Saturday, October 8, 2016

ಈ ಸೊಗಸಾದ ಸಂಜೆ

ಚಿತ್ರ: ದೇವತಾ ಮನುಷ್ಯ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್, ಮಂಜುಳ ಗುರುರಾಜ್     

ಗಂ:  ಈ ಸೊಗಸಾದ ಸಂಜೆ ।೨।
       ನಿನ್ನನ್ನು ನೋಡುತ ನನ್ನನ್ನೇ ಮರೆತೆ 
       ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ 
ಹೆ:   ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ 
       ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ 
ಗಂ:  ಈ ಸೊಗಸಾದ ಸಂಜೆ

ಗಂ:  ನಲ್ಲೆಯು ಮೂಡಿದ ಮಲ್ಲಿಗೆ ಹೂವು ಪ್ರೇಮದ ಗೀತೆ ಹಾಡಿದೆ ಇಂಪಾಗಿ 
       ಕಂಪನ್ನು ಚೆಲ್ಲಿದೆ ಹಿತವಾಗಿ 
ಹೆ:   ನಲ್ಲನ ನುಡಿಯು ಕೊಳಲಿನ ಧನಿಯು ಕಾಣೆನು ನಾನು ಕೇಳುತ ಬೆರಗಾಗಿ 
       ಸಂತೋಷ ತುಂಬಿತು ಹಾಯಾಗಿ 
ಗಂ:  ಓ..... ಪ್ರೇಮದ ಗಂಗೆ ಪ್ರಣಯದ ತುಂಗೆ ನಲ್ಲೆಯ ಮಾತುಗಳೆಲ್ಲ 

ಹೆ:   ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ 
ಜೊ: ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ 
ಜೊ: ಈ ಸೊಗಸಾದ ಸಂಜೆ

ಹೆ:   ಗೆಳೆಯೆನೆ ಇಂದು ಕಣ್ಣಲಿ ನಿನ್ನ ಪ್ರೇಮದ ಲೋಕ ನೋಡಿದೆ ನಾನೀಗ
       ನನ್ನಲ್ಲಿ ಮೂಡಿತು ಅನುರಾಗ 
ಗಂ:  ಅರಗಿಣಿ ಕೂಡ ನಾಚಿತು ನಿನ್ನ ಮಾತನು ಕೇಳಿ ಹಾರಿದೆ ಓ ಜಾಣೆ 
       ನಿನ್ನಂತೆ ಯಾರನು ನಾ ಕಾಣೆ 
ಹೆ:   ಓ..... ಬಾಳಲಿ ಸರಸ ತುಂಬಿದ ಕಳಸ ಪ್ರೇಮವು ತುಂಬಿರುವಾಗ 

ಗಂ:  ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ 
       ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ 
ಹೆ:   ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ 

ಜೊ: ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ 
ಜೊ: ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ

Song: Ee Sogasaada Sanje
Movie: Devatha Manushya

ಹೃದಯದಲಿ ಇದೇನಿದು

ಚಿತ್ರ: ದೇವತಾ ಮನುಷ್ಯ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್, ಮಂಜುಳ ಗುರುರಾಜ್   

ಗಂ:  ಹೃದಯದಲಿ ಇದೇನಿದು  ನದಿಯೊಂದು ಓಡಿದೆ ।೨।
       ಕಲಕಲನೆಕಲರವ ಸೇರಿ, ಹೊಸ ಬಯಕೆ ಹೂವು ಅರಳಿ 
       ಜೊತೆಯಲ್ಲಿ ಪ್ರೇಮ ಗೀತೆ ಹಾಡುವಾಸೆ ಈಗ 
ಹೆ:   ಹೃದಯದಲಿ ಇದೇನಿದು  ನದಿಯೊಂದು ಓಡಿದೆ ।೨।
       ಕಲಕಲನೆಕಲರವ ಸೇರಿ, ಹೊಸ ಬಯಕೆ ಹೂವು ಅರಳಿ 
       ಜೊತೆಯಲ್ಲಿ ಪ್ರೇಮ ಗೀತೆ ಹಾಡುವಾಸೆ ಈಗ 
ಗಂ:  ಹೃದಯದಲಿ ಇದೇನಿದು  
ಹೆ:   ನದಿಯೊಂದು ಓಡಿದೆ

ಗಂ:  ಸುಯ್ನ್ ಎನ್ನುತ ಬೀಸುವ ತಣ್ಣನೇ ಗಾಳಿಗೆ
ಹೆ:   ಗುಯ್ನ್ ಎನ್ನುವ ದುಂಬಿಯ ಹಾಡಿನಾ ಮೋಡಿಗೆ 
ಗಂ:  ಈ ಮನಸು ಕುಣಿಯುತಿದೆ 
ಹೆ:   ಹೊಸ ಕನಸು ಕೆಣಕುತಿದೆ 
ಗಂ:  ಮಾಡುವುದೆನೀಗಾ  

ಹೆ:   ಹೃದಯದಲಿ ಇದೇನಿದು  

ಗಂ:  ನದಿಯೊಂದು ಓಡಿದೆ

ಹೆ:   ಗಮ್ ಎನ್ನುವ ತಾವರೆ ಹೂವಿನಾ ಸಂಪಿಗೆ 
ಗಂ:  ಜುಮ್ ಎನ್ನಿಸಿ ತನುವಲಿ ಓಡುವಾ ಮಿಂಚಿದೆ 
ಹೆ:   ಮೈ ಬಿಸಿಯು ಏರುತಿದೆ 
ಗಂ:  ಈ ಬೆಸುಗೆ ಹೇಳುತಿದೆ 

ಹೆ:    ತುಂಬಿತು ಆನಂದಾ 

ಗಂ:  ಹೃದಯದಲಿ ಇದೇನಿದು  

ಹೆ:   ಹೃದಯದಲಿ ಇದೇನಿದು  ನದಿಯೊಂದು ಓಡಿದೆ
ಗಂ:  ಕಲಕಲನೆಕಲರವ ಸೇರಿ 
ಹೆ:   ಹೊಸ ಬಯಕೆ ಹೂವು ಅರಳಿ 
ಜೊ: ಜೊತೆಯಲ್ಲಿ ಪ್ರೇಮ ಗೀತೆ ಹಾಡುವಾಸೆ ಈಗ 
ಜೊ: ಹೃದಯದಲಿ ಇದೇನಿದು  ನದಿಯೊಂದು ಓಡಿದೆ ।೨।

Song: Hrudayadali Idenidu
Movie: Devatha Manushya

Friday, October 7, 2016

ಹಾಲಲ್ಲಾದರು ಹಾಕು

ಚಿತ್ರ: ದೇವತಾ ಮನುಷ್ಯ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್, ಬಿ. ಆರ್. ಛಾಯ  

ಗಂ:  ।। ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ 
        ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ ।।೨।।
        ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ 

        ಮುಳ್ಳಲ್ಲಾದರು ನೂಕು ಕಲ್ಲಲ್ಲಾದರು ನೂಕು ರಾಘವೇಂದ್ರ ।೨।
        ಮುಳ್ಳಲ್ಲಿ ಮುಳ್ಳಾಗಿ ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ ರಾಘವೇಂದ್ರ 
        ಬಿಸಿಲಲ್ಲೇ ಮಲಗಿಸು ನೆರಳಲ್ಲೇ ಮಲಗಿಸು ರಾಘವೇಂದ್ರ
        ಬಿಸಿಲಲ್ಲಿ ಕೆಂಪಾಗಿ ನರಳಲ್ಲಿ ತಂಪಾಗಿ ನಗುನಗುತಾ ಇರುವೆ ರಾಘವೇಂದ್ರ

        ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ 

ಗಂ:  ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ
ಹೆ:   ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ
ಗಂ:  ಮುನ್ನ ಮಾಡಿದ ಪಾಪ ಯಾರ ತಾತನ ಗಂಟು 
ಹೆ:   ಮುನ್ನ ಮಾಡಿದ ಪಾಪ ಯಾರ ತಾತನ ಗಂಟು 
ಜೊ: ನೀನೆ ಹೇಳು ರಾಘವೇಂದ್ರ 
        ಎಲ್ಲಿದ್ದರೇನು ನಾನು ಹೇಗಿದ್ದರೇನು ನಾ ರಾಘವೇಂದ್ರ 
        ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ ಬಾಳಿದರೆ ಸಾಕು ರಾಘವೇಂದ್ರ 

ಜೊ: ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ 
        ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ
        ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ 

Song: Halalladaru Haaku
Movie: Devatha Manushya

ನಿನ್ನ ಕಣ್ಣ ಕನ್ನಡಿಯಲ್ಲಿ

ಚಿತ್ರ: ಸ್ವಯಂವರ
ರಚನೆ:  ಆರ್. ಏನ್. ಜಯಗೋಪಾಲ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯಕ: ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ   

ಗಂ: ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ ।೨।
       ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ 
ಹೆ:  ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ ।೨।
       ನಗೆಯು ತಂದ ಮೋಡಿಯಲ್ಲಿ, ನಲಿಯುತೆನ್ನ ಜೀವ 

ಹೆ:  ಬಾನ ಹಕ್ಕಿ ಹಾಡೋ ವೇಳೆ, ಉದಯರವಿಯು ಮೂಡುವ ವೇಳೆ ।೨।
      ನೀನು ಬರುವ ಹಾದಿಯಲ್ಲಿ ಹೃದಯ ಹಾಸಿ ನಿಲ್ಲುವೆ 
ಗಂ: ಮರದ ನೆರಳ ತಂಪಿನಲ್ಲಿ, ನಿನ್ನ ಮಡಿಲ ಹಾಸಿಗೆಯಲ್ಲಿ 
      ತಲೆಯು ಇಟ್ಟು ಮಲಗಿರುವಾಗ ಸ್ವರ್ಗ ಅಲ್ಲೆ ಕಾಣುವೆ 
ಹೆ:  ನನ್ನ ಮನವ ಆಳಬಂದ ನನ್ನವನೆ ಚೆನ್ನಿಗನೆ 

ಗಂ: ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
       ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ
       ನಿನ್ನ ಕಣ್ಣ ಕನ್ನಡಿಯಲ್ಲಿ

ಗಂ: ಹಸಿರು ಎಲೆಯ ಸೀರೆ ಧರಿಸಿ, ಹೂವ ತಿಲಕ ಹಣೆಯಲಿ ಇರಿಸಿ ।೨।
       ಒಲಿದು ಬಂದ ವನದೇವತೆಯೋ, ಸೊಗಸು ಏನ ಹೇಳಲಿ 
ಹೆ:  ಹೂವ ಸಂಗ ಕೂಡಿ ಆಡಿ ಕಂಪು ಕದ್ದು ಮೆಲ್ಲನೆ ಓಡಿ 
      ತೂರಿ ಬಂದ ಗಾಳಿಯಲ್ಲಿ ಬಂದೆ ನನ್ನ ತೊಳಲಿ 
ಗಂ: ನಿನ್ನ ಚೆಲುವ ಮೋಡಿ ನೋಡಿ ಮೈ ಮರೆತೆ ಮನ ಸೋತೆ 

ಹೆ:  ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ
       ನಗೆಯು ತಂದ ಮೋಡಿಯಲ್ಲಿ, ನಲಿಯುತೆನ್ನ ಜೀವ 
ಜೊ: ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ 

Song: Ninna Kanna Kannadiyalli
Movie: Swayamvara

ಸ್ವಾಭಿಮಾನದ ನಲ್ಲೆ

ಚಿತ್ರ: ವೀರ ಕೇಸರಿ
ರಚನೆ: ಕು. ರ. ಸೀತಾರಾಮ ಶಾಸ್ತ್ರಿ 
ಸಂಗೀತ: ಘಂಟಸಲ 
ಗಾಯಕ: ಪಿ. ಬಿ. ಶ್ರೀನಿವಾಸ್

।। ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ, ಒಳಗೆ ವೇದನೆ, ಇಳಿದು ಬಾ ಬಾಲೆ ।।೨।।
ಸ್ವಾಭಿಮಾನದ ನಲ್ಲೆ

ಮೂಡಿ ಚಂದಿರ ನಿನಗಾಗಿ, ಕೂಡಿ ತಂಬೆಲರೆನಗಾಗಿ ।೨।
ನೋಡು ಪ್ರಿಯತಮೆ ಹಾಲು ಹುಣ್ಣಿಮೆ ತಂದ ನಮಗಾಗಿ 

ಸ್ವಾಭಿಮಾನದ ನಲ್ಲೆ, ಓ ಹೊ ಹೋ ಓ ..... 

ನಿನ್ನ ಗರ್ವದ ಹುಸಿ ಮೌನ, ಅಣಗಿಸದೆ ನಾ ಬಿಡೆ ನಿನ್ನ ।೨।
ಪುರುಷ ಸಿಂಹನ ಬಾಹುಬಂಧನ ನಿನ್ನ ಕಲ್ಯಾಣ 
ಸ್ವಾಭಿಮಾನದ ನಲ್ಲೆ, ಓ ಹೊ ಹೋ ಓ ..... 

ತುಂಬು ಹರಯದ ಹೊಸ ಹೆಣ್ಣೆ, ಒಲೆಯ ಮೇಲಿನ ಹಸಿ ಬೆಣ್ಣೆ ।೨।
ಏಕೆ ಸುಮ್ಮನೆ ಆತ್ಮ ವಂಚನೆ ನಿನ್ನ ಪತಿ ನಾನೆ 

ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ, ಒಳಗೆ ವೇದನೆ, ಇಳಿದು ಬಾ ಬಾಲೆ
ಸ್ವಾಭಿಮಾನದ ನಲ್ಲೆ, ಓ ಹೊ ಹೋ ಓ ..... 

Song: Swabhimaanada Nalle
Movie: Veera Kesari

Thursday, October 6, 2016

ಕಲ್ಲಿನ ವೀಣೆಯ ಮೀಟಿದರೇನು

ಚಿತ್ರ: ಗುರಿ 
ರಚನೆ: ಚಿ. ಉದಯಶಂಕರ್ 
ಸಂಗೀತ: ರಾಜನ್- ನಾಗೇಂದ್ರ 
ಗಾಯಕ: ಡಾ. ರಾಜಕುಮಾರ್ 

ಕಲ್ಲಿನ ವೀಣೆಯ ಮೀಟಿದರೇನು ನಾದವು ಹೊಮ್ಮುವುದೇ  
ಮಲ್ಲಿಗೆ ಹೂಗಳು ಬಾಡಿದ ಮೇಲೆ, ಪರಿಮಳ ಚೆಲ್ಲುವುದೇ 
ಹೇಳು, ಪರಿಮಳ ಚೆಲ್ಲುವುದೇ 
ಕಲ್ಲಿನ ವೀಣೆಯ ಮೀಟಿದರೇನು ನಾದವು ಹೊಮ್ಮುವುದೇ  

ಎಲೆ ಎಲೆಯಲ್ಲಾ ಹೂವುಗಳಾಗಿ, ಹೂವುಗಳೆಲ್ಲಾ ಬಾಣಗಳಾಗಿ, ನನ್ನೆದೆಯಾ ಸೋಕಲಿ 
ಆ ಮನ್ಮಥನೇ ನನ್ನೆದುರಾಗಿ, ಮೋಹನ ರಾಗದಿ ನನ್ನನು ಕೂಗಿ, ಛಲದಲೀ ಹೋರಾಡಲಿ 
ಇಂದಿಗೂ ಅವನು ಗೆಲ್ಲುವುದಿಲ್ಲ, ಸೋಲದೆ ಗತಿಯಿಲ್ಲ 

ಕಲ್ಲಿನ ವೀಣೆಯ ಮೀಟಿದರೇನು ನಾದವು ಹೊಮ್ಮುವುದೇ  
ಮಲ್ಲಿಗೆ ಹೂಗಳು ಬಾಡಿದ ಮೇಲೆ, ಪರಿಮಳ ಚೆಲ್ಲುವುದೇ 
ಹೇಳು, ಪರಿಮಳ ಚೆಲ್ಲುವುದೇ 
ಕಲ್ಲಿನ ವೀಣೆಯ ಮೀಟಿದರೇನು ನಾದವು ಹೊಮ್ಮುವುದೇ  

ಕಾಣುವ ಅಂದಕೆ ನಾ ಕುರುಡಾಗಿ, ಪ್ರೇಮದ ಹಾಡಿಗೆ ನಾ ಕಿವುಡಾಗಿ, ನೆಮ್ಮದೀ ದೂರಾಗಿದೆ 
ರೋಷದ ಬೆಂಕಿ ಒಡಲನು ನುಂಗಿ, ಶಾಂತಿಯು ನನ್ನ ಎದೆಯಲಿ ಇಂಗಿ, ಆಸೆಯೂ ಮಣ್ಣಾಗಿದೆ 
ಗಾಳಿಯ ಹಿಡಿವ ಹಂಬಲವೇಕೆ, ಚಪಲವು ನಿನಗೇಕೆ 

ಕಲ್ಲಿನ ವೀಣೆಯ ಮೀಟಿದರೇನು ನಾದವು ಹೊಮ್ಮುವುದೇ  
ಮಲ್ಲಿಗೆ ಹೂಗಳು ಬಾಡಿದ ಮೇಲೆ, ಪರಿಮಳ ಚೆಲ್ಲುವುದೇ 
ಹೇಳು, ಪರಿಮಳ ಚೆಲ್ಲುವುದೇ 

Song: Kallina Veeneya
Movie: Guri

My name is Raj

ಚಿತ್ರ:  ಹಾವಿನ ಹೆಡೆ
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ. ರಾಜಕುಮಾರ್

My name is Raj, Raj, Raj
What's your name please?
My name is Raj, Raj, Raj

ಕುಮುದಿನಿ ಏನು, ಕಮಲಿನಿ ಏನು ।೨।
ಕಾಮಿನಿಯೊ ನೀನು, ವಸುಮತಿ ಏನು, ಮಧುಮತಿ ಏನು
ನನ್ನಲ್ಲಿ ಹೇಳ್ಳೋಕೆ ಸಂಕೋಚ ಹೀಗೇಕೆ, ಕಾಣೆನು
ಗಂಗಮ್ಮನೆ, ಇಲ್ಲ ತುಂಗಮ್ಮನೆ, ರಂಗಮ್ಮನೆ, ಇಲ್ಲ ಮಂಗಮ್ಮನೆ
ಅಲ್ಲೇ ನಿಲ್ಲೆ ಹೇಳೆ

My name is Raj, Raj, Raj
What's your name please?
My name is Raj

ಹೆಣ್ಣು ತುಂಬ ಚೆನ್ನ, ಕಣ್ಣು ತುಂಬ ಚೆನ್ನ ।೨।
ಕೆನ್ನೆಯು ಬಲು ಚೆನ್ನ, ಮೈಯ್ಯ ಬಣ್ಣ ಚೆನ್ನ, ಎಲ್ಲ ಚೆನ್ನ ಚೆನ್ನ
ನಿನ್ನಂತ ಚೆಂದುಳ್ಳಿ ಚೆಲುವೇಗೆ ಮುಂಗೋಪ, ಏನ್ ಚೆನ್ನಾ
ಮಾರಮ್ಮನೊ, ಇಲ್ಲ ವೀರಮ್ಮನೊ, ಕುಳ್ಳಮ್ಮನೊ, ಭದ್ರ ಕಾಳಮ್ಮನೊ
ಹೇಳೆ ಬೇಗ ಚಿನ್ನ

My name is Raj, What's your name please? ।೨।

Song: My name is Raj (ಮೈ ನೇಮ್ ಈಸ್ ರಾಜ್)
Movie: Haavina Hede

ಬೇರೆ ಏನು ಬೇಡ ಎಂದಿಗು

ಚಿತ್ರ:  ಹಾವಿನ ಹೆಡೆ
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ

ಗಂ: ಬೇರೆ ಏನು ಬೇಡ ಎಂದಿಗು ನೀನು ನನ್ನವಳಾಗು
      ಇನ್ನೇನನು ನಾ ಕೇಳೆನು ಚಿನ್ನ, ನಾ ಕೇಳೆನು

ಗಂ:  ಸೌಂದರ್ಯವೆಲ್ಲ ಒಂದಾಗಿ ಸೇರಿ, ನನಗಾಗಿ ಹೀಗೆ ಹೆಣ್ಣಾಯಿತೇನೊ
ಹೆ:   ಬಾನಲ್ಲಿ ಓಡೋ ಮಿಂಚೊಂದು ಜಾರಿ, ನಿನ್ನ ಕಣ್ಣ ಸೇರಿ ನನ್ನ ಕೂಗಿತೇನು
ಗಂ:  ನಿನ್ನ ನಾನು ನೋಡಿದಾಗಲೆ, ನನ್ನ ಮನಸು ಹೇಳಿತಾಗಲೆ, ಬಿಡವೇದವೋ ಈ ಹೆಣ್ಣನು

ಹೆ:   ಬೇರೆ ಏನು ಬೇಡ ಎಂದಿಗು ನೀನು ನನ್ನವನಾಗು
       ಇನ್ನೇನನು ನಾ ಕೇಳೆನು ನಿನ್ನಾ, ನಾ ಕೇಳೆನು

ಹೆ:   ಈ ನಿನ್ನ ಸ್ನೇಹ ತಂಗಾಳಿಯಂತೆ, ಒಂದೊಂದು ಮಾತು ಬಂಗಾರದಂತೆ
ಗಂ:  ಒಲವಿಂದ ಹೀಗೆ ಬಳಿಸೇರಿದಾಗ, ಹುರಿ ಬಿಸಿಲು ಕೂಡ ಬೆಳದಿಂಗಳಂತೆ
ಹೆ:   ನಿನ್ನ ಸೇರಿ ಜೀವ ನಲಿಯಿತು, ಎಲ್ಲ ಚಿಂತೆ ದೂರವಾಯಿತು, ಸುಖವಾಗಿದೆ, ಹಾಯಾಗಿದೆ

ಗಂ: ಬೇರೆ ಏನು ಬೇಡ ಎಂದಿಗು ನೀನು ನನ್ನವಳಾಗು
      ಇನ್ನೇನನು ನಾ ಕೇಳೆನು ಚಿನ್ನ, ನಾ ಕೇಳೆನು
ಹೆ:   ಬೇರೆ ಏನು ಬೇಡ ಎಂದಿಗು ನೀನು ನನ್ನವನಾಗು
ಗಂ: ಇನ್ನೇನನು ನಾ ಕೇಳೆನು
ಜೊ: ನಿನ್ನಾ, ನಾ ಕೇಳೆನು

Song: Bere Enu Beda Endigu
Movie: Haavina Hede

Wednesday, October 5, 2016

ಸೂರ್ಯನ ಕಾಂತಿಗೆ

ಚಿತ್ರ: ತಾಯಿಗೆ ತಕ್ಕ ಮಗ 
ರಚನೆ: ಚಿ. ಉದಯಶಂಕರ್ 
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕರು:  ಡಾ. ರಾಜಕುಮಾರ್, ಕಸ್ತೂರಿ ಶಂಕರ್ 

ಹೆ:  ಸೂರ್ಯನ ಕಾಂತಿಗೆ ಸೂರ್ಯನೆ ಸಾಟಿ ಹೋಲಿಸಲಾರಿಲ್ಲ 
      ನಿನ್ನೀ ಅಂದಕೆ ನೀನೆ ಸಾಟಿ ಬೇರೆ ಯಾರಿಲ್ಲ, ನಿನ್ನ ಹೋಲುವರಾರಿಲ್ಲ 

ಗಂ: ಚಂದ್ರನ ಚೆಲುವಿಗೆ ಚಂದ್ರನೆ ಸಾಟಿ ಹೋಲಿಸಲಾರಿಲ್ಲ 
       ನಿನ್ನೀ ಚಂದಕೆ ನೀನೆ ಸಾಟಿ ಬೇರೆ ಯಾರಿಲ್ಲ, ಆ ಹಾಂ ಹೋಲುವರಾರಿಲ್ಲ 

ಗಂ: ನಿನ್ನಾ ನೋಟದಲಿ ಕಣ್ಣ ಮಿಂಚಿನಲಿ ಆಸೆ ಹೂವಾಗಿದೆ 
       ನಿನ್ನಾ ಮಾತಿನಲಿ ನಿನ್ನ ಸ್ನೇಹದಲಿ ಜೀವ ಹಾಯಾಗಿದೆ 
ಹೆ:  ನಿನ್ನಾ ರೂಪದಲಿ ಕಣ್ಣ ದೀಪದಲಿ ಬಾಳು ಜೇನಾಗಿದೆ 
      ನಿನ್ನಾ ಮೋಹದಲಿ ಪ್ರೇಮ ಜಾಲದಲಿ ಬಯಕೆ ಓಲಾಡಿದೆ 
ಗಂ: ನಿನ್ನಲ್ಲಿ ನಾನು, ನಿನ್ನಿಂದ ನಾನು, ನಾನಿಂದು ನಿನ್ನಲ್ಲಿ ಒಂದಾದೆನು 

ಹೆ:  ಸೂರ್ಯನ ಕಾಂತಿಗೆ ಸೂರ್ಯನೆ ಸಾಟಿ ಹೋಲಿಸಲಾರಿಲ್ಲ 
ಗಂ: ನಿನ್ನೀ ಚಂದಕೆ ನೀನೆ ಸಾಟಿ ಬೇರೆ ಯಾರಿಲ್ಲ, ಆ ಹಾಂ ಹೋಲುವರಾರಿಲ್ಲ 

ಹೆ:  ನಿನ್ನಾ ಹಾಡಿನಲಿ ನಿನ್ನಾ ಮೋಡಿಯಲಿ ಕಲ್ಲೇ ನೀರಾಗಿದೆ 
      ಹೆಣ್ಣು ಜೀವವಿದು ಹೇಗೆ ನೀರುವುದು ಸೋತು ಶರಣಾಗಿದೆ 
ಗಂ: ರಾಗ ಭಾವಗಳು ತಾಳ ಮೇಳಗಳು ಸೇರಿ ಒಂದಾಗಿದೆ ।೨।
       ಬೇರೆ ಭಾವನೆಯೆ ದೂರವಾಗಿರಲು ಸೋಲು ಇನ್ನೆಲಿದೆ 
ಹೆ:  ಹೂವಂತೆ ನೀನು, ನಾರಂತೆ ನಾನು, ನಿನ್ನಿಂದ ಹೂಮಾಲೆ ನಾನಾದೆನು 

ಗಂ: ಚಂದ್ರನ ಚೆಲುವಿಗೆ ಚಂದ್ರನೆ ಸಾಟಿ ಬೇರೆ ಯಾರಿಲ್ಲ 
ಹೆ:  ನಿನ್ನೀ ಅಂದಕೆ ನೀನೆ ಸಾಟಿ ಬೇರೆ ಯಾರಿಲ್ಲ 
ಜೊ: ನಿನ್ನ ಹೋಲುವರಾರಿಲ್ಲ 

Song: Suryana Kantige
Movie: Thayige Thakka Maga

Monday, October 3, 2016

ಜನ್ಮ ಜನ್ಮದ ಅನುಬಂಧ

ಚಿತ್ರ: ಸಾಕ್ಷಾತ್ಕಾರ 
ರಚನೆ: ಕಣಗಲ್ ಪ್ರಭಾಕರ್ ಶಾಸ್ತ್ರಿ 
ಸಂಗೀತ: ಎಂ. ರಂಗರಾವ್ 
ಗಾಯಕರು: ಪಿ. ಬಿ. ಶ್ರೀನಿವಾಸ್ 

ಜನ್ಮ ಜನ್ಮದ ಅನುಬಂಧ ಹೃದಯ ಹೃದಯಗಳ ಪ್ರೇಮಾನುಬಂಧ ।೨।
ಜನ್ಮ ಜನ್ಮದ ಅನುಬಂಧ 

ಅನಂತ ಪ್ರಕೃತಿಯ ಲಾವಣ್ಯದಂತೆ 
ಲಾವಣ್ಯವತಿಯರ ವಯ್ಯಾರದಂತೆ 
ಶೃಂಗಾರ ಕಾವ್ಯದ ರಸಲಹರಿಯಂತೆ ।೨।
ತುಂಗಾ, ಭಧ್ರಾ, ತುಂಗಭದ್ರಾ ಸಂಗಮದಂತೆ 

ಜನ್ಮ ಜನ್ಮದ ಅನುಬಂಧ ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮ ಜನ್ಮದ ಅನುಬಂಧ 

ಶ್ರೀಗಂಧ ಸೀಮೆಯ ತಂಗಾಳಿಯಂತೆ 
ಬಂಗಾರ ಭೂಮಿಯ ಹೊಂಬಾಳಿನಂತೆ 
ಪುಣ್ಯ ಪುರುಷರ ಇತಿಹಾಸದಂತೆ ।೨।
ಕನ್ನಡ, ಜನರ, ಕನ್ನಡಜನರ ಔಧಾರ್ಯದಂತೆ 

ಜನ್ಮ ಜನ್ಮದ ಅನುಬಂಧ ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮ ಜನ್ಮದ ಅನುಬಂಧ 

Song: Janma Janmada  
Movie: Sakshatkara

ಸಂಕೋಚವ ಬಿಡು

ಚಿತ್ರ: ಸಮಯದ ಗೊಂಬೆ
ರಚನೆ: ಚಿ. ಉದಯಶಂಕರ್ 
ಸಂಗೀತ:  ಎಂ. ರಂಗರಾವ್ 
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ 

ಗಂ:  ಸಂಕೋಚವ ಬಿಡು, ಗೆಳತಿಯೆ ನಿನ್ನಾಸೆಗಳೆಲ್ಲವನು ಹೇಳು ನೀ ನನಗೆ 
       ಈಗಲೆ ಎಲ್ಲವಾ ನನ್ನಾಣೆ ಪೂರೈಸುವೆ 

ಹೆ:  ನಿನ್ನಲ್ಲವೆ ನಾನು ಗೆಳೆಯನು ನೂರಾಸೆಯು ಇರದೇನು ಹೇಳು ನೀ ನನಗೆ 
      ಮದುವೆಯ ಬಯಕೆಯು ನನ್ನಲ್ಲಿ ಬರದೇನು 

ಗಂ:  ಕಣ್ಣಲಿ  ಹೀಗೆತಕೆ, ತೀರದ ಬಾಯಾರಿಕೆ  
       ಕೆಂದುಟಿ ಕೆಂಪೇತಕೆ ಚೆಂದುಟಿ ಮಿಂಚೇತಕೆ 
       ಹೇಳೆಯ ಹೆಣ್ಣೇ 
ಹೆ:   ನನ್ನಾ ಕಣ್ತುಂಬ ತುಂಬಿ ಈ ರೂಪ ಏನೋ ಆನಂದವು ।೨। 
       ಎದೆಯನು ತುಂಬಲು ಮೈಯಲ್ಲ ಹೂವಾಗಿದೆ 

ಹೆ:  ನಿನ್ನಲ್ಲವೆ ನಾನು ಗೆಳೆಯನು ನೂರಾಸೆಯು ಇರದೇನು ಹೇಳು ನೀ ನನಗೆ 
      ಮದುವೆಯ ಬಯಕೆಯು ನನ್ನಲ್ಲಿ ಬರದೇನು 

ಹೆ:  ಸಂಜೆಯ ಈ ರಂಗಿಗೆ ಹಕ್ಕಿಯ ಹಾರಾಟಕೆ
      ತಣ್ಣನೆ ತಂಗಾಳಿಗೆ ಹೂಗಳ ಈ ಕಂಪಿಗೆ 
      ಸೋತೆನು ನಾನು 
ಗಂ: ನಿನ್ನಾ ಈ ಸ್ನೇಹ ನಿನ್ನಾ ಈ ಮೋಹ ತಂದ ಸಂತೋಷವು ।೨।
       ಜೊತೆಯಲಿ ಇರುವೆನು ಒಂದಾಗಿ ಎಂದೆಂದಿಗು 

ಗಂ:  ಸಂಕೋಚವ ಬಿಡು, ಗೆಳತಿಯೆ ನಿನ್ನಾಸೆಗಳೆಲ್ಲವನು ಹೇಳು ನೀ ನನಗೆ 
       ಈಗಲೆ ಎಲ್ಲವಾ ನನ್ನಾಣೆ ಪೂರೈಸುವೆ 

ಹೆ:  ನಿನ್ನಲ್ಲವೆ ನಾನು ಗೆಳೆಯನು ನೂರಾಸೆಯು ಇರದೇನು ಹೇಳು ನೀ ನನಗೆ 

      ಮದುವೆಯ ಬಯಕೆಯು ನನ್ನಲ್ಲಿ ಬರದೇನು 

Song: Sankochava Bidu
Movie: Samayada Gombe

ಶ್ರೀಕಂಠ ವಿಷಕಂಠ

ಚಿತ್ರ: ಅನುರಾಗ ಅರಳಿತು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಶ್ರೀಕಂಠ ವಿಷಕಂಠ ।೨।
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ ।೨।
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ  ।೨।
ಶ್ರೀಕಂಠ ವಿಷಕಂಠ ।೨।

ಹರಿಯುವ ನದಿಯಲಿ ಕಲರವ ನಾದ ಕೂಡ ಶಿವ ಶಿವ ಎನ್ನುತಿದೇ 
ಅರಳಿದ ಸುಮದಲಿ ನಲಿಯುವ ಭ್ರಮರವು ಶಿವ ನಾಮ ಹಾಡುತಿದೆ 
ಬೀಸುವ ಗಾಳಿಯು ಪರಿಮಳ ಚೆಲ್ಲುತ ನಿನ್ನನೆ ಸ್ಮರಿಸುತಿದೇ ।೨।

ಶ್ರೀಕಂಠ ವಿಷಕಂಠ ।೨।
ಸಾವಿರ ಜನುಮವೆ ಬಂದರು ಹೀಗೆ ನಿನ್ನ ಸನ್ನಿಧಿಯಲ್ಲಿ ಇರಿಸೂ 

ಉಸಿರಿನ ಉಸಿರಲು ತಂದೆ ಎಂದು ನಾಮಾವನೂ ಬೆರೆಸು 
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನೆಡೆಸು ।೨।

ಶ್ರೀಕಂಠ ವಿಷಕಂಠ ।೨।
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ 

ಶ್ರೀಕಂಠ ವಿಷಕಂಠ ।೨।
  Song: Shreekanta (Srikanta) Vishakanta
Movie: Anuraga Aralithu

Sunday, October 2, 2016

ಕಣ್ಣಲ್ಲಿ ಏನೋ ಮಿಂಚೊಂದು

ಚಿತ್ರ: ವಸಂತಗೀತ 
ರಚನೆ: ಚಿ. ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕ: ಡಾ. ರಾಜಕುಮಾರ್ 

ಕಣ್ಣಲ್ಲಿ ಏನೋ ಮಿಂಚೊಂದು  ಕಂಡಿತ್ತಲ್ಲ 
ನಿನ್ನಾಸೆ ಏನೋ ನಾನೆಂದು ಕಾಣೆನಲ್ಲ 
ಕೋಪವೋ, ತಾಪವೋ ।೨।
ನಡುಗಿದೆ ತುಟಿ ಏತಕೇ 
ಕಣ್ಣಲ್ಲಿ ಏನೋ ಮಿಂಚೊಂದು  ಕಂಡಿತ್ತಲ್ಲ 

।। ಒಳ್ಳೆ ವಯಸು ಒಳ್ಳೆ ಸೊಗಸು ಏಕೆ ಹೀಗಾಯಿತು ಮನಸು 
ಕಣ್ಣು ಚನ್ನ ಬಣ್ಣ ಚೆನ್ನ ನಾ ಕಾಣೆ ಹೀಗೇಕೆ ಮುನಿಸು ।।೨।।
ಈ ರೋಷವೋ ಆ ವೇಷವೋ ಈ ದ್ವೇಷವೋ ಆಕ್ರೋಶವೋ 
ಚೆಲುವೆಯೆ ನಿನಗೇತಕೇ 

ಕಣ್ಣಲ್ಲಿ ಏನೋ ಮಿಂಚೊಂದು  ಕಂಡಿತ್ತಲ್ಲ 
ನಿನ್ನಾಸೆ ಏನೋ ನಾನೆಂದು ಕಾಣೆನಲ್ಲ 

।। ಚೆಲುವೆ ಮೊಗದಿ ಗೆಲುವ ಕಂಡೆ ಎಲ್ಲಿ ಏನಾಯಿತೊ ಕಾಣೆ 
ಚೆಲುವ ಹಿಂದೆ ಛಲವ ಕಂಡೆ ಅಮ್ಮಮ್ಮ ನೀನೆಂತ ಜಾಣೆ  ।।೨।।
ನಿನ್ನಾಸೆಯ ನಾ ಬಲ್ಲೆನು ಇನ್ನಾರೇನು ನಾ ಬಲ್ಲೆನು 
ಸರಸಕೆ ಬರಲಾರೆಯ 

ನಿನ್ನಂತ ನೂರು ಹೆಣ್ಣನ್ನು ನಾನು ಬಲ್ಲೇ 
ನನ್ನಲ್ಲಿ ಇನ್ನು ನಿನ್ನಾಟ ಸಾಗದಲ್ಲೆ 

।। ಬಳಿಗೆ ಬರುವ ಮನವ ಗೆಲುವ ಆಸೆ ನನ್ನಲ್ಲಿ ಬಂತೇ 
ಸರಸದಿಂದ ನಿನ್ನ ಬೆರೆವೆ ಬಾ ಹೇಳು ಇನ್ನೇಕೆ ಚಿಂತೆ ।।೨।।
ನಿನಗಾಗಿಯೆ ನಾನಿಲ್ಲವೆ ನನ್ನಸೆಯು ನಿನಗಿಲ್ಲವೆ 
ನಿಜವನು ನುಡಿ ಸುಂದರಿ 

ನಿನ್ನಂತ ನೂರು ಹೆಣ್ಣನ್ನು ನಾನು ಬಲ್ಲೇ 
ನನ್ನಲ್ಲಿ ಇನ್ನು ನಿನ್ನಾಟ ಸಾಗದಲ್ಲೆ 

Song: Kannalli Eno
Movie: Vasantha Geetha

ವಿಶ್ವನಾಥನು ತಂದೆಯಾದರೆ

ಚಿತ್ರ: ತಾಯಿಗೆ ತಕ್ಕ ಮಗ 
ರಚನೆ: ಚಿ. ಉದಯಶಂಕರ್ 
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕರು:  ಡಾ. ರಾಜಕುಮಾರ್

ಹೇ ವಿಶ್ವನಾಥ, ನೀನು ತಂದೆಯಾದರೆ ವಿಶಾಲಾಕ್ಷಿ ತಾಯಿಯಲ್ಲವೇ 
ತಾಯಿಯಲ್ಲವೇ 

ವಿಶ್ವನಾಥನು ತಂದೆಯಾದರೆ ವಿಶಾಲಾಕ್ಷಿ ತಾಯಿಯಲ್ಲವೇ ।೨।
ಯಶೋಧೆ ಕೃಷ್ಣನ ಬೆಳೆಸಿದರೇನು ।೨।
ದೇವಕಿಗೆ ಅವನು ಕಂದನಲ್ಲವೇ 
ವಿಶ್ವನಾಥನು ತಂದೆಯಾದರೆ ವಿಶಾಲಾಕ್ಷಿ ತಾಯಿಯಲ್ಲವೇ 

ಕಂದ ಕಾಣುವ ಮೊದಲ ದೇವರೆ, ಜನುಮ ನೀಡಿದ ಅಮ್ಮನಲ್ಲವೇ ।೨।
ತಾಯಿ ದೇವರೆ, ಸುಳ್ಳು ನುಡಿದರೆ ।೨।
ಸತ್ಯವೆಂಬ ಮಾತು ಎಲ್ಲಿದೆ ।೨।

ವಿಶ್ವನಾಥನು ತಂದೆಯಾದರೆ ವಿಶಾಲಾಕ್ಷಿ ತಾಯಿಯಲ್ಲವೇ 

ಗಂಗಾ ನದಿಯಲಿ ಮಿಂದು ಬಂದರು, ಪಾಪವಿನ್ನು ಕಳೆಯಲಿಲ್ಲವೇ ।೨।
ಕಾಶೀನಾಥನ ಬಳಿಗೆ ಬಂದರು ।೨।
ನ್ಯಾಯವಿನ್ನು ಏಕೋ ಕಾಣದೆ ।೨।

ವಿಶ್ವನಾಥನು ತಂದೆಯಾದರೆ ವಿಶಾಲಾಕ್ಷಿ ತಾಯಿಯಲ್ಲವೇ
ಯಶೋಧೆ ಕೃಷ್ಣನ ಬೆಳೆಸಿದರೇನು, ದೇವಕಿಗೆ ಅವನು ಕಂದನಲ್ಲವೇ 

ವಿಶ್ವನಾಥನು ತಂದೆಯಾದರೆ ವಿಶಾಲಾಕ್ಷಿ ತಾಯಿಯಲ್ಲವೇ ।೨।

Song: Vishwanathanu Thandeyadare
Movie: Thayige Thakka Maga

ಕೋಗಿಲೆ ಹಾಡಿದೆ ಕೇಳಿದೆಯ

ಚಿತ್ರ: ಸಮಯದ ಗೊಂಬೆ
ರಚನೆ: ಚಿ. ಉದಯಶಂಕರ್ 
ಸಂಗೀತ:  ಎಂ. ರಂಗರಾವ್ 
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ  

ಹೆ:  ಕೋಗಿಲೆ ಹಾಡಿದೆ ಕೇಳಿದೆಯ, ಹೊಸ  ರಾಗವ ಹಾಡಿದೆ ಆಲಿಸೆಯ ।೨।
     ಹೊಸ ಹೊಸ ಭಾವ ಕುಣಿಸುತ ಜೀವ ।೨।
     ಮರೆಸುತ ನೋವ ಪ್ರೇಮವ ತುಂಬಿ 
     ಕೋಗಿಲೆ ಹಾಡಿದೆ ಕೇಳಿದೆಯಹೊಸ  ರಾಗವ ಹಾಡಿದೆ ಆಲಿಸೆಯ 

ಹೆ:  ಅಮ್ಮನು ಕಂದನ ಕೂಗುವ ಹಾಗೆ, ತಂಗಿಯು ಅಣ್ಣನ ಹುಡುಕುವ ಹಾಗೆ ।೨।
      ಪ್ರೀತಿಯ ಚಿಲುಮೆ ಹುಕ್ಕುವ ಹಾಗೆ ಕಾತರದಿಂದ ಪಂಚಮ ಸ್ವರದೆ 
      ಕೊಳಲಿಂದ ಹೊರಬಂದ ಸಂಗೀತದಂತೆ
     
     ಕೋಗಿಲೆ ಹಾಡಿದೆ ಕೇಳಿದೆಯ, ಹೊಸ  ರಾಗವ ಹಾಡಿದೆ ಆಲಿಸೆಯ 
     ಹೊಸ ಹೊಸ ಭಾವ ಕುಣಿಸುತ ಜೀವ ।೨।
     ಮರೆಸುತ ನೋವ ಪ್ರೇಮವ ತುಂಬಿ 
     ಕೋಗಿಲೆ ಹಾಡಿದೆ ಕೇಳಿದೆಯ, ಹೊಸ ರಾಗವ ಹಾಡಿದೆ ಆಲಿಸೆಯ 

ಗಂ:  ಕಾಣದ ಸಿರಿಯ ನೋಡಿದ ಹಾಗೆ, ಸ್ವರಗಳ ಮಾಣಿಕ್ಯ ದೊರಕಿದ ಹಾಗೆ
        ಬಾಳಲಿ ಬೆಳಕು ಮೂಡಿದ ಹಾಗೆ, ಸಡಗರ ಬದುಕಲಿ ತುಂಬುವ ಹಾಗೆ 
        ಬಾಡಿದ ಬಳ್ಳಿ ಚಿಗುರಿದ ಹಾಗೆ, ಇರುಳಲಿ ಜ್ಯೋತಿ ಬೆಳಗಿದ ಹಾಗೆ 
        ಸವಿಯಾಗಿ ಹಿಂಪಾಗಿ ಆನಂದದಿಂದ 

      ಕೋಗಿಲೆ ಹಾಡಿದೆ ಕೇಳಿದೆಯ, ಹೊಸ  ರಾಗವ ಹಾಡಿದೆ ಆಲಿಸೆಯ 

ಗಂ:  ಕಂಗಳು ಕನಸು ಕಾಣುವ ಹಾಗೆ, ತಿಂಗಳ ಬೆಳಕು ತುಂಬಿದ ಹಾಗೆ 
        ಹೃದಯದ ನೈದಿಲೆ ಅರಳಿದ ಹಾಗೆ, ಹರುಷದ ಹೊನಲು ಹೊಮ್ಮಿದ ಹಾಗೆ 
        ನೆನಪಿನ ಅಲೆಯಲಿ ತೇಲಿದ ಹಾಗೆ, ನೋವೋ ನಲಿವೋ ತಿಳಿಯದ ಹಾಗೆ 
        ಸಂಗೀತ ಸುಧೆಯಿಂದ ಸುಖ ನೀಡುವಂತೆ 

ಗಂ:  ಕೋಗಿಲೆ ಹಾಡಿದೆ ಕೇಳಿದೆಯ, ಹೊಸ  ರಾಗವ ಹಾಡಿದೆ ಆಲಿಸೆಯ 
        ಹೊಸ ಹೊಸ ಭಾವ ಕುಣಿಸುತ ಜೀವ ।೨।
        ಮರೆಸುತ ನೋವ ಪ್ರೇಮವ ತುಂಬಿ 

ಹೆ:  ಕೋಗಿಲೆ ಹಾಡಿದೆ ಕೇಳಿದೆಯಹೊಸ  ರಾಗವ ಹಾಡಿದೆ ಆಲಿಸೆಯ ।೨।

Song: Kogile Hadide Kelideya
Movie: Samayada Gombe

ಎಂತ ಸೊಗಸು

ಚಿತ್ರ: ತಾಯಿಗೆ ತಕ್ಕ ಮಗ 
ರಚನೆ: ಚಿ. ಉದಯಶಂಕರ್ 
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕ: ಡಾ. ರಾಜಕುಮಾರ್ 

ಎಂತ ಸೊಗಸು ಮಗುವಿನ ಮನಸು,  ಎಂತ ಸೊಗಸು ಪ್ರೇಮದ ಕನಸು ।೨।

ಎಲ್ಲಾ ಕಾಲವು ವಸಂತವಾದರೆ, ಋತುವಿನ ಸೊಗಸೇ ಸೊಗಸು ।೨।
ಎಲ್ಲಾ ವಯಸ್ಸು ಯವ್ವನ ವಾದರೆ ।೨।
ಜೀವನವೆಂತ ಸೊಗಸು 

ಎಂತ ಸೊಗಸು ಮಗುವಿನ ಮನಸು,  ಎಂತ ಸೊಗಸು ಪ್ರೇಮದ ಕನಸು

ಬಯಸಿದೆ ಹಾಗೆ ನೆಡೆದರೆ ಎಲ್ಲ, ಬಾಳುವ ರೀತಿಯೆ ಸೊಗಸು ।೨।
ನುಡಿಯುವುದೆಲ್ಲ ಕವನವೆ ಆದರೆ ।೨।
ಕವಿಯು ಕಾಣದ ಸೊಗಸು 

ಎಂತ ಸೊಗಸು ಮಗುವಿನ ಮನಸು,  ಎಂತ ಸೊಗಸು ಪ್ರೇಮದ ಕನಸು

ರಾತ್ರಿಗಳೆಲ್ಲ ಹುಣ್ಣಿಮೆಯಾದರೆ, ರಸಿಕರಿಗೆಂತ ಸೊಗಸು ।೨।
ಮಾತಿನಲೆಲ್ಲಾ ಪ್ರೀತಿಯೆ ಹರಿದರೆ ।೨।
ಆ ಅನುಭವವೇ 

ಎಂತ ಸೊಗಸು ಮಗುವಿನ ಮನಸು,  ಎಂತ ಸೊಗಸು ಪ್ರೇಮದ ಕನಸು

Song: Entha Sogasu
Movie: Thayige Thakka Maga

ನೀ ನೆಡೆದರೆ ಸೊಗಸು

ಚಿತ್ರ: ಅನುರಾಗ ಅರಳಿತು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ನೀ ನೆಡೆದರೆ ಸೊಗಸು, ನೀ ನಿಂತರೆ ಸೊಗಸು ।೨।
ನಕ್ಕರೆ ಸೊಗಸು, ಕೋಪದಿ ಸಿಡಿದರು ಸೊಗಸು 
ನೀ ನೆಡೆದರೆ ಸೊಗಸು

ಕಂಗಳ ಕಾಡುವ ಸೊಗಸು, ಜೋಡಿಯ ಬೇಡುವ ವಯಸು ।೨।
ಹೆಣ್ಣೇ ತೋಳಿಂದ ಬಳಸಿ ।೨।
ನನ್ನನು ಕುಣಿಸು ಕುಣಿಸು 

ನೀ ನೆಡೆದರೆ ಸೊಗಸು, ನೀ ನಿಂತರೆ ಸೊಗಸು

ನಿನ್ನನು ನೋಡಿದ ಮನಸು, ಕಂಡಿತು ಸಾವಿರ ಕನಸು ।೨।
ಚಿನ್ನ ನಾ ತಾಳೆನು ವಿರಹ ।೨।
ಬೇಗನೆ ಪ್ರೀತಿಸು ಪ್ರೀತಿಸು 

ನೀ ನೆಡೆದರೆ ಸೊಗಸು, ನೀ ನಿಂತರೆ ಸೊಗಸು
ನಕ್ಕರೆ ಸೊಗಸು, ಕೋಪದಿ ಸಿಡಿದರು ಸೊಗಸು 
ನೀ ನೆಡೆದರೆ ಸೊಗಸು, ನೀ ನಿಂತರೆ ಸೊಗಸು

Song: Nee Nededare Sogasu
Movie: Anuraga Aralithu

ಬಾನಿನ ಅಂಚಿಂದ ಬಂದೆ

ಚಿತ್ರ: ಶ್ರಾವಣ ಬಂತು 
ರಚನೆ: ಚಿ. ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕರು: ಡಾ. ರಾಜಕುಮಾರ್, ವಾಣಿ ಜಯರಾಂ 

ಗಂ: ಮೂಡಣದ ಅರಮನೆಯ ಕದವು ತೆರೆಯುತಿರೆ 
      ಬಾಲ ರವಿ ನಸುನಗುತ ಇಣುಕಿ ನೋಡುತಿರೆ 
      ಆಕಾಶ ಕೆಂಪಾಗಿ, ಭುವಿಯೆಲ್ಲ ರಂಗಾಗಿ 
      ನಲಿಯುತ, ಕುಣಿಯುತ, ಬರುತಿರಲು ಉಷೆ, ಮರೆಯಾದಳು ನಿಶೆ 

।। ಗಂ: ಬಾನಿನ ಅಂಚಿಂದ ಬಂದೆ ಬಳಿ ನಿಂದೆ
      ಬೆಳಕನ್ನು ಚೆಲ್ಲುತ್ತ ಉದಯರಾಗ ಹಾಡುತಿರುವೆ ।।೨।।

ಗಂ: ಹೆಜ್ಜೆ ಇಡಲು ನಿನ್ನ ಗೆಜ್ಜೆ ನಗಲು, ನಾದ ತೇಲಿ ಮೊಗ್ಗು ಹೂವಾಗಿದೆ 
ಹೆ:  ಹೂವು ನಗಲು ಅದರ ಜೇನ ಒಡಲು, ಕಂಡು ದುಂಬಿ ಅಲ್ಲಿ ಹಾರಾಡಿದೆ 
।। ಗಂ: ಬೆಳಕು ಮೂಡುತಿದೆ 
    ಹೆ:  ಸೊಗಸು ಕಾಣುತಿದೆ  ।।೨।।
ಗಂ: ಹೊಸದು ಜೀವ ತುಂಬುವಂತೆ 

ಹೆ:  ಬಾನಿನ ಅಂಚಿಂದ ಬಂದೆ ನಿನ್ನ ಕಂಡೆ 
     ಒಲವಿಂದ ಇಂಪಾಗಿ ಉದಯರಾಗ ಆಡುತಿರುವೆ 

ಹೆ:  ಎಲೆಯ ಮೇಲೆ ಹಿಮದ ಮಣಿಯ ಸಾಲು, ಬೆಳಕ ಕಂಡು ಹೊಳೆವ ಮುತ್ತಾಗಿದೆ 
ಗಂ: ಮರದ ಮೇಲೆ ಕುಳಿತ ಗಿಳಿಯ ಸಾಲು, ಮುಗಿಲ ಕಡೆಗೆ ಚಿಮ್ಮಿ ಹಾರಾಡಿದೆ 
।। ಹೆ:  ಕಡಲ ಅಲೆ ಅಲೆಯು 
    ಗಂ:  ಚಿಮ್ಮಿ ಕುಣಿಯುತಿರೆ ।।೨।।
ಹೆ:  ಭುವಿಯ ಅಂದ ಕಾಣಲೆಂದು 

ಗಂ: ಬಾನಿನ ಅಂಚಿಂದ ಬಂದೆ ಬಳಿ ನಿಂದೆ
      ಬೆಳಕನ್ನು ಚೆಲ್ಲುತ್ತ ಉದಯರಾಗ ಹಾಡುತಿರುವೆ
      ಬಾನಿನ ಅಂಚಿಂದ ಬಂದೇ..... 

Song: Banina Anchinda Bande
Movie: Shravana Bantu