Saturday, November 5, 2016

ಮೇಘ ಬಂತು ಮೇಘ

ಚಿತ್ರ: ಮಣ್ಣಿನ ದೋಣಿ 
ರಚನೆ: ಹಂಸಲೇಖ 
ಸಂಗೀತ: ಹಂಸಲೇಖ 
ಗಾಯಕ: ಡಾ. ರಾಜಕುಮಾರ್ 

ಮೇಘ ಬಂತು ಮೇಘ ।೨।
।। ಮೇಘ ಬಂತು ಮೇಘ ।೨।
    ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ ।।೨।।
ಇರುಳು ಸರಿದು, ಬೆಳಕು ಹರಿದು 
ಕನಸು ಮುಗಿದು, ಮನಸು ಜಿಗಿದು 
ಸರಿಗಮಪ ಪದನಿಸ ಸಂಚಾರದಲಿ 
ಮೇಘ ಬಂತು ಮೇಘ ।೨।
ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ

ರವಿಯ ರಾಶಿಯಲಿ ಹೊನ್ನ ರಶ್ಮಿಯಲಿ ಜನಿಸಿತೊಂದು ರೂಪ 
ಬೆಳಕಿನ ಚೆಲುವೆ ಸುಳಿದಳೂ, ಬಳುಕುತಾ ಇಳೆಗೆ ಇಳಿದಳೂ 
ಉಷೆಯ ರಂಗಿನಲಿ ತೃಷೆಯ ನೋಟದಲಿ ಕವಿಯ ಬಳಿಗೆ ಬಂದು 
ಪ್ರೇಮದ ನಯನ ತೆರೆದಳು, ಕಾವ್ಯದ ಒಳಗೆ ಕುಳಿತಳು 
ಕಲಕಲಗೊಂಡವು ತ್ರಿಪದಿ ಪದಗಳು, ಪರವಶಗೊಂಡವು ಸಕಲ ರಸಗಳು 

ಇರುಳು ಸರಿದು, ಬೆಳಕು ಹರಿದು 
ಕನಸು ಮುಗಿದು, ಮನಸು ಜಿಗಿದು 
ಸರಿಗಮಪ ಪದನಿಸ ಸಂಚಾರದಲಿ 
ಮೇಘ ಬಂತು ಮೇಘ ।೨।
ಮೇಘ ಕಾವ್ಯದ ಮೇಘ, ಕನ್ಯಾ ಕವನ ಮೇಘ

ನಾದ ಮಂದಿರದ ವೇದದಿಂಚರದ ಮದುವೆ ಮಂಟಪದಲೀ  
ನಲಿದವು ಲಕ್ಷ ದಕ್ಷದೆ, ಪಡೆದವು ಧಾನ್ಯ ಧನ್ಯತೆ 
ಪ್ರೇಮ ಸಿಂಚನದ ಬಾಳ ಬಂಧನದ ಸ್ನೇಹ ಶಾಸ್ತ್ರದೊಳಗೆ 
ನೆಡೆದವು ಸಪ್ತಪದಿಗಳು, ಸಂದವು ಸಕಲ ವಿಧಿಗಳು 
ಋತುವಿನ ಪಥದಲಿ, ಬಾಳ ರಥವಿದೆ 
ಪಯಣವ ಸವೆಸಲು, ಪ್ರೇಮ ಜೊತೆಗಿದೆ 

ಇರುಳು ಸರಿದು, ಬೆಳಕು ಹರಿದು 
ಕನಸು ಮುಗಿದು, ಮನಸು ಜಿಗಿದು 
ಸರಿಗಮಪ ಪದನಿಸ ಸಂಚಾರದಲಿ 
ಮೇಘ ಬಂತು ಮೇಘ ।೨।
ಮೇಘ ಕಲ್ಯಾಣ ಮೇಘ, ಯೋಗಾಯೋಗದ ಮೇಘ

ಮೇಘ ಬಂತು ಮೇಘ ।೨।
ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ

Song: Megha Banthu Megha
Movie: Mannina Dhoni

No comments:

Post a Comment