Friday, October 14, 2016

ತಂನಂ ತಂನಂ

ಚಿತ್ರ : ಎರಡು ಕನಸು
ರಚನೆ : ಚಿ. ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯಕ : ಪಿ. ಬಿ. ಶ್ರೀನಿವಾಸ್

ಹೆ:  ತಂನಂ ತಂನಂ ನನ್ನೀ ಮನಸು ಮಿಡಿಯುತಿದೆ 
      ಓ ಸೋತಿದೆ, ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಗಲ್ ಗಲ್ ಗಲ್ ಗಲ್ ತಾಳಕೆ 
      ನನ್ನೆದೆಯ ವೀಣೆ ತನ್ನಂತೆ ತಾನೆ ತಂನಂ ತಂನಂ ಎಂದಿದೆ 
      ಗಲ್ ಗಲ್ ಗಲ್ ಗಲ್ ತಾಳಕೆ ತಂನಂ ತಂನಂ ಎಂದಿದೆ
ಗಂ:  ತಂನಂ ತಂನಂ ನನ್ನೀ ಮನಸು ಮಿಡಿಯುತಿದೆ 
      ಓ ಸೋತಿದೆ, ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಗಲ್ ಗಲ್ ಗಲ್ ಗಲ್ ತಾಳಕೆ 
      ನನ್ನೆದೆಯ ವೀಣೆ ತನ್ನಂತೆ ತಾನೆ ತಂನಂ ತಂನಂ ಎಂದಿದೆ 
      ಗಲ್ ಗಲ್ ಗಲ್ ಗಲ್ ತಾಳಕೆ ತಂನಂ ತಂನಂ ಎಂದಿದೆ

ಹೆ:   ನೀ ಸನಿಹಕೆ ಬಂದರೆ, ತನುವಿದು ನಡುಗುತಿದೆ ಏತಕೆ, ಎದೆ ಜಲ್ ಎಂದಿದೆ  ।೨।
ಗಂ:  ಅಹಹಾ.. ಒಲಿದಿಹ ಜೀವವು ಬೆರೆಯಲು ಮನವೂ ಆಡಿ ತನು ಕೆಂಪಾಗಿ ನಿನ್ನಾ ಕಾಡಿದೆ 

ಹೆ:  ತಂನಂ ತಂನಂ ನನ್ನೀ ಮನಸು ಮಿಡಿಯುತಿದೆ 
ಗಂ:  ಆ.. ಆ ಹ ಹಾ..... 

ಗಂ:  ನೀ ನೆಡೆಯುವ ಹಾದಿಗೆ, ಹೂವಿನ ಹಾಸಿಗೆಯ ಹಾಸುವೆ, ಕೈ ಹಿಡಿದು ನೆಡೆಸುವೆ ।೨।
ಹೆ:   ಅಹಹಾ... ಮೆಲ್ಲಗೆ ನಲ್ಲನೆ ನೆಡೆಸುತ ಎಂದೂ ಹೀಗೆ ಇರುವ ಆಸೆ ನನ್ನೀ ಮನಸಿಗೆ 

ಗಂ:  ತಂನಂ ತಂನಂ ನನ್ನೀ ಮನಸು ಮಿಡಿಯುತಿದೆ
ಹೆ:   ಓ ಸೋತಿದೆ
ಗಂ:  ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಗಲ್ ಗಲ್ ಗಲ್ ಗಲ್ ತಾಳಕೆ 
ಹೆ:   ನನ್ನೆದೆಯ ವೀಣೆ ತನ್ನಂತೆ ತಾನೆ ತಂನಂ ತಂನಂ ಎಂದಿದೆ 
ಗಂ:  ಗಲ್ ಗಲ್ ಗಲ್ ಗಲ್ ತಾಳಕೆ ತಂನಂ ತಂನಂ ಎಂದಿದೆ
ಹೆ:   ಗಲ್ ಗಲ್ ಗಲ್ ಗಲ್ ತಾಳಕೆ ತಂನಂ ತಂನಂ ಎಂದಿದೆ

Song: Tamnam Tamnam 
Movie: Eradu Kanasu

ಸಿಹಿ ಮುತ್ತು ಸಿಹಿ ಮುತ್ತು

ಚಿತ್ರ: ನಾ ನಿನ್ನ ಮರೆಯಲಾರೆ 
ರಚನೆ: ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯಕರು: ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ 

ಸಿಹಿ  ಮುತ್ತು ಸಿಹಿ  ಮುತ್ತು ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು ।೨।
ಕಂದಾ ಕೊಡುವೆಯಾ 
ಚಿನ್ನದ ತೊಳಲಿ ನನ್ನಾ ಬಳಸುತ, ನಿನ್ನ ಚಿನ್ನದ ತೊಳಲಿ ನನ್ನಾ ಬಳಸುತ 
ಸಿಹಿ  ಮುತ್ತು ಸಿಹಿ  ಮುತ್ತು ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ 

ಚಿನಕುರುಳಿ ಮಾತಿನಲ್ಲಿ, ಹೂಬಾಣ ನೋಟದಲ್ಲಿ
ಕೋಪದಿ ಸಿಡಿದರೆ ಆನೆ ಪಟಾಕಿ 
ನೀ ನಕ್ಕರೂ ಚಂದ, ನೀ ಅತ್ತರೂ ಅಂದ 
ಕುಣಿಸುವೆ ತಣಿಸುವೆ ತುಂಟಾಟದಿಂದ 
ಆ... ಓ... 

ಸಿಹಿ  ಮುತ್ತು ಸಿಹಿ  ಮುತ್ತು ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ 
ಚಿನ್ನದ ತೊಳಲಿ ನನ್ನಾ ಬಳಸುತ, ನಿನ್ನ ಚಿನ್ನದ ತೊಳಲಿ ನನ್ನಾ ಬಳಸುತ 
ಸಿಹಿ  ಮುತ್ತು ಸಿಹಿ  ಮುತ್ತು ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ 

ಮುತ್ತಂತೆ ನಿನ್ನ ನುಡಿಯು, ಒಂದೊಂದು ಜೇನ ಹನಿಯು
ಸವಿಯುತ ನಲಿವುದು ಈ ನನ್ನ ಜೀವ
ಈ ನಿನ್ನ ಸ್ನೇಹದಲ್ಲಿ, ನಾ ತೇಲಿ ಸ್ವರ್ಗದಲ್ಲಿ
ಮರೆಯುವೆ ಮನಸಿನ ನೂರೆಂಟು ನೋವ
ಹೆ:   ಆ... ಓ...

ಹೆ:   ಸಿಹಿ  ಮುತ್ತು ಸಿಹಿ  ಮುತ್ತು ನಂಗ್ಗೊಂದು  ಕೆನ್ನೆಗೆ ಗಲ್ಲಕೆ ಮತ್ತೊಂದು ।೨।
ಗಂ:  ನೀನು ಕೊಡುವೆಯಾ 
        ಚಿನ್ನದ ತೊಳಲಿ ನನ್ನಾ ಬಳಸುತ, ನಿನ್ನ ಚಿನ್ನದ ತೊಳಲಿ ನನ್ನಾ ಬಳಸುತ 
        ಸಿಹಿ  ಮುತ್ತು ಸಿಹಿ  ಮುತ್ತು ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
        ಕಂದಾ ಕೊಡುವೆಯಾ

Song: Sihi Muthu Sihi Muthu
Movie: Naa Ninna Mareyalaare

ತನುವು ಮನವು

ಚಿತ್ರ: ರಾಜ ನನ್ನ ರಾಜ
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ

ಗಂ:  ತನುವು ಮನವು ಇಂದು ನಿಂದಾಗಿದೆ 
        ಆಸೆಯು ಎದೆಯ ತುಂಬಾ ತುಂಬಿ
        ಏನೋ ಉಲ್ಲಾಸ ಏನೋ ಸಂತೋಷ ಇದೇನೂ 
        ತನುವು ಮನವು ಇಂದು ನಿಂದಾಗಿದೆ

ಹೆ:   ಆ.. ಅನುದಿನವ ಅನುಕ್ಷಣವು ಜೊತೆಯಿರಲು ನೀನು
        ನಲ್ಲಾ ಸರಸದಲಿ ಸುಖ  ಪಡುವೆ ನಾ ಕಾಲವೆಲ್ಲ
ಗಂ:  ಬಾ ಪ್ರೇಮದ ಕಾಣಿಕೆ ನೀಡುವೆ

ಹೆ:   ತನುವು ಮನವು ಇಂದು ನಿಂದಾಗಿದೆ 
        ಆಸೆಯು ಎದೆಯ ತುಂಬಾ ತುಂಬಿ
        ಏನೋ ಉಲ್ಲಾಸ ಏನೋ ಸಂತೋಷ ಇದೇನೂ 
ಗಂ:  ತನುವು ಮನವು ಇಂದು ನಿಂದಾಗಿದೆ

ಗಂ:  ಈ ಯುಗ ಉರುಳಿ ಯುಗ ಬರಲಿ ಪ್ರತಿ ಜನುಮದಲ್ಲೂ
         ನಲ್ಲೇ ಬೆರೆತಿರುವ ಜೀವಗಳು ಎಂದೆಂದು ಒಂದು
ಹೆ:   ಈ ಮಾತಿನ ಮೋಡಿಗೆ ಸೋತೆನು 

ಜೊ: ತನುವು ಮನವು ಇಂದು ನಿಂದಾಗಿದೆ 
        ಆಸೆಯು ಎದೆಯ ತುಂಬಾ ತುಂಬಿ
        ಏನೋ ಉಲ್ಲಾಸ ಏನೋ ಸಂತೋಷ ಇದೇನೂ

Song: Thanuvu Manavu
Movie: Raja Nanna Raja

Thursday, October 13, 2016

ಎಲ್ಲೆಲ್ಲಿ ನೋಡಲಿ

ಚಿತ್ರ: ನಾ ನಿನ್ನ ಮರೆಯಲಾರೆ 
ರಚನೆ: ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ 

ಗಂ: ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ 
       ಕಣ್ಣಲ್ಲಿ ತುಂಬಿರುವೆ, ಮನದಲಿ ಮನೆಮಾಡಿ ಆಡುವೆ 
ಹೆ:   ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ 
       ಕಣ್ಣಲ್ಲಿ ತುಂಬಿರುವೆ, ಮನದಲಿ ಮನೆಮಾಡಿ ಆಡುವೆ 
ಗಂ: ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ 

ಗಂ: ಆ ಕೆಂಪು ತಾವರೆ, ಆ ನೀರಿಗಾದರೆ 
       ಈ ಹೊನ್ನ ತಾವರೆ, ನನ್ನಾಸೆಯ ಸೆರೆ 
ಹೆ:   ಮಿಂಚೆಂಬ ಬಳ್ಳಿಗೆ, ಸ್ನೇಹದ ಆಸರೆ 
       ಈ ಹೆಣ್ಣ ಬಾಳಿಗೆ, ನಿನ್ನ ತೋಳಿನಾಸರೆ
ಗಂ: ಓ... ಯುಗಗಳು ಜಾರಿ ಉರುಳಿದರೇನು 
ಹೆ:   ನಾನೇ ನೀನು ನೀನೆ ನಾನು 
ಗಂ: ಆದ ಮೇಲೆ ಬೇರೆ ಏನಿದೆ 

ಹೆ:   ಎಲ್ಲೆಲ್ಲಿ ನೋಡಲಿ
ಗಂ:  ನಿನ್ನನ್ನೇ ಕಾಣುವೆ 
ಹೆ:   ಕಣ್ಣಲ್ಲಿ ತುಂಬಿರುವೆ, ಮನದಲಿ ಮನೆಮಾಡಿ ಆಡುವೆ 
ಗಂ:  ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ 

ಹೆ:   ರವಿಯನ್ನು ಕಾಣದೆ, ಹಗಲೆಂದು ಆಗದು 
       ನಿನ್ನನ್ನು ನೋಡದೆ, ಈ ಪ್ರಾಣ ನಿಲ್ಲದು 
ಗಂ:  ಕಡಲನ್ನು ಸೇರದ, ನದಿಯಲ್ಲಿ ಕಾಣುವೆ 
       ನಿನ್ನನ್ನು ಸೇರದೆ, ನಾ ಹೇಗೆ ಬಾಳುವೆ 
ಹೆ:   ಓ..... ವಿರಹದ ನೋವ ಮರೆಯಲಿ ಜೀವ 
ಗಂ: ಹೂವು ಗಂಧ ಸೇರಿದಂತೆ
ಹೆ:   ಪ್ರೇಮದಿಂದ ನಿನ್ನ ಸೇರುವೆ 

ಗಂ: ಎಲ್ಲೆಲ್ಲಿ ನೋಡಲಿ
ಹೆ:   ನಿನ್ನನ್ನೇ ಕಾಣುವೆ 
ಜೊ: ಕಣ್ಣಲ್ಲಿ ತುಂಬಿರುವೆ, ಮನದಲಿ ಮನೆಮಾಡಿ ಆಡುವೆ 
        ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ 
ಗಂ: ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ 

Song: Ellelli Nodali
Movie: Naa Ninna Mareyalaare

ನಗುನಗುತಾ ನೀ ಬರುವೆ

ಚಿತ್ರ: ಗಿರಿಕನ್ಯೆ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ

ಹೆ:  ನಗುನಗುತಾ ನೀ ಬರುವೆ
       ನಗುನಗುತಾ ನೀ ಬರುವೆ, ನಗುವಿನಲೇ ಮನಸೆಳೆವೆ
       ಕುಣಿಸಲು ನೀನು, ಕುಣಿಯುವೆ ನಾನು, ಮರೆಯುವೆ ಜಗವನ್ನೇ
ಗಂ:  ನಗುನಗುತಾ ನೀ ಬರುವೆ, ನಗುವಿನಲೇ ಮನಸೆಳೆವೆ
       ಕುಣಿಸಲು ನೀನು, ಕುಣಿಯುವೆ ನಾನು, ಮರೆಯುವೆ ಜಗವನ್ನೇ
       ನಗುನಗುತಾ ನೀ ಬರುವೆ, ನಗುವಿನಲೇ ಮನಸೆಳೆವೆ
ಹೆ:   ನಗುನಗುತಾ ನೀ ಬರುವೆ, ನಗುವಿನಲೇ ಮನಸೆಳೆವೆ

ಗಂ:  ನಗುವೇ ಮಾತಾಗಿ ಮಾತೇ ಮುತ್ತಾಗಿ ಆ ಮುತ್ತೆ ಹೆಣ್ಣಾಗಿದೆ
        ಹೆಣ್ಣೇ ಹೂವಾಗಿ ಹೂವೇ ಹಣ್ಣಾಗಿ, ಹಣ್ಣು ಕಣ್ಣ ತುಂಬಿದೆ
ಹೆ:   ಒಲವೇ ಗೆಲುವಾಗಿ ಗೆಲುವೇ ಚೆಲುವಾಗಿ, ಚೆಲುವೆಲ್ಲ ನಿನ್ನಲ್ಲಿದೆ
        ನಿನ್ನಾ ರೂಪಲ್ಲಿ ನಿನ್ನಾ ಮನದಲ್ಲಿ, ಎಂದೂ ನಾನು ಬೆರೆತೆ
ಗಂ:  ನೀನೇ ನಾನಾಗಿ ನಾನೇ ನೀನಾಗಿ ನನ್ನೇ ನಾ ಮರೆತೆ

ಹೆ:  ನಗುನಗುತಾ ನೀ ಬರುವೆ, ನಗುವಿನಲೇ ಮನಸೆಳೆವೆ
       ಕುಣಿಸಲು ನೀನು, ಕುಣಿಯುವೆ ನಾನು, ಮರೆಯುವೆ ಜಗವನ್ನೇ
       ನಗುನಗುತಾ ನೀ ಬರುವೆ, ನಗುವಿನಲೇ ಮನಸೆಳೆವೆ
ಗಂ:  ನಗುನಗುತಾ ನೀ ಬರುವೆ, ನಗುವಿನಲೇ ಮನಸೆಳೆವೆ

ಹೆ:   ಏಕೋ ಸಂಕೋಚ ಏನೋ ಸಂತೋಷ ನಿಂತಲ್ಲಿ ನಿಲ್ಲಲಾರೆನು
       ನಿನ್ನಾ ಮಾತಿಂದ ಏನೋ ಆನಂದ ಎಂದೂ ನಿನ್ನಾ ಬಿಡೆನು
ಗಂ:  ಊರಾ ಮಾತೇಕೆ ಯಾರಾ ಹಂಗೇಕೆ ಬಾ ಇಲ್ಲಿ ನೀ ಮೆಲ್ಲಗೆ
       ಯಾರೂ ಇಲ್ಲಿಲ್ಲ ನಾವೇ ಇಲ್ಲೆಲ್ಲ ಬೇಗ ಬಾ ಬಾ ಬಳಿಗೆ
ಹೆ:   ಸೋತೇ ನಾನೀಗ ಏನೋ ಆವೇಗ ಇಂದೂ ನಾ ತಾಳೆನು

ಗಂ:  ನಗುನಗುತಾ ನೀ ಬರುವೆ, ನಗುವಿನಲೇ ಮನಸೆಳೆವೆ
ಹೆ:  ಕುಣಿಸಲು ನೀನು, ಕುಣಿಯುವೆ ನಾನು, ಮರೆಯುವೆ ಜಗವನ್ನೇ
ಹೆ:  ನಗುನಗುತಾ ನೀ ಬರುವೆ, ನಗುವಿನಲೇ ಮನಸೆಳೆವೆ
ಗಂ:  ಕುಣಿಸಲು ನೀನು, ಕುಣಿಯುವೆ ನಾನು, ಮರೆಯುವೆ ಜಗವನ್ನೇ
।।  ಗಂ:  ನಗುನಗುತಾ ನೀ ಬರುವೆ
     ಹೆ:  ನಗುವಿನಲೇ ಮನಸೆಳೆವೆ  ।।೩।।

Song: Nagunagutha Nee Baruve
Movie: Girikanye  

Sunday, October 9, 2016

ವಸಂತ ಕಾಲ ಬಂದಾಗ

ಚಿತ್ರ: ಗುರಿ 
ರಚನೆ: ಚಿ. ಉದಯಶಂಕರ್ 
ಸಂಗೀತ: ರಾಜನ್- ನಾಗೇಂದ್ರ 
ಗಾಯಕ: ಡಾ. ರಾಜಕುಮಾರ್ 

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಕೋಗಿಲೆ ಹಾಡಲೆ ಬೇಕು 
ಕಂಕಣ ಕೂಡಿ ಬಂದಾಗ ಮದುವೆ ಆಗಲೇ ಬೇಕು, ಮಂಗಳ ವಾದ್ಯ ಮೊಳಗಲೇ ಬೇಕು 
ಹೊಸ ಬಾಳ ಹೊಸಿಲಲ್ಲಿ, ನಸು ನಾಚಿ ನಿಂತಾಗ ನಿನ್ನಂದ ನಾ ನೋಡ ಬೇಕು 

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಕೋಗಿಲೆ ಹಾಡಲೆ ಬೇಕು 
ಕಂಕಣ ಕೂಡಿ ಬಂದಾಗ ಮದುವೆ ಆಗಲೇ ಬೇಕು, ಮಂಗಳ ವಾದ್ಯ ಮೊಳಗಲೇ ಬೇಕು 

ರೇಷ್ಮೆ ಸೀರೆ ಹುಟ್ಟು, ಹೊಸ ಹೂವ ಮುಡಿಯೊಲಿಟ್ಟು
ಮಧುಮಗಳಾಗಿ ಕುಳಿತಿರುವಾಗ ।೨।
ನೋಡುವದೇ ಭಾಗ್ಯ ನಿನ್ನನು 
ಮಂತ್ರ ಹೇಳುವಾಗ, ಮಾಂಗಲ್ಯ ಕಟ್ಟುವಾಗ 
ಕಳ್ಳಿಯ ಹಾಗೆ ಮಳ್ಳಿಯ ಹಾಗೆ ।೨।
ನಲ್ಲನ ನೀ ನೋಡೊ ನೋಟವ 
ಕಾಣುವಾಸೆ ತಾಳಲಾರೆ ನನ್ನ ಮುದ್ದು ಸೋದರಿ 

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಕೋಗಿಲೆ ಹಾಡಲೆ ಬೇಕು 
ಕಂಕಣ ಕೂಡಿ ಬಂದಾಗ ಮದುವೆ ಆಗಲೇ ಬೇಕು, ಮಂಗಳ ವಾದ್ಯ ಮೊಳಗಲೇ ಬೇಕು 

ಜೋಡಿ ಬಂದ ಮೇಲೆ ನಿನ್ನ ಬಾಳ ರೀತಿ ಬೇರೆ 
ಬದುಕಲಿ ಜಾಲಿ ವರುಷದಿ ಲಾಲಿ ।೨।
ಬೊಂಬೆಯ ಹಾಗೊಂದು ಕೈಯಲಿ 
ನಾಳೆ ನಿನ್ನ ಮಗನು ನನ್ನ ಮಾವ ಎನ್ನುವಾಗ 
ತಂಗಿಯೆ ನಿನಗೆ ಅಂದದ ಸೊಸೆಯ ।೨।
ಎಲ್ಲಿಂದ ನಾ ತಂದು ಕೊಡಲಿ 
ಓ.... ಲಕ್ಷ ಲಕ್ಷ ಕೇಳಿದಾಗ ಎಲ್ಲಿ ಓಡಿ ಹೋಗಲಿ 

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಕೋಗಿಲೆ ಹಾಡಲೆ ಬೇಕು 
ಕಂಕಣ ಕೂಡಿ ಬಂದಾಗ ಮದುವೆ ಆಗಲೇ ಬೇಕು, ಮಂಗಳ ವಾದ್ಯ ಮೊಳಗಲೇ ಬೇಕು 
ಹೊಸ ಬಾಳ ಹೊಸಿಲಲ್ಲಿ, ನಸು ನಾಚಿ ನಿಂತಾಗ ನಿನ್ನಂದ ನಾ ನೋಡ ಬೇಕು 

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಕೋಗಿಲೆ ಹಾಡಲೆ ಬೇಕು 
ಕಂಕಣ ಕೂಡಿ ಬಂದಾಗ ಮದುವೆ ಆಗಲೇ ಬೇಕು, ಮಂಗಳ ವಾದ್ಯ ಮೊಳಗಲೇ ಬೇಕು 

Song: Vasanta Kaala Bandaga
Movie: Guri