Monday, May 15, 2017

ಹರಿನಾಮವೇ ಚಂದ

ಚಿತ್ರ: ಭಕ್ತ ಕುಂಬಾರ  
ರಚನೆ: ಹುಣಸೂರು ಕೃಷ್ಣಮೂರ್ತಿ  
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಪಿ. ಬಿ. ಶ್ರೀನಿವಾಸ್   

ಹರಿನಾಮವೇ ಚಂದ ।೨।
ಅದ ನಂಬಿಕೋ ಕಂದ ।೨।
ಹರಿನಾಮ, ಹರಿನಾಮವೇ

ಹಿಂದಿನ ಸಾಲ ತೀರಿಸಲೆಂದೂ
ಬಂದಿಹೆವಯ್ಯಾ ಜನ್ಮವ ತಳೆದೂ
ಅ ಆ..
ಹಿಂದಿನ ಕಾಲ ತೀರಿಸಲೆಂದೂ
ಬಂದಿಹೆವಯ್ಯಾ ಜನ್ಮವ ತಳೆದೂ
ಮುಂದಿನ ಬದುಕು ಬಂಧುರವೆನಿಸೋ 
ಗುರಿ ಸಾಧಿಸೋ ಕಂದಾ 

ಹರಿನಾಮವೇ ಚಂದಾ
ಅದ ನಂಬಿಕೋ ಕಂದಾ
ಹರಿನಾಮವೇ, ಹರಿನಾಮವೇ

ಮಣ್ಣಿನ ಹಾಗೆ ಮಾಗಿಸೆ ಮನವ
ಚಿನ್ಮಯನೆಂಬೋ ನಾಮದ ಜಲವಾ ।೨।
ಸೇರಿಸಿ ಬೆರೆಸೀ, ಮುಕುತಿಯ ಗಳಿಸಿ
ಸುಖಿಯಾಗೊ ನೀ ಕಂದಾ

ಹರಿನಾಮವೇ ಹರಿನಾಮವೇ

ಗೋವಿಂದ ಗೋವಿಂದ ಗೋವಿಂದನೆಂದು
ಎಂದೆಂದೂ ನೀನಂದು ಆನಂದ ಹೊಂದು
ತಂದೆಯಂತೆ ಬಂದೂ, ತಲೆ ಕಾವನಯ್ಯಾ ಬಂಧೂ
ಸಂತನೆಂದು ಗುಣವಂತನೆಂದು ಭಗವಂತ ನಿನ್ನ ಪೊರೆವಾ
ಧನ್ಯನಾಗೊ ಜಗಮಾನ್ಯನಾಗೊ ಧನ ಸೌಭಾಗ್ಯ ಕೊಡುವಾ
ಪರತ್ವರ ಹರಿ ವಿಠ್ಠಲಾ, ಪರತ್ವರ ವರ ವಿಠ್ಠಲಾ
ವಿಠ್ಠಲಾ ವಿಠ್ಠಲಾ

ವಿಠ್ಠಲ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ ।೨।
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ।೫।

Song: Hari Namave Chanda
Movie: Bhakta Kumbaara