Saturday, April 8, 2017

ಮಾನವ ಮೂಳೆ ಮಾಂಸದ

ಚಿತ್ರ: ಭಕ್ತ ಕುಂಬಾರ  
ರಚನೆ: ಹುಣಸೂರು ಕೃಷ್ಣಮೂರ್ತಿ  
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಪಿ. ಬಿ. ಶ್ರೀನಿವಾಸ್   

ಪರತತ್ವವನು ಬಲ್ಲ ಪಂಡಿತನು ನಾನಲ್ಲ
ಹರಿನಾಮ ಒಂದುಳಿದು ನನಗೇನು ತಿಳಿದಿಲ್ಲಾ
ನನಗೇನು ತಿಳಿದಿಲ್ಲಾ

ಮಾನವ ದೇಹವು ಮೂಳೆ ಮಾಂಸದ ತಡಿಕೇ 
ಮಾನವ ಮೂಳೆ ಮಾಂಸದ ತಡಿಕೇ
ಇದರ ಮೇಲಿದೇ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೇ
ಮಾನವ ಮೂಳೆ ಮಾಂಸದ ತಡಿಕೇ 

ನವ ಮಾಸಗಳು ಹೊಲಸಲಿ ಕಳೆದು, ಅ ಆ ...
ನವ ರಂಧ್ರಗಳಾ ಕಳೆದೂ ಬೆಳೆದೂ
ಬಂದಿದೆ ಭುವಿಗೇ ಈ ನರ ಗೊಂಬೇ
ನಂಬಲು ಏನಿದೇ ಸೌಭಾಗ್ಯವೆಂದೇ

ಮಾನವ ಮೂಳೆ ಮಾಂಸದ ತಡಿಕೇ
ದೇಹವೂ ಮೂಳೆ ಮಾಂಸದ ತಡಿಕೇ  

ಉಸಿರಾಡುವ ತನಕ, ನಾನು ನನದೆಂಬ ಮಮಕಾರ
ನಿಂತ ಮರುಗಳಿಗೆ, ಮಸಣದೆ ಸಂಸ್ಕಾರ 
ಮಣ್ಣಲಿ ಬೆರೆತೂ, ಮೆಲ್ಲಗೆ ಕೊಳೆತೂ
ಮುಗಿಯುವ ದೇಹಕೇ ವ್ಯಾಮೋಹವೇಕೇ

ಮಾನವ ಮೂಳೆ ಮಾಂಸದ ತಡಿಕೇ

ದೇಹವೂ ಮೂಳೆ ಮಾಂಸದ ತಡಿಕೇ  

ಬರುವಾಗ ಬೆತ್ತಲೇ, ಹೋಗುವಾಗ ಬೆತ್ತಲೇ 
ಬಂದು ಹೋಗುವ ನಡುವೇ, ಬರೀ ಕತ್ತಲೇ 
ಭಕ್ತಿಯ ಬೆಳಕೂ, ಬಾಳಿಗೆ ಬೇಕೂ 
ಮುಕ್ತಿಗೆ ವಿಠ್ಠಲನ ಕೊಂಡಾಡ ಬೇಕೂ 

ಮಾನವ ಮೂಳೆ ಮಾಂಸದ ತಡಿಕೇ


ದೇಹವು ಮೂಳೆ ಮಾಂಸದ ತಡಿಕೇ  
ಇದರ ಮೇಲಿದೇ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೇ

ಮಾನವ ಮೂಳೆ ಮಾಂಸದ ತಡಿಕೇ 

ವಿಠ್ಠಲ ವಿಠ್ಠಲ ಪಾಂಡುರಂಗ ವಿಠ್ಠಲ ।೩।
ಪಾಂಡುರಂಗ ವಿಠ್ಠಲ ।೨।

ಜೈ ಪುಂಡಲೀಕ ವರದೇ 
ಹರೀ ವಿಠ್ಠಲೇ 

Song: Maanva Moole Maamsada
Movie: Bhakta Kumbaara

ರಾಗ ಅನುರಾಗ

ಚಿತ್ರ: ಸನಾದಿ ಅಪ್ಪಣ್ಣ 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ  

ಗಂ:  ರಾಗ ಅನುರಾಗ ಶುಭಯೋಗ ಸೇರಿದೆ 
ಹೆ:   ರಾಗ ಅನುರಾಗ ಶುಭಯೋಗ ಸೇರಿದೆ 
ಗಂ:  ತಂದ ಅನುಬಂಧ ಆನಂದ ತಂದಿದೆ 
ಹೆ:   ತಂದ ಅನುಬಂಧ ಆನಂದ ತಂದಿದೇ, ರಾಗ 
ಗಂ:  ರಾಗ ಅನುರಾಗ ಶುಭಯೋಗ ಸೇರಿದೆ 

ಗಂ:  ರಾಗ ತಾಳ ಮಿಲನ ಸಂಗೀತವಾಗಿದೇ  
ಹೆ:   ಓ, ನಾದ ಲಾಸ್ಯ ಮಿಲನ ಹೊಸ ಭಾವ ಮೂಡಿದೇ 
       ಹೊಸ ಗೀತೆ ಹಾಡಿದೇ 
ಗಂ:  ಹೂವ ಗಂಧದಂತೆ ನಮ್ಮ ಜೀವ ಜೀವ ಸೇರಿ 
       ಉಯ್ಯಾಲೆ ಆಡಿದೇ 
       ರಾಗ ಅನುರಾಗ ಶುಭಯೋಗ ಸೇರಿದೆ 

ಹೆ:   ಹೃದಯವೀಣೆ ಮೀಟಿ ಹೊಸ ತಾನ ನುಡಿಸಿದೇ 
ಗಂ:  ಗಾನ ಗಂಗೆಯಲ್ಲಿ ತೇಲಾದಿದಂತಿದೇ, ಸುರಲೋಕ ಕಂಡಿದೇ 
ಹೆ:   ಗಂಗೆ ಶಿವನ ವರಿಸಿ ಶಿರವೇರಿದಂತೆ ನನ್ನ ಬಾಳಿಂದು ಆಗಿದೆ 
       ರಾಗ ಅನುರಾಗ ಶುಭಯೋಗ ಸೇರಿದೆ 

ಗಂ:  ಬಾಳ ನದಿಯು ಇಂದು ಹೊಸ ಹಾದಿ ಹಿಡಿದಿದೇ  
ಹೆ:   ಪ್ರಣಯವೆಂಬ ಒಲವ ಹಾಯಾಗಿ ಬಳಸಿದೇ 
ಗಂ:  ಪ್ರಣಯವೆಂಬ ಒಲವ ಹಾಯಾಗಿ ಬಳಸಿದೇ 
ಜೊ: ಉಲ್ಲಾಸ ತಂದಿದೆ 
ಗಂ:  ಹರುಷವೆಂಬ ಕಡಲ
ಹೆ:   ಅಲೆಅಲೆಯು ತೇಲಿಬಂದು
ಜೊ: ಈ ನದಿಯ ಸೇರಿದೇ, ರಾಗ 

ಗಂ:  ರಾಗ 
ಹೆ:   ರಾಗ ಅನುರಾಗ
ಗಂ:  ಶುಭಯೋಗ ಸೇರಿದೆ 
ಗಂ:  ತಂದ
ಗಂ:  ಅನುಬಂಧ
ಜೊ: ಆನಂದ ತಂದಿದೇ, ರಾಗ 

Song: Raaga Anuraaga
Movie: Sanaadi Appanna

ರಾಗ ಜೀವನ ರಾಗ

ಚಿತ್ರ: ಶ್ರುತಿ ಸೇರಿದಾಗ
ರಚನೆ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್ 

ಗಂ:  ರಾಗ ಜೀವನ ರಾಗ ।೨।
        ಪ್ರೇಮ ಸುಮವು ಅರಳಿದಾಗ ಮೋಹನ ರಾಗ 
        ಒಲಿದ ಜೀವ ಸೇರಿದಾಗ ಮೌನದ ರಾಗ 
ಹೆ:   ರಾಗ ಜೀವನ ರಾಗ ।೨।

ಹೆ:   ಕಂಗಳು ಬೆರೆತಾಗ ಆ ಅನುರಾಗ 
        ಹಾಡಿತು ಕಿವಿಯಲ್ಲಿ ಪ್ರೇಮದ ರಾಗ 
ಗಂ:  ಎದೆಯಲಿ ಆನಂದ ತುಂಬಲು ಆಗ ।೨।
        ದಿನವೂ ದಿನವೂ ನೂರು ನೂರು ಹೊಸ ರಾಗ 

ಹೆ:   ರಾಗ ಜೀವನ ರಾಗ
ಗಂ:  ರಾಗ ಜೀವನ ರಾಗ

ಹೆ:   ಮೈಯ್ಯಿಗೆ ಮೈ ಸೋಕಿದಾಗ, ಏತಕೊ ನನ್ನಲ್ಲಿ ಆವೇಗ 
ಗಂ:  ಆಸೆಯ ಬಾನಾಡಿ ಬಾನಿಗೆ ಜಿಗಿದಾಗ ।೨।
        ಸೇರುವ ಕಾತುರ ಮೂಡಿತು ಬೇಗ 
ಹೆ:   ಮೈಯ್ಯಿಗೆ ಮೈ ಸೋಕಿದಾಗ
ಗಂ:  ಏತಕೊ ನನ್ನಲ್ಲಿ ಆವೇಗ 

ಗಂ:  ಪ್ರೇಮದ ನುಡಿಯಿಂದು ಸವಿಯಾದ ರಾಗ 
        ಪ್ರೀತಿಯ ಹಾಡೆಲ್ಲ ಹಿತವಾದ ರಾಗ 
ಹೆ:   ಸರಸದ ನುಡಿಯಂದು ಸಂವಾದ ರಾಗ 
        ಪ್ರಣಯದ ಹಾಡೆಲ್ಲ ಹಿತವಾದ ರಾಗ 

ಗಂ:  ಬಿಸಿಲೆಲ್ಲ ಆಗ ಬೆಳದಿಂಗಳಾಗಿ 
        ಅನುಕ್ಷಣ ಹೊಸತನ ಚಿಗುರುವುದಾಗ 
ಹೆ:   ಮೈಯ್ಯಿಗೆ ಮೈ ಸೋಕಿದಾಗ
ಗಂ:  ಏತಕೊ ನನ್ನಲ್ಲಿ ಆವೇಗ

ಹೆ:   ರಾಗ ಜೀವನ ರಾಗ
ಗಂ:  ರಾಗ ಜೀವನ ರಾಗ

ಜೊ: ಪ್ರೇಮ ಸುಮವು ಅರಳಿದಾಗ ಮೋಹನ ರಾಗ 

        ಒಲಿದ ಜೀವ ಸೇರಿದಾಗ ಮೌನದ ರಾಗ 
        ರಾಗ ಜೀವನ ರಾಗ

Song: Raaga Jeevana Raaga
Movie: Shruti Seridaga

ನಗಲಾರದೇ ಅಳಲಾರದೇ

ಚಿತ್ರ: ಶ್ರುತಿ ಸೇರಿದಾಗ
ರಚನೆ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕ: ಡಾ. ರಾಜಕುಮಾರ್

ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ ।೨।
ಬರಿಮಾತಲೀ ಹೇಳಲಾರದೇ ಮನದಾಳದ ನೋವ 

ದಿನಕೊಂದು ಬಣ್ಣ, ಕ್ಪಣಕೊಂದು ಬಣ್ಣ, ಏನೇನೋ ವೇಷ ಮಾತಲ್ಲಿ ಮೋಸ ।೨।
ಆ ಮಾತನ್ನೆಲ್ಲ ನಿಜವೆಂದು ನಂಬಿ ।೨।
ಮನದಾಸೆಯೇ...  ಮಣ್ಣಾಯಿತೇ... 
ಮನದಾಸೆಯೆ ಮಣ್ಣಾಯಿತೆ ಮನನೆಮ್ಮದಿ ದೂರಾಯಿತೇ 

ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ

ನಿಜವಾದ ಪ್ರೇಮ, ನಿಜವಾದ ಸ್ನೇಹ, ಅನುರಾಗವೇನೋ ಬಲ್ಲೋರು ಇಲ್ಲ ।೨।
ಬಾಳಲ್ಲೆ ನಟನೆ ಹೀಗೇಕೊ ಕಾಣೆ ।೨।
ಬದುಕಲ್ಲಿಯೇ... ಹುಡುಗಾಟವೇ... 
ಬದುಕಲ್ಲಿಯೆ ಹುಡುಗಾಟವೆ ಈ ಆಟಕೆ ಕೊನೆಯಿಲ್ಲವೇ 

ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ 
ಬರಿಮಾತಲೀ ಹೇಳಲಾರದೇ ಮನದಾಳದ ನೋವ 

Song: Nagalaarade Alalaarade
Movie: Shruti Seridaga