Saturday, September 17, 2016

ತಿಳಿಯದೇ ನನಗೆ ತಿಳಿಯದೇ

ಚಿತ್ರ: ಕೆರಳಿದ ಸಿಂಹ 
ರಚನೆ: ಚಿ. ಉದಯಶಂಕರ್ 
ಸಂಗೀತ: ಚೆಲ್ಲಾಪಿಲ್ಲ ಸತ್ಯಂ 
ಗಾಯಕ/ನಟ: ಡಾ. ರಾಜಕುಮಾರ್ 

ತಿಳಿಯದೇ ನನಗೆ ತಿಳಿಯದೇ, ಬದುಕುವಾ ದಾರಿ ತಿಳಿಯದೇ।೨।
ವಿಷಯವೇನೆಂದು ಅರಿಯದೆ ಇಂಥ ಮಾತನ್ನು ನುಡಿವುದೆ 
ಕಾಲ ಸುಮ್ಮನೆ ಬಿಡುವುದೆ, ಬಡಿದು ಬುದ್ಧಿ ಕಲಿಸದೇ 

ತಿಳಿಯದೇ ನನಗೆ ತಿಳಿಯದೇ, ಬದುಕುವಾ ದಾರಿ ತಿಳಿಯದೇ

।। ಕತ್ತಿಯ ಮೇಲೆ ಹೆಜ್ಜೆಯ ಹಿಡಲು ಕಾಲಲೀ ರಕ್ತ ಸುರಿಯದೆ 
     ಸತ್ಯದ ಹಾದಿ ಕಷ್ಟದ ಹಾದಿ ನೋವನು ಕೊಡದೆ ಬಿಡುವುದೆ ।।೨।।
ಆ ವೇದನೆ ಕೊನೆಯಾಗದೆ ಎಂದೆಂದಿಗೂ ಹೀಗಿರುವುದೆ 
ಎದೆಗುಂದದೆ ಮುಂದಕೆ ಹೋದರೆ ಜಯವೂ ದೊರಕದೆ 
ತಿಳಿಯದೇ ನನಗೆ ತಿಳಿಯದೇ, ಬದುಕುವಾ ದಾರಿ ತಿಳಿಯದೇ

।। ನಿನ್ನನೂ ನೋಡಿ ಬದುಕುವಾ ರೀತಿ ಕಲಿಯುವ ಮೂರ್ಖ ನಾನಲ್ಲ 
     ನಂಬಿದಾ ನನ್ನ ಕೊರಳನೂ ಕೊಯ್ದ ನಾರಿಯೇ ನೀನು ಹೆಣ್ಣಲ್ಲ ।।೨।।
ಹಣದಾಸೆಗೆ ಮನಸಾಕ್ಷಿಯ ದಯೆಯಿಲ್ಲದೆ ನೀ ಕೊಂದೆಯ 
ನೀ ನಾಚಿಕೆ ಇಲ್ಲದೆ ಬುದ್ದಿಯ ಹೇಳಲು ಇಲ್ಲೀ ಬಂದೆಯಾ 

ತಿಳಿಯದೇ ನನಗೆ ತಿಳಿಯದೇ, ಬದುಕುವಾ ದಾರಿ ತಿಳಿಯದೇ
ದಾರಿ ತಿಳಿಯದೇ ನನಗೆ ತಿಳಿಯದೇ

Song: Tiliyade Nanage Tiliyade
Movie: Keralida Simha

ಹೂವಿಂದ ಬರೆದ ಕಥೆಯ

ಚಿತ್ರ: ಹಾವಿನ ಹೆಡೆ 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್  
ಗಾಯಕ/ನಟ: ಡಾ. ರಾಜಕುಮಾರ್ 

ಹೂವಿಂದ ಬರೆದ ಕಥೆಯ, ಮುಳ್ಳಿನಿಂದ ಬರೆದೆ ನಾನು ।೨।
ಆನಂದ ತರುವ ಮನಕೇ, ನೋವನ್ನು ತಂದೆ ನಾನು 
ಸಾರಿ, ಐ ಆಮ್ ವೆರಿ ಸಾರಿ 

ಹೂವಿಂದ ಬರೆದ ಕಥೆಯ, ಮುಳ್ಳಿನಿಂದ ಬರೆದೆ ನಾನು

ತಿಳಿಯಾದ ನೀರಿನಲ್ಲಿ ಕಲ್ಲೊಂದು ಜಾರಿದಂತೆ
ಹಿಂಪಾಗಿ ಹಾಡುವಾಗ ಅಪಸ್ವರವು ಮೂಡಿದಂತೆ
ನಾನಾದಿನ  ಆಡಿದಾ ನುಡಿ ಮರೆತಾಯಿದು, ಕಹಿಯಾಯಿತು 
ಇನ್ನೆಂದು ಹೀಗೆ ನಾ ಮಾಡೆನು, ನನ್ನಾಣೆ ನಂಬು ನೀನನ್ನನು 

ಹೂವಿಂದ ಬರೆದ ಕಥೆಯ, ಮುಳ್ಳಿನಿಂದ ಬರೆದೆ ನಾನು

ನಿನ್ನಂತೆ ನೊಂದೆ ನಾನು ಸುಳ್ಳೆಂದು ಹೇಳೇನು 
ನಮ್ಮೊಳವು ಬಾಡಿತೆಂದು ಮಿಡಿದೆ ಕಣ್ಣೀರೇನು 
ಆ ವೇದನೆ ತಾಳದೆ ದಿನಾ ಅಲೆದಾಡಿದೆ ಹುಡುಕಾಡಿದೆ 
ವಿಷಾದವನ್ನು ಬಿಡು ಬಿಡು, ಸಂತೋಷವನ್ನು  ಕೊಡು ಕೊಡು 

ಹೂವಿಂದ ಬರೆದ ಕಥೆಯ, ಮುಳ್ಳಿನಿಂದ ಬರೆದೆ ನಾನು
ಆನಂದ ತರುವ ಮನಕೇ, ನೋವನ್ನು ತಂದೆ ನಾನು 
ಹೂವಿಂದ ಬರೆದ ಕಥೆಯ, ಮುಳ್ಳಿನಿಂದ ಬರೆದೆ ನಾನು

Song: Hoovinda Bareda Katheya
Movie: Haavina Hede

ಸತ್ಯಭಾಮೆ ಸತ್ಯಭಾಮೆ

ಚಿತ್ರ: ರವಿಚಂದ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ/ನಟ: ಡಾ. ರಾಜಕುಮಾರ್ 

ಕಂಡೊಡನೆ ಕರೆಪಿಡಿದು, ಕಲ್ಪಿಸದಾ ಸುಖ ಕೊಡುವ ಭಾಮೆಯಲೀ 
ಇಂದೇನು ಕೋಪವೊ ಕಾಣೆ 
ಭಾಮಾಮಣಿ ಚಿಂತಾಮಣಿ ಕಾಮನರಗಿಣಿ ಮುತ್ತಿನ ಮಣಿ 
ಕರಿಮಣಿ ರಮಣಿ ಮಣಿ ಣೀ ರಾಣೀ ರಾಣೀ 

ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ ।೨।
ಸರಸಕೆ ಕರೆದರೆ ವಿರಸವ ತೋರುವೆ, ಏಕೆ ನನ್ನಲಿ
ಸರಸಕೆ ಕರೆದರೆ ವಿರಸವ ತೋರುವೆ
ಏಕೆ ನನ್ನಲಿ ।೩।

ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ
ನನ್ನಲಿ ಕೋಪವೆ ಕೋಪವೆ ನನ್ನಲಿ ಏಕೆ ನನ್ನಲಿ
ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ

ದುರುದುರು ನೋಡದೆ ಕಿಡಿಗಳ ಕಾರದೆ, ಕೆಣಕದೆ ಕಾಡದೆ ದೂರಕೆ ಓಡದೆ ।೨।
ತನುವಿನ ತಾಪವ ಕಳೆಯಲು ಸನಿಹಕೆ ।೨।
ಬಾರೆ ಮೋಹಿನಿ ।೨।
ಮೋಹಿನೀ, ಕಾಮಿನೀ, ಭಾಮಿನೀ, ಬಾರೆ ಮೋಹಿನಿ

ಸತ್ಯಭಾಮೆ ಸತ್ಯಭಾಮೆ ।೨।
ಕೋಪವೇನೆ ನನ್ನಲಿ

ಗಲ್ಲವ ಹಿಡಿಯಲೆ ಕೆನ್ನೆಯ ಸವರಲು, ತೊಳಲಿ ಭಾಮೆಯ ನಡುವನೆ ಬಳಸಲೆ ।೨।
ಕೊಳಲಲಿ ಮೋಹನ ರಾಗವ ನುಡಿಸಲೆ ।೨।
ಹೇಳೇ ಕೋಮಲೆ ।೨।
ಕೋಮಲೇ, ಚಾಮಲೇ, ಚಂಚಲೇ, ಹೇಳೇ ಕೋಮಲೆ 

ಸತ್ಯಭಾಮೆ ಸತ್ಯಭಾಮೆ ।೨।
ಕೋಪವೇನೆ ನನ್ನಲಿ

ರಾಧೆಯ ಬಲ್ಲೆನು, ರುಕ್ಮಿಣಿ ಬಲ್ಲೆನು, ಭಾಮೆಯನಲ್ಲದೆ ಯಾರನು ನೋಡೇನು ।೨।
ಕೈಗಳ ಮುಗಿದರೆ ಯಾರೂ ನೋಡರು ।೨।
ಸೋತೆ ಪ್ರೇಯಸಿ ।೨।
ಪ್ರೇಯಸೀ, ರೂಪಸೀ, ಊರ್ವಶೀ, ಸೋತೆ ಪ್ರೇಯಸೀ

ಸತ್ಯಭಾಮೆ ಸತ್ಯಭಾಮೆ ।೨।
ಕೋಪವೇನೆ ನನ್ನಲಿ
ಸರಸಕೆ ಕರೆದರೆ ವಿರಸವ ತೋರುವೆ।೨।
ಏಕೆ ನನ್ನಲಿ 

Song: Satyabhaame Satyabhaame 
Movie: Ravichandra

ಕೋಪವೇತಕೆ ನನ್ನಲೀ

ಚಿತ್ರ: ನಾನೊಬ್ಬ ಕಳ್ಳ 
ರಚನೆ: ಚಿ. ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯಕ/ನಟ: ಡಾ. ರಾಜಕುಮಾರ್ 

।। ಕೋಪವೇತಕೆ ನನ್ನಲೀ ಹೇಳುಬಾ ಪ್ರೇಯಸೀ 
    ಹೇ ನನ್ನ ಬಂಗಾರದಾ ಜಿಂಕೆಯೆ, ಏಕೆ ಓಡಿದೆ ನನ್ನ ನೋಡದೆ 
    ಮಾತನಾಡದೆ ಪ್ರೀತಿ ತೋರದೆ ।।೨।।

ಒಲಿದರೂ ನೀನು ಮುನಿದರೂ ನೀನು ನಿನ್ನಲ್ಲೇ ಪ್ರಾಣವು 
ಸಿಡಿಲಿನಾ ಹಾಗೆ ಸಿಡಿದರೆ ನೀನು ನಿನ್ನಲ್ಲೇ ಪ್ರೇಮವು 
ಸರಸದ ವೇಳೆ ವಿರಸವು ಏಕೆ ಬಂದೆನ್ನ ಸೇರದೆ 
ಒಲವಿನ ಮಾತು ನುಡಿಯದೆ ನೀನು ಉಲ್ಲಾಸ ಮೂಡದೆ 
ಇನ್ನೂ ಕನಸಿನಲು ನಿನ್ನ ಕೆರಳಿಸೆನು ನಿನ್ನ
ನನ್ನನ್ನು ನೋಡು ನವಿಲಂತೆ ನೋಡು ಆನಂದ ನೀಡು 

ಹೇ ನನ್ನ ಬಂಗಾರದಾ ಜಿಂಕೆಯೆ, ಏಕೆ ಓಡಿದೆ ನನ್ನ ನೋಡದೆ  ಮಾತನಾಡದೆ ಪ್ರೀತಿ ತೋರದೆ

ಮುಗಿಲಿನ ಮರೆಯ ಚಂದ್ರನಾ ಹಾಗೆ ಮಂಕಾದೆ ಏತಕೆ 
ಎಲೆಗಳಾ ಮರೆಯ ಕೋಗಿಲೆ ಹಾಗೆ ಸಂಕೋಚ ಏತಕೆ 
ಬಿಸಿಲನು ಕಂಡು ಕರಗುತಾ ಹೋಗೊ ಮಂಜಂತೆ ಆದೆನು 
ತಿಳಿಯದೆ ನಾನು ದುಡುಕಿದ ರೀತಿ ತಪ್ಪೆಂದು ಬಲ್ಲೆನು 
ನೀನು ಬಳಿಯಿರಲು ಚೆನ್ನ ಬಳುಕುತಿರೆ ಚೆನ್ನ ನಗುತಿರಲು ಚೆನ್ನ 
ನೆಲದಿರಲು ಚೆನ್ನ ಬಾ ನನ್ನ ಚಿನ್ನ 

ಹೇ ನನ್ನ ಬಂಗಾರದಾ ಜಿಂಕೆಯೆ, ಏಕೆ ಓಡಿದೆ ನನ್ನ ನೋಡದೆ ಮಾತನಾಡದೆ ಪ್ರೀತಿ ತೋರದೆ
ಕೋಪವೇತಕೆ ನನ್ನಲೀ ಹೇಳುಬಾ ಪ್ರೇಯಸೀ 
ಹೇ ನನ್ನ ಬಂಗಾರದಾ ಜಿಂಕೆಯೆ, ಏಕೆ ಓಡಿದೆ ನನ್ನ ನೋಡದೆ 

ಲಾ ಲ ಲಾ ಲ ಲ .... 

Song: Kopavethake Nannali
Movie: Nanobba Kalla 

ಇದು ಯಾರು ಬರೆದ ಕಥೆಯೊ

ಚಿತ್ರ : ಪ್ರೇಮದ ಕಾಣಿಕೆ
ರಚನೆ : ಚಿ. ಉದಯಶಂಕರ್ 
ಸಂಗೀತ : ಉಪೇಂದ್ರ ಕುಮಾರ್ 
ಗಾಯಕ/ನಟ : ಡಾ. ರಾಜಕುಮಾರ್ 

।। ಇದು ಯಾರು ಬರೆದ ಕಥೆಯೊ, ನನಗಾಗಿ ಬಂದ ವ್ಯಥೆಯೋ 
    ಕೊನೆ ಹೇಗೊ ಅರಿಯಲಾರೆ, ಮರೆಯಾಗಿ ಹೋಗಲಾರೆ ।।೨।।

ಕಾಣದಿಹ ಕೈಯ್ಯೊಂದು  ಸೂತ್ರ ಹಿಡಿಸಿದೆ ।೨।
ಆಡಿಸಿದೆ ಕಾಡಿಸಿದೆ ಅಳಿಸಿ ನಗುತಿದೆ 
ಬರಿ ಕನಸಾಯಿತು ಸುಖ ಶಾಂತಿಯೆಲ್ಲ 
ಇನ್ನು ಬದುಕೇಕೊ ಕಾಣೆನಲ್ಲ 

ಇದು ಯಾರು ಬರೆದ ಕಥೆಯೊ, ನನಗಾಗಿ ಬಂದ ವ್ಯಥೆಯೋ 
ಕೊನೆ ಹೇಗೊ ಅರಿಯಲಾರೆ, ಮರೆಯಾಗಿ ಹೋಗಲಾರೆ
ಇದು ಯಾರು ಬರೆದ ಕಥೆಯೊ

ಭಾವ ಕಂಡ ಮೂಗನಂತೆ ಕೂಗಲಾರದೆ ।೨।
ಕಾಡಿನೊಳು ಓಡುತಿಹೆ ದಾರಿ ಕಾಣದೆ 
ಜೊತೆ ಯಾರಿಲ್ಲ ನಾ ಒಂಟಿಯಾದೆ 
ನಗು ಇನ್ನೆಲ್ಲಿ ಸೋತು ಹೋದೆ 

ಇದು ಯಾರು ಬರೆದ ಕಥೆಯೊ, ನನಗಾಗಿ ಬಂದ ವ್ಯಥೆಯೋ 
ಕೊನೆ ಹೇಗೊ ಅರಿಯಲಾರೆ, ಮರೆಯಾಗಿ ಹೋಗಲಾರೆ
ಇದು ಯಾರು ಬರೆದ ಕಥೆಯೊ

Song: Idu Yaaru Bareda Katheyo
Movie: Premada Kanike

ಮೂಗನ ಕಾಡಿದರೇನು

ಚಿತ್ರ: ತ್ರಿಮೂರ್ತಿ 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ/ನಟ: ಡಾ. ರಾಜಕುಮಾರ್ 

ಮೂಗನ ಕಾಡಿದರೇನು, ಸವಿ ಮಾತನು ಆಡುವನೇನು ।೨।
ಕೋಪಿಸಲು ನಿಂಧಿಸಲು, ಮೌನವ ಮೀರುವನೇನು
ಮೂಗನ ಕಾಡಿದರೇನು, ಸವಿ ಮಾತನು ಆಡುವನೇನು

ಬೆಳಕೆಲ್ಲೋ ಕಾಣಿಸದು, ಕತ್ತಲೆಯೇ ತುಂಬಿಹುದು 
ನಿಜವೆಲ್ಲೋ ಓಡಿಹುದು, ವಂಚನೆಯೇ ಕಾಣುವುದು 
ದಾರಿಯೇ ತೋರದೆ, ಅಲೆಯುತಲಿರುವಾಗ 

ಮೂಗನ ಕಾಡಿದರೇನು, ಸವಿ ಮಾತನು ಆಡುವನೇನು
ಕೋಪಿಸಲು ನಿಂಧಿಸಲು, ಮೌನವ ಮೀರುವನೇನು
ಮೂಗನ ಕಾಡಿದರೇನು, ಸವಿ ಮಾತನು ಆಡುವನೇನು

ನಮ್ಮವರೂ ದೂರಾಗಿ, ಬಂಧುಗಳೂ ಹಗೆಯಾಗಿ 
ನೆಮ್ಮದಿಯು ಮರೆಯಾಗಿ, ಅಳುತಿರಲೂ ನೋವಾಗಿ 
ಏನನು ಹೇಳಲಿ ಕೆಣಕಲು ನನ್ನೀಗ 

ಮೂಗನ ಕಾಡಿದರೇನು, ಸವಿ ಮಾತನು ಆಡುವನೇನು
ಕೋಪಿಸಲು ನಿಂಧಿಸಲು, ಮೌನವ ಮೀರುವನೇನು
ಮೂಗನ ಕಾಡಿದರೇನು, ಸವಿ ಮಾತನು ಆಡುವನೇನು

Song: Moogana Kaadidarenu 
Movie: Trimurthy

ನನ್ನ ನೀನು ಗೆಲ್ಲಲಾರೆ

ಚಿತ್ರ: ನೀ ನನ್ನ ಗೆಲ್ಲಲಾರೆ
ರಚನೆ: ಚಿ. ಉದಯಶಂಕರ್
ಸಂಗೀತ: ಇಳಯರಾಜ
ಗಾಯಕರು: ಡಾ. ರಾಜಕುಮಾರ್, ಏಸ್ . ಜಾನಕಿ

ಹೆ:    ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ
         ಎಲ್ಲರೆದುರು ಮಾನ ಹೋಗಿ, ಕೊನೆಗೆ ಮನೆಗೆ ಹೋಗುವೆ
         ನನ್ನಂತ ಹೆಣ್ಣಿಂದ ಸೊಲೊಕ್ಕೆ ಆಸೆಯು ನಿನಗೆ
ಗಂ:  ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ
         ಎಲ್ಲರೆದುರು ಮಾನ ಹೋಗಿ, ಕೊನೆಗೆ ಮನೆಗೆ ಹೋಗುವೆ
         ನನ್ನಂತ ಗಂಡಿಂದ ಸೊಲೊಕ್ಕೆ ಆಸೆಯು ನಿನಗೆ


ಹೆ:    ಗಾನ ನಾಟ್ಯ ಎಂಬ ಕಲೆಯು ಹೆಣ್ಣಿಗಾಗೆ ಬಂದ ನಿಧಿಯು
         ಕುಣಿವಾ ಚಪಲ ನಿನಗೇತಕೆ
ಗಂ:  ಪ್ರಣಯ ನಾಟ್ಯ ಆಡಿದಂತ ನೀಲಕಂಠ ಗಂಡು ತಾನೆ 
         ಮರುಳೇ ನಿನಗೆ ಅರಿವಿಲ್ಲವೇ 
ಹೆ:    ಇನ್ನೇಕೆ ಸರಸದ ನೆಪದಲ್ಲಿ ಸಮಯವ ಕಳೆಯುವೆ ಮಂಕೇ
ಗಂ:  ವಿಷಾದ ತಪ್ಪದು ಕಲಹಕೆ ಕರೆದರೆ ಜೋಕೇ
ಹೆ:    ವಿಷಾದ ನಿನಗೆ, ವಿನೋದ ನನಗೆ
         ಇಡಿದ  ಹಠವ ಬಿಡದೆ ಕಡೆಗೆ ಗೆಲುವೇ
         ನನ್ನಂತ ಹೆಣ್ಣಿಂದ ಸೊಲೊಕ್ಕೆ ಆಸೆಯು ನಿನಗೆ

ಗಂ:  ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ

ಹೆ:    ಗಿರಿಯ ನವಿಲ ಕಂಡ ಕಾಗೆ, ತಾನು ನಾಟ್ಯವಾಡೊ ಹಾಗೆ
         ಕನಸ ಕಂಡ ಕಥೆ ಹೇಳಲೇ
ಗಂ:  ಹೆಣ್ಣು ನವಿಲು ಅಂದವಿಲ್ಲ, ಗರಿಯ ಸೊಬಗು ಹೊಂದಲಿಲ್ಲ
         ಕುಣಿವ ನವಿಲು ಗಂಡು ಕೇಳೆಲೆ
ಹೆ:    ಸಂಗೀತ ಕಲಿಯಲು ಕರುಣಿಸಿ ಅರಸುವ ಸರಸ್ವತಿ ಹೆಣ್ಣೂ
ಗಂ:  ಅಮ್ಮಯ್ಯ ಬಲ್ಲೆಯ ಆಕೆಯ ಒಡೆಯನು ಬ್ರಹ್ಮನು ಗಂಡು
         ಇದೇಕೆ ಮೌನ ಎಲ್ಲೀ ಧ್ಯಾನ
         ಚೆಲುವೆ ಒಲವೇ ಹೇಳೂ ನಿನಗೂ ಭಯವೇ
         ನನ್ನಂತ ಗಂಡಿಂದ ಸೊಲೊಕ್ಕೆ ಆಸೆಯು ನಿನಗೆ

ಹೆ:    ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ
ಗಂ:  ಎಲ್ಲರೆದುರು ಮಾನ ಹೋಗಿ, ಕೊನೆಗೆ ಮನೆಗೆ ಹೋಗುವೆ
ಹೆ:    ನನ್ನಂತ ಹೆಣ್ಣಿಂದ ಸೊಲೊಕ್ಕೆ ಆಸೆಯು ನಿನಗೆ

Song: Nanna Neenu Gellalaare
Movie: Nee Nanna Gellalaare

ಜೀವ ಹೂವಾಗಿದೆ

ಚಿತ್ರ: ನೀ ನನ್ನ ಗೆಲ್ಲಲಾರೆ
ರಚನೆ: ಚಿ. ಉದಯಶಂಕರ್
ಸಂಗೀತ: ಇಳಯರಾಜ
ಗಾಯಕರು: ಡಾ. ರಾಜಕುಮಾರ್, ಏಸ್ . ಜಾನಕಿ

ಐ ಲವ್ ಯು ।೩।

ಹೆ:   ಜೀವ ಹೂವಾಗಿದೆ ಭಾವ ಜೇನಾಗಿದೆ
        ಬಾಳು ಹಾಡಾಗಿದೆ, ನಿನ್ನ ಸೇರಿ ನಾನು
ಗಂ:  ಜೀವ ಹೂವಾಗಿದೆ ಭಾವ ಜೇನಾಗಿದೆ
         ಬಾಳು ಹಾಡಾಗಿದೆ, ನಿನ್ನ ಸೇರಿ ನಾನು
ಜೊ: ಜೀವ ಹೂವಾಗಿದೆ
ಗಂ:  ಐ ಲವ್ ಯು ।೩।

ಹೆ:   ಸಂಜೆ ತಂಗಾಳಿ ತಂಪಾಗಿ ಬೀಸಿ
        ಹೂವ ತಂಪನ್ನು ಹಾದೀಲ್ಲಿ ಹಾಸಿ
        ತಂದಿದೆ ಹಿತವಾ ನಮಗಾಗಿ ।೨।
ಗಂ:  ಜೋಡಿ ಬಾನಾಡಿ ಮೇಲೆ ಹಾರಾಡಿ
         ತೇಲಾಡಿ ಹೊಲಾಡಿ ನಲಿವಂತೆ
         ನಾವು ಆಡೋಣ ಇಂದೇಕೆ ಬಾ ಚಿಂತೆ

ಜೊ: ಜೀವ ಹೂವಾಗಿದೆ

ಗಂ:  ಇನ್ನೂ ನಿನ್ನಾಸೆ ನನ್ನಾಸೆ ಒಂದೇ
         ಎಂದೂ ನಾವಾಡೊ ಮಾತೆಲ್ಲ ಒಂದೇ
         ಬಯಕೆಯು ಒಂದೇ, ಗುರಿ ಒಂದೇ ।೨।
ಹೆ:    ನಿನ್ನ ಚೆಲುವಿಂದ ನಿನ್ನ ಒಲವಿಂದ
         ನನ್ನಲ್ಲಿ ನೀ ತಂದೆ ಆನಂದ
         ಈ ಸಂತೋಷ ಸೌಭಾಗ್ಯ ನಿನ್ನಿಂದ

ಹೆ:   ಜೀವ ಹೂವಾಗಿದೆ
ಗಂ:  ಭಾವ ಜೇನಾಗಿದೆ
ಹೆ:   ಬಾಳು ಹಾಡಾಗಿದೆ
ಗಂ:  ನಿನ್ನ ಸೇರಿ ನಾನು
ಜೊ: ಜೀವ ಹೂವಾಗಿದೆ
ಗಂ:  ಐ ಲವ್ ಯು ।೩।

Song: Jeeva Hoovagide 
Movie: Nee Nanna Gellalaare

ಅನುರಾಗ, ಏನಾಯಿತು

ಚಿತ್ರ: ನೀ ನನ್ನ ಗೆಲ್ಲಲಾರೆ
ರಚನೆ: ಚಿ. ಉದಯಶಂಕರ್
ಸಂಗೀತ: ಇಳಯರಾಜ
ಗಾಯಕ/ನಟ: ಡಾ. ರಾಜಕುಮಾರ್

ಐ ಲವ್ ಯು ।೨।

ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು
ನಿನ್ನ ಸವಿ ಮಾತು ಕಹಿ ಏಕಾಯಿತು
ನಿನ್ನೊಲವೆಲ್ಲ ಇಂದೇನಾಯಿತು

ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು

ನೀಲಿ ಬಾನನು ಬಿಡುವಾಗ, ಮುಗಿಲೆಲ್ಲಾ ಕರಗಿ ಅಳುವಂತೆ ।೨।
ನಿನ್ನ ಪ್ರೇಮದಿಂದಾ ನಾ ದೂರಾಗಿ, ನನ್ನ ಕಂಗಳೆಲ್ಲಾ ಕಣ್ಣೀರಾಯಿತು
ಹಗಲಿರುಳೆಲ್ಲಾ ನಿನ್ನ ನೆನಪಾಯಿತು, ಸರಸ  ಹರುಷ ಬರಿ ಕನಸಾಯಿತು

ಅನುರಾಗ, ಏನಾಯಿತು

ಓಡಿ ಬರುವ ನದಿಯಲ್ಲಿ ಕಡಲಾಸೆ ತುಂಬಿ ಹರಿವಂತೆ ।೨।
ನಿನ್ನ ಸೇರೊ ಆಸೆ ನಾ ಕಂಡಾಗ, ಜೊತೆ ಬಾಳಲೆಂದು ಬಳಿ ಬಂದಾಗ
ಸಿಡಿಲೊಂದೆರಗಿ ಬಡಿದಂತಾಗಿ ವಿರಸ ವಿರಹ ಗತಿ ನನಗಾಯಿತು

ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು
ನಿನ್ನ ಸವಿ ಮಾತು ಕಹಿ ಏಕಾಯಿತು
ನಿನ್ನೊಲವೆಲ್ಲ ಇಂದೇನಾಯಿತು

ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು

Song: Anuraaga Enaaitu 
Movie: Nee Nanna Gellalaare
Singer/Actor: Dr. Rajkumar

ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ

ಚಿತ್ರ: ಕವಿರತ್ನ ಕಾಳಿದಾಸ 
ರಚನೆ:  ಉದಯಶಂಕರ್ 
ಸಂಗೀತ: ಎಂ. ರಂಗರಾವ್  
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ 

ಗಂ: ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ
        ಸದಾ ನನ್ನಲಿ ಒಲವಿನ ಬಯಕೆ ತುಂಬುವೆ

ಹೆ:   ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ
        ಸದಾ ನನ್ನಲಿ ಒಲವಿನ ಬಯಕೆ ತುಂಬುವೆ

ಗಂ: ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ

ಗಂ: ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ ।೨।
        ನಾಸಿಕವು ಸಂಪಿಗೆಯಂತೆ, ನೀ ನಗಲು ಹೂ ಬಿರಿದಂತೆ ।೨।
        ನಡೆಯುತಿರೆ ನಾಟ್ಯದಂತೆ ।೨।
        ರತಿಯೆ ಧರೆಗಿಳಿದಂತೆ
        ಈ ಅಂದಕೆ ಸೋತೆನು, ಸೋತೆ ನಾನು

ಹೆ:   ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ

ಹೆ:   ಗುಡುಗುಗಳು ತಾಳದಂತೆ ಮಿಂಚುಗಳು ಮೇಳದಂತೆ
        ಸುರಿವಾ ಮಳೆ ನೀರೆಲ್ಲಾ, ಪನ್ನೀರ ಹನಿ ಹನಿಯಂತೆ ।೨।
        ಜೊತೆಯಾಗಿ ನೀನಿರೆ ಸಾಕು, ಭೂಲೋಕ ಸ್ವರ್ಗದಂತೆ
        ಈ ಪ್ರೇಮಕೆ ಸೋತೆನು, ಸೋತೆ ನಾನು

ಗಂ: ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ
        ಸದಾ ನನ್ನಲಿ ಒಲವಿನ ಬಯಕೆ ತುಂಬುವೆ

ಹೆ:   ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ
        ಸದಾ ನನ್ನಲಿ ಒಲವಿನ ಬಯಕೆ ತುಂಬುವೆ

Song: Sada Kannali 
Movie: Kaviratna Kalidasa 
Singers: Dr. Rajkumar, S. Janaki 

Friday, September 16, 2016

ಬೆಳ್ಳಿ ಮೂಡಿತೋ ಕೋಳಿ ಕೂಗಿತು

ಚಿತ್ರ: ಕವಿರತ್ನ ಕಾಳಿದಾಸ 
ರಚನೆ:  ಉದಯಶಂಕರ್ 
ಸಂಗೀತ: ಎಂ. ರಂಗರಾವ್  
ಗಾಯಕ: ಡಾ. ರಾಜಕುಮಾರ್ 

ಟುರ್ರ್ರ್ ಬ್ಯಾ...
ಬೆಳ್ಳಿ ಮೂಡಿತೋ ಕೋಳಿ ಕೂಗಿತು ।೨।
ಬಾನಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ 
ಬೆಳ್ಳಿ ಮೂಡಿತೋ ಕೋಳಿ ಕೂಗಿತು ।೨।

ಎಳೆ ಬಿಸಿಲು ಎಲ್ಲೆಲ್ಲೂ ಚೆಲ್ಲಾಡೈತೆ, ಎಲೆ ಮ್ಯಾಗಿನ ಮಂಜು ಹನಿ ಪಳಗುಟ್ಟ್ತೈತೆ 
ಹಕ್ಕಿ ಹಾರುತಿದೆ ಚಿಟಿಪಿಟಿ ಎನ್ನುತಿದೆ ।೨।
ಮಂಗ ಮರವೇರುತಿದೆ ಆ ಕೊಂಬೆ ಈ ಕೊಂಬೆ ಹೆಗ್ಗರುತಿದೆ
ಯಾಕ್ಲೆ ಹನುಮಂತಣ್ಣ ಗುರುಗಟ್ತ್ಯಾ 
ಮಂಗ ಮರವೇರುತಿದೆ ಆ ಕೊಂಬೆ ಈ ಕೊಂಬೆ ಹೆಗ್ಗರುತಿದೆ

ಬೆಳ್ಳಿ ಮೂಡಿತೋ ಕೋಳಿ ಕೂಗಿತು ।೨।
ಬಾನಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ 
ಬೆಳ್ಳಿ ಮೂಡಿತೋ ಕೋಳಿ ಕೂಗಿತು

ಆಕಾಶದಾಗೆ ಬಣ್ಣ ಬಾಳೆದೌನ್ಯಾರು, ಈ ಬೆಟ್ಟ ಗುಡ್ಡಗಳ ಮಡುಗೌನ್ಯಾರು 
ಮರದ ಮ್ಯಾಗೆ  ಹಣ್ಣ ಇಟ್ಟೋನ್ಯಾರು, ಹಣ್ಣ ಒಳಗೆ ರುಚಿಯ ತುಂಬೋನ್ಯಾರು 
ಓ ಹೊ ಹೊ ..... ಆ ಹ ಹಾ .... 
ಓ ಕಾಳ ಓ ಕರಿಯ ಓ ಮುನಿಯ ಓ ಮರಿಯ ಓ ಕೆಂಚ ಓ ಜವರ 
ಇಂದು ಈ ಭೂಮಿಮ್ಯಾಗೆ ನನ್ನ ನಿನ್ನ ತಂದೋನ್ಯಾರು 

ಬೆಳ್ಳಿ ಮೂಡಿತೋ ಕೋಳಿ ಕೂಗಿತು ।೨।
ಬಾನಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ 
ಬೆಳ್ಳಿ ಮೂಡಿತೋ ಕೋಳಿ ಕೂಗಿತು 

ಬೀರಪ್ಪನು ಕುಂತವ್ನೆ ಗುಡಿಯ ಒಳಗೆ, ಬೇಡಿದ ವರದಾನ ಕೊಡುವ ನಮಗೆ 
ಭಕುತರನು ಕಂಡರೆ ಆಸೆ ಅವಗೆ, ಕೆಟ್ಟೋರ ಕಂಡರೆ ರೋಷ ಅವಗೆ
ಓ ಹೊ ಹೊ ..... ಆ ಹ ಹಾ .... 
ಓ ಬೀರ, ಓ ಮಾರ ಓ ನಂಜ ಓ ಕೆಂಪ ಬರ್ರೋಲೇ ಒತ್ತಾಯಿತು 
ಒಟ್ಟೆ ಚುರುಗುಟ್ತೈತೆ ರಾಗಿ ಮುದ್ದೆ ಉಣ್ಣೋ ಹೊತ್ತು 

ಬೆಳ್ಳಿ ಮೂಡಿತೋ ಕೋಳಿ ಕೂಗಿತು ।೨।
ಬಾನಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ 
ಬೆಳ್ಳಿ ಮೂಡಿತೋ ಕೋಳಿ ಕೂಗಿತು ।೨।

Song: Bellimooditho Koli Koogitho
Movie: Kaviratna Kalidasa
Singer/Actor: Dr. Rajkumar

ಆನೆಯ ಮೇಲೆ ಅಂಬಾರಿ ಕಂಡೆ

ಚಿತ್ರ: ಹಾಲು ಜೇನು
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ. ರಾಜಕುಮಾರ್, ಸುಲೋಚನ

ಗಂ: ।।  ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ನಿನ್ನನ್ನು ಕಂಡೆ 
       ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ ।।೨।।
ಹೆ:   ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ ।೨।
       ಜೊತೆಯಲ್ಲೆ ನಿನ್ನನ್ನೇ ನಾನು ಕಂಡೆ 
ಗಂ:  ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ  ನಿನ್ನನ್ನು ಕಂಡೆ 
       ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ 

ಗಂ:  ಬೃಂದಾವನದಲಿ ನೀರಿನ ಚಿಲುಮೆ ಕಂಡೆ 
       ಬಣ್ಣದ ಬೆಳಕಲ್ಲಿ ನಿಂತ ನಿನ್ನ ಕಂಡೆ 
       ನಿನ್ನಾ ನಡು ಬಳಸಿ ನಿಂತಾ ನನ್ನೇ ಕಂಡೆ ।೨।
ಹೆ:   ಬೇಲೂರು ಗುಡಿಯಲ್ಲಿ ಹೆಣ್ಣಿನ ಬೊಂಬೆ ಕಂಡೆ 
       ಅವಳ ಅಂದ ಕಂಡು, ಸೋತು ಮೋಹಗೊಂಡು 
       ನಿಂತಾ ನಿನ್ನ ಕಂಡೆ 

ಗಂ:  ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ  ನಿನ್ನನ್ನು ಕಂಡೆ 
        ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ 
ಹೆ:    ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ ।೨।
        ಜೊತೆಯಲ್ಲೆ ನಿನ್ನನ್ನೇ ನಾನು ಕಂಡೆ 

ಹೆ:    ಶ್ರೀರಂಗಪಟ್ಟಣದಿ ರಂಗನ ಗುಡಿಯ ಕಂಡೆ, ಶ್ರೀರಂಗನಾಥನಂತೆ ಮಲಗಿದ ನಿನ್ನ ಕಂಡೆ 
        ಶ್ರೀದೇವಿಯಂತೆ ನಿನ್ನ ಸನಿಹ ನನ್ನೇ ಕಂಡೆ ।೨।
ಗಂ:  ಹಾಲಿನ ಕಡಲಿಂದ ಬಂದ ನಿನ್ನ ಕಂಡೆ, ಎದೆಯ ಗುಡಿಯಲ್ಲಿ ನಿನ್ನ ಸೆರೆಹಾಕಿ 
        ನಲಿವಾ ನನ್ನೇ ಕಂಡೆ

ಗಂ:  ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ  ನಿನ್ನನ್ನು ಕಂಡೆ 
        ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ 
ಹೆ:    ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ
        ಜೊತೆಯಲ್ಲೆ ನಿನ್ನನ್ನೇ ನಾನು ಕಂಡೆ 
ಗಂ:  ಆನೆಯ ಮೇಲೆ ಅಂಬಾರಿ ಕಂಡೆ
        ಬಾಗಿಲ ಬಳಿಯಲ್ಲಿ ಆಫೀಸರ್ ಕಂಡೆ ಏನಪ್ಪಾ ಮಾಡೋದು...... 

Song: Aaneya Mele Ambari Kande
Movie: Haalu Jenu
Singers: Dr. Rajkumar, Sulochana

ಹಾಯಾಗಿ ಕುಳಿತಿರು ನೀನು

ಚಿತ್ರ: ಹಾಲು ಜೇನು
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ/ನಟ: ಡಾ. ರಾಜಕುಮಾರ್

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತಲೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ,ನೀನೆ ಆಗ ಮೆಚ್ಚಿಕೊಳ್ಳುವೆ
ಪಬಬಂ ಪಬಬಂ ಪಬಬಂ

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ

ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ ।೨।
ನನ್ನ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೇ, ಮಹನೀಯರಲ್ಲವೇ
ನೆನ್ನೆಯ ತನಕ ನೀನೆ ದುಡಿದೆ, ಈ ಸಂಸಾರಕೆ ಜೀವ ತೈದೆ
ಈ ದಿನವಾದರು ನಿನ್ನ, ಸೇವೆಯ ಮಾಡುವೆ ಚಿನ್ನ
ಪಬಬಂ ಪಬಬಂ ಪಬಬಂ

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತಲೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ, ನೀನೆ ಆಗ ಮೆಚ್ಚಿಕೊಳ್ಳುವೆ
ತರರಂ ತರರಂ ತರರಂ

ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ ।೨।
ಮನಸನು ಅರಿತು ನೆಡೆಯುತಲಿರಲು ಚಿಂತೆಯ ಮಾತೇಕೆ
ನೀ ನಗುತಿರಲು ನಮ್ಮೀ ಮನೆಗೆ ಆ ಸ್ವರ್ಗವೇ ಜಾರಿದಂತೆ
ಹೆಂಡತಿ ಸೇವಕಿಯಲ್ಲ, ಗಂಡನು ದೇವರು ಅಲ್ಲ
ಪಬಬಂ ಪಬಬಂ ಪಬಬಂ

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತಲೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ,ನೀನೆ ಆಗ ಮೆಚ್ಚಿಕೊಳ್ಳುವೆ
ತರರಂ ತರರಂ ತರರಂ

Song: Haayagi Kulithiru Neenu
Movie: Haalu Jenu 
Singer/Actor: Dr. Rajkumar 

ಹಾಲು ಜೇನು ಒಂದಾದ ಹಾಗೆ

ಚಿತ್ರ: ಹಾಲು ಜೇನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ/ನಟ: ಡಾ. ರಾಜಕುಮಾರ್ 

ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ ।೨।
ನೀ ನಗುತಲಿ ಸುಖವಾಗಿರೆ, ಆನಂದದ ಹೊನಲಾಗಿರೆ, ಬಾಳೆ ಸವಿಗಾನ 
ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ

ಬಿಸಿಲಾಗಲಿ ಮಳೆಯಾಗಲಿ ನೆರಳಾಗಿ ನಾನು ಬರುವೆನು ಜೊತೆಗೆ ।೨।
ಸವಿಮಾತಲಿ ಸುಖ ನೀಡುವೆ ಎಂದೆಂದಿಗೂ ಹೀಗೆ 
ಹೂವಾಗಲಿ ಈ ಮಾಗವರಳಿ ಸಂತೋಷದ ಪರಿಮಳ ಚೆಲ್ಲಿ ।೨।
ಹಾಯಾಗಿರು 

ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ

ಈ ತಾವರೆ ಮೊಗವೇತಕೆ ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ ।೨।
ಇಂದೇತಕೆ ಈ ಮೌನವು ಹೀಗೇಕೆ ನೀನಿರುವೆ 
ನೀನೇತಕೆ ಬಾಳುವೆ ಕೊರಗಿ ನಾನಿಲ್ಲವೆ ಆಸರೆಯಾಗಿ ।೨।
ಹಾಯಾಗಿರು 

ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ ।೨।
ನೀ ನಗುತಲಿ ಸುಖವಾಗಿರೆ, ಆನಂದದ ಹೊನಲಾಗಿರೆ, ಬಾಳೆ ಸವಿಗಾನ 
ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ

Song: Haalu Jenu Ondaada Haage
Movie: Haalu Jenu 
Singer/Actor: Dr. Rajkumar

ಆಗುಂಬೆಯಾ ಪ್ರೇಮಸಂಜೆಯಾ

ಚಿತ್ರ: ಆಕಸ್ಮಿಕ
ರಚನೆ/ಸಂಗೀತ: ಹಂಸಲೇಖ
ಗಾಯಕರು: ಡಾ. ರಾಜಕುಮಾರ್, ಮಂಜುಳಾ ಗುರುರಾಜ್ 

ಗಂ:  ಅಂಬರದ ಅಂಜುರದಿ ನೇಸರನು
         ಅಂಗೈಯ್ಯಿಗೆ ಹತ್ತಿರದಿ ನೇಸರನು
         ಕಾಸಗಳ ಕುಂಕುಮದ ನೇಸರನು
         ಬಾನಗಲ ಭೀಗುವಲ್ಲಿ ನೇಸರನು
         ಕಣ್ಣ ತುಂಬ ತುಂಬಿಕೊಂಡ ಬಾಳತುಂಬ ಸೇರಿಕೊಂಡ

ಗಂ:  ಆಗುಂಬೆಯಾ ಪ್ರೇಮಸಂಜೆಯಾ ।೨।
         ಮರೆಯಲಾರೆ ನಾನು ಎಂದಿಗೂ
         ಓ ಗೆಳತಿಯೆ ।೩।, ಗೆಳತಿಯೆ
ಹೆ:   ಆಗುಂಬೆಯಾ ಪ್ರೇಮಸಂಜೆಯಾ ।೨।
        ಮರೆಯಲಾರೆ ನಾನು ಎಂದಿಗೂ
        ಓ ಗೆಳೆಯೆನೆ ।೩।, ಗೆಳೆಯೆನೆ

ಹೆ:   ಮುಗಿಲಾ ಜೊತೆಯಲ್ಲಿ ನೆಲ ಮುದ್ದಾಡೊ ಸಮಯ
        ಕೊಡುವೆ ನಿನಗೆ ಕೊಡುಗೆ ಈ ನನ್ನಾ ಹೃದಯ
ಗಂ:  ನದಿಯ ಒಗದಲ್ಲಿ ರವಿ ತಂಪಾಗೊ ಸಮಯ
         ಕೊಡುವೆ ನಿನಗೆ ಕೊಡುಗೆ ಈ ನನ್ನಾ ಹೃದಯ
ಹೆ:   ಪ್ರೀತಿ ಸೋಲದಂತೆ ಸ್ನೇಹಾ ಬಾಡದಂತೆ
ಗಂ:  ಆ ಆಸೆ ತೀರದಂತೆ ನಾ...
ಹೆ:   ಹಕ್ಕಿಗಳ ಅಂತರಂಗ ಹಾಡುತಿದೆ, ಹೂವುಗಳ ವರ್ಣಗಳ ಮಿಂಚುತಿದೆ
ಗಂ:  ಗುಡ್ಡಗಳ ತಂಬೆಳರು ಬೀಸುತಿದೆ, ಎಲ್ಲ ಮರ ಹಣ್ಣುಗಳು ತೂಗುತಿದೆ
ಹೆ:   ಮೂಡಣಕ್ಕೆ ಜೀವ ತಂದ ಪಶ್ಚಿಮಕ್ಕೆ ಭಾವ ತಂದ

ಹೆ:   ಆಗುಂಬೆಯಾ ಪ್ರೇಮಸಂಜೆಯಾ
ಗಂ:  ಆಗುಂಬೆಯಾ ಪ್ರೇಮಸಂಜೆಯಾ
         ಮರೆಯಲಾರೆ ನಾನು ಎಂದಿಗೂ
         ಓ ಗೆಳತಿಯೆ ।೩।, ಗೆಳತಿಯೆ

ಗಂ:  ಮನದಾ ಇರುಳಿನಲಿ ನೀ ಸುರಿದೆ ಹೊಂಗಿರಣ
         ಬದುಕೆ ಬನವಾಗಿರಲು ನಿಜ ನೀನೆ ಕಾರಣ
ಹೆ:   ಬರದಾ ನಿದಿರೆಯಲಿ ನೀ ಸುರಿದೆ ಕನಸುಗಳ
        ಕನಸೆ ನನಸಾಗಿರಲು ನಿಜ ನೀನೆ ಕಾರಣ
ಗಂ:  ಓ ಸಂಜೆ ಹೆಣ್ಣು ನೀನು, ನನ್ನ ಬಾಳ ಜೇನು
ಹೆ:   ಇನ್ನು ನಾನು ನೀನು...
ಗಂ:  ಏಳು ಬಣ್ಣ ಒಂದು ಮಾಡೊ ನೇಸರನು
         ಕೊಂಬೆಗಳ ಬೇಲಿಯಲ್ಲಿ ನಿಂತಿಹನು
ಹೆ:   ನಾಳೆಗಳ ಹೊತ್ತು ಕಾಯೊ ನೇಸರನು
        ಪ್ರೇಮಿಗಳ ಕದ್ದು ಕದ್ದು ನೋಡುವನು
ಗಂ:  ನನ್ನ ನಿನ್ನ ಪ್ರೀತಿ ಕಂಡ ಸೂರ್ಯನೆಲ್ಲಿ ಜಾರಿಕೊಂಡ

ಗಂ:  ಆಗುಂಬೆಯಾ ಪ್ರೇಮಸಂಜೆಯಾ
ಹೆ:   ಆಗುಂಬೆಯಾ ಪ್ರೇಮಸಂಜೆಯಾ
ಗಂ:  ಮರೆಯಲಾರೆ ನಾನು ಎಂದಿಗೂ
         ಓ ಗೆಳತಿಯೆ ।೩।, ಗೆಳತಿಯೆ

Song: Aagumbeya Prema Sanjeya
Movie: Aakasmika
Singers: Dr. Rajkumar, Manjula Gururaj

ಬಾಳುವಂತ ಹೂವೆ ಬಾಡುವಾಸೆ ಏಕೆ

ಚಿತ್ರ: ಆಕಸ್ಮಿಕ
ರಚನೆ/ಸಂಗೀತ: ಹಂಸಲೇಖ
ಗಾಯಕ/ನಟ: ಡಾ. ರಾಜಕುಮಾರ್

ಬಾಳುವಂತ ಹೂವೆ ಬಾಡುವಾಸೆ ಏಕೆ ।೨।
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ 
ಕಾವಲು ದಾರಿಯಲ್ಲಿ ಬಾಳು ಸಾಧ್ಯವೇ 
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ 

ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ 

ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು 
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು 
ಬಾಳು ಒಂದು ಸಂತೆ, ಸಂತೆ ತುಂಬ ಚಿಂತೆ
ಮಧ್ಯ ಮದಗಳಿಂದ ಚಿಂತೆ ಬೆಳೆವುದಂತೆ
ಅಂಕೆ ಇರದ ಮನಸನು ದಂಡಿಸುವುದು ನ್ಯಾಯ
ಮೂಕ ಮುಗ್ದ ದೇಹವ ಹಿಂಸಿಸುವುದು ಹೇಯ
ಸಣ್ಣ ತಿರುಪು ಸಾಲದೇ, ತುಂಬು ದೋಣಿ ದಡ ಸೇರಲು
ಸಣ್ಣ ಅಳುಕು ಸಾಲದೇ, ತುಂಬು ಬದುಕು ಬರಡಾಗಲು

ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ 

ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವ ರಾಶಿಗಿಲ್ಲಿ ಮಾನವನಿಗೆ ಆದ್ಯತೆ
ನಾವೆ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ
ಇಲ್ಲಿ ಈಸ ಬೇಕು ಇದ್ದು ಜಯಿಸಬೇಕು
ನಾಗಿರೀಕರಾದ ಮೇಲೆ ಸುಗುಣರಾಗ ಬೇಕು
ನಿನ್ನ ಹಳದಿಗಣ್ಣಲಿ ಜನರನೇಕೆ ನೀ ನೋಡುವೆ
ಮನದ ಕೊಂಕು ಕಾಣದೆ ಜಗವನೇಕೆ ನೀ ದೂರುವೆ


ಬಾಳುವಂತ ಹೂವೆ ಬಾಡುವಾಸೆ ಏಕೆ

ಹಾಡುವಂತ ಕೋಗಿಲೆ ಅಳುವ ಆಸೆ ಏಕೆ 
ಕಾವಲು ದಾರಿಯಲ್ಲಿ ಬಾಳು ಸಾಧ್ಯವೇ 

ಅವಳಿ ದೋಣಿ ಮೇಲೆ ಯಾನ ಯೋಗ್ಯವೇ 

ಬಾಳುವಂತ ಹೂವೆ ಬಾಡುವಾಸೆ ಏಕೆ 
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ 

Song: Baaluvanta Hoove 
Movie: Aakasmika
Singer/Actor: Dr. Rajkumar

ಈ ಹೆಣ್ಣಿಗೂ ಕಣ್ಣಿಗೂ ಏನು ಬಂಧವೋ

ಚಿತ್ರ: ಆಕಸ್ಮಿಕ
ರಚನೆ/ಸಂಗೀತ: ಹಂಸಲೇಖ
ಗಾಯಕ/ನಟ: ಡಾ. ರಾಜಕುಮಾರ್

ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
ನೋಡಲು ಮೋಹಕ ಕೂಡಲು ಪ್ರೇರಕ
ಏನು ಮಾಯಾವೋ

ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ

ಮನದ ಒಳದ ತಿಳಿಯ ಜಲದ ಮೇಲೆ ಮನವೆಸೆದು
ಸಿಗದ ಜಗದ ಸುಖದ ತಳಕೆ ನನ್ನಾ ಬರಸೆಳೆದು
ಅಳುವ ಮೊಗದ ಒಳಗೆ ತೆರೆದ ಎದೆಗೆ ಜೊತೆ ಬೆಸೆದು
ಇಹದ  ಪರದ ಜಾನುಮಾಂತರದ ಕಥೆಯ ಪುಟ ತೆರೆದು
ಆಕಸ್ಮಿಕ ಎಂದಳೀ ಚಲುವ ಬಾರೆ
ಅನಿರೀಕ್ಷಿತ ತಂದಳೀ ಒಲವ ಬಾಲೆ
ಚಂದದ ಕನ್ಯೆಯೋ, ದಂತದ ಬೊಂಬೆಯೋ
ಏನು ಮಾಯೆಯೋ

ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ

ಸರಸಿ ಸರಸಿ ಚೆಲುವಿಗೆ ಅರಸಿ ಬಂದಳು ನನ್ನರಸಿ
ಕವನ ಕಾವ್ಯ ನಾಟ್ಯ ಗಮಕ ಕಲೆಗಳ ಸಿಂಗರಿಸೀ
ಕನಸು ಮನಸು ಬದುಕು ಭ್ರಮೆಯ ನಡುವೆ ಸಂಚರಿಸಿ
ಮೌನದ ಒಡವೆ ಧರಿಸಿ ನಕ್ಕಳು ಒಲವನು ಸಿಂಪಡಿಸೀ
ಆಕಸ್ಮಿಕ ಆದಳೀ  ಪ್ರೇಮ ಯೋಗ
ಅನಿರೀಕ್ಷಿತ ಅನಿಸಲಿ ಪ್ರಣಯ ರಾಗ
ಸ್ವರ್ಗಾದಿ ಸ್ಪರ್ಶವು ಸೌಕ್ಯದಿ ಸಂದ್ಯವು
ಏನು ಮಾಯೆಯೋ

ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
ನೋಡಲು ಮೋಹಕ ಕೂಡಲು ಪ್ರೇರಕ
ಏನು ಮಾಯಾವೋ

Song: Ee Kannigoo Hennigoo
Movie: Aakasmika
Singer/Actor: Dr. Rajkumar

ಚಿನ್ನ ಬಾಳಲ್ಲಿ

ಚಿತ್ರ: ಶಂಕರ್ ಗುರು
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್

ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು, ಕನಸೆಲ್ಲ ನನಸಾಗಿದೆ
ಏಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ, ಹೂಮಂಚ ನಾಮದಾಗಿದೆ ।೨।
ಇಂತ ಏಕಾಂತ ನಿನ್ನಾ ಕಾಡದೆ, ಇನ್ನು ನಿನ್ನಲ್ಲಿ ಆಸೆ ಮೂಡದೆ
ಸಿಹಿ ಮುತ್ತೊಂದು ತುಟಿಯು ಕೇಳದೆ

ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು, ಕನಸೆಲ್ಲ ನನಸಾಗಿದೆ

ಇನ್ನು ದೂರಾಗಿ ಏಕೆ ನಿಲ್ಲುವೆ, ನನ್ನ ಕಣ್ಣಲ್ಲೇ ಏಕೆ ಕೊಲ್ಲುವೆ
ನೀನು ನಿಜವಾದ ಹೆಣ್ಣೆ ಅಲ್ಲವೆ, ನಿನ್ನ ಮನದಲ್ಲಿ ಬಯಕೆ ಇಲ್ಲವೆ
ನಾನು ನೀನು, ನೀನು ನಾನು ।೨।
ಸೇರಿ ಇಲ್ಲಿ ಇಂದು ಈಗ ಆ ಹ ಆ ಹ ಹ

ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು, ಕನಸೆಲ್ಲ ನನಸಾಗಿದೆ

ಕಾಶ್ಮೀರದ ಚೆಲುವೆ, ಬಳಿ ಬಾರೆ ಚತುರೆ ।೨।
ನೀಡುವೆನು ನಿನಗೆ ನನ್ನಸರೇ 
ಬಿಡಿಸುವೆ ಈಗಲೇ ।೨।
ನಿನ್ನ ಕನ್ಯಾಸೆರೆ
ನೆಲವೆಲ್ಲ ಹಸಿರಾಗಿ, ಗಿಡವೆಲ್ಲ ಹೂವಾಗಿ
ತಂಗಾಳಿ ಹಿತವಾಗಿ, ಮೈ ಸೋಕಿ ಹಾಯಾಗಿ
ನಿನ್ನಸಿ ಹೆಚ್ಚಾಗಿ ನಾ ಬಂದೆ ಹುಚ್ಚಾಗಿ
ಈ ಬೇಗ ನೀಗು ನನ್ನಲ್ಲಿ ಒಂದಾಗು

ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು, ಕನಸೆಲ್ಲ ನನಸಾಗಿದೆ

ಕಾಶ್ಮೀರದ ಗಿಳಿಯೇ, ನೀ ಬಲ್ಲೆಯೇನೆ ।೨।
ಕನ್ನಡದ ನಾಡಿಂದ ಬಂದವನು ನಾನೆ
ನಾನಾಡೊ ನುಡಿಯಲ್ಲ, ನಾನಾಡೊ ನುಡಿಯಲ್ಲ ಸವಿಯಾದ ಜೇನೆ
ನಮ್ಮೂರು ಬಲುಚಂದ, ನಮ್ಮೂರ ಜನ ಚಂದ
ನಮ್ಮೋರ ನುಡಿ ಚಂದ, ನಮ್ಮೋರ ನಡೆ ಚಂದ
ಎಲ್ಲೆಲ್ಲೂ ಬಲು ಅಂದ, ಕಾಡೆಲ್ಲಾ ಶ್ರೀಗಂಧ
ನೀ ಸೇರಿದಾಮೇಲೆ, ಬಾಳೆಲ್ಲ ಆನಂದ

ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು, ಕನಸೆಲ್ಲ ನನಸಾಗಿದೆ
ಏಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ, ಹೂಮಂಚ ನಾಮದಾಗಿದೆ ।೨।

Song: Chinna Baalalli
Movie: Shankar Guru
Singer/Actor: Dr. Rajkumar

ಏನೇನೋ ಆಸೆ ನೀ ತಂದಾ ಭಾಷೆ

ಚಿತ್ರ: ಶಂಕರ್ ಗುರು
ರಚನೆ:ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್

ಗಂ: ಏನೇನೋ ಆಸೆ ನೀ ತಂದಾ ಭಾಷೆ
        ಇಂದು ಹೊಸತನ ತಂದು ತನು ಮನ
        ಕೂಗಿತಿದೆ ಬಾ ಎಂದು ನಿನ್ನ

ಹೆ:   ಏನೇನೋ ಆಸೆ ನೀ ತಂದಾ ಭಾಷೆ
        ಇಂದು ಹೊಸತನ ತಂದು ತನು ಮನ
        ಕೂಗಿತಿದೆ ಬಾ ಎಂದು ನಿನ್ನ

ಗಂ: ಲತೆಗಳು ಬಳುಕುತಿವೆ ನಿನ್ನಂತೇ ಆಡಿ
ಹೆ:   ಸುಮಗಳು ನಗುತಲಿವೆ ನಿನ್ನನ್ನೂ ನೋಡಿ
ಗಂ: ಹಿಮದ ಗಿರಿಯ ಬಳಸಿ ಬರುವ ಗಾಳಿ ತರಲು ಚಳಿ
ಹೆ:   ಇನಿಯ ಬಳಿಗೆ ಒಲಿದು ಬಂದು ಸನಿಹ ತರಲು ಬಿಸಿ

ಹೆ:   ಏನೇನೋ ಆಸೆ
ಗಂ: ನೀ ತಂದಾ ಭಾಷೆ
ಹೆ:   ಇಂದು ಹೊಸತನ ತಂದು ತನು ಮನ
ಗಂ: ಕೂಗಿತಿದೆ ಬಾ ಎಂದು ನಿನ್ನ

ಹೆ:   ಕಾಮನಬಿಲ್ಲಿಂದಾ ಬಂದಿತು ನಿನ್ನಂದಾ
ಗಂ: ತಾರೆಯ ಹೊಳಪಿನಿಂದಾ  ಕನ್ನಂದ
ಹೆ:   ಈ ಮಾತು ಬಿಡು ಬಿಡು ಮನಸಿಲ್ಲೀ ಇಡು ಇಡು
ಗಂ: ಸಂತೋಷ ಕೊಡು ಕೊಡು ಬಾ ನಲ್ಲೆ

ಜೊ: ಏನೇನೋ ಆಸೆ ನೀ ತಂದಾ ಭಾಷೆ
         ಇಂದು ಹೊಸತನ ತಂದು ತನು ಮನ
         ಕೂಗಿತಿದೆ ಬಾ ಎಂದು ನಿನ್ನ

Song: Eneno Aase
Movie: Shankar Guru
Singers: Dr. Rajkumar 

ನಿನದೇ ನೆನಪು ದಿನವೂ ಮನದಲ್ಲಿ

ಚಿತ್ರ: ರಾಜ ನನ್ನ ರಾಜ
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ/ನಟ: ಡಾ. ರಾಜಕುಮಾರ್

।। ನಿನದೇ ನೆನಪು ದಿನವೂ ಮನದಲ್ಲಿ
     ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ ।।೨।।

ತಂಗಾಳಿಯಲ್ಲಿ ಬೆಂದೆ, ಏಕಾಂತದಲ್ಲಿ ನಾನೊಂದೆ ।೨।
ಹಗಲಲಿ ತಿರುಗಿ ಬಳಲಿದೆ, ಇರುಳಲಿ ಬಯಸಿ ಕೊರಗಿದೆ
ದಿನವೂ ನಿನ್ನನಾ ಕಾಣದೆ

ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ

ಕಡಲಿಂದ ಬೇರೆಯಾಗಿ ತೆಲಾಡೊ ಮೋಡವಾಗಿ ।೨।
ಕರಗುತ ಧರೆಗೆ ಇಳಿವುದು, ಹರಿಯುತ ಕಡಲ ಬೆರೆವುದು
ನಮ್ಮೀ ಬಾಳಿನ ಬಗೆಯಿದು

ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ

ಚಂದಿರನ ಕಾಣದಿರುಳು ನೀನಿರದೆ ನನ್ನ ಬಾಳು ।೨।
ಮನಸಲಿ ಏನೋ ತಳಮಳ, ಹೃದಯದಿ ತುಂಬ ಕಳವಳ
ದಿನವೂ ನಿನ್ನದೇ ಹಂಬಲ

ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ

Song:Ninade Nenapu
Movie: Raja Nanna Raja
Singer/Actor: Dr. Rajkumar

ಚೆಲುವೆಯೇ ನಿನ್ನ ನೋಡಲು

ಚಿತ್ರ: ಹೊಸಬೆಳಕು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ: ಡಾ. ರಾಜಕುಮಾರ್

।। ಚೆಲುವೆಯೇ ನಿನ್ನ ನೋಡಲು
     ಮಾತುಗಳು ಬರೆದವನು
     ಬರೆಯುತ ಹೊಸ ಕವಿತೆಯ
     ಹಾಡುವ ನೋಡಿ ಅಂದವನು ।।೨।।
ಚೆಲುವೆಯೇ ನಿನ್ನ ನೋಡಲು

ನೀ ನಗುತಿರೆ ಹೂವು ಅರಳುವುದು, ನೀ ನೆಡೆದರೆ ಲತೆಯು ಬಳುಕುವುದು
ಪ ನಿ ಸ ರಿ ಸ ನಿ, ಮ ಪ ನಿ ಸ ನಿ ದ, ದ ಪ ಗಾ ಮ ಪ
ಗ ಮ ಪ ಸ ।೩।
ನೀ ನಗುತಿರೆ ಹೂವು ಅರಳುವುದು, ನೀ ನೆಡೆದರೆ ಲತೆಯು ಬಳುಕುವುದು
ಪ್ರೇಮ ಗೀತೆ ಹಾಡಿದಾಗ ।೨।
ಕೋಗಿಲೆಕೂಡ ನಾಚುವುದು

ಚೆಲುವೆಯೇ ನಿನ್ನ ನೋಡಲು, ಮಾತುಗಳು ಬರೆದವನು
ಬರೆಯುತ ಹೊಸ ಕವಿತೆಯ, ಹಾಡುವ ನೋಡಿ ಅಂದವನು
ಚೆಲುವೆಯೇ ನಿನ್ನ ನೋಡಲು

ಈ ಸಂತಸ ಎಂದು ಹೀಗೆ ಇರಲಿ, ಈ ಸಂಭ್ರಮ ಸುಖವ ತುಂಬುತ ಬರಲಿ
ಪ ನಿ ಸ ರಿ ಸ ನಿ, ಮ ಪ ನಿ ಸ ನಿ ದ, ದ ಪ ಗಾ ಮ ಪ
ಗ ಮ ಪ ಸ ।೩।
ಈ ಸಂತಸ ಎಂದು ಹೀಗೆ ಇರಲಿ, ಈ ಸಂಭ್ರಮ ಸುಖವ ತುಂಬುತ ಬರಲಿ
ಇಂದು ಬಂದ ಹೊಸ ವಸಂತ ।೨।
ಕನಸುಗಳಾ ನನಸಾಗಿಸಲಿ 

ಚೆಲುವೆಯೇ ನಿನ್ನ ನೋಡಲು, ಮಾತುಗಳು ಬರೆದವನು
ಬರೆಯುತ ಹೊಸ ಕವಿತೆಯ, ಹಾಡುವ ನೋಡಿ ಅಂದವನು
ಚೆಲುವೆಯೇ ನಿನ್ನ ನೋಡಲು

Song: Cheluveye Ninna Nodalu
Movie: Hosabelaku
Singer/Actor: Dr. Rajkumar

ನಿನ್ನ ನನ್ನ ಮನವು ಸೇರಿತು

ಚಿತ್ರ: ಭಾಗ್ಯವಂತರು
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕ: ಡಾ. ರಾಜಕುಮಾರ್

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು ।೨।
ರಾಗವು ಒಂದೆ ಭಾವವು ಒಂದೆ, ಜೀವ ಒಂದಾಯಿತು ಬಾಳು ಹಗುರಾಯಿತು

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು

ಏಕಾಂಗೀಯಾಗಿರಲು ಕೈ ಹಿಡಿದೆ ಜೊತೆಯಾದೆ
ತಾಯಂತೆ ಬಳಿ ಬಂದೆ ಆದರಿಸಿ ಪ್ರೀತಿಸಿದೆ
ಬಾಳಲಿ ಸುಖ ನೀಡಿದೆ, ನನ್ನೀ ಬದುಕಿಗೆ ಶ್ರುತಿಯಾದೆ
ನನ್ನೀ ಮನೆಯ ಬೆಳಕಾದೆ

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು

ಎಂದೂ ಜೊತೆಯಲೆ ಬರುವೆ, ನಿನ್ನ ನೆರಳಿನ ಹಾಗೆ ಇರುವೆ
ಕೊರಗದಿರು ಮರುಗದಿರು ಹಾಯಾಗಿ ನೀನಿರು
ಎಂದೂ ಜೊತೆಯಲೆ ಬರುವೆ, ನಿನ್ನಉಸಿರಲಿ ಉಸಿರಾಗಿರುವೆ
ನೋವುಗಳು ನನಗಿರಲಿ ಆನಂದ ನಿನಗಾಗಲಿ
ನಗುವಿನ ಹೂಗಳ ಮೇಲೆ ನೆಡುಯುವ ಭಾಗ್ಯ ನಿನಗಿರಲಿ
ನೋಡುವ ಭಾಗ್ಯ ನನಗಿರಲಿ

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು
ರಾಗವು ಒಂದೆ ಭಾವವು ಒಂದೆ, ಜೀವ ಒಂದಾಯಿತು ಬಾಳು ಹಗುರಾಯಿತು
ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು

Song: Nanna Ninna Manavu Seritu Movie: Bhagyavantaru Singer: Dr. Rajkumar

ನಾನಿರುವುದೆ ನಿಮಗಾಗಿ

ಚಿತ್ರ: ಮಯೂರ
ರಚನೆ: ಚಿ. ಉದಯಶಂಕರ್
ಸಂಗೀತ:  ಜಿ. ಕೆ. ವೆಂಕಟೇಶ್
ಗಾಯಕ/ನಟ: ಡಾ. ರಾಜಕುಮಾರ್

ನಾನಿರುವುದೆ ನಿಮಗಾಗಿ ।೨।
ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿ ಉಸಿರೇಕೆ ।೨।
ಬಾಳುವಿರೆಲ್ಲ ಹಾಯಾಗಿ ।೨।
ನಾನಿರುವುದೆ ನಿಮಗಾಗಿ

ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾ ।೨।
ನಿಮ್ಮೊಡನಿಂದು, ನಾನು ನೊಂದು
ನಿಮ್ಮೊಡನಿಂದು ನಾನು ನೊಂದು ಮಿಡಿದಾ ಕಂಬನಿ ಆರಿಲ್ಲ
ಭರವಸೆ ನೀಡುವೆನಿಂದು ನಾ ನಿಮ್ಮೊಡನಿರುವೆನು ಎಂದೂ ।೨।
ತಾಯಿಯ ಆಣೆ ನಿಮ್ಮನು ಕಾಡುವ ವೈರಿಯ ಉಳಿಸೋಲ್ಲ

ನಾನಿರುವುದೆ ನಿಮಗಾಗಿ
ನಾನಿರುವುದೆ ನಿಮಗಾಗಿ, ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿ ಉಸಿರೇಕೆ ।೨।
ಬಾಳುವಿರೆಲ್ಲ ಹಾಯಾಗಿ ।೨।
ನಾನಿರುವುದೆ ನಿಮಗಾಗಿ

ಸಾವಿರ ಜನುಮದ ಪುಣ್ಯವೊ ಏನೋ ನಾನೀ ನಾಡಲಿ ಜನಿಸಿರುವೆ ।೨।
ತಪಸ್ಸಿನ ಫಲವೋ ಹಿರಿಯರ ಒಲವೋ
ತಪಸ್ಸಿನ ಫಲವೋ ಹಿರಿಯರ ಒಲವೋ ನಿಮ್ಮೀ ಪ್ರೀತಿಯ ಗಳಿಸಿರುವೆ
ವೈರಿಯ ಬಡಿದೋಡಿಸುವ ಈ ನಾಡಿಗೆ ಬಿಡುಗಡೆ ತರುವ ।೨।
ಜನತೆಗೆ ನೆಮ್ಮೆದಿ ಸೌಖ್ಯವ ತರಲು ಪ್ರಾಣವನೆ ಕೊಡುವೆ

ನಾನಿರುವುದೆ ನಿಮಗಾಗಿ
ನಾನಿರುವುದೆ ನಿಮಗಾಗಿ, ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿ ಉಸಿರೇಕೆ ।೨।
ಬಾಳುವಿರೆಲ್ಲ ಹಾಯಾಗಿ ।೨।
ನಾನಿರುವುದೆ ನಿಮಗಾಗಿ

Song: Naaniruvude Nimagaagi
Movie: Mayura
Singer/Actor: Dr. Rajkumar

ನಿನ್ನ ನುಡಿಯು ಹೊನ್ನ ನುಡಿಯು

ಚಿತ್ರ: ಬಡವರ ಬಂಧು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ/ನಟ: ಡಾ. ರಾಜಕುಮಾರ್

ನಿನ್ನ ನುಡಿಯು ಹೊನ್ನ ನುಡಿಯು, ಜೇನ ಹನಿಯು ಹೃದಯಕೆ
ನನ್ನ ಎದೆಯ ವೀಣೆ ತಂತಿಯ, ಮೀಟಿ ಓಡಿದೆ ಏತಕೆ
ನಿನ್ನ ನುಡಿಯು ಹೊನ್ನ ನುಡಿಯು, ಜೇನ ಹನಿಯು ಹೃದಯಕೆ

ನೆಡೆವ ಹಾದಿಗೆ ನಗೆಯ ಹೂವನು ಚೆಲ್ಲಿದಾಗಲು ಕಾಣದೆ ।೨।
ಕಣ್ಗಳಿಂದಲೇ ಪ್ರಣಯ ಕಾವ್ಯವ ಹಾಡಿದಾಗಲು ಕೇಳದೆ
ನಿನ್ನನರಿಯದೆ ಹೋದೆನು, ಮನಸ ತಿಳಿಯದೆ ಹೋದೆನು
ಕನಸಿನಲ್ಲಿ ಕಂಡ ಹಣ್ಣಿಗೆ ಆಸೆ ಪಡುವಂತಾದೆನು

ನಿನ್ನ ನುಡಿಯು ಹೊನ್ನ ನುಡಿಯು, ಜೇನ ಹನಿಯು ಹೃದಯಕೆ

ಕಂಡು ಕಾಣದ ಮಿಂಚಿನಂತೆ ಸುಳಿದು ಓಡಿದೆ  ದೂರಕೆ ।೨।
ತಂದು ಬಯಕೆಯ ತುಂಬಿ ನನ್ನಲಿ ಇಂದು ಕೆಣಕಿದೆ ಏತಕೆ
ನೀನು ಗಗನದ ಕುಸುಮವು ನಾನು ಭೂಮಿಯ ಭ್ರಮರವು
ಮಗುವಿನಾಸೆಯು ಸಹಜವಾಗಲು ಸೇರಲೆಲ್ಲಿದೆ ಹಾದಿಯು

ನಿನ್ನ ನುಡಿಯು ಹೊನ್ನ ನುಡಿಯು, ಜೇನ ಹನಿಯು ಹೃದಯಕೆ
ನನ್ನ ಎದೆಯ ವೀಣೆ ತಂತಿಯ, ಮೀಟಿ ಓಡಿದೆ ಏತಕೆ
ನಿನ್ನ ನುಡಿಯು ಹೊನ್ನ ನುಡಿಯು, ಜೇನ ಹನಿಯು ಹೃದಯಕೆ

Movie: Badavara Bandu Song: Ninna Nudiyu Honna Nudiyu Singer: Dr. Rajkumar

Thursday, September 15, 2016

ಮುತ್ತಿನಂತ ಮಾತೊಂದು ಗೊತ್ತೇನಮ್ಮ

ಚಿತ್ರ: ಬಹದ್ದೂರ್ ಗಂಡು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ/ನಟ: ಡಾ. ರಾಜಕುಮಾರ್

ಹಾಡುವಾ ಧನಿಯೆಲ್ಲಿ ಶ್ರುತಿ ಸೇರಬೇಕು
ನೋಡುವಾ ನೋಟದಲಿ ಹಿತ ಕಾಣಬೇಕು
ಆಡುವ ಮಾತಿನಲಿ ಪ್ರೀತಿಯಿರಬೇಕು

।। ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
    ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು ।।೨।।

ಸಿರಿತನವೆಂದು ಶಾಶ್ವತವಲ್ಲ, ಬಡಜನರೆಂದು ಪ್ರಾಣಿಗಳಲ್ಲ
ದೇವರ ಆಟ ಬಲ್ಲವರಿಲ್ಲ ಬಾಳಿನ ಮರ್ಮ ತಿಳಿದವರಿಲ್ಲ
ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ, ಪಾಪ
ಇಂದು ಮಣ್ಣೆ ಗತಿಯಾಯಿತು ಈ ಮಯ್ಯಿಗೆ
ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ
ಇಂದು ಮಣ್ಣೆ ಗತಿಯಾಯಿತು ಈ ಮಯ್ಯಿಗೆ
ಎಂದು ಆಳಾಗ ಬಲ್ಲವನೆ ಅರಸಾಗುವ, ಒಳ್ಳೆ ಅರಸಾಗುವ

ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

ಕಪ್ಪನೆ ಮೋಡ ಕರಗಲೆಬೇಕು, ಆಗಸದಿಂದಾ ಇಳಿಯಲೆಬೇಕು
ಕೋಟೆಕಟ್ಟಿ ಮೆರೆದವರೆಲ್ಲ ಏನಾದರೂ, ಏನೂ
ಮೀಸೆ ತಿರುಗಿ ಕುಣಿದವರೆಲ್ಲ ಮಣ್ಣಾದರು
ಕೋಟೆಕಟ್ಟಿ ಮೆರೆದವರೆಲ್ಲ ಏನಾದರೂ
ಮೀಸೆ ತಿರುಗಿ ಕುಣಿದವರೆಲ್ಲ ಮಣ್ಣಾದರು
ಇನ್ನು ನೀ ಯಾವ ಲೆಕ್ಕ ಹೇಳೇ ಸುಕುಮಾರಿಯೇ, ಇಲ್ಲ ಹೆಮ್ಮಾರಿಯೆ

ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

ಶ್ರೀಮಂತಿಕೆಯು ಮೆರೆಯಲು ಅಲ್ಲ, ರಾಜಕುಮಾರಿ ದೇವತೆಯಲ್ಲ  ।೨।
ಹಸಿವು ನಿದ್ದೆ ಕೋಪ ತಾಪ ನಿನಗೂ ಇದೆ, ನಿನ್ನಂತೆ ರೋಷ ವೇಷ ನನಗೂ ಇದೆ
ಈ ನಿಜವನ್ನು ಅರಿತಾಗ ಹೆಣ್ಣಾಗುವೆ, ಇಲ್ಲ ಮಣ್ಣ್ತಿನ್ನುವೆ

ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

Song: Muttinanta Maatondu
Movie: Bahaddur Gandu
Singer/Actor: Dr. Rajkumar

ಮಾನವನಾಗುವೆಯ ಇಲ್ಲ ಧಾನವನಾಗುವೆಯ

ಚಿತ್ರ: ಬಹದ್ದೂರ್ ಗಂಡು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ/ನಟ: ಡಾ. ರಾಜಕುಮಾರ್

।। ಮಾನವನಾಗುವೆಯ ಇಲ್ಲ ಧಾನವನಾಗುವೆಯ
    ನೀ ಮಾನವ ಕುಲಕೆ ಮುಳ್ಳಾಗುವೆಯ ।।೨।।
ಹೇಳೂ, ನೀ ಹೇಳೂ ।೨।

ಎಲ್ಲಾ ಗುಣಗಳು ನಿನ್ನಲೆ ಅಡಗಿ ಕಾಳಗ ಮಾಡುತಿದೆ ।೨।
ಮನ ತುಂಬಿರುವ  ಶಾಂತಿಯ ನುಂಗಿ
ಕುಣಿಯಲು ನೋಡುತಿದೆ
ರೋಷವ ಬಿಡುವೆಯ, ದ್ವೇಷವ ಮರೆವೆಯ ।೨।
ರಕ್ಕಸನ ಬಿಸಿಗಾಳಿಯ ನುಂಗದೆ
ಬದುಕಿ ಎಲ್ಲ ಉಳಿಸುವೆಯ ।೨।

ಮಾನವನಾಗುವೆಯ ಇಲ್ಲ ಧಾನವನಾಗುವೆಯ
ನೀ ಮಾನವ ಕುಲಕೆ ಮುಳ್ಳಾಗುವೆಯ
ಹೇಳೂ, ನೀ ಹೇಳೂ ।೨।

ಧನಕನಕಗಳ ಕೇಳುವುದಿಲ್ಲ ಸ್ನೇಹದ ಹವ್ಯಾಸ ।೨।
ನಿನ್ನಭಿಮಾನವ ಕೆಣಕುವುದಿಲ್ಲ ಪ್ರೇಮದ ಸಂತೋಷ
ಅಂದದಾ ತುಟಿಯಲಿ ಹುಸಿನಗೆ ತೇಲಲಿ ।೨।
ಅಕ್ಕರೆ ನುಡಿಯ ಸಕ್ಕರೆ ರುಚಿಯ
ನೀಡಿ ಎಲ್ಲರ ಗೆಲ್ಲುವೆಯ
ನೀನು ಎಲ್ಲರ ಗೆಲ್ಲುವೆಯ

ಮಾನವನಾಗುವೆಯ ಇಲ್ಲ ಧಾನವನಾಗುವೆಯ
ನೀ ಮಾನವ ಕುಲಕೆ ಮುಳ್ಳಾಗುವೆಯ
ಹೇಳೂ, ನೀ ಹೇಳೂ ।೨।

Song: Maanavanaguveya
Movie: Bahaddur Gandu
Singer/Actor: Dr. Rajkumar

ಬಾಡಿಹೋದ ಬಳ್ಳಿಯಿಂದ

ಚಿತ್ರ: ಎರಡು ಕನಸು
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕ: ಪಿ. ಬಿ. ಶ್ರೀನಿವಾಸ್

ಬಾಡಿಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ ।೨।
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೆ
ಮನಸು ಕಂಡ ಆಸೆಯೆಲ್ಲಾ ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲಿದೆ

ಬಾಡಿಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ

ಹಣತೆಯಲ್ಲಿ ದೀಪ ಉರಿಯೆ, ಬೆಳಕಿನಲ್ಲಿ ಬಾಳುವೆ ।೨।
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ  ।೨।
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೆ
ಮನಸು ಕಂಡ ಆಸೆಯೆಲ್ಲಾ ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲಿದೆ

ಬಾಡಿಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ

ನೀರಿನಲ್ಲಿ ದೋಣಿ ಮುಳುಗಿ ಈಜು ದಡವ ಸೇರುವೆ ।೨।
ಸುಲಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೆ ।೨।
ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರು
ನೆಡೆಸುವಾತ ಬೇರೆ ಅವನ ಇಚ್ಚೆ ಯಾರು ಬಲ್ಲರು

Song: Baadihoda Balliyinda
Movie: Eradu Kanasu
Actor: Dr. Rajkumar
Singer: P. B. Srinivas

ಹುಟ್ಟಿದರೆ ಕನ್ನಡನಾಲ್ಹುಟ್ಟಬೇಕು

ಚಿತ್ರ: ಆಕಸ್ಮಿಕ
ರಚನೆ/ಸಂಗೀತ: ಹಂಸಲೇಖ
ಗಾಯಕ/ನಟ: ಡಾ. ರಾಜಕುಮಾರ್

ಹುಟ್ಟಿದರೆ ಕನ್ನಡನಾಲ್ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕಾ ಬಂಡಿ, ಇದು ವಿದಿಯೋಡಿಸುವಾ ಬಂಡಿ
ಬದುಕಿದು ಜಟಕಾ ಬಂಡಿ, ವಿದಿ ಅಲೆದಾಡಿಸುವಾ ಬಂಡಿ

ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು

ಕಾಶೀಲಿ ಸ್ನಾನ ಮಾಡು, ಕಾಶ್ಮೀರ ಸುತ್ತಿನೋಡು
ಜೋಗನ ಗುಂಡಿ ಒಡೆಯ ನಾನೆಂದು ಕೂಡಿ ಹಾಡು
ಅಜಂತಾ ಎಲ್ಲೋರನ ಬಾಳಲ್ಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚಂದನತೂಕ ಮಾಡು
ಕಲಿಯೋಕ್ಕೆ ಕೋಟಿ ಭಾಷೆ ಆಡೋಕ್ಕೆ ಒಂದೇ ಭಾಷೆ
ಕನ್ನಡ ಕನ್ನಡ, ಕಸ್ತೂರೀ ಕನ್ನಡ

ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕಾ ಬಂಡಿ, ಇದು ವಿದಿಯೋಡಿಸುವಾ ಬಂಡಿ
ಬದುಕಿದು ಜಟಕಾ ಬಂಡಿ, ವಿದಿ ಗುರಿತೋರಿಸುವಾ ಬಂಡಿ

ಧ್ಯಾನಕ್ಕೆ ಭೂಮಿ ಇದು ಪ್ರೇಮಕ್ಕೆ ಸ್ವರ್ಗ ಇದು
ಸ್ನೇಹಕ್ಕೆ ಶಾಲೆ ಇದು ಜ್ಞಾನಕ್ಕೆ ಪೀಠ ಇದು
ಕಾರ್ಯಕ್ಕೆ ಕಲ್ಪ ಇದು ಶಿಲ್ಪಕ್ಕೆ ತಲ್ಪ ಇದು
ನಾಟ್ಯಕ್ಕೆ ನಾಡಿ ಇದು ನಾದಾಂತರಂಗವಿದು
ಕುವೆಂಪು ಬೇಂದ್ರೆ ಇಂದ  ಕಾರಂತ ಮಾಸ್ತಿ ಇಂದ
ಕನ್ನಡಿ ಈ ಕನ್ನಡ ಓ ಸಾಟಿನ ಕನ್ನಡ

ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕಾ ಬಂಡಿ, ಇದು ವಿದಿಯೋಡಿಸುವಾ ಬಂಡಿ
ಬದುಕಿದು ಜಟಕಾ ಬಂಡಿ, ವಿದಿ ದಡಸೇರಿಸುವಾ ಬಂಡಿ

ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ
ಏನೇನೋ ಕಂಡ ಮೇಲು ನಮ್ಮೊರೆ ನಮಗೆ ಮೇಲು
ಕೈಲಾದು ಕಂಡ ನಮಗೆ ಕೈಲಾಸ ಯಾಕೆ ಬೇಕು
ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು
ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ
ಇಲ್ಲಿಯೇ ಇಲ್ಲಿಯೇ ಎಂದಿಗೂ ನಾನಿಲ್ಲಿಯೇ

ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕಾ ಬಂಡಿ, ಇದು ವಿದಿಯೋಡಿಸುವಾ ಬಂಡಿ
ಬದುಕಿದು ಜಟಕಾ ಬಂಡಿ, ವಿದಿ ದಡಸೇರಿಸುವಾ ಬಂಡಿ

Movie: Aakasmika Song: Huttidare Kannada Nadalli Singer/Actor: Dr. Rajkumar

ಆಗದು ಎಂದು ಕೈಕಟ್ಟಿ ಕುಳಿತರೆ

ಚಿತ್ರ: ಬಂಗಾರದ  ಮನುಷ್ಯ
ರಚನೆ: ಆರ್. ಏನ್. ಜಯಗೋಪಾಲ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ: ಪಿ. ಬಿ. ಶ್ರೀನಿವಾಸ್
ನಟ: ಡಾ. ರಾಜಕುಮಾರ್ 

ಆಗದು ಎಂದು, ಕೈಲಾಗದು ಎಂದು ।೨।
ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ 
ಮನಸ್ಸೊಂದ್ದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು
ಕೆಚ್ಚೆದೆ ಇರಬೇಕೆಂದೆಂದು

ಆಗದು ಎಂದು, ಕೈಲಾಗದು ಎಂದು 
ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ

ಕೆತ್ತಲಾಗದು ಕಗ್ಗಲ್ಲೆಂದು ಎದೆ ಗುಂದಿದ್ದರೆ ಶಿಲ್ಪಿ
।। ಕೆತ್ತಲಾಗದು ಕಗ್ಗಲ್ಲೆಂದು ಎದೆ ಗುಂದಿದ್ದರೆ ಶಿಲ್ಪಿ
    ಆಗುತಿತ್ತೇ ಕಲೆಗಳ ಬೀಡು
    ಗೊಮ್ಮಟೇಶನ ನೆಲೆ ನಾಡು
    ಬೇಲೂರು ಹಳೇಬೀಡು ।೨।  ।।೨।।

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ ।೨।

।। ಕಾವೇರಿಯನು ಹರಿಯಲು ಬಿಟ್ಟು
    ವಿಶ್ವೇಶ್ವರಯ್ಯ ಶ್ರಮ ಬಡದಿದ್ದರೆ
    ಕನ್ನಂಬಾಡಿಯ ಕಟ್ಟದಿದ್ದರೆ  ।।೨।।
ಬಂಗಾರ ಬೆಳೆವ ಹೊನ್ನಾಡು ।೨।
ಆಗುತ್ತಿತ್ತೆ ಈ ನಾಡು, ಕನ್ನಡ ಸಿರಿನಾಡು
ನಮ್ಮ ಕನ್ನಡ ಸಿರಿನಾಡು

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ।೨।
ಸಾಗದು ಕೆಲಸವೂ ಮುಂದೆ

।। ಕೈ ಕೆಸರಾದರೆ ಬಾಯಿ ಮೊಸರೆಂಬ
    ಹಿರಿಯರ ಅನುಭವ ಸತ್ಯ
    ಇದ ನೆನಪಿಡಬೇಕು ನಿತ್ಯ ।।೨।।
ದುಡಿಮೆಯ ನಂಬಿ ಬದುಕು ।೨।
ಅದರಲಿ ದೇವರ ಹುಡುಕು
ಬಾಳಲಿ ಬರುವುದು ಬೆಳಕು
ನಮ್ಮ ಬಾಳಲಿ ಬರುವುದು ಬೆಳಕು

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ।೨।
ಸಾಗದು ಕೆಲಸವೂ ಮುಂದೆ
ಮನಸ್ಸೊಂದ್ದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು
ಕೆಚ್ಚೆದೆ ಇರಬೇಕೆಂದೆಂದು

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ ।೨।

Song: Aagadu Endu Kaikatti Kulithare Movie: Bangarada Manushya Actor: Dr. Rajkumar

ನಿನ್ನ ಕಂಗಳ ಬಿಸಿಯ ಹನಿಗಳು

ಚಿತ್ರ: ಬಡವರ ಬಂಧು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ: ಡಾ. ರಾಜಕುಮಾರ್

ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ
ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ

ತಂದೆಯಾಗಿ ತಾಯಿಯಾಗೆ ಮಮತೆಯಿಂದ ಬೆಳೆಸಿದೆ ।೨।
ಬಿಸಿಲು ಮಳೆಗೆ ನರಳದಂತೆ ನಿನ್ನ ನೆರಳಲಿ ಸಲಹಿದೆ
ಆ ಪ್ರೀತಿಯ ಮನ ಮರೆವುದೆ

ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ

ಬಳ್ಳಿಯಂತೆ ತಬ್ಬಿ ನಿನ್ನ ಆಸರೆಯಲಿ ಬೆಳೆದೆನು ।೨।
ನನ್ನ ತಾಯಿಯ ಪಾದದಾಣೆ ಬೇರೆ ಏನನು ಅರಿಯೆನು
ನೀನೆ ನನ್ನ ದೇವನು

ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ

ನೀನು ನಕ್ಕರೆ ನಾನು ನಗುವೇ, ಅತ್ತರೆ ನಾ ಅಳುವೆನು ।೨।
ನಿನ್ನ ಉಸಿರಲಿ ಉಸಿರು ಬೆರೆಸಿದೆ ನಿನ್ನಲೊಂದಾಗಿರುವೆನು 
ನಾ ನಿನ್ನ ಕಾಣದೆ ಬದುಕೆನು 

ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ
ನೂರು ನೆನಪು ಮೂಡಿವೆ

Song: Ninna Kangala Bisiya Hanigalu Movie: Badavara Bandu Singer: Dr. Rajkumar

Video Link

Wednesday, September 14, 2016

ನೀನೆಲ್ಲೋ ನಾನಲ್ಲೇ

ಚಿತ್ರ : ಚಲಿಸುವ ಮೋಡಗಳು
ರಚನೆ : ಚಿ ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯಕರು : ಡಾ. ರಾಜಕುಮಾರ್, ಎಸ್. ಜಾನಕಿ

ಗಂ:  ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ
         ನಾನಿನ್ನ ಕಣ್ಣಾಗಿ, ನೀನಾಡೊ  ನುಡಿಯಾಗಿ
         ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ ನಾ ಇರುವೆ

ಹೆ:    ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ
         ನಾನಿನ್ನ ಕಣ್ಣಾಗಿ, ನೀನಾಡೊ  ನುಡಿಯಾಗಿ
         ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ ನಾ ಇರುವೆ

ಗಂ:  ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ
         ಬಳಿಯಲೆ  ಬಂಗಾರ ಇರುವಾಗ ಅದನೂ ನೋಡದೆ
         ಅಲೆಯುತ ದಿನ ಬಳಲಿದೆ ಕಣ್ಣೀಗ ತೆರೆಯಿತು

ಹೆ:   ಬಯಸಿದ ಸೌಭಾಗ್ಯ ಕೈ ಸೆರೀ ಹರುಷ ಮೂಡಿತು
         ಒಲವಿನ ಲತೆ ಚಿಗುರಿತು ಕನಸಿನ್ನೂ ಮುಗಿಯಿತು

ಗಂ:  ಇನ್ನೆಂದೂ ನಿನ್ನನು ಚೆಲುವೆ ಬಿಡಲಾರೆ ನಾ

ಹೆ:    ಓ.... ಬಾಗಿಲಿಗೆ ಹೊಸಿಲಾಗಿ ತೋರಣದ ಹಸಿರಾಗಿ
         ಪೂಜಿಸುವ ಹಣ್ಣಾಗಿ ಇಂಪಾದ ಹಾಡಾಗಿ
         ಮನಸಾಗಿ ಕನಸಾಗಿ ಬಾಳೆಲ್ಲ ಬೆಳಕಾಗಿ ನಾ ಇರುವೆ

ಗಂ:  ನೀನೆಲ್ಲೋ ನಾನಲ್ಲೇ

ಹೆ:    ಈ ಜೀವ ನಿನ್ನಲ್ಲೇ

         ಬದುಕಿನ ಹಾಡಲ್ಲಿ ಜೊತೆಯಾಗಿ ಶ್ರುತಿಯ ಕೆಡಿಸುವೆ 
         ರಾಗದಿ ಹೊಸ ರಾಗವ ಇಂಪನ್ನೂ ತುಂಬುವೆ 

ಗಂ:  ಹೃದಯದ ಗುಡಿಯಲ್ಲಿ ಓ ನಲ್ಲೇ ನಿನ್ನಾ ಇರಿಸುವೆ 
         ಪ್ರೀತಿಯ ಸುಮದಿಂದಲಿ ಸಿಂಗಾರ ಮಾಡುವೆ 

ಹೆ:    ಆನಂದ ಹೆಚ್ಚಾಗಿ ಕಣ್ಣೀರು ತುಂಬಿದೆ

ಗಂ:  ನಿನ್ನೊಡಲ ಉಸಿರಾಗಿ ನಿನ್ನಾಸೆ ಕಡಲಾಗಿ
         ಚೆಂದುಟಿಯ ನಗೆಯಾಗಿ ಒಲವೆಂಬ ಸಿರಿಯಾಗಿ
         ಜೇನಾಗಿ ಸಿಹಿಯಾಗಿ ಸಂತೋಷ ನಿನಗಾಗಿ ನಾ ತರುವೆ

ಹೆ:    ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ

ಗಂ:  ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ

ಜೊ: ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ

Movie: Chalisuva Modagalu Song: Neenello Naanalle Singers: Dr. Rajkumar, S. Janaki

ಬಾಳು ಬೆಳಕಾಯಿತು

ಚಿತ್ರ : ಹಾಲು ಜೇನು
ರಚನೆ : ಚಿ. ಉದಯಶಂಕರ್
ಸಂಗೀತ : ಜಿ. ಕೆ. ವೆಂಕಟೇಶ್
ಗಾಯಕ/ನಟ : ಡಾ. ರಾಜಕುಮಾರ್

ಬಾಳು ಬೆಳಕಾಯಿತು ।೨।
ಪ್ರೇಮದ ಹೂವೆ ।೨।
ಪ್ರೇಮದ ಹೂವೆ ನಿನ್ನ ಸೇರಿ ಎಂದೂ
ಬಾಳು ಬೆಳಕಾಯಿತು

ಹೂವಲ್ಲಿ ಗಂಧ ಸೇರಿದ ಹಾಗೆ ।೨।
ಬೆರೆಯಲು ಇಂದು ।೨।
ನನ್ನ ನಿನ್ನ ಜೀವ ಚಿನ್ನ
ಒಲವಿನ ಹೂವೆ

ಬಾಳು ಬೆಳಕಾಯಿತು
ಪ್ರೇಮದ ಹೂವೆ ನಿನ್ನ ಸೇರಿ ಎಂದೂ
ಬಾಳು ಬೆಳಕಾಯಿತು

ರಾಗವು ನೀನು, ಭಾವವು ನೀನು ।೨।
ನನ್ನೆದೆ ವೀಣೆ ।೨।
ನುಡಿಸಿ ನಲಿಯೇ ನೀನು ಚೆಲುವೆ
ಒಲವಿನ ಹೂವೆ

ಬಾಳು ಬೆಳಕಾಯಿತು
ಪ್ರೇಮದ ಹೂವೆ ನಿನ್ನ ಸೇರಿ ಎಂದೂ
ಬಾಳು ಬೆಳಕಾಯಿತು

ದೇಹವು ನಾನು ಪ್ರಾಣವು ನೀನು ।೨।
ಅಗಲುವುದುಂಟೆ
ಇನ್ನು ನಿನ್ನ ನಾನು ಹೇಳು
ಒಲವಿನ ಹೂವೆ

ಬಾಳು ಬೆಳಕಾಯಿತು
ಪ್ರೇಮದ ಹೂವೆ ।೨।
ಪ್ರೇಮದ ಹೂವೆ ನಿನ್ನ ಸೇರಿ ಎಂದೂ
ಬಾಳು ಬೆಳಕಾಯಿತು

Movie: Haalu Jenu Song: Baalu Belakaayitu Singer/Actor: Dr. Rajkumar

ಎಂದು ನಿನ್ನ ನೋಡುವೆ

ಚಿತ್ರ : ಎರಡು ಕನಸು
ರಚನೆ : ಚಿ. ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯಕ : ಪಿ. ಬಿ. ಶ್ರೀನಿವಾಸ್
ನಟ : ಡಾ. ರಾಜಕುಮಾರ್

ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ ।೨।
ನಿಜ ಹೇಳಲೇನು, ನನ್ನ ಜೀವ ನೀನು
ನೂರಾರು ಬಯಕೆ, ಆತುರ ತಂದಿದೆ
ನೂರಾರು ಕನಸು, ಕಾತರ ತುಂಬಿದೆ
ಮುಗಿಲಿಗಾಗಿ ಬಾನು, ದುಂಬಿಗಾಗಿ ಜೇನು
ನನಗಾಗಿ ನೀನು, ನಿನಗಾಗಿ ನಾನು ।೨।

ತಣ್ಣನೆ ಗಾಳಿ ಹಿತ ತೋರದಲ್ಲ, ಕೋಗಿಲೆ ಗಾನ ಸುಖ ನೀಡದಲ್ಲ ।೨।
ಕಾಮನ ಬಿಲ್ಲಿಗು ಮನಸ್ಸೊಲಲಿಲ್ಲ, ನಿನ್ನಯ ನೆನಪಲ್ಲೇ ಸೋತೆ ನಾನು
ನನ್ನಾಸೆ ನೀನು ನಿನ್ನಾಸೆ ನಾನು ।೨।

ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ
ನಿಜ ಹೇಳಲೇನು, ನನ್ನ ಜೀವ ನೀನು ।೨।

ಕಂಗಳ ಕಾಂತಿ ನೀನಾಗಿರುವೆ, ಮೈಮನವೆಲ್ಲ ನೀ ತುಂಬಿರುವೆ  ।೨।
ನನ್ನೀ ಬಾಳಿಗೆ ಬೆಳಕಾಗಿರುವೆ, ಜನುಮ ಜನುಮದ ಜೋಡಿ ನೀನು
ನನಗಾಗಿ ನೀನು, ನಿನಗಾಗಿ ನಾನು ।೨।

ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ
ನಿಜ ಹೇಳಲೇನು, ನನ್ನ ಜೀವ ನೀನು
ನೂರಾರು ಬಯಕೆ, ಆತುರ ತಂದಿದೆ
ನೂರಾರು ಕನಸು, ಕಾತರ ತುಂಬಿದೆ
ಮುಗಿಲಿಗಾಗಿ ಬಾನು, ದುಂಬಿಗಾಗಿ ಜೇನು
ನನಗಾಗಿ ನೀನು, ನಿನಗಾಗಿ ನಾನು ।೨।


Movie: Eradu Kanasu Song: Endu Ninna Noduve Actors: Dr. Rajkumar Singer: P B Srinivas

ಬೆಳದಿಂಗಳಾಗಿ ಬಾ

ಚಿತ್ರ : ಹುಲಿಯ ಹಾಲಿನ ಮೇವು
ರಚನೆ : ಗೀತಪ್ರಿಯ 
ಸಂಗೀತ : ಜಿ. ಕೆ. ವೆಂಕಟೇಶ್ 
ಗಾಯಕ/ನಟ : ಡಾ. ರಾಜಕುಮಾರ್ 

ಬೆಳದಿಂಗಳಾಗಿ ಬಾ ।೨।
ತಂಗಾಳಿಯಾಗಿ ನಾನು, ಆನಂದವ ನೀಡುವೇ , ಒಂದಾಗುವೆ
ಬೆಳದಿಂಗಳಾಗಿ ಬಾ, ತಂಗಾಳಿಯಾಗಿ ನಾನು
ಆನಂದವ ನೀಡುವೇ , ಒಂದಾಗುವೆ

ಕಣ್ಣಲ್ಲಿ ತುಂಬಿ ಚೆಲುವ, ಎದೆಯಲ್ಲಿ ತುಂಬಿ ಒಲವ
ಬಾಳಲ್ಲಿ ತುಂಬಿದೆ ಉಲ್ಲಾಸವಾ
ನನ್ನೆದೆಯ ತಾಳ ನೀನು, ನನ್ನುಸಿರ ರಾಗ ನೀನು
ನನ್ನೊಡಲ ಜೀವ ನೀ, ಸಂತೋಷವೇ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ ।೨।

ಬೆಳದಿಂಗಳಾಗಿ ಬಾ, ತಂಗಾಳಿಯಾಗಿ ನಾನು
ಆನಂದವ ನೀಡುವೇ , ಒಂದಾಗುವೆ
ಬೆಳದಿಂಗಳಾಗಿ ಬಾ

ಆ......

ಕಾವೇರಿ ತಾಯಿ ನನ್ನ, ಬಾ ಎಂದು ಕೂಗಿ ನಿನ್ನ
ನೀಡಿದಳು ಬಾಳಿಗೆ, ಬೆಳಕಾಗಲೂ
ಆ ದೇವಿ ಆಣೆ ನೀನೆ, ಸಂಗಾತಿ ಕೇಳೆ ಜಾಣೆ
ನೀಡುವೆನು ಭಾಷೆಯ ಬಿಡು ಚಿಂತೆಯ
ಈ ನಮ್ಮ ಪ್ರೇಮಕೆ, ನಾ ಕೊಡಲೆ ಕಾಣಿಕೆ ।೨।

ಬೆಳದಿಂಗಳಾಗಿ ಬಾ, ತಂಗಾಳಿಯಾಗಿ ನಾನು
ಆನಂದವ ನೀಡುವೇ , ಒಂದಾಗುವೆ
ಬೆಳದಿಂಗಳಾಗಿ ಬಾ

Movie: Huliya Haalina Mevu Song: Beladingalaagi Baa Singer/Actor: Dr. Rajkumar

ಬಾನಿಗೊಂದು ಎಲ್ಲೆ ಎಲ್ಲಿದೆ

ಚಿತ್ರ : ಪ್ರೇಮದ ಕಾಣಿಕೆ
ರಚನೆ : ಚಿ. ಉದಯಶಂಕರ್ 
ಸಂಗೀತ : ಉಪೇಂದ್ರ ಕುಮಾರ್ 
ಗಾಯಕ/ನಟ : ಡಾ. ರಾಜಕುಮಾರ್ 

ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ 
ಏಕೇ ಕನಸು ಕಾಣುವೆ, ನಿಧಾನಿಸು ನಿಧಾನಿಸು 

ಆಸೆಯಂಬ ಬಿಸಿಲುಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನಸಿದಂತೆ ಬಾಳಲೇನು ನೆಡೆಯದು
ವಿಷಾದವಾಗಲಿ ವಿನೋದವಾಗಲಿ
ಅದೇನೆ ಆಗಲಿ ಅವನೆ ಕಾರಣ

ಬಾನಿಗೊಂದು ಎಲ್ಲೆ ಎಲ್ಲಿದೆ


ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು 
ಬಯಸಿದಾಗ ಕಾಣದಿರುವ ಎರಡು ಮುಖಗಳು 
ಹರುಷ ಒಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ ನಿರಾಸೆ ಏತಕೆ
ಅದೇನೆ ಬಂದರು ಅವನ ಕಾಣಿಕೆ

ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೇ ಕನಸು ಕಾಣುವೆ, ನಿಧಾನಿಸು ನಿಧಾನಿಸು
ನಿಧಾನಿಸು ನಿಧಾನಿಸು, ನಿಧಾನಿಸು ನಿಧಾನಿಸು

Movie: Premada Kanike Song: Baanigondu elle ellide Singer/Actor: Dr. Rajkumar

ಏನೆಂದು ನಾ ಹೇಳಲೀ

ಚಿತ್ರ: ಗಿರಿಕನ್ಯೆ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯಕ/ನಟ: ಡಾ. ರಾಜಕುಮಾರ್

ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ, ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ, ಏನೊಂದೂ ಬಾಳಿಸನು ಜಗದಲ್ಲಿ ।೨।
ಏನೆಂದು ನಾ ಹೇಳಲೀ, ಅ.. ಅ .. ಅ.. ಮಾನವನಾಸೆಗೆ ಕೊನೆಯಲ್ಲಿ

ಜೇನುಗಳೆಲ್ಲ ಅಲೆಯುತ ಹಾರಿ, ಕಾಡೆಲ್ಲಾ ಕಾಡೆಲ್ಲಾ ಕಾಡೆಲ್ಲಾ
ಹನಿ ಹನಿ ಜೇನು ಸೇರಿಸಲೇನು ಬೇಕು ಎಂದಾಗ ತನದೆನ್ನುವ
ಕೆಸರಿನ ಹೂವು ವಿಷಾದ ಹಾವು, ಭಯವಿಲ್ಲ ಭಯವಿಲ್ಲ ಭಯವಿಲ್ಲ
ಚೆಲುವಿನದೆಲ್ಲಾ, ರುಚಿಸುವುದೆಲ್ಲಾ ಕಂಡು ಬಂದಾಗ  ಬೇಕೆನ್ನುವಾ

ಏನೆಂದು ನಾ ಹೇಳಲೀ, ಅ.. ಅ .. ಅ.. ಮಾನವನಾಸೆಗೆ ಕೊನೆಯಲ್ಲಿ

ಪ್ರಾಣಿಗಳೇನು ಗಿಡಮರವೇನು, ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲಾ, ಉಳಿಸುವುದಿಲ್ಲಾ ತನ್ನ ಹಿತಕಾಗೆ ಹೋರಾಡುವ
ನುಡಿಯುವುದೊಂದು ನೆಡೆಯುವುದೊಂದು, ಎಂದೆಂದು ಎಂದೆಂದು ಎಂದೆಂದು
ಪಡೆಯುವುದೊಂದು ಕೊಡುವುದು ಒಂದು, ಸ್ವಾರ್ಥಿ ತಾನಾಗೆ ಮೆರೆದಾಡುವ

ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ, ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ, ಏನೊಂದೂ ಬಾಳಿಸನು ಜಗದಲ್ಲಿ ।೨।
ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ, ಕೊನೆಯಲ್ಲಿ....

Movie: Girikanye Song: Enendu Naa Helali Singer / Actor: Dr. Rajkumar

ಯಾರೇ ಕೂಗಾಡಲಿ, ಊರೇ ಹೋರಾಡಲಿ

ಚಿತ್ರ                : ಸಂಪತ್ತಿಗೆ ಸವಾಲ್
ರಚನೆ              : ಚಿ ಉದಯಶಂಕರ್
ಸಂಗೀತ           : ಜಿ. ಕೆ. ವೆಂಕಟೇಶ್
ಗಾಯಕ/ನಟ     : ಡಾ. ರಾಜಕುಮಾರ್

ಯಾರೇ ಕೂಗಾಡಲಿ, ಊರೇ  ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ, ಎಮ್ಮೆ ನಿನಗೆ ಸಾಟಿಯಿಲ್ಲ 
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ, ಅಳುಕದೆ ಮುಂದೇ ಸಾಗುವೆ
ಅರೆ ವೈ ಅರೆ ವೈ ಅರೆ ವೈ ಟುರ್ರ್ ಬ್ಯಾ!

ಗುಣದಲ್ಲಿ ನೀ ಉಪಕಾರಿ ಮಾನವಗೆ ನೀ ಸಹಕಾರಿ ।೨।
ಕಸವನ್ನೇ ತಿಂದರು ಕೊನೆಗೆ, ಹಾಲನ್ನೇ ನೀಡುವೆ ನಮಗೆ 
ಹಾಲನ್ನು ಕುಡಿದಾ ಜನರು, ವಿಷವನ್ನೇ ಕಕ್ಕುತಲಿಹರು ।೨।
ಸದಾ ರೋಷ, ಸದಾ ದ್ವೇಷ, ಅದಕ್ಕೇ ಈಗಿದೆ ಈ ದೇಶ 

ಯಾರೇ ಕೂಗಾಡಲಿ, ಊರೇ  ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ, ಎಮ್ಮೆ ನಿನಗೆ ಸಾಟಿಯಿಲ್ಲ 
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ, ಅಳುಕದೆ ಮುಂದೇ ಸಾಗುವೆ
ಅರೆ ವೈ ಅರೆ ವೈ ಅರೆ ವೈ ಟುರ್ರ್ ಬ್ಯಾ!

ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು ।೨।
ಉಪಕಾರವ ಮಾಡಲಾರ, ಬದುಕಿದರೆ ಸಹ್ಹಿಸಲಾರ
ಸತ್ಯಕ್ಕೆ ಗೌರವವಿಲ್ಲ, ವಂಚನೆಗೆ ಪೂಜ್ಯತೆ ಎಲ್ಲ ।೨।
ಇದೇ ನೀತಿ ಇದೇ ರೀತಿ, ಇನ್ನೆಲ್ಲಿ ಗುರು ಹಿರಿಯರ ಭೀತಿ 

ಯಾರೇ ಕೂಗಾಡಲಿ, ಊರೇ  ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ, ಎಮ್ಮೆ ನಿನಗೆ ಸಾಟಿಯಿಲ್ಲ 
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ, ಅಳುಕದೆ ಮುಂದೇ ಸಾಗುವೆ
ಅರೆ ವೈ ಅರೆ ವೈ ಅರೆ ವೈ ಟುರ್ರ್ ಬ್ಯಾ!

Movie: Sampattige Savaal Song: Yaare Koogadali Singer / Actor: Dr. Rajkumar

Tuesday, September 13, 2016

ನಗುನಗುತಾ ನಲಿ ನಲಿ

ಚಿತ್ರ          : ಬಂಗಾರದ ಮನುಷ್ಯ
ಗಾಯಕ     : ಪಿ. ಬಿ. ಶ್ರೀನಿವಾಸ್
ನಟ           : ಡಾ. ರಾಜಕುಮಾರ್

ನಗುನಗುತಾ ನಲಿ ನಲಿ, ಎಲ್ಲಾ ದೇವನ ಕಲೆ ಎಂದೇ ನೀ ತಿಳಿ, ಅದರಿಂದಾ ನೀ ಕಲಿ
ನಗುನಗುತಾ ನಲಿ ನಲಿ. ಏನೇ ಆಗಲಿ

ಜಗವಿದು ಜಾಣ ಚೆಲುವಿನ ತಾಣ
ಎಲ್ಲೆಲ್ಲೂ ರಸದೌತಣ ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ, ಹೂಗಳು ಬಿರಿದಾಗ

ನಗುನಗುತಾ ನಲಿ ನಲಿ. ಏನೇ ಆಗಲಿ

ತಾಯಿ ಓಡಲಿನ ಕುಡಿಯಾಗಿ ಜೀವನ ।೨।
ಮೂಡಿ ಬಂದು ಚೇತನ, ಕಾಣಲೆಂದು ಅನುದಿನ ।೨।
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ

ನಗುನಗುತಾ ನಲಿ ನಲಿ. ಏನೇ ಆಗಲಿ

ಗೆಳೆಯರ ಜೊತೆಯಲಿ ಕುಣಿಕುಣಿದು, ಬೆಳೆಯುವ ಸೊಗಸಿನ ಕಾಲವಿದು ।೨।
ಮುಂದೇ ಯವ್ವನ, ಮದುವೇ ಬಂಧನ .....
ಎಲ್ಲೆಲ್ಲೂ ಹೊಸ ಜೀವನ.. ಅಹ, ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ ।೨।
ಮೈಮನ ಬೆರೆತಾಗ

ನಗುನಗುತಾ ನಲಿ ನಲಿ. ಏನೇ ಆಗಲಿ

ಏರುಪೇರಿನ ಗತಿಯಲ್ಲಿ ಜೀವನ ।೨।
ಸಾಗಿಮಾಗಿ ಹಿರಿತನ, ತಂದಿತಯ್ಯ ಮುದಿತನ ।೨।
ಅದರೊಳು ಹೊಸದಾದ, ಹುಸಿಯಿದೆ ಸವಿನೋದ

ನಗುನಗುತಾ ನಲಿ ನಲಿ. ಏನೇ ಆಗಲಿ

Movie: Bangarada Manushya Song: Nagunagutha Nali Nali Actor: Dr. Rajkumar Singer: P B Srinivas

ಜೇನಿನ ಹೊಳೆಯೊ ಹಾಲಿನ ಮಳೆಯೊ

ಚಿತ್ರ                   : ಚಲಿಸುವ ಮೋಡಗಳು
ರಚನೆ               : ಚಿ.ಉದಯಶಂಕರ್
ಸಂಗೀತ            : ರಾಜನ್ ನಾಗೇಂದ್ರ
ಗಾಯಕ / ನಟ     : ಡಾ. ರಾಜಕುಮಾರ್ 

ಜೇನಿನ ಹೊಳೆಯೊ ಹಾಲಿನ ಮಳೆಯೊ, ಸುಧಯೋ ಕನ್ನಡ ಸವಿನುಡಿಯೊ 
ವಾಣಿಯ ವೀಣೆಯ ಸ್ವರಮಾದುರ್ಯದ ಸುಮಧುರ ಸುಂದರ ನುಡಿಯೋ... ಅ ಆ ಅ ಆ... 
ಜೇನಿನ ಹೊಳೆಯೊ ಹಾಲಿನ ಮಳೆಯೊ, ಸುಧಯೋ ಕನ್ನಡ ಸವಿನುಡಿಯೊ 

ಕವಿನುಡಿ ಕೋಗಿಲೆ ಹಾಡಿದ ಹಾಗೆ, ಕವಿನುಡಿ ತಣ್ಣನೆ ಗಾಳಿಯ ಹಾಗೆ ।೨।
ಒಲವಿನ ಮಾತುಗಳಾಡುತಲಿರಲು, ಮಲ್ಲಿಗೆ ಹೂಗಳು ಅರಳಿದ ಹಾಗೆ
ಮಕ್ಕಳ ನುಡಿಗಳು ಸಕ್ಕರೆಯಂತೆ, ಅಕ್ಕರೆ ನುಡಿಗಳು ಮುತ್ತುಗಳಂತೆ 
ಪ್ರೀತಿಯ ನೀತಿಯ ಮಾತುಗಳೆಲ್ಲ ಸುಮಧುರ ಸುಂದರ ನುಡಿಯೋ .. ಅ ಆ ಅ ಆ...

ಜೇನಿನ ಹೊಳೆಯೊ ಹಾಲಿನ ಮಳೆಯೊ, ಸುಧಯೋ ಕನ್ನಡ ಸವಿನುಡಿಯೊ 

ಕುಮಾರವ್ಯಾಸನ ಕಾವ್ಯದ ಚಂದ, ಕವಿ ಸರ್ವಜ್ಞನ ಪದಗಳ ಅಂದ ।೨।
ದಾಸರು ಶರಣರು ನಾಡಿಗೆ ನೀಡಿದ, ಭಕ್ತಿಯ ಗೀತೆಗಳ ಪರಮಾನಂದ
ರನ್ನನು ರಚಿಸಿದ ಹೊನ್ನಿನ ನುಡಿಯು,  ಪಂಪನು ಹಾಡಿದ ಚಿನ್ನದ ನುಡಿಯು 
ಕನ್ನಡ ತಾಯಿಯು ನೀಡಿದ ವರವು, ಸುಮಧುರ ಸುಂದರ ನುಡಿಯೋ .. ಅ ಆ ಅ ಆ...

ಜೇನಿನ ಹೊಳೆಯೊ ಹಾಲಿನ ಮಳೆಯೊ, ಸುಧಯೋ ಕನ್ನಡ ಸವಿನುಡಿಯೊ 
ವಾಣಿಯ ವೀಣೆಯ ಸ್ವರಮಾದುರ್ಯದ ಸುಮಧುರ ಸುಂದರ ನುಡಿಯೋ... ಅ ಆ ಅ ಆ... 
ಜೇನಿನ ಹೊಳೆಯೊ ಹಾಲಿನ ಮಳೆಯೊ, ಸುಧಯೋ ಕನ್ನಡ ಸವಿನುಡಿಯೊ

Movie: Chalisuva Modagalu Song: Jenina Holeyo Haalina Maleyo Singer / Actor: Dr. Rajkumar

ಆಡಿಸಿ ನೋಡು ಬೀಳಿಸಿ ನೋಡು

ಚಿತ್ರ               : ಕಸ್ತೂರಿ ನಿವಾಸ
ಗಾಯಕರು        : ಪಿ.ಬಿ. ಶ್ರೀನಿವಾಸ್
ನಟರು             : ಡಾ ರಾಜಕುಮಾರ್

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು, ಹೀಗೆ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

ಗುಡಿಸಲೇ ಆಗಲಿ, ಅರಮನೆ ಆಗಲಿ, ಆಟ ನಿಲ್ಲದು
ಹಿರಿಯರೇ ಇರಲಿ, ಕಿರಿಯರೆ ಬರಲಿ, ಭೇದ ತೋರದು
ಗುಡಿಸಲೇ ಆಗಲಿ, ಅರಮನೆ ಆಗಲಿ, ಆಟ ನಿಲ್ಲದು
ಹಿರಿಯರೇ ಇರಲಿ, ಕಿರಿಯರೆ ಬರಲಿ, ಭೇದ ತೋರದು
ಕಷ್ಟವೋ ಸುಖವೋ ಅಳುಕದೆ ಆಡಿ, ತೂಗುತಿರುವುದು,ತೂಗುತಿರುವುದು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ
ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ
ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ, ಕೊನೆಯಾಗುವುದೇ

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು, ಹೀಗೆ ನಗುತಲಿರುವುದು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

Movie: Kasturi Nivasa Song: Aadisi Nodu Beelisi Nodu Actor: Dr. Rajkumar Singer: P B Srinivas