Monday, July 31, 2017

ನಿನ್ನ ಚೆಲುವ ವದನ

ಚಿತ್ರ: ಜೀವನ ಚೈತ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್, ಮಂಜುಳಾ ಗುರುರಾಜ್

ಗಂ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 
      ನೆನೆಯಲು ಕಾಮನ ಸುಮಬಾಣನ ಅದೇ ದಿನ 
      ಕುಣಿಯಿತು ಮನ, ತಣಿಸುತ ನನ್ನಾ 
      ನಯನದಿ ನಯನ ಬೆರೆತಾ ಕ್ಷಣ ।೨।
ಹೆ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 
      ನೆನೆಯಲು ಕಾಮನ ಸುಮಬಾಣನ ಅದೇ ದಿನ 
      ಕುಣಿಯಿತು ಮನ, ತಣಿಸುತ ನನ್ನಾ 
      ನಯನದಿ ನಯನ ಬೆರೆತಾ ಕ್ಷಣ ।೨। 
ಜೊ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 

ಗಂ:  ಶೃಂಗಾರದ ಸಂಗೀತದ ಸ್ವರ ಮೂಡುತಲಿರೇ
      ಅನುರಾಗದ ನವಪಲ್ಲವಿ ಎದೆ ಹಾಡುತಲಿರೇ
ಹೆ:  ಹಣ್ಣಾದೆನು ಹೆಣ್ಣಾದೆನು ನಸುಸಾಚಿಕೆ ಬರೇ
      ನಿನ್ನ ಆಸೆಯು ನನ್ನ ಆಸೆಯು  ಜೊತೆಯಾಗುತಲಿರೇ
ಗಂ:  ನಿನ್ನ ಚಲುವಿನಲೀ, ನಿನ್ನ ಒಲವಿನಲೀ, ಹುಸಿ ನಗುವಿನಲೀ, ಮೃದು ನುಡಿಗಳಲೀ
ಹೆ:  ಸಿಹಿ ಜೇನಿನ ಸವಿ ಕಂಡೆನು ನಿನ್ನ ನೋಡುತಲಿರೇ

ಜೊ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 

ಹೆ:  ಉಲ್ಲಾಸದೀ ತಂಗಾಳಿಯು ತನು ಸೋಕುತಲಿರೇ 
      ಬಿಳಿಮೋಡವು ನಸುಗೆಂಪಿನ ರಂಗಾಗುತಲಿರೇ 
ಗಂ:  ಸಂತೋಷದ ಉಯ್ಯಾಲೆಯು ತೂಗಾಡುತಲಿರೇ 
      ಮಧುಮಾಸದ ನೆನಪಾಯಿತು ಹಿತವಾಗುತಲಿರೇ 
ಹೆ:  ಮಾಮರಗಳಲೀ, ಹಸಿರೆಲೆಗಳಲೀ, ಮನತಣಿಸುತಲೀ, ಸುಖತುಂಬುತಲೀ 
ಗಂ:  ಮರಿಕೋಗಿಲೆ ಹೊಸರಾಗದ ಧನಿ ಮಾಡುತಲಿರೇ 

ಹೆ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 
ಗಂ:  ನೆನೆಯಲು ಕಾಮನ ಸುಮಬಾಣನ ಅದೇ ದಿನ 
ಹೆ:  ಕುಣಿಯಿತು ಮನ, ತಣಿಸುತ ನನ್ನಾ 
ಗಂ:  ನಯನದಿ ನಯನ ಬೆರೆತಾ ಕ್ಷಣ
ಹೆ:  ನಯನದಿ ನಯನ ಬೆರೆತಾ ಕ್ಷಣ

Song: Ninna Cheluva Vadana
Movie: Jeevana Chaitra

ಲಕ್ಷ್ಮೀ ಬಾರಮ್ಮ

ಚಿತ್ರ: ಜೀವನ ಚೈತ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್, ಮಂಜುಳಾ ಗುರುರಾಜ್ 

ಹೆ:  ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ ।೨।
       ಬೆಳಗಲು ಮನೆಯನ್ನು ಸಿರಿದೇವಿಯೇ 
ಗಂ: ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಹೆ:  ಕಾಲಲಿ ಕೀರು ಗೆಜ್ಜೆ ಗಲು ಗಲು ಎಂದಾಗ 
ಗಂ: ಕಾಲಲಿ ಕೀರು ಗೆಜ್ಜೆ ಗಲು ಗಲು ಎಂದಾಗ 
       ಮನೆಯಲಿ ನೂರು ವೀಣೆ ನಾದ ಹೊಮ್ಮಿ ಚಿಮ್ಮಲೀ 
ಜೊ:  ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ 
       ಬೆಳಗಲು ಮನೆಯನ್ನು ಸಿರಿದೇವಿಯೇ 

ಹೆ:  ಅನುಗಾಲ ಜೊತೆಯಾಗಿ ನಮ್ಮ ಹರಿಯನ್ನು ಸೇರಲು ಬಾರಮ್ಮ 
ಗಂ: ಅನುಗಾಲ ಜೊತೆಯಾಗಿ ನಮ್ಮ ಹರಿಯನ್ನು ಸೇರಲು ಬಾರಮ್ಮ 
ಹೆ:  ನಮ್ಮ ಸೊಸೆಯಾಗಿ ನರಹರಿ ಸತಿಯಾಗಿ 
ಗಂ: ನಮ್ಮ ಸೊಸೆಯಾಗಿ ನರಹರಿ ಸತಿಯಾಗಿ, ನಮಗಾನಂದ ನೀಡುತಲೀ 
ಹೆ:  ನಮಗಾನಂದ ನೀಡುತಲೀ 
ಗಂ: ಸುಖವನು ನೀ ತಾರೆ ನಮ್ಮ ಭಾಗ್ಯದೇವತೇ 
ಜೊ:  ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ 
       ಬೆಳಗಲು ಮನೆಯನ್ನು ಸಿರಿದೇವಿಯೇ 

ಗಂ: ಹಿತವಾದ ಶ್ರುತಿಯಲ್ಲಿ ನಮ್ಮ ಬದುಕೆಂಬ ಗೀತೆಯ ಹಾಡಮ್ಮಾ 
ಹೆ:  ಹಿತವಾದ ಶ್ರುತಿಯಲ್ಲಿ ನಮ್ಮ ಬದುಕೆಂಬ ಗೀತೆಯ ಹಾಡಮ್ಮಾ 
ಗಂ: ಪ್ರೀತಿ ಸುಮವಾಗಿ ಜೇನಿನ ಹನಿಯಾಗಿ 
ಹೆ:  ಪ್ರೀತಿ ಸುಮವಾಗಿ ಜೇನಿನ ಹನಿಯಾಗಿ, ಹೊಸಸಂತೋಷ ತುಂಬುತಲೀ 
ಗಂ: ಹೊಸಸಂತೋಷ ತುಂಬುತಲೀ 
ಹೆ:  ಕೀರ್ತಿಯ ತಾರಮ್ಮ ನಮ್ಮ ಭಾಗ್ಯದೇವತೇ 
ಜೊ:  ।। ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ 
           ಬೆಳಗಲು ಮನೆಯನ್ನು ಸಿರಿದೇವಿಯೇ  ।।೨।।

Song: Lakshmi Baaramma
Movie: Jeevana Chaitra

ಅರಳಿದ ತನುವಿದು

ಚಿತ್ರ: ಜೀವನ ಚೈತ್ರ 
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್

।। ಅರಳಿದ ತನುವಿದು ಅಂದವೋ ಅಂದ 
    ನಲಿದಿರುವ ಮನವಿನ್ನೂ ಚಂದವೋ ಚಂದ ।।೨।। 
ಸಂತೋಷದೀ ನೀನಿರು ಬರುವನು ಕಂದ 
ಅರಳಿದ ತನುವಿದು ಅಂದವೋ ಅಂದ 
ನಲಿದಿರುವ ಮನವಿನ್ನೂ ಚಂದವೋ ಚಂದ

ಮೆದುವಾಗಿ ನೆಡಿ, ನಿನ್ನಾಸೆ ಏನೂ ನುಡಿ 
ಬಯಕೆಗಳ ಸರವಿರಲಿ, ಸಂಕೋಚವೇಕೇ 
ದಿನವೆಲ್ಲ ನಗು, ಆನಂದದಿಂದಾ ನಗು 
ಬೆಳೆಯುತಿಹ ಹಸುಕಂದ ನಗುವಂತೆ ನಲ್ಲೇ 
ಬದುಕೆಲ್ಲ ಹೀಗೇ ಇರು, ಉಲ್ಲಾಸದಿಂದಾ 

ಅರಳಿದ ತನುವಿದು ಅಂದವೋ ಅಂದ 
ನಲಿದಿರುವ ಮನವಿನ್ನೂ ಚಂದವೋ ಚಂದ

ಒಲವೆಂಬಾ ಲತೆ, ಹೂವೊಂದು ಬಿಡುವಾ ದಿನ 
ಸಡಗರದಿ ಬರುತಿರಲು, ಉಲ್ಲಾಸ ಕಂಡೇ 
ಮಧುಮಾಸಾ ದಿನ, ನೀ ನನಗೆ ಒಲಿದಾ ಕ್ಷಣ 
ಬಾಳಲ್ಲಿ ಹೊಸದಾದ ಸುಖವನ್ನು ತಂದೇ 
ನನ್ನ ಭಾಗ್ಯತಾನೇ ಇದು, ನಿಜ ಹೇಳು ನೀನು 

ಅರಳಿದ ತನುವಿದು ಅಂದವೋ ಅಂದ 

ನಲಿದಿರುವ ಮನವಿನ್ನೂ ಚಂದವೋ ಚಂದ
ಸಂತೋಷದೀ ನೀನಿರು ಬರುವನು ಕಂದ 

ಅರಳಿದ ತನುವಿದು ಅಂದವೋ ಅಂದ 
ನಲಿದಿರುವ ಮನವಿನ್ನೂ ಚಂದವೋ ಚಂದ

Song: Aralida Thanuvidu
Movie: Jeevana Chaitra

ಮಾನವನಾಗಿ ಹುಟ್ಟಿದ ಮೇಲೆ

ಚಿತ್ರ: ಜೀವನ ಚೈತ್ರ 
ರಚನೆ: ಮೂಗೂರ್ ಮಲ್ಲಪ್ಪ 
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ।೨।
ಸಾಯೋತನಕ ಸಂಸಾರದಲ್ಲಿ ಗಂಡಾ ಗುಂಡಿ 
ಏರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ ।೨।
ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ 

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
ಸಾಯೋತನಕ ಸಂಸಾರದಲ್ಲಿ ಗಂಡಾ ಗುಂಡಿ 
ಏರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ

ರಾಜ ರೋರರ್ ರಾಕೆಟ್ ಲೇಡಿ ಚತ್ರುಮುಖ 
ಜೋಡಿ ಕೂಡಿ ಹಾಡುತ್ತಾವ ಹಿಂದಿನ್ ಸುಖ 
ತಾನು ಬಿದ್ರೆ ಆದೀತೇಳು ತಾಯಿಗೆ ಬೆಳಕ 
ಮುಂದಿನವರು ಕಂಡ್ರೆ ಸಾಕು ಸ್ವರ್ಗ ಸುಖ 
ಒಂದು ಎರಡು ಮೂರು ನಾಕು ಅದಾವ್ ಮತ
ಹಿಂದಿನಿಂದ ಹರಿದು ಬಂದಿದ್ ಒಂದೇ ಮತ 
ಗುಂಡಿಗೆ ಬಿದ್ದು ಹಾಳಾಗ್ಲಿಕ್ಕೆ ಸಾವಿರ್ ಮತ 
ಮುಂದೆ ಹೋಗಿ ಸೇರೊದಲ್ಲಿ ಒಂದೇ ಮತ 

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ।೨।

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು 
ಬೆಳ್ಳಿ ಬಂಗಾರ ಬೆಳಿತಾವ ಸುತ್ತಾ ಕಾಡು 
ಭೂಮಿ ತಾಯಿ ಮುಡಿದು ನಿಂತಾ ಬಾಸಿಂಗ್ ಜೋಡು 
ಬಾಣಾವತಿ ಬೆಡಗಿನಿಂದ ಬರ್ತಾಳ್ ನೋಡು 
ಶರಾವತಿ ಕನ್ನಡನಾಡ ಭಾಗೀರಥಿ 
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತಿ 
ಸಾವು ನೋವು ಸುಳಿಯೋದಿಲ್ಲಿ ಕರಾಮತಿ 
ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ 

।। ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
    ಸಾಯೋತನಕ ಸಂಸಾರದಲ್ಲಿ ಗಂಡಾ ಗುಂಡಿ 
    ಏರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ

    ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ ।।೨।।

Song: Manavanagi Huttida Mele
Movie: Jeevana Chaitra