Saturday, October 29, 2016

ಜನುಮ ಜೋಡಿಯಾದರು

ಚಿತ್ರ: ಜನುಮದ ಜೋಡಿ 
ರಚನೆ: ವಿ. ಮನೋಹರ್ 
ಸಂಗೀತ:  ವಿ. ಮನೋಹರ್ 
ಗಾಯಕ: ಡಾ. ರಾಜಕುಮಾರ್ 

ಜನುಮ ಜೋಡಿಯಾದರು ಏಕೆ ಅಂತರ 
ಜೀವ ಜೀವ ನಡುವಲಿ ಏಕೆ ಕಂದರ 
ಮಧುರ ಗೀತೆ ಕೂಡ ಹೀಗೇಕೆ ಘೋರ 
ಜನುಮ ಜೋಡಿಯಾದರು ಏಕೆ ಅಂತರ 

ಜೀವ ಜೀವ ನಡುವಲಿ ಏಕೆ ಕಂದರ 

ಕಡಲೀನ ಒಡಲು ಮುಗಿಲೀನ ಸಿಡಿಲು, ಮಳೆ ಮಿಂಚು ಸೆಳೆದ ಬಾಳೆಲ್ಲವು 
ಎಲೆ ಮೇಲೆ ಹನಿಯು ಮುತ್ತಂತ ಮಣಿಯು, ಬಿರುಗಾಳಿ ಬೀಸಿ ಸುಳಿ ಆದವು 
ನೆರೆ ಬಂದು ಸೆರೆಯಾಯಿತು ಎದೆ ಆಳದಿ 
ಕಣ್ಣೀರೆ ಮಾತಾಯಿತು ಮನದಾಳದಿ 
ಹೊರಗೆ ನಗೆಯ ಲೀಲೆ, ಒಳಗೆ ಜ್ವಾಲೆ 

ಜನುಮ ಜೋಡಿಯಾದರು ಏಕೆ ಅಂತರ 

ಜೀವ ಜೀವ ನಡುವಲಿ ಏಕೆ ಕಂದರ 

ಕನಸೆಲ್ಲ ಬೆಂದು ಬರಿದಾಗೊ ಬದಲು, ನನಸಾಗೊ ವೇಳೆ ಬರಬಾರದೆ 
ಈ ಜೀವವೆರಡು ಒಂದೊಂದು ತೀರ, ದಡಕೋರೊ ದೋಣಿ ಸಿಗಬಾರದೆ 
ಶುಭದಾಶೆ ಗುಣವೇ ವರವಾಗು ಬಾ
ಅಂಗಯ್ಯ ಗೆರೆಯೆ ಬದಲಾಗಿ ಬಾ 
ಕರಗಲೀಗ ಮೇಘ, ಕರಿಮುಗಿಲು ದೂರ 

ಜನುಮ ಜೋಡಿಯಾದರು ಏಕೆ ಅಂತರ 


ಜೀವ ಜೀವ ನಡುವಲಿ ಏಕೆ ಕಂದರ 
ಮಧುರ ಗೀತೆ ಕೂಡ ಹೀಗೇಕೆ ಘೋರ 

Song: Januma Jodiyadaru
Movie: Janumada Jodi

ದೇಹವೆಂದರೆ ಓ ಮನುಜ

ಚಿತ್ರ: ಜನುಮದ ಜೋಡಿ 
ರಚನೆ: ವಿ. ಮನೋಹರ್ 
ಸಂಗೀತ:  ವಿ. ಮನೋಹರ್ 
ಗಾಯಕ: ಡಾ. ರಾಜಕುಮಾರ್ 

ಹೇ.... ಓ....  ದೇಹವೆಂದರೆ ಓ ಮನುಜ, ಮೂಳೆ ಮಾಂಸಗಳ ತಡಿಕೆ ನಿಜ 
ಮನಸು ಆಸೆ ತುಂಬಿದ ಕಣಜ, ಮೋಹದಿಂದ ದುಃಖವು ಸಹಜ 
ನಶ್ವರ ಕಾಯ ನಂಬದಿರಯ್ಯ, ಈಶ್ವರನೇ ಗತಿ ಮರೆಯದಿರಯ್ಯ 
ತ್ಯಾಗದೆ ಪಡೆಯೋ ಸುಖವು ಶಾಶ್ವತ 

ದೇಹವೆಂದರೆ ಓ ಮನುಜ, ಮೂಳೆ ಮಾಂಸಗಳ ತಡಿಕೆ ನಿಜ 
ಮನಸು ಆಸೆ ತುಂಬಿದ ಕಣಜ, ಮೋಹದಿಂದ ದುಃಖವು ಸಹಜ

ಕಟ್ಟಿರುವ ಗುಡಿಯಲ್ಲಿ, ಉಟ್ಟಿರುವ ಮಡಿಯಲ್ಲಿ 
ಸುಟ್ಟ ದೂಪ ದೀಪದಿ ಶಿವನಿಲ್ಲಾ 
ಬಗೆಬಗೆ ಮಂತ್ರದಲ್ಲಿ, ಯಾಗ ಯಜ್ಞಗಳಲ್ಲಿ 
ಜಪ ತಪ ವ್ರತದಲ್ಲಿ ಅವನಿಲ್ಲಾ 
ಮಣ್ಣ ಕಣಕಣದಲ್ಲೂ, ಜೀವ ಜೀವಗಳಲ್ಲೂ 
ಒಳಗಿನ ಕಣ್ಣಿಗೆ ಕಾಣುವಾತನು 

ದೇಹವೆಂದರೆ ಓ ಮನುಜ, ಮೂಳೆ ಮಾಂಸಗಳ ತಡಿಕೆ ನಿಜ 
ಮನಸು ಆಸೆ ತುಂಬಿದ ಕಣಜ, ಮೋಹದಿಂದ ದುಃಖವು ಸಹಜ

ಮೇಲು ಕೀಳಿನ ನೆಡತೆ, ಹಾದಿ ತಪ್ಪಿದ ಜಡತೆ 
ಕುಲ ವ್ಯಾಕುಲಗಳು ಸಾರಿಯೇನೂ 
ರೋಷ ದ್ವೇಷದ ಉರಿಯು, ಲೋಭ ಮೋಸದ ಪರಿಯು 
ಸಾಗುವ ದಾರಿಗೆ ಬೆಳಕೇನೂ 
ಅನ್ಯರ ಗುಣದಿ, ಸಮ್ಮತಿ ಹುಡುಕು 
ಸತ್ಯದ ಪಥವೇ ಬೆಳ್ಳಿ ಬೆಳಕು 

ಕರುಣೆ ಪ್ರೇಮವೇ ಉಲ್ಲಾಸ, ನಿತ್ಯ ಕಾಯಕವೆ ಕೈಲಾಸ 
ಚಿತ್ತ ನಿರ್ಮಲದಿ ಸಂತೋಷ, ಪ್ರೀತಿ ಮಾರ್ಗವೇ ಭವ ನಾಶ 
ವ್ಯಭೋಗ ಜೀವನಾ, ತ್ಯಾಗವ ಮಾಡಿ 
ವ್ಯರಾಗ್ಯ ಯೋಗದಾ, ಸಾಧನೆ ಮಾಡಿ 
ಕೈವಲ್ಯ ಹೊಂದುವಾ, ಪರಮ ಸಂಪದ 

ಕರುಣೆ ಪ್ರೇಮವೇ ಉಲ್ಲಾಸ, ನಿತ್ಯ ಕಾಯಕವೆ ಕೈಲಾಸ 
ಚಿತ್ತ ನಿರ್ಮಲದಿ ಸಂತೋಷ, ಪ್ರೀತಿ ಮಾರ್ಗವೇ ಭವ ನಾಶ 

Song: Dehavendare O Manuja
Movie: Janumada Jodi

Friday, October 28, 2016

ನಂಬಿ ಕೆಟ್ಟವರಿಲ್ಲವೊ

ಚಿತ್ರ: ಒಡಹುಟ್ಟಿದವರು
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ. ರಾಜಕುಮಾರ್

ನಂಬಿ ಕೆಟ್ಟವರಿಲ್ಲವೋ ತಮ್ಮಯ್ಯ ನೀ ಕೇಳೂ, ನಂಬಿ ಕೆಟ್ಟವರಿಲ್ಲವೋ
ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು ಎಂದೆಂದೂ, ನಂಬಿ ಕೆಟ್ಟವರಿಲ್ಲವೋ
ಮಣ್ಣಿಂದ ಬಂದ ನಾವು ಮಣ್ಣಲ್ಲೇ ಇರಬೇಕು ।೨।
ಮಣ್ಣಾ ಸೆರೋ ತನಕ ಮಣ್ಣೀನ ಮಗನಾಗು 
ನಂಬಿ ಕೆಟ್ಟವರಿಲ್ಲ, ನಂಬಿ ಕೆಟ್ಟವರಿಲ್ಲವೋ ತಮ್ಮಯ್ಯ ನೀ ಕೇಳೂ, ನಂಬಿ ಕೆಟ್ಟವರಿಲ್ಲವೋ

ಮಣ್ಣಿಂದಲೇ ಅನ್ನ, ಮಣ್ಣಿಂದಲೇ ಚಿನ್ನ 
ಮಣ್ಣಿಂದಲೇ ತಾಣ, ಮಣ್ಣಿಂದಲೇ ಪ್ರಾಣ 
ಮಣ್ಣಿಂದಲೇ ಈ ಲೋಕವು ಬಲು ಚೆನ್ನ 
ಮಣ್ಣೆ ಕೊಡುವುದು ಹಸಿರನು, ಆ ಹಸಿರೆ ಕೊಡುವುದು ಉಸಿರನು 
ಮಣ್ಣೆ ಕೊಡುವುದು ಬದುಕನು, ಆ ಬದುಕೆ ಕೊಡುವುದು ಬೆಳಕನು 
ಮಣ್ಣಿಂದಲೆ ಗಿರಿಯು ಸಾಸಿರ ।೨।
ಮಣ್ಣಿಂದಲೆ ಗುಡಿಯು ಗೋಪುರ 

ನಂಬಿ ಕೆಟ್ಟವರಿಲ್ಲ, ನಂಬಿ ಕೆಟ್ಟವರಿಲ್ಲವೋ ತಮ್ಮಯ್ಯ ನೀ ಕೇಳೂ, ನಂಬಿ ಕೆಟ್ಟವರಿಲ್ಲವೋ

ಮುಂಗಾರು ಮಳೆ ಚಂದ, ತಂಗಾಳಿ ಇನ್ನೂ ಚಂದ 
ಭೂತಾಯಿ ನಗು ಚಂದ, ಹಾಲಕ್ಕಿ ನುಡಿ ಚಂದ 
ಸುಗ್ಗಿ ಕಾಲ ಚಂದ, ಹಿಗ್ಗಿ ಕುಣಿವುದು ಇನ್ನೂ ಚಂದ 
ಬೇರೆ ಕೆಲಸವು ಏತಕೆ, ಆ ಚಿಂತೆ ಬಿಡು ಇನ್ನೇತಕೆ 
ಮಣ್ಣ ಮೇಲಿಡು ನಂಬಿಕೆ, ನೀ ನಂಬಿದೋಡೆಯಲ್ಲಂಜಿಕೆ 
ನೇಗಿಲನ್ನು ಹಿಡಿಯುವಾತ ।೨।
ದೇಶಕೆಲ್ಲ ಅನ್ನದಾತ 

ನಂಬಿ ಕೆಟ್ಟವರಿಲ್ಲ, ನಂಬಿ ಕೆಟ್ಟವರಿಲ್ಲವೋ ತಮ್ಮಯ್ಯ ನೀ ಕೇಳೂ, ನಂಬಿ ಕೆಟ್ಟವರಿಲ್ಲವೋ
ಮಣ್ಣಿಂದ ಬಂದ ನಾವು ಮಣ್ಣಲ್ಲೇ ಇರಬೇಕು
ಮಣ್ಣಾ ಸೆರೋ ತನಕ ಮಣ್ಣೀನ ಮಗನಾಗು 
ನಂಬಿ ಕೆಟ್ಟವರಿಲ್ಲ, ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು ಎಂದೆಂದೂನಂಬಿ ಕೆಟ್ಟವರಿಲ್ಲವೋ

Song: Nambi Kettavarillavo
Movie: Odahuttidavaru

ಮಾಣಿಕ್ಯವೀಣಾ

ಚಿತ್ರ: ಕವಿರತ್ನ ಕಾಳಿದಾಸ
ರಚನೆ: ಶ್ಯಾಮಲ ದಂಡಕಂ  
ಸಂಗೀತ: ಎಂ. ರಂಗರಾವ್ 
ಗಾಯಕರು: ಡಾ. ರಾಜಕುಮಾರ್ 

ಮಾಣಿಕ್ಯವೀಣಾ ಮುಪಲಾಲಯಂತೀಂ ಮದಾಲಸಾಂ ಮಂಜುಲವಾಗ್ವಿಲಾಸಾಂ ।೨।
ಮಾಹೇಂದ್ರ ನೀಲದ್ಯುತಿ ಕೋಮಲಾಂಗಿಂ ।೨।
ಮಾತಂಗ ಕನ್ಯಾಂ ಮನಸಾಸ್ಮರಾಮಿ, ಮನಸಾಸ್ಮರಾಮಿ

ಚತುರ್ಭುಜೆ ಚಂದ್ರಕಳಾವಾತಂಸೆ ಕುಚೋರ್ಣತೆ ಕುಂಕುಮ ರಾಗಶೋಣೇ ।೨।
ಪುಂಡರೇಕ್ಷುಪಾಶಾಂಕುಶ ಪುಷ್ಪ ಬಾಣ ಹಸ್ತೇ ನಮಸ್ತೇ ಜಗದೇಕ ಮಾತಹಾ 

ಮಾತಾ ಮರಕತಶ್ಯಾಮ, ಮಾತಂಗಿ ಮಧುಶಾಲಿನೀ ।೨।
ಹುರ್ರ್ಯಾತ್ಕಟಾಕ್ಷಮ್ ಕಲ್ಯಾಣೀ ಕದಂಬವನ ವಾಸಿನಿ 
ಮಾತಾ ಮರಕತಶ್ಯಾಮ, ಮಾತಂಗಿ ಮಧುಶಾಲಿನೀ
ಹುರ್ರ್ಯಾತ್ಕಟಾಕ್ಷಮ್ ಕಲ್ಯಾಣೀ ಕದಂಬವನ ವಾಸಿನನೀ
ಜಯ ಮಾತಂಗ ತನಯೇ, ಜಯ ನೀಲೋತ್ಪಲಜ್ಜುತೇ
ಜಯ ಸಂಗೀತ ರಸಿಕೇ, ಜಯ ಲೀಲಾಶುಖಪ್ರಿಯೇ 

ಸುಧಾಸಮುದ್ರಂತ ಹೃದ್ಯನ್ಮಣಿಗ್ರೀವ ಸಂರೋಡವಿಲ್ವಾಟವೀಮಧ್ಯ ಕಲ್ಪಧೃಮಾಕಲ್ಪ 
ಕಾದಂಬ ಕಾಂತಾರ ವಾಸಪ್ರಿಯೇ, ಕೃತ್ತಿ ವಾಸಪ್ರಿಯೇ, ಸರ್ವಲೋಕ ಪ್ರಿಯೇ 
ವಲ್ಲಕೀವಾದನ ಪ್ರಕ್ರಿಯಾಲೋಲ ತಾಲೀಲಲಾಬಧ್ಧ ತಾಟಂಕ ಭೂಷ ವಿಶೇಷಾನ್ವಿತೆ 
ಸಿದ್ದ ಸಮ್ಮಾನಿತೇ 

ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯು ಅಗ್ನಿ 
ಕೋಟೀರ ಮಾಣಿಕ್ಯ ಸಂಕ್ರುಷ್ಟ ಬಾಲತಪೋಧಾಮಲಾಕ್ಷಾರ ಸಾರುಣ್ಯ 
ಲಕ್ಷ್ಮೀ ಗ್ರಿಹೀತಾಂತ್ರಿ ಪದ್ಮದ್ವಯೇ ಅದ್ವಯೇ 
ಪುರುಚಿನನವರತ್ನ ಪೀಠಸ್ಥಿತೆ, ಸುಸ್ಥಿತೇ 
ಶಂಖ ಪದ್ಮದ್ವಯೋಪಾಶ್ರಿತೆ, ಆಶ್ರಿತೇ 
ದೇವಿ ದುರ್ಗಾವಟುಕ್ಷೇತ್ರ ಪಾಲೈರುತೆ 
ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ 

ಸರ್ವ ಯಂತ್ರಾತ್ಮಿಕೆ ಸರ್ವ ಮಂತ್ರಾತ್ಮಿಕೆ
ಸರ್ವ ತಂತ್ರಾತ್ಮಿಕೆ ಸರ್ವ ಮುದ್ಧ್ರಾತ್ಮಿಕೆ 
ಸರ್ವ ಶಕ್ತ್ಯಾತ್ಮಿಕೆ ಸರ್ವ ವರ್ಣಾತ್ಮಿಕೆ  
ಸರ್ವ ರೂಪೇ ಜಗನ್ಮಾತೃಕೇ, ಹೇ ಜಗನ್ಮಾತೃಕೇ
ಪಾಹಿಮಾಂ ।೩।
ಪಾಹೀ  


***** ತಪ್ಪುಗಳಿದ್ದಲ್ಲಿ, ದಯವಿಟ್ಟು ಕ್ಷಮಿಸಿ*****

Song: Maanikyaveena
Movie: Kaviratna Kalidasa

Thursday, October 27, 2016

ಬಿಸಿ ಬಿಸಿ ಕಜಾಯ

ಚಿತ್ರ:  ಹಾವಿನ ಹೆಡೆ
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ. ರಾಜಕುಮಾರ್

।।  ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು
     ಹಿಂದೆ ಎಂದು ತಿಂದು ಇಲ್ಲ,  ಮುಂದೆ ಎಂದು ಸಿಗೋದಿಲ್ಲ
     ಜನುಮ ಜನುಮದಲು ನೆನಪಲಿ ಉಳಿಯುವ ।।೨।।
ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು

ಸುಮ್ಮನೆ ಏತಕೆ ನನ್ನನು ಕೆಣಕುವೇ, ಅ ಅ ಆ 
ಸುಮ್ಮನೆ ಏತಕೆ ನನ್ನನು ಕೆಣಕುವೇ
ಒದ್ದರೆ ಬಿದ್ದೋಡುವೇ 
ಮುಟ್ಟಿದರೇ, ತಟ್ಟಿದರೇ 
ಮುಟ್ಟಿದರೇ ಮೂಳೆಗಳ ಎಣಿಸುತಲಿ ಕುಂಟುತ 
ಅಯ್ಯಯ್ಯೋ ಅಮ್ಮಾಮ್ಮಾ ಎನ್ನುವಂತೆ ಮಾಡುವ 

ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ,  ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು ನೆನಪಲಿ ಉಳಿಯುವ
ಬಿಸಿ ಬಿಸಿ ಕಜ್ಜಾಯ ಇನ್ನೊಂದು ಕೊಡಲೇನು, ಇಗೋ ತಿನ್ನು , ತಗೋ ತಿನ್ನು

ತುಂಟರ ಕಂಡರೆ ಸೊಂಟವ ಮುರಿವೇಪುಂಡರ ರುಂಢವ ಚಂಡಾಡುವೇ 
ತುಂಟರ ಕಂಡರೇ
ತಾಂ ತಥೋಮ್ ತಝಂ ತಕಧಿಮಿ ಥಕಜಣು ತಕಧಿಮಿ ಥಕಜಣು 
ತಾಂ ತಜೋಮ್ ಧೀಮ್ ತಥೈ ತಾಂಜುಡುಂ ತೀಂಜುಡುಂ 
ತುಂಟರ ಕಂಡರೇ
ತಾಕಿಟಜಂ, ತುಂ ತುಂ ತುಂ, ತದಿಗಿತಜಂ, ಜಂ ಜಂ ಜಂ  
ತಾಕಿಟಜಂ, ತದಿಗಿತಜಂ, ತದಿಗಿಣತೊಂ, ತದಿಗಿಣತೊಂ, ತದಿಗಿಣತೊಂ 
ತುಂಟರ ಕಂಡರೇ
ಧಿತಳಾಂಗ ಧಿತಳಾಂಗ ಧಿತಳಾಂಗ ಥಕಿಟ ಥಕಿಟ ।೨।
ತುಂಟರ ಕಂಡರೇ ।೪।
ಕಂಡರೇ ।೩।
ತುಂಟರ ಕಂಡರೇ
ತಗೀಡತೊಂ ಏ ತಕೋ ತಕೋ ।೨।
ತಗೀಡತೊಂ ಏ ಏ ಏ ಏ ತಗೀಡತೊಂ ತಕೋ ತಕೋ ತಕೋ 
ತುಂಟರ ಕಂಡರೆ ಸೊಂಟವ ಮುರಿವೇಪುಂಡರ ರುಂಢವ ಚಂಡಾಡುವೇ 
ಮುಟ್ಟಲು ಬಂದರೆ ಮುಷ್ಠಿಲಿ ಗುದ್ದಿ, ಬಡಿಯುವೆನು, ಜಡಿಯುವೆನು
ಬಿಡದಲೆ ಅಯ್ಯಯ್ಯೋ ಅಮ್ಮಾಮ್ಮಾ ಎನ್ನುವಂತೆ ಮಾಡುವ

ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ,  ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು ನೆನಪಲಿ ಉಳಿಯುವ
ಬಿಸಿ ಬಿಸಿ ಕಜ್ಜಾಯ ಇನ್ನೊಂದು ಕೊಡಲೇನು, ಇಗೋ ತಿನ್ನು , ತಗೋ ತಿನ್ನು

Song: Bisi Bisi Kajjaya
Movie: Havina Hede

ಸೋಲೆ ಗೆಲುವೆಂದು ಬಾಳಲಿ

ಚಿತ್ರ: ಒಡಹುಟ್ಟಿದವರು
ರಚನೆ: ಗೀತಪ್ರಿಯ
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ. ರಾಜಕುಮಾರ್

।।  ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ 
     ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ 
     ಈ ಸುಖ ದುಖ್ಖವು, ಅಳುವೂ ನಗುವು, ಎಲ್ಲ ಆ ದೇವನ ಕೊಡುಗೆ ।।೨।।
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ 
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

ದೇಹವ ಸಹಿಸುತ ಪರಿಮಳ ಕೊಡುವ, ಗಂಧವು ನೋವಿಗೆ ನರಳುವುದೇ 
ತನ್ನನೆ ದಹಿಸುತ ಬೆಳಕನು ತರುವ, ದೀಪವು ಅಳಲನು ಹೇಳುವುದೇ 
ನಿನ್ನಯ ಸಹನೆಗೆ ಹೋಲಿಕೆ ಧರೆಯು
ಕರುಣೆಯು ನಿನ್ನಲಿ ಮೈದುಂಬಿರಲು 
ಈ ಜನ್ಮ ಸಾರ್ಥಕವೂ 

ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ 
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

ಗಾಳಿಯ ಭೀಕರ ಧಾಳಿಗೆ ಪರ್ವತ, ಸ್ಥೈರ್ಯವನೆಂದಿಗು ಕಳೆಯುವುದೇ 
ಸುಖ ಸಂಸಾರಕೆ ದುಡಿಯುವ ಹೆಣ್ಣು, ಸ್ವಾರ್ಥಕೆ ಮನಸನು ನೀಡುವಳೇ 
ನಿನ್ನಲಿ ಮಾತಿಗೆ ಕುಂದದೆ ಇರುವ 
ಮಮತೆಯ ಮೂರ್ತಿಯೆ ನೀನಾಗಿರಲು 
ಜೀವನ ಪಾವನವೂ 

ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ 
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಖ್ಖವು, ಅಳುವೂ ನಗುವು, ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ 
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

Song: Sole Geluvendu Balali
Movie: Odahuttidavaru

ಕಾಯೋ ತಂದೆಯೇ

ಚಿತ್ರ: ಬೇಡರ ಕಣ್ಣಪ್ಪ
ರಚನೆ: ಎಸ್. ನಂಜಪ್ಪ
ಸಂಗೀತ: ಆರ್. ಸುದರ್ಶನಂ
ಗಾಯಕ: ಸಿ. ಎಸ್. ಜಯರಾಮನ್

ಕಾಯೋ ತಂದೆಯೇ ಸೇವಾ ಕರುಣಿಸೀ, ದಯೆ ತೋರೋ ಬಂಧುವೇ  ।೨।
ಕ್ಷಣ ಕಾಲವೂ ನಿನ್ನ ಬಿಡೆನು ಭವಭಾದೆಯನು ನೀಗಿಸೋ ।೨।
ಕಾಯೋ ತಂದೆಯೇ

ಶಿಶು ಕೂಡುಗೂಸಿನ ಮೊರೆ ಕೇಳಿದಾಯಿತ ಹರನೇ  ಬಾರೆಯ ।೨।
ಶೋಕಹರ ಮೋಹಕರ ।೨।
ಮಮದೇವ ಕಾಯೊ ನೀ 
ಗಿರೀಶ, ನಿಜ ಮುಕ್ತಿ ನೀಡುತೆ 

ಕಾಯೋ ತಂದೆಯೇ ಸೇವಾ ಕರುಣಿಸೀ, ದಯೆ ತೋರೋ ಬಂಧುವೇ

ಕುಣಿಯುತ ಬಾರೋ ಪರಶಿವನೇ , ಮಣಿವುದು ಎನ್ನಯ ಭಕುತಿ ।೨।
ದಯ ಏಕೆ ತೊರೆ ನೀ ।೨।
ಕರೆದಾಗ ಬಾರೆಯಾ, ಇನ್ನು ನಿನ್ನನು ನಾ ಬಿಡೆನು, ಮಹೇಶಾ ।೨।
ಪಾಪಹರ, ತಾಪಹರ ।೨।
ಓ ತೇಜೋಮೂರ್ತಿಯೇ, ಮುಕ್ಕಣ್ಣ, ಜಗದೇಕ ಈವನೆ

ಕಾಯೋ ತಂದೆಯೇ ಸೇವಾ ಕರುಣಿಸೀ, ದಯೆ ತೋರೋ ಬಂಧುವೇ
ಕಾಯೋ ತಂದೆಯೇ  ।೨।

Song: Kaayo Tandeye
Movie: Bedara Kannappa

ಓ ನಲ್ಲೆ ಸವಿನುಡಿಯ

ಚಿತ್ರ: ಧ್ರುವತಾರೆ
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ. ರಾಜಕುಮಾರ್, ವಾಣಿ ಜಯರಾಮ್

ಗಂ:  ಓ ನಲ್ಲೇ, ಸವಿನುಡಿಯ ಹೇಳೆ
         ಮಾತಲ್ಲೇ, ಹೊಸ ಹರುಷ ನೀಡೆ
         ಬದುಕಲ್ಲಿ  ಇಂದು, ಸಡಗರವ ನೀ ತಂದೆ ನನಗೆ
         ಓ ನಲ್ಲೇ, ಸವಿನುಡಿಯ ಹೇಳೆ
ಹೆ:    ಮಾತಲ್ಲೇ, ಹೊಸ ಹರುಷ ನೀಡೆ
         ಬದುಕಲ್ಲಿ  ಇಂದು, ಸಡಗರವ ನೀ ತಂದೆ ನನಗೆ
ಗಂ:  ಓ ನಲ್ಲೇ, ಸವಿನುಡಿಯ ಹೇಳೆ

ಗಂ:  ನಿನ್ನ ನಯನದಲ್ಲಿ ಏನೋ ಕಾಂತಿ ನನ್ನ ಸೆಳೆವಂತೆ
         ನಿನ್ನ ಅದರದಲ್ಲಿ ಏನೋ ಬೆಳಕು ನನ್ನ ಕರೆವಂತೆ
         ನಿನ್ನ ಬಯಕೆ ಏನೊ, ಆಸೆ ಏನೊ ಹೇಳು ನನ್ನಲ್ಲಿ
         ನಿನ್ನ ಮನದಲೇನೊ, ಮೌನವೇನೊ ಹೇಳು ಬಾ ಇಲ್ಲಿ
ಹೆ:    ಮರೆಯೊಳಗೆ ಅಡಗಿರುವ ಹಸುಮಗುವೂ ನಗುವ ನಿನ್ನ ನುಡಿಗೆ
         ಓ ನಲ್ಲಾ,  ಸವಿನುಡಿಯ ಹೇಳಿ
         ಮಾತಲ್ಲೇ, ಹೊಸ ಹರುಷ ನೀಡಿ
         ಬದುಕಲ್ಲಿ  ಇಂದು, ಸಡಗರವ ನೀ ತಂದೆ ನನಗೆ
ಗಂ:  ಓ ನಲ್ಲೇ, ಸವಿನುಡಿಯ ಹೇಳೆ

ಹೆ:    ಕಂದ ಮನೆಗೆ ಬಂದ ಸುಖವ ತಂದ ನಮ್ಮ ಬಾಳಲ್ಲಿ
         ತನ್ನ ನಗುವಿನಿಂದ ಬೆಳಕ ತಂದ ನಮ್ಮ ಮನದಲ್ಲಿ
         ಲಾಲಿ ಹಾಡು ತಂದ ಇಂಪಿನಿಂದ ಏನೋ ಉಲ್ಲಾಸ
         ತೂಗೋ ತೊಟ್ಟಿಲನ್ನು ಕಾಣುವಾಗ ಏನೊ ಸಂತೋಷ
ಗಂ:  ಮಗನೆನುವಾ ಸಡಗರದಿ ಇನಿಯನನು ಮರೆಯಬೇಡ ಚೆಲುವೆ
         ಓ ನಲ್ಲೇ, ಸವಿನುಡಿಯ ಹೇಳೆ
ಹೆ:    ಮಾತಲ್ಲೇ, ಹೊಸ ಹರುಷ ನೀಡಿ
ಜೊ:  ಬದುಕಲ್ಲಿ  ಇಂದು, ಸಡಗರವ ನೀ ತಂದೆ ನನಗೆ

।।  ಗಂ:  ಓ ನಲ್ಲೇ
      ಹೆ:    ಓ ನಲ್ಲಾ ।।೨।।

Song: O Nalle Savinudiya
Movie: Dhurvathare

ನಿನ್ನಂತ ಅಪ್ಪ ಇಲ್ಲ

ಚಿತ್ರ: ದೇವತಾ ಮನುಷ್ಯ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್, ಬಿ. ಆರ್. ಛಾಯ  

ಹೆ:    ನಿನ್ನಂತ ಅಪ್ಪ ಇಲ್ಲ, ಒಂದೊಂದು ಮಾತು ಬೆಲ್ಲ ।೨।
        ನೀನೆ ನನ್ನ ಜೀವ, ನೀನೆ ನನ್ನ ಪ್ರಾಣ 
        ಯಾವ ದೇವ ತಂದ ವರವೊ ಇನ್ನು ನಾನು ಅರಿಯೆನು 
ಗಂ:  ನಿನ್ನಂತ ಮಗಳು ಇಲ್ಲ, ಬಾಳಲ್ಲಿ ನೀನೆ ಎಲ್ಲ ।೨।
        ನಿನ್ನ ಕಂಡ ಮೇಲೆ, ಬೆಳಕ ಕಂಡೆ ಬಾಲೆ 
        ಯಾವ ದೇವ ತಂದ ವರವೊ ಇನ್ನು ನಾನು ಅರಿಯೆನು 

ಹೆ:    ನೀ ಹೀಗೆ ನೆಡೆಯಲು, ನಡು ಹೀಗೆ ಕುಣಿಯಲು
        ಹದಿನೆಂಟು ವಯಸ್ಸಿನ, ಹುಡುಗನ ಆಗಿದೆ
ಗಂ:  ನೀ ಹೀಗೆ ನಗುತಿರೆ, ಜೊತೆಯಾಗಿ ಬರುತಿರೆ
        ಆನಂದ ತರುತಿರೆ, ಹುಡುಗನೇ ಎಂದಿಗು
ಜೊ: ರಂಪಂ ರಂಪಂಪ ರಂಪ ಪಂಪ ರಂಪ ಪಂಪ ।೨।
ಹೆ:    ಮಾತಿನ ಮೋಡಿಗೆ ನಿನ್ನಾಣೆ ನಾನು ಮೆಚ್ಚಿದೇ 

ಗಂ:  ನಿನ್ನಂತ ಮಗಳು ಇಲ್ಲ
ಹೆ:    ನಿನ್ನಂತ ಅಪ್ಪ ಇಲ್ಲ

ಗಂ:  ಸಂತೋಷವೆಂದರೆ, ಉಲ್ಲಾಸವೆಂದರೆ 
        ಸಂಗೀತವೆಂದರೆ, ನಿನ್ನ ಜೊತೆ ನೆಡೆದರೆ 
ಹೆ:    ಮುದ್ದಾದ ಮಾತನು, ಹಿತವಾದ ರಾಗದಿ
        ದಿನವೆಲ್ಲ ಹಾಡಲು, ಹೀಗೇನೆ ಅಂತಿಯೋ
ಜೊ: ರಂಪಂ ರಂಪಂಪ ರಂಪ ಪಂಪ ರಂಪ ಪಂಪ ।೨।
ಗಂ:  ನನ್ನ ಈ ಅರಗಿಣಿ ಮಾತಾಡೆ ನೋಡಿ ಕಲಿತೆನು

ಹೆ:    ನಿನ್ನಂತ ಅಪ್ಪ ಇಲ್ಲ, ಒಂದೊಂದು ಮಾತು ಬೆಲ್ಲ
ಗಂ:  ನಿನ್ನಂತ ಮಗಳು ಇಲ್ಲ, ಬಾಳಲ್ಲಿ ನೀನೆ ಎಲ್ಲ
ಹೆ:    ನೀನೆ ನನ್ನ ಜೀವ
ಗಂ:  ನೀನೆ ನನ್ನ ಪ್ರಾಣ
ಜೊ: ಯಾವ ದೇವ ತಂದ ವರವೊ ಇನ್ನು ನಾನು ಅರಿಯೆನು 

।।  ಹೆ:    ನಿನ್ನಂತ ಅಪ್ಪ ಇಲ್ಲ
     ಗಂ:  ನಿನ್ನಂತ ಮಗಳು ಇಲ್ಲ ।।೪।।

Song: Ninnanta Appa Illa
Movie: Devatha Manushya

ಚಿನ್ನ ಎಂದು ನಗುತಿರು

ಚಿತ್ರ : ಪ್ರೇಮದ ಕಾಣಿಕೆ
ರಚನೆ : ಚಿ. ಉದಯಶಂಕರ್ 
ಸಂಗೀತ : ಉಪೇಂದ್ರ ಕುಮಾರ್ 
ಗಾಯಕ/ನಟ : ಪಿ. ಬಿ. ಶ್ರೀನಿವಾಸ್ 

ಚಿನ್ನ ಎಂದು ನಗುತಿರು ನನ್ನ ಸಂಘ ಬಿಡದಿರು ।೨।
ಸರಸದ ಸಮಯದಿ ಸದಾ ವಿರಸವೇನು
ಚಿನ್ನ ಎಂದು ನಗುತಿರು ನನ್ನ ಸಂಘ ಬಿಡದಿರು

ಸ್ನೇಹವ ತೋರು ಎಲ್ಲರ ಸೇರು ।೨।
ದಿನವೂ ಸಂತೋಷದಿ ನಲಿನಲಿದಾಡು ।೨।
ನೂರಾರು ವರುಷ ಕಂದ ಸುಖದಿ ಬಾಳು

ಚಿನ್ನ ಎಂದು ನಗುತಿರು ನನ್ನ ಸಂಘ ಬಿಡದಿರು

ಯಾರಲೊ ಕೋಪ ಯಾರಿಗೊ ತಾಪ ।೨।
ದಿನವೂ ಇದೇನಿದು ಈ ಪರಿತಾಪ ।೨।
ನೀ ತಾಯಿಯಂತೆ ಬಿಡು ಇನ್ನು ಚಿಂತೆ

ಚಿನ್ನ ಎಂದು ನಗುತಿರು ನನ್ನ ಸಂಘ ಬಿಡದಿರು
ಸರಸದ ಸಮಯದಿ ಸದಾ ವಿರಸವೇನು
ಚಿನ್ನ ಎಂದು ನಗುತಿರು ನನ್ನ ಸಂಘ ಬಿಡದಿರು ।೨।

Song: Chinna Endu Naguthiru
Movie: Premada Kanike 

Sunday, October 23, 2016

ಏನು ಮಾಡಲಿ ನಾನು

ಚಿತ್ರ: ತ್ರಿಮೂರ್ತಿ 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ/ನಟ: ಡಾ. ರಾಜಕುಮಾರ್ 

ಎಲ್ಲ ಬಲ್ಲವರಿಲ್ಲ, ಬಲ್ಲವರು ಯಾರಿಲ್ಲ 
ಸುಮ್ಮನಿರಬಲ್ಲವರು ಇಲ್ಲವೇ ಇಲ್ಲ 

ಏನು ಮಾಡಲಿ ನಾನು ಏನು ಹೇಳಲಿ ।೨।
ಕಣ್ಣುಗಳಿದ್ದು ಕುರುಡರ ಹಾಗೆ ಹಲವರು ನೆಡೆಯುವರು
ಎಲ್ಲಾ ಬಲ್ಲೆನು ಎನ್ನುತ ಹೋಗಿ ಹಳ್ಳದಿ ಬೀಳುವರು
ಏನು ಮಾಡಲಿ ನಾನು ಏನು ಹೇಳಲಿ

ಎಂದೋ ದುಡುಕಿದ ತಪ್ಪಿಗೆ ಇಂದು ದಂಡನೆ ಹೊಂದಿರುವೆ 
ಯಾರೋ ಮಾಡಿದ ಮೋಸಕೆ ಇಂದು ನಾ ಬಲಿಯಾಗಿರುವೆ 
ಏಕೋ ಏನೋ ನೀ ದಯೆ ತೋರದೆ ಇನ್ನೂ ಅಳಿಸಿರುವೆ 
ನನ್ನ ಉಳಿಸುವರ ನೋವ ಅಳಿಸುವರ ಯಾರು ಕಾಣೆನು ಈ ಜಗದಿ 
ನಿನ್ನ ಹೊರೆತು ಬೇರಾರು ಇಲ್ಲವೊ ಕಾಪಾಡು ತಂದೆ 

ಏನು ಮಾಡಲಿ ನಾ ಏನು ಹೇಳಲಿ
ಏನು ಮಾಡಲಿ ನಾನು ಏನು ಹೇಳಲಿ

ಕರುಣಿಸಿ ನನ್ನೀ ಕೈಗಳ ಹಿಡಿದು ನೆಡೆಸುತ ಉದ್ಧರಿಸು 
ಜ್ಯೋತಿಯ ಬೆಳಗಿಸಿ ನನ್ನೀ ಬಾಳಿನ ಕತ್ತಲೆಯಾ ಅಳಿಸು 
ದ್ವೇಷವ ತೊಲಗಿಸು ನಿಜವನು ತೋರಿಸು ನನ್ನನು ನೀ ಉಳಿಸು 
ಎಲ್ಲ ಮರೆತಿರುವೆ ನಿನ್ನ ನಂಬಿರುವೆ ತಂದೆ ಶರಣು ನಾ ಬಂದಿರುವೆ 
ನನ್ನ ಮನೆಯನು ನಿಲ್ಲಿಸು ಎಂದು ನಾ ಬೇಡುತಿರುವೆ 

ಏನು ಮಾಡಲಿ ನಾ ಏನು ಹೇಳಲಿ
ಏನು ಮಾಡಲಿ ನಾನು ಏನು ಹೇಳಲಿ
ಕಣ್ಣುಗಳಿದ್ದು ಕುರುಡರ ಹಾಗೆ ಹಲವರು ನೆಡೆಯುವರು
ಎಲ್ಲಾ ಬಲ್ಲೆನು ಎನ್ನುತ ಹೋಗಿ ಹಳ್ಳದಿ ಬೀಳುವರು
ಏನು ಮಾಡಲಿ ನಾ ಏನು ಹೇಳಲಿ ।೨।

Song: Enu Maadali, Naanu Enu Helali 
Movie: Trimurthy

ನಾ ಹೇಳಲಾರೆ ನಾ ತಾಳಲಾರೆ

ಚಿತ್ರ: ಒಲವು ಗೆಲುವು 
ರಚನೆ: ಎಸ್. ಜಾನಕಿ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಡಾ. ರಾಜಕುಮಾರ್ 

।। ನಾ ಹೇಳಲಾರೆ, ನಾ ತಾಳಲಾರೆ 
    ಹರುಷ ತುಂಬಿ ಬಂದು ಮನದಲಿಂದು, ಏನೊ ಕಾತುರ ।।೨।।

ಯಾರಿಗುಂಟು ಇಂಥ ಭಾಗ್ಯವಿಂದು
ಜಗದಲಿ ಯಾರಿಗುಂಟು ಇಂಥ ಸೌಖ್ಯವಿಂದು
ಈ ಸೋದರಿ, ಆ ಸೋದರ ।೨।
ಹಿತವನ್ನೆ ತೋರುವಾ, ಆನಂದ ನೀಡುವಾ
ಇವರೆ ನನ್ನ ಜೀವ

ನಾ ಹೇಳಲಾರೆ, ನಾ ತಾಳಲಾರೆ 
ಹರುಷ ತುಂಬಿ ಬಂದು ಮನದಲಿಂದು, ಏನೊ ಕಾತುರ 

ಅಣ್ಣ, ನಿನ್ನ ರೂಪ ಮರೆಯಲಾರೆ 
ಎಂದಿಗು ನಿನ್ನ ಅಂತರಂಗ ಅರಿಯಲಾರೆ 
ಆ ಸ್ನೇಹವ, ಆ ಪ್ರೇಮವ ।೨।
ಇನ್ನೆಲ್ಲಿ ನೋಡುವೇ, ನಿನ್ನಲ್ಲೇ ಕಾಣುವೆ 
ನೀನು ದೇವರಂತೆ 

ನಾ ಹೇಳಲಾರೆ, ನಾ ತಾಳಲಾರೆ 

ಹರುಷ ತುಂಬಿ ಬಂದು ಮನದಲಿಂದು, ಏನೊ ಕಾತುರ 
ಹಾ ಆ ಅ ಹಾ ಹ, ಓ ಲಾ ಲ ಲಾ ಲ 

Song: Naa Helalaare Naa Taalalaare
Movie: Olavu Geluvu

ಹಣ್ಣು ಮಾಗಿದೆ

ಚಿತ್ರ: ತ್ರಿಮೂರ್ತಿ 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ  

ಗಂ:  ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ ।೨।
        ಕಡಿದು ನೋಡು ಬಾ ಎಂದಿದೆ
        ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
ಹೆ:   ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ 
        ರಸಿಕ ನಿನಗೆ ಈ ಕಾಣಿಕೆ 
        ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ 

ಗಂ:  ಬೀಸಿದ ತಂಗಾಳಿ ಸೆರಗ ಸೆಳೆದು ನಿನ್ನಂದ ।೨।
        ನೋಡುತ ತಾನಿಂದು ಹೊಂದುತಿದೆ ಆನಂದ 
ಹೆ:   ಬೀಸುವ ಗಾಳಿಗೆ ದಾರಿ ನೀಡದಂತೆನ್ನ ।೨।
        ಬಳಸುತ ಮೈಯ್ಯನ್ನು ಸುಖವ ನೀಡು ಬಾ ಚಿನ್ನ 
ಗಂ:  ನಾನಿಂದು ನಿನ್ನಲಿ ಒಂದಾದೆ 
ಹೆ:   ನಾನಿಂದು ನಿನ್ನೆದೆ ಹೂವಾದೆ 
        ಬಿಡೆನು ಎಂದು ನಾ ನಿನ್ನನು 

ಗಂ:  ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
        ಕಡಿದು ನೋಡು ಬಾ ಎಂದಿದೆ 
ಹೆ:   ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ 
        ರಸಿಕ ನಿನಗೆ ಈ ಕಾಣಿಕೆ 

ಗಂ:  ಪ್ರೇಮದ ಗುಡಿಯಲಿ ಗೋಪುರಗಳು ಕಂಡಿವೆ ।೨।
        ಪೂಜಿಸುವಾಸೆಗೆ ಕೈಗಳೆರಡು ಚಾಚಿವೆ 
ಹೆ:   ಒಲವಿನ ಮಂತ್ರಕೆ ತನುವು ಸೋತು ವಾಲಿದೆ ।೨।
        ಪ್ರಣಯದ ಘಂಟೆಯ ನಾದ ಕಿವಿಯ ತುಂಬಿದೆ 
ಗಂ:  ಇಂದೇನೋ ಹೊಸತನ ನನ್ನಲ್ಲಿ 
ಹೆ:   ಇನ್ನೇನೂ ಬೇಡೆನು ನಿನ್ನಲ್ಲಿ 
        ತನುವು ಮನವು ಹೂವಾಯಿತು 

ಗಂ:  ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
        ಕಡಿದು ನೋಡು ಬಾ ಎಂದಿದೆ 
ಹೆ:   ರಸಿಕ ನಿನಗೆ ಈ ಕಾಣಿಕೆ 

Song: Hannu Magide 
Movie: Trimurthy

ಆ ರತಿಯೇ ಧರೆಗಿಳಿದಂತೆ

ಚಿತ್ರ: ಧ್ರುವತಾರೆ
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ. ರಾಜಕುಮಾರ್, ಬೆಂಗಳೂರು ಲತ

ಗಂ: ।। ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ
            ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂ ಬಾಣವಾಯಿತೋ ಎನಿಸುತಿದೆ ।।೨।।

ಗಂ:  ಮಾಮರ ತೂಗುತ, ಚಾಮರ ಹಾಕುತ, ಪರಿಮಳ ಎಲ್ಲೆಡೆ ಚೆಲ್ಲುತಿರೇ 
        ಗಗನದ ಅಂಚಲಿ, ರಂಗನು ಚೆಲ್ಲುತ, ಸಂಜೆಯು ನಾಟ್ಯವ ಆಡುತಿರೇ
        ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ, ಕೋಗಿಲೆಯೂ ನಲಿಯುತಿರೆ
ಹೆ:   ಲಾ ಲ ಲ ಲಾ, ಲ ಲ ಲ ಲ ಲಾ

ಗಂ:  ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ
        ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂ ಬಾಣವಾಯಿತೋ ಎನಿಸುತಿದೆ

ಗಂ:  ಪ್ರೇಮದ ಭಾವಕೆ, ಪ್ರೀತಿಯ ರಾಗಕೆ, ಮೌನವೆ ಗೀತೆಯ ಹಾಡುತ್ತಿರೇ
        ಸರಸದ ಸ್ನೇಹಕೆ, ಒಲವಿನ ಕಾಣಿಕೆ, ನೀಡಲು ಅದರವು ಅರಳುತಿರೇ
        ಎಂದಿಗು ಹೀಗೆ ಬಾಳುವಾಸೆ ತುಂಬಿ ಬಂದು
        ಪ್ರೇಮಿಗಳೂ ನಲಿಯುತಿರೆ ।೨।

ಗಂ:  ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ
        ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
        ಹೂ ಬಾಣವಾಯಿತೋ ಎನಿಸುತಿದೆ ।೪।

Song: Aa Rathiye Dharegilidante
Movie: Dhurvathare