Saturday, November 5, 2016

ಮೇಘ ಬಂತು ಮೇಘ

ಚಿತ್ರ: ಮಣ್ಣಿನ ದೋಣಿ 
ರಚನೆ: ಹಂಸಲೇಖ 
ಸಂಗೀತ: ಹಂಸಲೇಖ 
ಗಾಯಕ: ಡಾ. ರಾಜಕುಮಾರ್ 

ಮೇಘ ಬಂತು ಮೇಘ ।೨।
।। ಮೇಘ ಬಂತು ಮೇಘ ।೨।
    ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ ।।೨।।
ಇರುಳು ಸರಿದು, ಬೆಳಕು ಹರಿದು 
ಕನಸು ಮುಗಿದು, ಮನಸು ಜಿಗಿದು 
ಸರಿಗಮಪ ಪದನಿಸ ಸಂಚಾರದಲಿ 
ಮೇಘ ಬಂತು ಮೇಘ ।೨।
ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ

ರವಿಯ ರಾಶಿಯಲಿ ಹೊನ್ನ ರಶ್ಮಿಯಲಿ ಜನಿಸಿತೊಂದು ರೂಪ 
ಬೆಳಕಿನ ಚೆಲುವೆ ಸುಳಿದಳೂ, ಬಳುಕುತಾ ಇಳೆಗೆ ಇಳಿದಳೂ 
ಉಷೆಯ ರಂಗಿನಲಿ ತೃಷೆಯ ನೋಟದಲಿ ಕವಿಯ ಬಳಿಗೆ ಬಂದು 
ಪ್ರೇಮದ ನಯನ ತೆರೆದಳು, ಕಾವ್ಯದ ಒಳಗೆ ಕುಳಿತಳು 
ಕಲಕಲಗೊಂಡವು ತ್ರಿಪದಿ ಪದಗಳು, ಪರವಶಗೊಂಡವು ಸಕಲ ರಸಗಳು 

ಇರುಳು ಸರಿದು, ಬೆಳಕು ಹರಿದು 
ಕನಸು ಮುಗಿದು, ಮನಸು ಜಿಗಿದು 
ಸರಿಗಮಪ ಪದನಿಸ ಸಂಚಾರದಲಿ 
ಮೇಘ ಬಂತು ಮೇಘ ।೨।
ಮೇಘ ಕಾವ್ಯದ ಮೇಘ, ಕನ್ಯಾ ಕವನ ಮೇಘ

ನಾದ ಮಂದಿರದ ವೇದದಿಂಚರದ ಮದುವೆ ಮಂಟಪದಲೀ  
ನಲಿದವು ಲಕ್ಷ ದಕ್ಷದೆ, ಪಡೆದವು ಧಾನ್ಯ ಧನ್ಯತೆ 
ಪ್ರೇಮ ಸಿಂಚನದ ಬಾಳ ಬಂಧನದ ಸ್ನೇಹ ಶಾಸ್ತ್ರದೊಳಗೆ 
ನೆಡೆದವು ಸಪ್ತಪದಿಗಳು, ಸಂದವು ಸಕಲ ವಿಧಿಗಳು 
ಋತುವಿನ ಪಥದಲಿ, ಬಾಳ ರಥವಿದೆ 
ಪಯಣವ ಸವೆಸಲು, ಪ್ರೇಮ ಜೊತೆಗಿದೆ 

ಇರುಳು ಸರಿದು, ಬೆಳಕು ಹರಿದು 
ಕನಸು ಮುಗಿದು, ಮನಸು ಜಿಗಿದು 
ಸರಿಗಮಪ ಪದನಿಸ ಸಂಚಾರದಲಿ 
ಮೇಘ ಬಂತು ಮೇಘ ।೨।
ಮೇಘ ಕಲ್ಯಾಣ ಮೇಘ, ಯೋಗಾಯೋಗದ ಮೇಘ

ಮೇಘ ಬಂತು ಮೇಘ ।೨।
ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ

Song: Megha Banthu Megha
Movie: Mannina Dhoni

ಸಪ್ತಪದಿ ಇದು ಸಪ್ತಪದಿ

ಚಿತ್ರ: ಸಪ್ತಪದಿ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಸಪ್ತಪದೀ ಇದು ಸಪ್ತಪದೀ ।೨।
ಈ ಏಳು ಹೆಜ್ಜೆಗಳ ಸಂಬಂಧ, ನಮಗೇಳು ಜನ್ಮಗಳ ಅನುಬಂಧ ।೨।
ಸಪ್ತಪದೀ ಇದು ಸಪ್ತಪದೀ

ನಿನ್ನೊಡನೆ ನನ್ನ ಜೀವನದ ಮೊದಲ ಹೆಜ್ಜೆ ಇಡುವೇ
ಇದಕೇ ಹರಿಯೆ ಸಾಕ್ಷಿ ಏನುವೇ
ಸ್ವರ್ಗ ಸಮಾನ ಸುಖವ ನೀಡೆಂದು ಕೈಗಳನು ಮುಗಿವೇ
ಎರಡನೆ ಹೆಜ್ಜೆಯನು ಇಡುವೇ

ಸಪ್ತಪದೀ ಇದು ಸಪ್ತಪದೀ

ಮೂರು ಕಾಲದಲು ಏಕ ರೀತಿ ನಾ ಸಹಚರನಾಗಿರುವೇ
ಮೂರನೆ ಹೆಜ್ಜೆಯನು ಇಡುವೇ
ಮಮತೆ ಮೋಹ ಸುಖ ದುಃಖ್ಖದಲಿ ಜೊತೆಯಲ್ಲೇ ಇರುವೇ
ನಾಲ್ಕನೆ ಹೆಜ್ಜೆಯನು ಇಡುವೇ

ಸಪ್ತಪದೀ ಇದು ಸಪ್ತಪದೀ

ಜೊತೆಯಾಗಿ ನಾವು ಅಜ್ಞಾನದಿಂದ ।೨।
ಮುಕ್ತರಾಗೋಣ ಏನುತಾ ಐದನೆ ಹೆಜ್ಜೆಯನು ಇಡುವೇ 
ಆರು ಋತುಗಳಲಿ ನಿಲಿವ ಪ್ರಕೃತಿಯು, ಸ್ವಾಗತ ನೀಡಲಿ ಎನುವೆ 
ಆರನೆ ಹೆಜ್ಜೆಯನು ಇಡುವೇ
ಸಪ್ತ ಋಷಿಗಳ ಸ್ಮರಣೆ ಮಾಡುತ, ಅರಸಿ ನಮ್ಮನು ಎಂದು ಬೇಡುತ 
ಏಳನೆ ಹೆಜ್ಜೆ ಇಡುವೇ, ನಾ ಏಳನೆ ಹೆಜ್ಜೆ ಇಡುವೇ 

ಸಪ್ತಪದೀ ಇದು ಸಪ್ತಪದೀ ।೨।
ಈ ಏಳು ಹೆಜ್ಜೆಗಳ ಸಂಬಂಧ, ನಮಗೇಳು ಜನ್ಮಗಳ ಅನುಬಂಧ ।೨।
ಸಪ್ತಪದೀ ಇದು ಸಪ್ತಪದೀ ।೨।

Song: Saptapadi Idu Saptapadi 
Movie: Saptapadi

ಬಾ ಮುತ್ತು ಕೊಡುವೆ

ಚಿತ್ರ: ಕಾಮನ ಬಿಲ್ಲು
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ ।೨।
ನಿನ್ನ ಹವಳದಂತ ತುಟಿಗೆ ಇಂದು, ಪ್ಪ್, ಎಂದು ನಾನು 
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ ।೨।

ನಿನ್ನ ಮೊಗವನ್ನು ಕಂಡಾಗ ನಾಚಿ, ಶಶಿ ಮೋಡದಲಿ ಮರೆಯಾದನು
ನಿನ್ನ ತುಂಟಾಟ ನೋಡಿ ಬೆರಗಾಗಿ, ಕೃಷ್ಣ ಗುಡಿಯಲ್ಲಿ ಶಿಲೆಯಾದನು 
ನೀನಾಡೋ ತೊದಲು ನುಡಿ ಅರಗಿಣಿಯ ಮಾತಂತೆ ।೨।
ಸವಿ ಜೇನ ಹನಿಯಂತೆ ನನ್ನ ಮುದ್ದು ರಾಜ 
ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ 

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ 
ನಿನ್ನ ಹವಳದಂತ ತುಟಿಗೆ ಇಂದು, ಪ್ಪ್, ಎಂದು ನಾನು 

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ ।೨।

ನೀನು ನಕ್ಕಾಗ ಬೆಳದಿಂಗಳಂತೆ, ನೀನು ಅತ್ತಾಗ ಸಂಗೀತವೋ 
ಅಂದ ಬಂಗಾರದ ಬೊಂಬೆಯಂತೆ, ಕಂದ ಈ ಮನೆಗೆ ನೀ ಪ್ರಾಣವೋ 
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ ।೨।
ನೀ ನನ್ನ ಉಸಿರಂತೆ ನನ್ನ ಮುದ್ದು ರಾಜ 
ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ 

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ 
ನಿನ್ನ ಹವಳದಂತ ತುಟಿಗೆ ಇಂದು, ಪ್ಪ್, ಎಂದು ನಾನು 


ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ ।೨।

Song: Baa Mutthu Koduve Kandane
Movie: Kaamana Billu

ಕಣ್ಣು ಕಣ್ಣು ಕಲೆತಾಗ

ಚಿತ್ರ: ಕಾಮನ ಬಿಲ್ಲು
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್  

ಹೆ:    ಕಣ್ಣು ಕಣ್ಣು ಕಲೆತಾಗ, ಮನವು ಉಯ್ಯಾಲೆ ಆಗಿದೆ ತೂಗಿ 
        ಹೃದಯ ಬಿಡಲಾರೆ ಎಂದಿದೆ ಕೂಗಿ 
ಗಂ:  ಕಣ್ಣು ಕಣ್ಣು ಕಲೆತಾಗ, ಮನವು ಉಯ್ಯಾಲೆ ಆಗಿದೆ ತೂಗಿ 

        ಹೃದಯ ಬಿಡಲಾರೆ ಎಂದಿದೆ ಕೂಗಿ 

ಹೆ:    ಹೊಸ ಸುಖ ಕಾಣುತಿದೆ, ಹೊಸ ಕನಸಾಗುತಿದೆ, ಹೊಸ ಬಯಕೆಯು ಮೂಡುತಿದೆ 
ಗಂ:   ಹೊಸ ಹೊಸ ಭಾವನೆ, ಹೊಸ ಹೊಸ ಕಲ್ಪನೆ, ಹೊಸ ಲೋಕಕೆ ಸೆಳೆಯುತಿದೆ 
ಹೆ:    ಅಹ ಏನೋ ಹೇಳೋ ಆಸೆ, ಅಹ ಏನೋ ಕೇಳೋ ಆಸೆ, ನಾಚಿಕೆ ತಡೆಯುತಿದೆ ।೨।

ಗಂ:  ಕಣ್ಣು ಕಣ್ಣು ಕಲೆತಾಗ, ಮನವು ಉಯ್ಯಾಲೆ ಆಗಿದೆ ತೂಗಿ 


ಹೆ:    ಹೃದಯ ಬಿಡಲಾರೆ ಎಂದಿದೆ ಕೂಗಿ 

ಗಂ:  ಮೈ ನವಿರೇಳುತಿದೆ, ತನು ಹೂವಾಗುತಿದೆ, ಮನ ಕವಿತೆಯ ಹಾಡುತಿದೆ 
ಹೆ:    ನಿನ್ನ ಮನ ಹಾಡಿರುವ, ಕವಿ ನುಡಿ ಸಾಲುಗಳ, ಈ ಕಂಗಳೇ ಹೇಳುತಿದೆ 
ಗಂ:  ಈ ಮಾತು ಎಂಥ ಚೆನ್ನ, ಈ ನೋಟ ಎಂಥ ಚೆನ್ನ,. ನಿನ್ನ ಪ್ರೇಮಕೇ ನಾ ಸೋತೆ ।೨।

ಹೆ:    ಕಣ್ಣು ಕಣ್ಣು ಕಲೆತಾಗ, ಮನವು ಉಯ್ಯಾಲೆ ಆಗಿದೆ ತೂಗಿ 
ಗಂ:  ಹೃದಯ ಬಿಡಲಾರೆ ಎಂದಿದೆ ಕೂಗಿ 

Song: Kannu Kannu Kalethaga
Movie: Kaamana Billu

ಇಂದು ಆನಂದ ನಾ ತಾಳಲಾರೆ

ಚಿತ್ರ: ಕಾಮನ ಬಿಲ್ಲು
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್  

ಗಂ:  ಇಂದು ಆನಂದ ನಾ ತಾಳಲಾರೆ, ಚಿನ್ನ ಮಾತಲ್ಲಿ ನಾ ಹೇಳಲಾರೆ 
        ನನ್ನ ಕುಣಿಸಲು ಬಯಕೆಗಳು, ಕಂಡೆ ಹೊಸ ಹೊಸ ಕನಸುಗಳು ।೨।
        ನೀನೆಂದೆಂದು ನನ್ನವಳೇ 
ಹೆ:   ಇಂದು ಆನಂದ ನಾ ತಾಳಲಾರೆ, ನನ್ನ ಮಾತಲ್ಲಿ ನಾ ಹೇಳಲಾರೆ 
        ನನ್ನ ಕುಣಿಸಲು ಬಯಕೆಗಳು, ಕಂಡೆ ಹೊಸ ಹೊಸ ಕನಸುಗಳು ।೨।

        ನೀನೆಂದೆಂದು ನನ್ನವನೇ  

ಗಂ:  ಬಳಸುತಿದೆ ಲತೆ ಬಳಸುತಿದೆ, ಆಸರೆ ಬೇಕೆಂದು ಮರವನ್ನೂ, ನಮ್ಮಂತೆ ಅನುರಾಗದೀ 
ಹೆ:   ನಲಿಯುತಿದೆ ಹೊಸ ಹೂಗಳಲಿ, ಜೇನನು ಹೀರುತ್ತ ದುಂಬಿಗಳು, ನಮ್ಮಂತೆ ಉಲ್ಲಾಸದೀ 
ಗಂ:  ನೋಡು ಈ ಸಂಜೆಯಲ್ಲಿ, ಬೀಸೋ ತಂಪಾದ ಗಾಳಿ 
        ಬಂದು ಸುಯ್ನ್ ಎಂದು ಹಾಡಿ, ನನ್ನ  ಬಳಿ ಹೇಳಿದೆ 
        ನೀನೆಂದೆಂದು ನನ್ನವಳೇ 

ಹೆ:   ಇಂದು ಆನಂದ ನಾ ತಾಳಲಾರೆ, ನನ್ನ ಮಾತಲ್ಲಿ ನಾ ಹೇಳಲಾರೆ 
ಗಂ:  ನನ್ನ ಕುಣಿಸಲು ಬಯಕೆಗಳು, ಕಂಡೆ ಹೊಸ ಹೊಸ ಕನಸುಗಳು ।೨।
        ನೀನೆಂದೆಂದು ನನ್ನವಳೇ 

ಹೆ:   ಹರಿಯುತಿದೆ ನದಿ ಹರಿಯುತಿದೆ, ಸಾಗರ ಎಲ್ಲೆಂದು ಹುಡುಕುತಿದೇ, ನಮ್ಮಂತೆ ಒಂದಾಗಲೂ
ಗಂ:  ಕರೆಯುತಿದೆ ಎಲೆ ಮರೆಯಲ್ಲಿ, ಕೋಗಿಲೆಯೊಂದು ಹಾಡುತಿದೇ, ಸಂಗಾತಿಯ ಸೇರಲು
ಹೆ:   ನೋಡು ಬಾನಂಚಿನಲ್ಲಿ, ಸಂಜೆ ರಂಗನ್ನು ಚೆಲ್ಲಿ
        ನಮಗೆ ಶುಭವನ್ನು ಹಾಡಿ, ನನ್ನ ಬಳಿ ಹೇಳಿದೆ
        ನೀನೆಂದೆಂದು ನನ್ನವನೇ  

ಗಂ:  ಇಂದು ಆನಂದ ನಾ ತಾಳಲಾರೆ, ಚಿನ್ನ ಮಾತಲ್ಲಿ ನಾ ಹೇಳಲಾರೆ 
        ನನ್ನ ಕುಣಿಸಲು ಬಯಕೆಗಳು, ಕಂಡೆ ಹೊಸ ಹೊಸ ಕನಸುಗಳು ।೨।

        ನೀನೆಂದೆಂದು ನನ್ನವಳೇ 
ಹೆ:   ಇಂದು ಆನಂದ ನಾ ತಾಳಲಾರೆ, ನನ್ನ ಮಾತಲ್ಲಿ ನಾ ಹೇಳಲಾರೆ 
ಜೊ: ನನ್ನ ಕುಣಿಸಲು ಬಯಕೆಗಳು, ಕಂಡೆ ಹೊಸ ಹೊಸ ಕನಸುಗಳು ।೨।


ಹೆ:   ನೀನೆಂದೆಂದು ನನ್ನವನೇ  
ಗಂ:  ನೀನೆಂದೆಂದು ನನ್ನವಳೇ 

Song: Indu Ananda Naa Thaalalare
Movie: Kaamana Billu

ಏಕೆ ಮಲ್ಲಿ ಹಂಗೆ

ಚಿತ್ರ: ಎರಡು ನಕ್ಷತ್ರಗಳು 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕರು: ಡಾ. ರಾಜಕುಮಾರ್, ವಾಣಿ ಜಯರಾಮ್ 

ಗಂ: ಏಕೆ ಮಳ್ಳಿ ಹಂಗೆ ನನ್ನ ನೀನು ಕದ್ದು ಕದ್ದು ನೋಡುತಿಯೇ, ಭಯವು ಇನ್ನೇಕೇ 
       ಓ ಹೊ ಹೋ, ನೀನು ನನ್ನ, ಮನಸ್ಸನ್ನು, ಅರಿತಾಗ, ಎದೆಯಾಸೆ, ತಿಳಿದಾಗ 
       ಏಕೆ ಮಳ್ಳಿ  ಹಂಗೆ ನನ್ನ ನೀನು ಕದ್ದು ಕದ್ದು ನೋಡುತಿಯೇ, ಭಯವು ಇನ್ನೇಕೇ 

ಹೆ:  ಕಣ್ಣಿನ ಬಾಣ ಬಿಟ್ಟು ನನ್ನ ಏಕೆ ಕೊಲ್ಲುವೆಯೋ
       ಬಣ್ಣದ ಮಾತೀನಿಂದ ಇನ್ನೂ ಏಕೆ ಸೆಳೆಯುವೆಯೋ
ಗಂ: ಮಲ್ಲಿಗೆ ಹೂವ ಕಂಡು ಆಸೆ ನೂರು ಚಿಮ್ಮುತಿದೆ
       ಮೆಲ್ಲಗೆ ನಿನ್ನ ಸೇರೊ ಬಯಕೆ ಈಗ ಹೊಮ್ಮುತಿದೆ
ಹೆ:  ಕೆಣಕೋ ಮಾತೇಕೆ ಹೊಯ್, ಹಿಡಿವೆ ಸೆರಗೇಕೆ ಹೊಯ್ 
       ಚೆಲುವ, ಚಪಲ, ನಿನಗೇಕೆ 
ಗಂ: ಓ ಹೊ ಹೋ, ಬೆಡಗಿ ಹುಡುಗಿ, ಸಂಕೋಚ, ನಿನಗೇಕೆ, ಈ ದೂರ, ಇನ್ನೇಕೆ 

ಗಂ: ಏಕೆ ಮಳ್ಳಿ ಹಂಗೆ ನನ್ನ ನೀನು ಕದ್ದು ಕದ್ದು ನೋಡುತಿಯೇ, ಭಯವು ಇನ್ನೇಕೇ 

ಗಂ: ಕಣಿವೆಯ ಹಾದೀಯಲ್ಲಿ ಯಾರು ಈಗ ಇರುವುದಿಲ್ಲ 
       ಪ್ರಣಯದ ಆಟವನ್ನು ಯಾರು ಅಲ್ಲಿ ನೋಡೋರಿಲ್ಲ 
ಹೆ:  ಎದೆಯಲಿ ಏಕೋ ಏನೋ ಢವ ಢವ ಎನ್ನುತ್ತಿದೆ 
       ಮೈಯ್ಯಲ್ಲಿ ಏನೋ ಏನೋ ಜುಮು ಜುಮು ಎನ್ನುತ್ತಿದೆ 
ಗಂ: ಬಳಸು ತೋಳಿಂದಾ ಹೊಯ್, ಕೊಡು ಬಾ ಆನಂದಾ ಹೊಯ್ 
       ಬಿಸಿಯು ಏರಿ ಮೈಯ್ಯಲ್ಲಾ 
ಹೆ:  ಓ ಹೊ ಹೋ,  ಮಾತು ಸಾಕು, ಬಾ ನಲ್ಲ, ಹೋಗೋಣ, ಆನಂದ, ಹೊಂದೋಣಾ 

Song: Eke Malli Hange
Movie: Eradu Nakshatragalu

ಗೆಳತಿ ಬಾರದು ಇಂಥಾ ಸಮಯ

ಚಿತ್ರ: ಎರಡು ನಕ್ಷತ್ರಗಳು 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕರು: ಡಾ. ರಾಜಕುಮಾರ್ 

ಗೆಳತಿ ಬಾರದು ಇಂಥಾ ಸಮಯ ।೨।
ಅನುರಾಗ ಬೇಕಿಂದಿದೆ ಹೃದಯ
ಗೆಳತಿ ಬಾರದು ಇಂಥಾ ಸಮಯ

ನೋಡು ಹಿತವಾಗಿ ತಂಗಾಳಿ ಬೀಸಿ, ಹೂವ ತಂಪನ್ನು ಎಲ್ಲೆಲ್ಲೂ ಹಾಸಿ ।೨।
ಮೈಗೆ ಸೋಕಿ ತಂಪನ್ನು ಬೆರಸಿ
ಬಯಕೆ ಹೊಮ್ಮಿ ಹೊಮ್ಮಿ ಹಾಡುತಿದೆ ।೨।
ಹಿತವಾದ ನೋವಿಂದ ನಾ ಬೆಂದೆ 

ಗೆಳತಿ ಬಾರದು ಇಂಥಾ ಸಮಯ

ಮನದಾಸೆ ನೀನೇತಕೇ ಕಾಣೆ, ನಿನ್ನಾಸೆ ಅದೇನಿದೇ `ಜಾಣೆ ।೨।
ಚೆಲುವೆ ತಾಳೆನು ಇನ್ನೂ ವಿರಹ 
ಎದೆಯ ತುಂಬಿದೆ ನಿನ್ನಾ ಮೋಹ 
ಒಲವಿಂದ ನೀ ಬಾರೆಯಾ ಸನಿಹ 

ಗೆಳತಿ ಬಾರದು ಇಂಥಾ ಸಮಯ 
ಅನುರಾಗ ಬೇಕಿಂದಿದೆ ಹೃದಯ

ಗೆಳತಿ ಬಾರದು ಇಂಥಾ ಸಮಯ

Song: Gelathi Baradu
Movie: Eradu Nakshatragalu

Friday, November 4, 2016

ಶ್ರಾವಣ ಮಾಸ ಬಂದಾಗ

ಚಿತ್ರ: ಶ್ರಾವಣ ಬಂತು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್

ಗಂ:  ಶ್ರಾವಣ ಮಾಸ ಬಂದಾಗ, ಆನಂದ ತಂದಾಗ
        ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ
ಹೆ:   ಶ್ರಾವಣ ಮಾಸ ಬಂದಾಗ, ಆನಂದ ತಂದಾಗ
        ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ

ಗಂ:  ನೀ ನನ್ನ ಜೊತೆಯಾಗಿ, ಇರುವಾಗ ಹಿತವಾಗಿ
        ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ
ಹೆ:   ನೀ ನನ್ನ ಜೊತೆಯಾಗಿ, ಇರುವಾಗ ಹಿತವಾಗಿ
        ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ
ಗಂ:  ಮಾತೆಲ್ಲ ಹಾಡಾಗಿ, ಆ ಹಾಡು ಇಂಪಾಗಿ
        ಯುಗ ಒಂದು ದಿನವಾಗಿ, ದಿನವೊಂದು ಕ್ಷಣವಾಗಿ
        ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ

ಹೆ:   ಶ್ರಾವಣ ಮಾಸ ಬಂದಾಗ, ಆನಂದ ತಂದಾಗ
ಗಂ:  ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ

ಹೆ:   ಮುಗಿಲೆಲ್ಲ ಕಪ್ಪಾಗಿ, ಮಿಂಚಿಂದ ಬೆಳಕಾಗಿ
        ಗುಡುಗಿಂದ ಸದ್ದಾಗಿ, ಮಳೆಬಂದು ತಂಪಾಗಿ
ಗಂ:  ಮುಗಿಲೆಲ್ಲ ಕಪ್ಪಾಗಿ, ಮಿಂಚಿಂದ ಬೆಳಕಾಗಿ
        ಗುಡುಗಿಂದ ಸದ್ದಾಗಿ, ಮಳೆಬಂದು ತಂಪಾಗಿ
ಹೆ:   ಸಂತೋಷ ಹೆಚ್ಚಾಗಿ, ನವಿಲೊಂದು ಹುಚ್ಚಾಗಿ
        ಕುಣಿದಾಗ ಸೊಗಸಾಗಿ, ನಮಗಾಗ ಚಳಿಯಾಗಿ
        ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ

ಗಂ:  ಶ್ರಾವಣ ಮಾಸ ಬಂದಾಗ, ಆನಂದ ತಂದಾಗ
        ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ
ಹೆ:   ಶ್ರಾವಣ ಮಾಸ ಬಂದಾಗ, ಆನಂದ ತಂದಾಗ
        ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ

Song: Shravana Maasa Bandaga
Movie: Shravana Bantu

ಇದೇ ರಾಗದಲ್ಲಿ

ಚಿತ್ರ: ಶ್ರಾವಣ ಬಂತು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್

ಗಂ:  ಇದೇ ರಾಗದಲ್ಲಿ, ಇದೇ ತಾಳದಲ್ಲಿ
         ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಹೆ:   ಇದೇ ರಾಗದಲ್ಲಿ, ಇದೇ ತಾಳದಲ್ಲಿ
         ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಗಂ:  ಇದೇ ರಾಗದಲ್ಲಿ, ಇದೇ ತಾಳದಲ್ಲಿ

ಗಂ:  ಆ ಯಮುನೆಯಲ್ಲಿ, ಅಲೆಅಲೆಯು ಹೊಮ್ಮಿ
         ಸಂತೋಷದಿಂದ ಬಾನೆಡೆಗೆ ಚಿಮ್ಮಿ 
ಹೆ:   ಆ ಯಮುನೆಯಲ್ಲಿ, ಅಲೆಅಲೆಯು ಹೊಮ್ಮಿ
         ಸಂತೋಷದಿಂದ ಬಾನೆಡೆಗೆ ಚಿಮ್ಮಿ
ಗಂ:  ಆ ಇರುಳಿನಲಿ ಆ ನೀರ ಹನಿ ಕಾಲ್ಗೆಜ್ಜೆ ಧನಿ ಮಾಡಿರಲು
ಹೆ:   ಆ ಇರುಳಿನಲಿ ಆ ನೀರ ಹನಿ ಕಾಲ್ಗೆಜ್ಜೆ ಧನಿ ಮಾಡಿರಲು
ಗಂ:  ಬೆರಗಾದ ಚಂದ್ರನೂ, ಮೈಮರೆತ ಶ್ಯಾಮಾ

ಹೆ:   ಇದೇ ರಾಗದಲ್ಲಿ, ಇದೇ ತಾಳದಲ್ಲಿ
ಗಂ:  ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
         ಇದೇ ರಾಗದಲ್ಲಿ...

ಗಂ:  ಮಧುಮಾಸವೆಂದು ಮಾಮರವು ತೂಗಿ
         ಕೊಳಲಂತೆ ಆಗ ಕೋಗಿಲೆಯು ಕೂಗಿ
ಹೆ:   ಮಧುಮಾಸವೆಂದು ಮಾಮರವು ತೂಗಿ
         ಕೊಳಲಂತೆ ಆಗ ಕೋಗಿಲೆಯು ಕೂಗಿ
ಗಂ:  ಆಕಾಶದಲಿ ತೇಲಾಡುತಿಹ ಆ ಮೋಡಗಳು ಬೆರಗಾಗಿ
ಹೆ:   ಆಕಾಶದಲಿ ತೇಲಾಡುತಿಹ ಆ ಮೋಡಗಳು ಬೆರಗಾಗಿ
ಗಂ:  ಕಾಲ ಮರೆತು ಹೋದವೂ, ಭುವಿಗೆ ಜಾರಿ ಬಂದವು

ಹೆ:   ಇದೇ ರಾಗದಲ್ಲಿ, ಇದೇ ತಾಳದಲ್ಲಿ
ಗಂ:  ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
         ಇದೇ ರಾಗದಲ್ಲಿ.. ಆ ಆ

Song: Ide Raagadalli
Movie: Shravana Bantu

ಹೊಸ ಬಾಳಿನ ಹೊಸಿಲಲಿ

ಚಿತ್ರ: ಶ್ರಾವಣ ಬಂತು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ: ಡಾ. ರಾಜಕುಮಾರ್

ಹೊಸ ಬಾಳಿನ ಹೊಸಿಲಲಿ ನಿಂತಿರುವ, ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲಿ ತೇಲುತಿಹ, ನವ ಜೋಡಿಗೆ ಸುಖವಾಗಲಿ
ಹೊಸ ಬಾಳಿನ ಹೊಸಿಲಲಿ ನಿಂತಿರುವ, ಹೊಸ ಜೋಡಿಗೆ ಶುಭವಾಗಲಿ

ಆ ಸ್ವರ್ಗದ ಬಾಗಿಲು ತೆರೆದಿದೆ ಇಂದು ಈ ಶುಭ ವೇಳೆಯಲೀ
ಆ ದೇವತೆಗಳು ಉಲ್ಲಾಸದಿ ಬಂದರು ನಿಮ್ಮನು ಹರಸುತಲೀ
ಇದು ಬ್ರಹ್ಮನು ಬೆಸದ ಅನುಬಂಧ ।೨।
ಅನುಕಾಲವು ನೀಡಲಿ ಆನಂದ

ಹೊಸ ಬಾಳಿನ ಹೊಸಿಲಲಿ ನಿಂತಿರುವ, ಹೊಸ ಜೋಡಿಗೆ ಶುಭವಾಗಲಿ

ಈ ಹಚ್ಚನೆ ಹಸುರಿನ ತೋರಣವು ಸುಸ್ವಾಗತವನ್ನು ಹೇಳುತಿದೇ
ಈ ಮಂಗಳ ವಾದ್ಯವು ಮೊಳಗಿರಲು, ಶುಭ ಕಾರ್ಯದ ಸಂಭ್ರಮ ಕಾಣುತಿದೆ
ಜನುಮ ಜನುಮದ ಸ್ನೇಹವಿದು ।೨।
ಸಂಸಾರದ ಬಾಳಿಗೆ ನಾಂದಿಯಿದು

ಹೊಸ ಬಾಳಿನ ಹೊಸಿಲಲಿ ನಿಂತಿರುವ, ಹೊಸ ಜೋಡಿಗೆ ಶುಭವಾಗಲಿ

ಈ ಶ್ರಾವಣ ಮಾಸವು ತಂದ ಉಡುಗೊರೆ ಉಲ್ಲಾಸವ ತರಲೀ
ಆ ಮಂಜುನಾಥನ ಕೃಪಾಕಟಾಕ್ಷವು, ಎಂದೆಂದು ನಿಮಗಿರಲೀ
ಒಂದೇ ವರುಷದ ಅವದಿಯಲಿ ।೨।
ಹಸು ಕಂದನು ಮಡಿಲಲಿ ನಗುತಿರಲಿ

ಹೊಸ ಬಾಳಿನ ಹೊಸಿಲಲಿ ನಿಂತಿರುವ, ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲಿ ತೇಲುತಿಹ, ನವ ಜೋಡಿಗೆ ಸುಖವಾಗಲಿ
ಹೊಸ ಬಾಳಿನ ಹೊಸಿಲಲಿ ನಿಂತಿರುವ, ಹೊಸ ಜೋಡಿಗೆ ಶುಭವಾಗಲಿ

Song: Hosa Baalina Hosilali
Movie: Shravana Bantu

Thursday, November 3, 2016

ನಿನ್ನೀ ನಗುವೇ

ಚಿತ್ರ: ಅದೇ ಕಣ್ಣು 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಡಾ. ರಾಜಕುಮಾರ್, ಪಿ. ಬಿ. ಶ್ರೀನಿವಾಸ್ 

ರಾಜ್: ನಿನ್ನೀ ನಗುವೇ  ಅರುಣೋದಯವು, ಈ ಮನೆಗೆ, ನಮ್ಮ ಈ ಮನೆಗೆ ।೨।
ಪಿ.ಬಿ:  ನಿನ್ನಾ ನಗುವೇ ಚಂದ್ರೋದಯವು 
ಜೊ:   ನಮ್ಮ ಬಾಳಿಗೆ 


ಪಿ.ಬಿ:  ಬದುಕು ಒಂದು ಹೂವಿನ ಹಾಗೆ, ನಗುವೇ ಆ ಸುಮದ ಪರಿಮಳವು ।೨।
           ಸರಸ ಹೊಸ ಹರುಷ ಪ್ರತಿ ನಿಮಷ ಕಾಣುವೇ 
ರಾಜ್: ಲಾಲಲ್ಲ ಲಾಲ ಲಾಲಲ್ಲ ಲಾಲ ಲಾಲಲ್ಲ ಲಾಲಲ್ಲಾ 
           ಚಿಂತೆಯಂಬ ಮಾತೆ ಇಲ್ಲ, ಶಾಂತಿ ತುಂಬಿ ಬಾಳೆಲ್ಲ 
           ದಿನವೂ ತರುವೆ ಸಂತೋಷವನು 
ಜೊ:   ನಮ್ಮ ಬಾಳಿಗೆ 

ರಾಜ್: ನಿನ್ನೀ ನಗುವೇ  ಅರುಣೋದಯವು, ಈ ಮನೆಗೆ
ಜೊ:   ನಮ್ಮ ಈ ಮನೆಗೆ
ಪಿ.ಬಿ:  ನಿನ್ನಾ ನಗುವೇ ಚಂದ್ರೋದಯವು 

ಜೊ:   ನಮ್ಮ ಬಾಳಿಗೆ 

ಪಿ.ಬಿ:  ಎಂದು ಹೀಗೆ, ನಿನ್ನ ಹಾಗೆ, ನಗುವ ಆಸೆಯು ಮನದಲ್ಲಿ ।೨।
ರಾಜ್: ಡೂರುಡ್ದು ಡೂರು ಡೂರುಡ್ದು ಡೂರು ಡೂರುಡ್ದು ಡೂರುಡು 
ಪಿ.ಬಿ:  ನಗುತ, ನನ್ನ ನಗಿಸು, ಹೊಸ ಲೋಕ ತೋರಿಸೂ  
ರಾಜ್: ಮಾತು ಅಂದ, ಮೌನ ಅಂದ, ನಿನ್ನೀ ನಗುವು ಇನ್ನೂ ಚಂದ 
           ಅಮ್ಮಾ ನೀನು, ಜೊತೆಯಾಗಿರಲು, ಮನೆಯೆ ಸ್ವರ್ಗವು 

ಜೊ:   ನಿನ್ನೀ ನಗುವೇ  ಅರುಣೋದಯವು, ಈ ಮನೆಗೆ, ನಮ್ಮ ಈ ಮನೆಗೆ
           ನಿನ್ನಾ ನಗುವೇ ಚಂದ್ರೋದಯವು

Song: Ninnee Naguve
Movie: Ade Kannu

ಇದೇ ನೋಟ ಇದೇ ಆಟ

ಚಿತ್ರ: ಅದೇ ಕಣ್ಣು 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್  

ಗಂ:  ಇದೇ ನೋಟ ಇದೇ ಆಟ ।೨।
        ಕಂಡಂದೆ ಚೆಲುವೆ ನಾ ಸೋತೆ ।೨।
        ಅಂದು ನಿನ್ನ ಮಾತು ಕೇಳಿ ಬೆರಗಾದೆನು, ಇಂದು ನಿನ್ನ ಸ್ನೇಹ ಕಂಡು ಮನಸೋತೆನು ।೨।
ಹೆ:   ಇದೇ ನೋಟ ಇದೇ ಆಟ ।೨।
        ಕಂಡಂದೆ ಚೆಲುವ ನಾ ಸೋತೆ ।೨।

ಹೆ:   ನಿನ್ನ ಮಾತು ಮುತ್ತಂತೆ, ನಿನ್ನ ಪ್ರೀತಿ ಜೇನಂತೆ, ನಿನ್ನ ಸೇರಿ ಬಾಳಿಂದು ಸೊಗಸಾಗಿದೆ 
ಗಂ:  ನಿನ್ನ ಕೆನ್ನೆ ಹೂವಂತೆ, ನಿನ್ನ ಮಯ್ಯಿ ಹೊನ್ನಂತೆ, ನಿನ್ನ ರೂಪ ಕಣ್ಣಲ್ಲೆ ಮನೆ ಮಾಡಿದೆ 
ಹೆ:   ಮುದ್ದು ಮುದ್ದು ಮಾತನಾಡಿ ನನ್ನ ಗೆದ್ದೆ, ನಿನ್ನ ತೋಳ ತೆಕ್ಕೆಯಲಿ ಬಿದ್ದೆ  ।೨।

ಗಂ:  ಇದೇ ನೋಟ ಇದೇ ಆಟ
        ಕಂಡಂದೆ ಚೆಲುವೆ ನಾ ಸೋತೆ ।೨।
ಹೆ:   ನೋಡಿ ನೋಡಿ ಹೀಗೆ ನೋಡಿ ಕೊಲಬೇಡವೋ,ಇನ್ನು ನಲ್ಲ ಎಂದು ದೂರ ನಿಲಬೇಡವೋ।೨।

ಗಂ:  ನಿನ್ನ ನಾನು ಬಿಟ್ಟೇನೆ, ಬಿಟ್ಟು ಹೋಗಿ ಕೆಟ್ಟೇನೆ, ನನ್ನ ಪ್ರಾಣ ನೀನಾದೆ ಮನಮೋಹಿನಿ 
ಹೆ:   ಸಾಕು ಇನ್ನು ಬೇರೆಯೇನು, ಬಿಡಲಾರೆ ನಿನ್ನನ್ನು, ನಿನ್ನ ಮಾತು ನನಗಾಯಿತು ಸಂಜೀವಿನಿ 
ಗಂ:  ನೂರು ಜನ್ಮ ಬಂದರೇನು ಕನ್ಯಾಮಣಿ, ಅಂದು ಇಂದು ಮುಂದೆ ಎಂದು ನೀನೆ ರಾಣಿ ।೨।

ಹೆ:   ಇದೇ ನೋಟ ಇದೇ ಆಟ
        ಕಂಡಂದೆ ಚೆಲುವ ನಾ ಸೋತೆ ।೨।
ಗಂ:  ಅಂದು ನಿನ್ನ ಮಾತು ಕೇಳಿ ಬೆರಗಾದೆನು, ಇಂದು ನಿನ್ನ ಸ್ನೇಹ ಕಂಡು ಮನಸೋತೆನು  ।೨।
ಹೆ:   ಇದೇ ನೋಟ ಇದೇ ಆಟ
ಗಂ:  ಕಂಡಂದೆ ಚೆಲುವ ನಾ ಸೋತೆ ।೨।

Song: Ide Nota Ide Aata
Movie: Ade Kannu

ನಯನ ನಯನ

ಚಿತ್ರ: ಅದೇ ಕಣ್ಣು 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಡಾ. ರಾಜಕುಮಾರ್ 

ನಯನ ನಯನ ಮಿಲನ ।೨।
ತನುವಲ್ಲಿ ಹಿತವಾದ ಕಂಪನ 
ನಯನ ನಯನ ಮಿಲನ

ನೂರಾರು ಆಸೆ ಎದೆಯಲ್ಲಿ ತುಂಬಿ ।೨।
ಒಂದಾಗುವಾಸೆ ಮನದಲ್ಲಿ ತುಂಬಿ ।೨।
ಅನುರಾಗ ತಂದ, ಆನಂದವೆಲ್ಲ, ಕಣ್ಣಲ್ಲಿ ತುಂಬಿ

ನಯನ ನಯನ ಮಿಲನ
ತನುವಲ್ಲಿ ಹಿತವಾದ ಕಂಪನ 
ನಯನ ನಯನ ಮಿಲನ

ಆ ನೋಟ ಒಂದು ಹೂಬಾಣದಂತೆ ।೨।
ಆ ಮೌನ ಗೀತೆ ಸಂಗೀತದಂತೆ ।೨।
ಒಲಿದಾಗ ಬಾಳು, ಹೊಸ ಹೂವಿನಂತೆ, ಸಿಹಿ ಜೇನಿನಂತೆ 

ನಯನ ನಯನ ಮಿಲನ 
ತನುವಲ್ಲಿ ಹಿತವಾದ ಕಂಪನ 
ನಯನ ನಯನ ಮಿಲನ

Song: Nayana Nayana

Movie: Ade Kannu

ಅದೇ ಕಣ್ಣು

ಚಿತ್ರ: ಅದೇ ಕಣ್ಣು 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಡಾ. ರಾಜಕುಮಾರ್ 

ಅದೇ ಕಣ್ಣು ।೪।
ಬೇಟೆ ಆಡುತಿದೆ 
ಭಯವ ತುಂಬಿದೆ ।೩।
ಅದೇ ಕಣ್ಣು ।೨।

ಎಲ್ಲೇ ಹೋದರೂ ನೆರಳಿನ ಹಾಗೆ ಹಿಂದೆ ಬರುತಿದೆ ।೨।
ಇರುಳಲಿ ಸುಳಿವ ಮಿಂಚಿನ ಹಾಗೆ ಕಣ್ಣನು ಚುಚ್ಚುತಿದೆ
ನೆಲವನು ಬಗೆದು ಮಣ್ಣಾಗಿರುವ ನಿಜವಾ ಹುಡುಕುತಿದೆ
ಪ್ರಾಣವ ತೆಗೆದರು ಕಂಗಳು ಬದುಕಿ ಹೆದರಿಸಿ ನಡುಗಿಸಿದೆ

ಅದೇ ಕಣ್ಣು।೨।
ಬೇಟೆ ಆಡುತಿದೆ 
ಭಯವ ತುಂಬಿದೆ ।೩।

ಇರುಳಿನಾ ಹಣೆಯಲಿ ಹೊಳೆವಾ ಕಣ್ಣು ಬೆಂಕಿಯ ಕಾರುತಿದೆ ।೨।
ನನ್ನೆದೆಯಲ್ಲಿ ಶಾಂತಿಯ ಕೆದಡಿ ಕಿಚ್ಚನು ಹಚ್ಚುತಿದೆ
ನೆಮ್ಮದಿ ಸುಟ್ಟು ರೋಷವು ಹೆಚ್ಚಿ ಹುಚ್ಚನ ಮಾಡುತಿದೆ
ಮಾಡಿದ ಪಾಪ ಸೇಡನು ತೀರಿಸೆ ವಂಚನು ಹಾಕುತಿದೆ

ಅದೇ ಕಣ್ಣು।೨।
ಬೇಟೆ ಆಡುತಿದೆ 
ಭಯವ ತುಂಬಿದೆ ।೩।

Song: Ade Kannu
Movie: Ade Kannu

Tuesday, November 1, 2016

ಒಂದು ಮಾತನಾಡದೆ

ಚಿತ್ರ: ಗಂಡುಗಲಿ 
ರಚನೆ: ರುದ್ರಮೂರ್ತಿ ಶಾಸ್ತ್ರಿ 
ಸಂಗೀತ: ಸಾಧು ಕೋಕಿಲ 
ಗಾಯಕ: ಡಾ. ರಾಜಕುಮಾರ್ 

ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ 
ಇಂದು ಮಾತನಾಡಿದೆ ಪ್ರೀತಿ ಮೌನವಾಗಿದೆ  
ನೀನೆ ಜೀವ ಜೀವನ, ನೀನೆ ಪ್ರೇಮ ಕಾರಣ 
ಎಂದು ಹೇಳ ಬಂದರೆ, ದೂರ ಹೋದೆ ಏತಕೆ ಕಾಣದಂತ ಲೋಕಕೆ 
ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ

ನಿನ್ನ ಒಲುಮೆ ಚಿಲುಮೆಯಲ್ಲಿ, ತಂಪುಗೊಳಿಸಿ ತಾಪವಾ  
ಕರುಣೆಯಿಂದ ಮಮತೆಯಿಂದ, ಧಾರೆ ಎರೆದೆ ಸ್ನೇಹವಾ  
ನಿನ್ನ ಸೇರಿ ಬಾಳುವಾಸೆ, ಮನದಲಿತ್ತು ಸಾವಿರ 
ಇಂದು ನನ್ನ ನಿನ್ನ ನಡುವೆ
ಬಾಳು ಸಾವಿನಂತರ ।೨।

ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ

ನೂರು ಆಸೆ ಕನಸು ಹೊತ್ತು, ಸುತ್ತ ಬೆಳಕು ಹರಡಿದೇ  
ನನ್ನ ಅಂತರಂಗದಲ್ಲಿ, ಪ್ರೀತಿ ದೀಪ ಬೆಳಗಿದೇ  
ಹೂವಿನಂತೆ ನೀನು ನಲಿದೆ, ಇಂದು ನಲುಗಿ ಹೋದೆಯಾ 
ಒಂಟಿಯಾಗಿ ನನ್ನ ಬಿಟ್ಟು 
ಗೋರಿಸೇರಿ ಬಂದೆಯ ।೨।

ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ
ಆ...... ಆ...... 

Song: Ondu Maathanadade
Movie: Gandugali

Monday, October 31, 2016

ಬೊಂಬೆಯಾಟವಯ್ಯ

ಚಿತ್ರ: ಶ್ರುತಿ ಸೇರಿದಾಗ
ರಚನೆ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕ: ಡಾ. ರಾಜಕುಮಾರ್

ಬೊಂಬೆಯಾಟವಯ್ಯ, ಇದು ಬೊಂಬೆಯಾಟವಯ್ಯ 
ನೀ ಸೂತ್ರಧಾರಿ, ನಾ ಪಾತ್ರಧಾರಿ, ದಡವ ಸೇರಿಸಯ್ಯ 
ಬೊಂಬೆಯಾಟವಯ್ಯ

ಯಾವ ಕಾಲಕೆ, ಯಾವ ತಾಣಕೆ ।೨।
ಏಕೆ ಕಳಿಸುವೆಯೊ ನಾ ಅರಿಯೇ
ಯಾರ ಸ್ನೇಹಕೆ, ಯಾರ ಪ್ರೇಮಕೆ ।೨।
ಯಾರ ನೂಕುವೆಯೊ ನಾ ತಿಳಿಯೇ  
ನೆಡೆಸಿದಂತೆ ನೆಡೆವೇ, ನುಡಿಸಿದಂತೆ ನುಡಿವೇ 
ವಿನೋದವೋ, ವಿಷಾದವೋ, ತರುತ, ಇರುವೆ, ದಿನವು

ಬೊಂಬೆಯಾಟವಯ್ಯ 

ಯಾರ ನೋಟಕೆ, ಕಣ್ಣ ಬೇಟೆಗೆ ।೨।
ಸೋತು ಸೊರಗುವೆನೊ ನಾ ಅರಿಯೇ
ಯಾವ ಸಮಯಕೆ, ಯಾರ ಸರಸಕೆ ।೨।
ಬೇಡಿ ಕೊರಗುವೆನೊ ನಾ ತಿಳಿಯೇ 
ಕವಿತೆ ನುಡಿಸಿಬಿಡುವೇ, ಕವಿಯ ಮಾಡಿ ನಗುವೇ 
ಸಂಗೀತವೋ, ಸಾಹಿತ್ಯವೋ, ಸಮಯ, ನೋಡಿ, ಕೊಡುವೆ 

ಬೊಂಬೆಯಾಟವಯ್ಯ, ಇದು ಬೊಂಬೆಯಾಟವಯ್ಯ 
ನೀ ಸೂತ್ರಧಾರಿ, ನಾ ಪಾತ್ರಧಾರಿ, ದಡವ ಸೇರಿಸಯ್ಯ 
ಬೊಂಬೆಯಾಟವಯ್ಯ

Song: Bombeyaatavayya 
Movie: Shruti Seridaga

ನೀ ತಂದ ಕಾಣಿಕೆ

ಚಿತ್ರ: ಹೃದಯ ಸಂಗಮ 
ರಚನೆ: ಆರ್. ಏನ್. ಜಯಗೋಪಾಲ್ 
ಸಂಗೀತ: ವಿಜಯ್ ಭಾಸ್ಕರ್ 
ಗಾಯಕರು: ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ 

ಗಂ:   ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ 
         ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ 
ಹೆ:    ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ 
         ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ 

ಗಂ:   ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ, ಪೂರೈಸ ಬಂದ ಮನಸಿನ ಬೇಡಿಕೆ ।೨।
ಹೆ:    ಮೈಮರೆತು ನಿಂತೇ ಆ ನಿನ್ನ ನೋಟಕೆ ।೨।
         ನಾ ಹಾಡಿ ಕುಣಿದೆ ನಿನ್ನೆದೆ ತಾಳಕೆ 
         ಆ ಆ ಆ ಆ ಹಾ ಹಾ..... 

ಗಂ:   ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ 
ಹೆ:    ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ 

ಗಂ:   ಕರೆದೆ ನನ್ನಾ ಕನಸಿನ ತೀರಕೆ, ಆಸೆಯ ಹೂಗಳು ಅರಳಿಹ ತೋಟಕೆ ।೨।
ಹೆ:    ಈ ಬಾಳ ಗುಡಿಗೆ ನೀನಾದೆ ದೀಪಿಕೆ 
         ಬೆಳಕಾಗಿ ನಿಂದೇ ನೀ ಎನ್ನ ಜೀವಕೆ 
         ಆ ಆ ಆ ಆ ಹಾ ಹಾ..... 

ಗಂ:   ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ 
         ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ 
ಹೆ:    ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ 
         ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ 

Song: Nee Tanda Kaanike
Movie: Hrudaya Sangama

ಪ್ರೀತಿನೇ ಆ ದ್ಯಾವ್ರು

ಚಿತ್ರ: ದೂರದ ಬೆಟ್ಟ 
ರಚನೆ: ಹುಣಸೂರು ಕೃಷ್ಣಮೂರ್ತಿ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕರು: ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ 

ಗಂ:   ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ।೨।
          ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯವು ಗಾದಿನೇ, ನನ್ನ ನಿನ್ನ ಪಾಲಿಗೆ 
ಹೆ:     ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
          ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯವು ಗಾದಿನೇ, ನನ್ನ ನಿಮ್ಮ ಪಾಲಿಗೆ 
          ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ

ಗಂ:   ನೀ ಪಕ್ಕ ಇದ್ರೆ ಹಿಂಗೆ ಬೆಟ್ಟಾನ್ ಎತ್ತೀನ್ ಬೆಳ್ನಾಗೆ ।೨।
          ಏಸೇ ಕಷ್ಟ ಬಂದ್ರು ನಮಗೇ, ಗೌದ 
          ಏಸೇ ಕಷ್ಟ ಬಂದ್ರು ನಮಗೇ, ಮೀಸೆ ಬುಡ್ತೀನ್ ಸುಂಗೇ 

ಗಂ:   ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ 

ಹೆ:     ಈ ಜೀವ ನಿಮ್ಮದೇನೆ, ನಿಮ್ಮ ಪೂಜೆ ಹೂವು ನಾನೇ ।೨।
          ಈ ನಿಮ್ಮ ಪಾದದಾಣೇ.... 
          ಈ ನಿಮ್ಮ ಪಾದದಾಣೆ, ನಿಮಗಿಂತ ದ್ಯಾವ್ರೆ ಕಾಣೇ

ಹೆ:     ಪ್ರೀತಿನೇ ಆ ದ್ಯಾವ್ರು ತಂದ 
ಗಂ:   ಆಸ್ತಿ ನಮ್ಮ ಬಾಳ್ವೆಗೆ
ಹೆ:     ಹಸಿವಿನಲ್ಲೂ ಹಬ್ಬಾನೇ
ಗಂ:   ದಿನವು ನಿತ್ಯವು ಗಾದಿನೇ,
ಹೆ:     ನನ್ನ ನಿಮ್ಮ ಪಾಲಿಗೆ 
ಗಂ:   ನನ್ನ ನಿನ್ನ ಪಾಲಿಗೆ
ಜೊ:  ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ

Song: Preethine Aa Dyavru
Movie: Doorada Betta

ನಾನೇ ರಾಜಕುಮಾರ

ಚಿತ್ರ: ಭಾಗ್ಯದ ಬಾಗಿಲು 
ರಚನೆ: ಚಿ. ಉದಯಶಂಕರ್ 
ಸಂಗೀತ: ವಿಜಯ ಭಾಸ್ಕರ್ 
ಗಾಯಕ: ಪಿ. ಬಿ. ಶ್ರೀನಿವಾಸ್ 

ನಾನೇ ರಾಜಕುಮಾರ ।೨।
ಕನ್ನಡ ತಾಯಿಯ ಪ್ರೇಮದ ಕುವರ 
ಅನೀತಿ ಅಳಿಸಿ ನ್ಯಾಯವ ಉಳಿಸಿ 
ಶಾಂತಿಯ ನಿಲಿಸಲು ಬಂದ ಕಿಶೋರ 
ಯಾರೋ, ನೀನ್ಯಾರೋ 
।। ಒಬ್ಬನ ಕೆಡಿಸಲು ನೀನ್ಯಾರೊ 
    ಹಣೆಬರಹವ ಅಳಿಸಲು ನೀನ್ಯಾರೊ ।।೨।।

ಹೆ ಹೇ... ನಾನೇ ರಾಜಕುಮಾರ
ಕನ್ನಡ ತಾಯಿಯ ಪ್ರೇಮದ ಕುವರ 
ಅನೀತಿ ಅಳಿಸಿ ನ್ಯಾಯವ ಉಳಿಸಿ 
ಶಾಂತಿಯ ನಿಲಿಸಲು ಬಂದ ಕಿಶೋರ 
ರಾಜ್ ಕುಮಾರ್ 

ಆರಡಿ ಮೂರಡಿ ನೆಲದಲ್ಲಿ, ಹಿಡಿ ಮಣ್ಣಾಗುವ ದೇಹದಲಿ 
ಇರುವ ದುರಾಸೆಗೆ ಮಿತಿಯಲ್ಲಿ, ತೀರದ ಬಯಕೆಗೆ ಕೊನೆಯಲ್ಲಿ 
ನಾನು ನೀನು ಎಲ್ಲಾ, ಸೇರಲೆ ಬೇಕು ಕೊನೆಗಲ್ಲಿ ।೨।
ಮೂರೇ ದಿನದ ಕಥೆಯಲ್ಲಿ, ದುರ್ಗುಣವೇಕೆ ನಿನಗಿಲ್ಲಿ 
ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್ ।೨।

ನಾನೇ ರಾಜಕುಮಾರ
ಕನ್ನಡ ತಾಯಿಯ ಪ್ರೇಮದ ಕುವರ 
ಅನೀತಿ ಅಳಿಸಿ ನ್ಯಾಯವ ಉಳಿಸಿ 
ಶಾಂತಿಯ ನಿಲಿಸಲು ಬಂದ ಕಿಶೋರ
ರಾಜ್ ಕುಮಾರ್ 

ಯುಗ ಯುಗದಿಂದಲು ನೆಡೆದಿಹುದು, ಒಬ್ಬನ ಒಬ್ಬನು ದೋಚುವುದು 
ದೋಚುವ ಜನತೆಗೆ ಸುಖವಿಲ್ಲ, ನ್ಯಾಯಕೆ ಎಂದಿಗೂ ಸಾವಿಲ್ಲ 
ಹೊನ್ನು ಮಣ್ಣು ಎಲ್ಲಾ, ಎಂದಿಗು ಒಬ್ಬನ ಸೊತ್ತಲ್ಲ ।೨।
ಒಬ್ಬನ ಸುಖಕೆ ಹಣವಲ್ಲ, ಧರ್ಮವ ಮರೆವುದು ಸರಿಯಲ್ಲ 
ಹಾಡು
।। ಭಜ ಗೋವಿಂದಂ ।೨।
    ಗೋವಿಂದಂ ಭಜ ಮೂಢಮತೆ ।।೨।।

ನಾನೇ ರಾಜಕುಮಾರ
ಕನ್ನಡ ತಾಯಿಯ ಪ್ರೇಮದ ಕುವರ 
ಅನೀತಿ ಅಳಿಸಿ ನ್ಯಾಯವ ಉಳಿಸಿ 
ಶಾಂತಿಯ ನಿಲಿಸಲು ಬಂದ ಕಿಶೋರ
ರಾಜ್ ಕುಮಾರ್ 

Song: Naane Rajakumara
Movie: Bhagyada Baagilu