Thursday, November 3, 2016

ಇದೇ ನೋಟ ಇದೇ ಆಟ

ಚಿತ್ರ: ಅದೇ ಕಣ್ಣು 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್  

ಗಂ:  ಇದೇ ನೋಟ ಇದೇ ಆಟ ।೨।
        ಕಂಡಂದೆ ಚೆಲುವೆ ನಾ ಸೋತೆ ।೨।
        ಅಂದು ನಿನ್ನ ಮಾತು ಕೇಳಿ ಬೆರಗಾದೆನು, ಇಂದು ನಿನ್ನ ಸ್ನೇಹ ಕಂಡು ಮನಸೋತೆನು ।೨।
ಹೆ:   ಇದೇ ನೋಟ ಇದೇ ಆಟ ।೨।
        ಕಂಡಂದೆ ಚೆಲುವ ನಾ ಸೋತೆ ।೨।

ಹೆ:   ನಿನ್ನ ಮಾತು ಮುತ್ತಂತೆ, ನಿನ್ನ ಪ್ರೀತಿ ಜೇನಂತೆ, ನಿನ್ನ ಸೇರಿ ಬಾಳಿಂದು ಸೊಗಸಾಗಿದೆ 
ಗಂ:  ನಿನ್ನ ಕೆನ್ನೆ ಹೂವಂತೆ, ನಿನ್ನ ಮಯ್ಯಿ ಹೊನ್ನಂತೆ, ನಿನ್ನ ರೂಪ ಕಣ್ಣಲ್ಲೆ ಮನೆ ಮಾಡಿದೆ 
ಹೆ:   ಮುದ್ದು ಮುದ್ದು ಮಾತನಾಡಿ ನನ್ನ ಗೆದ್ದೆ, ನಿನ್ನ ತೋಳ ತೆಕ್ಕೆಯಲಿ ಬಿದ್ದೆ  ।೨।

ಗಂ:  ಇದೇ ನೋಟ ಇದೇ ಆಟ
        ಕಂಡಂದೆ ಚೆಲುವೆ ನಾ ಸೋತೆ ।೨।
ಹೆ:   ನೋಡಿ ನೋಡಿ ಹೀಗೆ ನೋಡಿ ಕೊಲಬೇಡವೋ,ಇನ್ನು ನಲ್ಲ ಎಂದು ದೂರ ನಿಲಬೇಡವೋ।೨।

ಗಂ:  ನಿನ್ನ ನಾನು ಬಿಟ್ಟೇನೆ, ಬಿಟ್ಟು ಹೋಗಿ ಕೆಟ್ಟೇನೆ, ನನ್ನ ಪ್ರಾಣ ನೀನಾದೆ ಮನಮೋಹಿನಿ 
ಹೆ:   ಸಾಕು ಇನ್ನು ಬೇರೆಯೇನು, ಬಿಡಲಾರೆ ನಿನ್ನನ್ನು, ನಿನ್ನ ಮಾತು ನನಗಾಯಿತು ಸಂಜೀವಿನಿ 
ಗಂ:  ನೂರು ಜನ್ಮ ಬಂದರೇನು ಕನ್ಯಾಮಣಿ, ಅಂದು ಇಂದು ಮುಂದೆ ಎಂದು ನೀನೆ ರಾಣಿ ।೨।

ಹೆ:   ಇದೇ ನೋಟ ಇದೇ ಆಟ
        ಕಂಡಂದೆ ಚೆಲುವ ನಾ ಸೋತೆ ।೨।
ಗಂ:  ಅಂದು ನಿನ್ನ ಮಾತು ಕೇಳಿ ಬೆರಗಾದೆನು, ಇಂದು ನಿನ್ನ ಸ್ನೇಹ ಕಂಡು ಮನಸೋತೆನು  ।೨।
ಹೆ:   ಇದೇ ನೋಟ ಇದೇ ಆಟ
ಗಂ:  ಕಂಡಂದೆ ಚೆಲುವ ನಾ ಸೋತೆ ।೨।

Song: Ide Nota Ide Aata
Movie: Ade Kannu

1 comment:

  1. ತುಂಬಾ ತುಂಬಾ ಧನ್ಯವಾದಗಳು. ಬಹಳ ಸಹಾಯವಾಯಿತು. ನಿಮ್ಮ ಸೈಟಲ್ಲಿ ಸರ್ಚ ವಿಂಡೊ ಹಾಕಿದರೆ ಕನ್ನಡಿಗರಿಗೆ ಅನುಕೂಲವಾಗಿ ಮೊದಲು ನಿಮ್ಮ ಸೈಟನ್ನೇ ತೆಗೆದು ನೋಡುತ್ತಾರೆ. ನೆನಪಿರಲಿ ಲಕ್ಷಾನುಗಟ್ಟಲೆ ಕನ್ನಡಿಗರು ಸಾಹಿತ್ಯ ಸಿಗದೆ ಹಾಡಲು ಪರದಾಡುತ್ತಿದ್ದಾರೆ. ಕನ್ನಡ ಪ್ರಚಲಿತವಾಗಬೇಕೆಂದರೆ ನಿಮ್ಮಂಥಹ ಒಳ್ಳೆ ಕನ್ನಡಿಗರು ಡಾಟಾ ಸಹಾಯ ಮಾಡಲೇ ಬೇಕು, ನೋಡಿ ಹಿಂದಿಯ ಹೆಚ್ಚು ಕಡಿಮೆ ಎಲ್ಲ ಹಾಡಿನ ಸಾಹಿತ್ಯ ಸಿಗುತ್ತದೆ.🙏

    ReplyDelete