Sunday, October 23, 2016

ಹಣ್ಣು ಮಾಗಿದೆ

ಚಿತ್ರ: ತ್ರಿಮೂರ್ತಿ 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ  

ಗಂ:  ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ ।೨।
        ಕಡಿದು ನೋಡು ಬಾ ಎಂದಿದೆ
        ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
ಹೆ:   ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ 
        ರಸಿಕ ನಿನಗೆ ಈ ಕಾಣಿಕೆ 
        ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ 

ಗಂ:  ಬೀಸಿದ ತಂಗಾಳಿ ಸೆರಗ ಸೆಳೆದು ನಿನ್ನಂದ ।೨।
        ನೋಡುತ ತಾನಿಂದು ಹೊಂದುತಿದೆ ಆನಂದ 
ಹೆ:   ಬೀಸುವ ಗಾಳಿಗೆ ದಾರಿ ನೀಡದಂತೆನ್ನ ।೨।
        ಬಳಸುತ ಮೈಯ್ಯನ್ನು ಸುಖವ ನೀಡು ಬಾ ಚಿನ್ನ 
ಗಂ:  ನಾನಿಂದು ನಿನ್ನಲಿ ಒಂದಾದೆ 
ಹೆ:   ನಾನಿಂದು ನಿನ್ನೆದೆ ಹೂವಾದೆ 
        ಬಿಡೆನು ಎಂದು ನಾ ನಿನ್ನನು 

ಗಂ:  ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
        ಕಡಿದು ನೋಡು ಬಾ ಎಂದಿದೆ 
ಹೆ:   ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ 
        ರಸಿಕ ನಿನಗೆ ಈ ಕಾಣಿಕೆ 

ಗಂ:  ಪ್ರೇಮದ ಗುಡಿಯಲಿ ಗೋಪುರಗಳು ಕಂಡಿವೆ ।೨।
        ಪೂಜಿಸುವಾಸೆಗೆ ಕೈಗಳೆರಡು ಚಾಚಿವೆ 
ಹೆ:   ಒಲವಿನ ಮಂತ್ರಕೆ ತನುವು ಸೋತು ವಾಲಿದೆ ।೨।
        ಪ್ರಣಯದ ಘಂಟೆಯ ನಾದ ಕಿವಿಯ ತುಂಬಿದೆ 
ಗಂ:  ಇಂದೇನೋ ಹೊಸತನ ನನ್ನಲ್ಲಿ 
ಹೆ:   ಇನ್ನೇನೂ ಬೇಡೆನು ನಿನ್ನಲ್ಲಿ 
        ತನುವು ಮನವು ಹೂವಾಯಿತು 

ಗಂ:  ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
        ಕಡಿದು ನೋಡು ಬಾ ಎಂದಿದೆ 
ಹೆ:   ರಸಿಕ ನಿನಗೆ ಈ ಕಾಣಿಕೆ 

Song: Hannu Magide 
Movie: Trimurthy

No comments:

Post a Comment