆ
ಬೆಳಕಲ್ಲಿ ಹೊಸ ಬಾಳ ಕಂಡಿದೆ
ಹೊಸ ಬಾಳು ಹೊಸ ಆಸೆ ತಂದಿದೆ
ಹೊಸ ಆಸೆ ಜೊತೆಯೊಂದ ಬೇಡಿದೆ
।। ಬರಡಾದ ಲತೆಯೀಗ ಹಸಿರಾಗಿದೆ
ಹೊಸ ಜೀವ ಬಂದೀಗ ಕುಣಿದಾಡಿದೆ ।।೨।।
ಬೆಳಗಿನಾ ರವಿಯು ಮೂಡಿದ ಬಾನಲಿ
ಬೆಳಕಿನಾ ತೆನೆಯ ಹಾಸಿದ ಬಾಳಲಿ

ಆ ಚಂದ್ರ ಮೇಲಿಂದ ಬಂದನೊ 
ತಂಪಾದ ಬೆಳಕನ್ನು ತಂದನೊ 
ಅನುರಾಗದಾನಂದ ತುಂಬುತ 
ಜೊತೆಯಾಗೆ ಧರೆಯಲ್ಲೆ ನಿಂತನೊ 
।। ಕಣ್ಣೋಟ ಬೆರೆತಾಗ ಆನಂದವೊ 
ತುಟಿಯಲ್ಲೆ ನಗೆಯಾಯಿತು ಮಾತೆಲ್ಲವೊ ।।೨।।

।। ನಲಿಯುತಾ ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ ।।೨।।

Song: Naliyuta Hrudaya Haadanu Haadide
Movie: Hrudaya Haadithu 

Monday, September 26, 2016

ಬದುಕೆ ಹಸಿರು ಪ್ರೀತೀ ಬೆರೆತಾಗ

ಚಿತ್ರ: ನಂಜುಂಡಿ ಕಲ್ಯಾಣ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಬದುಕೆ ಹಸಿರು ಪ್ರೀತೀ ಬೆರೆತಾಗ ।೨।
ಬದುಕೆ ಕೇಸರಂತೆ ದ್ವೇಷ ಇರುವಾಗ 
ಬದುಕೆ ಹಸಿರು ಪ್ರೀತೀ ಬೆರೆತಾಗ 
ವಿಷದ ಮುಳ್ಳಂತೆ ಸೇಡು ಸಿಡಿದಾಗ  
ಬದುಕೆ ಹಸಿರು ಪ್ರೀತೀ ಬೆರೆತಾಗ 

ಗೃಹಿಣಿ ಲಕ್ಷ್ಮಿಯು ಮನೆಗೆ ಮಂದಿರ 
ಶಾಂತಿಯೆ ಆ ಮನೆಗೆ ಹುಣ್ಣಿಮೆ ಚಂದಿರ 
ಇನಿಯನ ಅರಿವುದೆ ಸಾತಿಯಾ ಧರ್ಮ 
ಹೃದಯ ಗೆಲುವುದು ಸುಖದ ಮರ್ಮ 
ಸ್ನೇಹದಿ ಕಲೆತು ಬೆರೆತಾಗ, ಜೊತೆಯಲಿ ಸೇರಿ ನೆಡೆದಾಗ 

ಬದುಕೆ ಹಸಿರು ಪ್ರೀತೀ ಬೆರೆತಾಗ ।೨।

ಸತಿಪತಿ ಸಂಸಾರದ ಕಣ್ಣುಗಳಂತೆ 
ಬದುಕಿನ ಬಂಡಿಗೆ ಗಾಲಿಗಳಂತೆ 
ಪ್ರೇಮದ ಮಾತುಗಳೇ ಕೆನೆಹಾಲಂತೆ 
ನಗುವೆ ಮಲ್ಲಿಗೆಯ ಹೂವುಗಳಂತೆ 
ತಿಂಗಳು ಬೆಳಕು ದಿನವೆಲ್ಲಾ, ಈ ನಿಜವನ್ನು ಅರಿತಾಗ 

ಬದುಕೆ ಹಸಿರು ಪ್ರೀತೀ ಬೆರೆತಾಗ ।೨।
ಬದುಕೆ ಕೇಸರಂತೆ ದ್ವೇಷ ಇರುವಾಗ 
ಬದುಕೆ ಹಸಿರು ಪ್ರೀತೀ ಬೆರೆತಾಗ 
ವಿಷದ ಮುಳ್ಳಂತೆ ಸೇಡು ಸಿಡಿದಾಗ  
ಬದುಕೆ ಹಸಿರು ಪ್ರೀತೀ ಬೆರೆತಾಗ ।೨।

Song: Baduke Hasiru Preeti Beretaaga
Movie: Nanjundi Kalyana

ಓ ಗುಲಾಬಿಯೇ

ಚಿತ್ರ: ಓಂ
ರಚನೆ/ಸಂಗೀತ: ಹಂಸಲೇಖ
ಗಾಯಕ: ಡಾ. ರಾಜಕುಮಾರ್

ಓ ಗುಲಾಬಿಯೇ ಓ ಹೊ ಗುಲಾಬಿಯೇ
ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ 
ಮುಳ್ಳಿನಿಂದ ಬಾಳಂದ ಕೆಡಿಸೋದು ನ್ಯಾಯವೇ 
ಓ ಗುಲಾಬಿಯೇ ಓ ಹೊ ಗುಲಾಬಿಯೇ

ದ್ವೇಷವಾ ಸಾಧಿಸೆ ಪ್ರೇಮದ ಅಸ್ತ್ರವೇ 
ಸೇಡಿನ ಹಾಡಿಗೆ ಹಾಡಿನ ಹಾಡಿಗೆ 
ವಿನಯದ ತಾಳವೇ ಭಾವಕೆ ವಿಷದ ಲೇಪವೇ 
ಹೆಣ್ಣು ಒಂದು ಮಾಯೆಯ ರೂಪ ಎಂಬಾ  ಮಾತಿದೆ 
ಹೆಣ್ಣು ಕ್ಷಮಿಸೋ ಭೂಮಿಯ ರೂಪ ಎಂದು ಹೇಳಿದೆ 
ಯಾವುದು ಯಾವುದು ನಿನಗೆ ಹೋಲುವುದಾವುದು ।೨।

ಓ ಗುಲಾಬಿಯೇ ಓ ಹೊ ಗುಲಾಬಿಯೇ
ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ 
ಮುಳ್ಳಿನಿಂದ ಬಾಳಂದ ಕೆಡಿಸೋದು ನ್ಯಾಯವೇ 
ಓ ಗುಲಾಬಿಯೇ ಓ ಹೊ ಗುಲಾಬಿಯೇ

ಮನ್ನಿಸೂ ಮನ್ನಿಸು ಎಲ್ಲವಾ ಮನ್ನಿಸು 
ನೋಂದಿರೊ ಮನಸಿಗೆ ಬೆಂದಿರೊ ಕನಸಿಗೆ 
ಮಮತೆಯ ತಿಮಿಕಿಸು ನಿನ್ನಯ ಪ್ರೀತಿಯ ಒಪ್ಪಿಸು 
ಒಂದು ಬಾರಿ ಪ್ರೀತಿಸಿ ಒಲ್ಲೆ ಎಂದು ಹೇಳುವೆ 
ಪ್ರೀತಿ ಮರೆತು ಹೋಗಲು ಹೆಣ್ಣೇ ನೀನು ಸೋಲುವೆ 
ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ ।೨।

ಓ ಗುಲಾಬಿಯೇ ಓ ಹೊ ಗುಲಾಬಿಯೇ
ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ 
ಮುಳ್ಳಿನಿಂದ ಬಾಳಂದ ಕೆಡಿಸೋದು ನ್ಯಾಯವೇ 
ಓ ಗುಲಾಬಿಯೇ ಓ ಹೊ ಗುಲಾಬಿಯೇ

Song: O Gulabiye
Movie: OM

ಹೇ ದಿನಕರ ಶುಭಕರ

ಚಿತ್ರ: ಓಂ
ರಚನೆ/ಸಂಗೀತ: ಹಂಸಲೇಖ
ಗಾಯಕ: ಡಾ. ರಾಜಕುಮಾರ್

ಓಂ ಭ್ರಹ್ಮಾನಂದ ಓಂಕಾರ, ಆತ್ಮಾನಂದ ಸಾಕಾರ 
ಓಂ ವೇದಾಂತರ್ಯ ಝೇಂಕಾರ, ಅಧ್ಯಾತ್ಮಾಭಿ ಮಧುಸಾರ 

ಹೇ ದಿನಕರ ಶುಭಕರ ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ ಅಹಂ ಅಹಂ  
ಮಾನಸ ಮಂದಿರ ತುಂಬು ಓಂಕಾರ ನಾದ ಓಂ 

ಓಂ ಭ್ರಹ್ಮಾನಂದ ಓಂಕಾರ, ಆತ್ಮಾನಂದ ಸಾಕಾರ 
ಓಂ ವೇದಾಂತರ್ಯ ಝೇಂಕಾರ, ಅಧ್ಯಾತ್ಮಾಭಿ ಮಧುಸಾರ 

ನಗುವ ಮನಸೆ ಸಾಕು ನಮಗೆ ಹಗಲುಗನಸೆ ಬೇಡ
ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ
ತಂದೆ ತಾಯೆ ದೈವ ಗುರುವೆ ನಮ್ಮ ಜೀವ 
ಎಂಬ ದಿವ್ಯಮಂತ್ರ ನಮ್ಮ ಹೃದಯ ತುಂಬಿಸು 

ಹೇ ದಿನಕರ ಶುಭಕರ ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ

ಸತ್ಯ ಹೇಳೋ ಕನ್ನಡಿಯಂತೆ ಅಂತರಂಗ ಮಾಡು 
ಧಯೇ ತೋರೋ ಧರಣೀಯಂತ ಮನೋಧರ್ಮ ನೀಡು 
ನೊಂದ ಎಲ್ಲ ಜೀವ ನನ್ನದೆಂಬ ಭಾವ
ಬಾಳಿನಲ್ಲಿ ತುಂಬೊ ನಿತ್ಯ ವಿನಯ ಕರುಣಿಸೋ


ಹೇ ದಿನಕರ ಶುಭಕರ ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ ಅಹಂ ಅಹಂ  

ಮಾನಸ ಮಂದಿರ ತುಂಬು ಓಂಕಾರ ನಾದ ಓಂ 

ಓಂ ಭ್ರಹ್ಮಾನಂದ ಓಂಕಾರ, ಆತ್ಮಾನಂದ ಸಾಕಾರ 
ಓಂ ವೇದಾಂತರ್ಯ ಝೇಂಕಾರ, ಅಧ್ಯಾತ್ಮಾಭಿ ಮಧುಸಾರ 

Song: Hey Dinakara Shubhakara
Movie: OM

Sunday, September 25, 2016

ಆಸೆಯು ಕೈಗೂಡಿತು

ಚಿತ್ರ: ನಾನೊಬ್ಬ ಕಳ್ಳ 
ರಚನೆ: ಚಿ. ಉದಯಶಂಕರ್ 
ಸಂಗೀತ:ರಾಜನ್-ನಾಗೇಂದ್ರ 
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ 

ಹೆ:   ಆಸೆಯು ಕೈಗೂಡಿತು ಆಸರೆ ದೊರೆತಾಯಿತು 
       ಚಿಂತೆ ದೂರವಾಯಿತು ಮನಸು ಹಗುರವಾಯಿತು 
       ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ।೨।
       ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನಿನ್ನ  
       ಆಸೆಯು ಕೈಗೂಡಿತು ಆಸರೆ ದೊರೆತಾಯಿತು

ಗಂ: ಕಂದಾ ಎಂದು ಅತ್ತಾಗ ಯಾರು ಕಾಣದಾದಾಗ 
       ಸಂತೈಸಲೆಂದು ಓಡೋಡಿ ಬರುವ ತಾಯಂತೆ ನೀನು ಬಂದೆ 
       ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ 
       ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ 
       ತೇಲಾಡುವಾಸೆ ತಂದೆ 

ಗಂ: ಆಸೆಯು ಕೈಗೂಡಿತು
ಹೆ:   ಆಸರೆ ದೊರೆತಾಯಿತು 
ಗಂ: ಚಿಂತೆ ದೂರವಾಯಿತು
ಜೊ:  ಮನಸು ಹಗುರವಾಯಿತು

ಹೆ:   ನೀನೇ ನನ್ನ ಸಂತೋಷ, ನೀನೇ ನನ್ನ ಸೌಭಾಗ್ಯ 
        ನಿನ್ನಿಂದ ನಾನು ನಿನಗಾಗಿ ನಾನು ನಿನ್ನಲ್ಲೆ ಸೇರಿಹೋದೆ 
ಗಂ:  ಬಾಳೋ ಆಸೆ ನೀ ತಂದೆ ನನ್ನಾ ಸೇರಿ ಒಂದಾದೆ 
        ಸುಳಿಯಲ್ಲಿ ನಾನು ಹೋರಾಡುವಾಗ ಜೊತೆಯಾಗಿ ನೀನು ಬಂದೆ 
         ಇನ್ನೇನು ಕಾಣೆ ಮುಂದೆ 

ಹೆ:   ಆಸೆಯು ಕೈಗೂಡಿತು ಆಸರೆ ದೊರೆತಾಯಿತು 
       ಚಿಂತೆ ದೂರವಾಯಿತು ಮನಸು ಹಗುರವಾಯಿತು 
ಗಂ:  ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ।೨।
       ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನಿನ್ನ
       ಆಸೆಯು ಕೈಗೂಡಿತು 
ಹೆ:   ಆಸರೆ ದೊರೆತಾಯಿತು
ಗಂ: ಚಿಂತೆ ದೂರವಾಯಿತು
ಹೆ:   ಮನಸು ಹಗುರವಾಯಿತು
ಜೊ:  ಮನಸು ಹಗುರವಾಯಿತು ।೩।

Song: Aaseyu Kaigoodithu
Movie: Nanobba Kalla

ನೀ ಬಂದು ನಿಂತಾಗ

ಚಿತ್ರ: ಕಸ್ತೂರಿ ನಿವಾಸ
ರಚನೆ: ಆರ್. ಏನ್. ಜಯಗೋಪಾಲ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಪಿ. ಬಿ. ಶ್ರೀನಿವಾಸ್, ಎಸ್.ಜಾನಕಿ  

ಗಂ:  ।। ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ
         ನಕ್ಕು ನೀ ಸೆಳೆದಾಗ ಸೋತೇ ನಾನಾಗ  ।।೨।।

ಹೆ:    ವಾಸಂತಿ ನಲಿದಾಗ ।೨।
         ಹಸಿರುಟ್ಟು ನಗುವಾಗ 
         ವನದೇವಿ ಅಡಿ ಮೇಲೆ ಅಡಿ ಇಟ್ಟು ಬರುವಾಗ 
         ಮುಗಿಲೊಂದು ಕರೆದಾಗ, ನವಿಲೊಂದು ಬೆರೆದಾಗ 
         ಒಡಲಲ್ಲಿ ಹೊಸದೊಂದು ನವಜೀವ ಬಂದಾಗ 
         ಕೈ ಕೈ ಸೋತಾಗ ಮನವೆರೆಡು ಬೆರೆತಾಗ 
         ನುಡಿದಂತ ಹೊಸ ರಾಗ ಅದುವೇ ಅನುರಾಗ
         ಬಾರಾ.. 

         ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ
         ನಕ್ಕು ನೀ ಸೆಳೆದಾಗ ಸೋತೇ ನಾನಾಗ

ಗಂ:  ಜೇನಂತ ಮಾತಲ್ಲಿ ।೨।
         ಕುಡಿಗಣ್ಣ ಸಂಚಲ್ಲಿ 
         ನಗುವೆಂಬ ಹೂಚೆಲ್ಲಿ ನಿಂತೆ ನೀ ಮನದಲ್ಲಿ 
         ಎದುರಾದೆ ಹಗಲಲ್ಲಿ ಮರೆಯಾದೆ ಇರುಳಲ್ಲಿ 
         ನೀ ತಂದ ನೋವಿಗೆ ಕೊನೆಯಲ್ಲಿ ಮೊದಲೆಲ್ಲಿ 
         ಬಲು ದೂರ ನೀ ಹೋಗೆ ನಾ ತಾಳೆ ಈ ಬೇಗೆ 
         ಬಾ ಬಾರೆ ಚೆಲುವೆ ಬಾರೆ ಒಲವೆ
         ಬಾರಾ... 

ಹೆ:     ಬಾಳೆಂಬ ಪಥದಲ್ಲಿ ।೨।
ಗಂ:   ಒಲವೆಂಬ ರಥದಲ್ಲಿ 
ಹೆ:     ಕನಸೆಲ್ಲ ನನಸಾಗಿ 
ಗಂ:   ನನಸೆಲ್ಲ ಸೊಗಸಾಗಿ 
ಹೆ:     ಯುಗ ಒಂದು ದಿನವಾಗಿ 
ಗಂ:   ದಿನವೊಂದು ಕ್ಷಣವಾಗಿ 
ಹೆ:     ನಮ್ಮಾಸೆ ಹೂವಾಗಿ 
ಗಂ:   ಇಂಪಾದ ಹಾಡಾಗಿ 
ಜೊ:  ಕಹಿಯಲ್ಲಿ ಸಿಹಿಯಲ್ಲಿ ಮಳೆಯಲ್ಲಿ ಬಿಸಿಲಲ್ಲಿ 
          ಎಂದೆಂದು ಜೊತೆಯಾಗಿ ನೆಡೆವ ಒಂದಾಗಿ 
          ಬಾರಾ.... 

        ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ
        ನಕ್ಕು ನೀ ಸೆಳೆದಾಗ ಸೋತೇ ನಾನಾಗ

Song: Nee Bandu Nintaaga
Movie: Kasturi Nivasa