Friday, January 27, 2017

ಏಕೋ ಏನೋ ಈ ನನ್ನ ಮನವು

ಚಿತ್ರ: ಜ್ವಾಲಾಮುಖಿ 
ರಚನೆ: ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕ/ನಟ: ಡಾ. ರಾಜಕುಮಾರ್, ಬೆಂಗಳೂರು ಲತ 

ಗಂ:  ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ ।೨।
        ಎಂದು ಕಾಣೆ ನೂರೆಂಟು ಬಯಕೆ ।೨।
        ಹೊಸ ರಾಗವನ್ನು ಹಾಡಿದೆ 
ಹೆ:   ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ

        ಎಂದು ಕಾಣೆ ನೂರೆಂಟು ಬಯಕೆ ।೨।

        ಹೊಸ ರಾಗವನ್ನು ಹಾಡಿದೆ 
ಗಂ:  ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ

ಗಂ:  ಬಿಸಿಲಾದರೇನು ಮಳೆಯಾದರೇನು ಇಂದೇಕೋ ನನಗೆ ಹಾಯಾಗಿದೆ 
ಹೆ:   ಹೂವಾದರೇನು ಮುಳ್ಳಾದರೇನು ಇಂದೇಕೋ ನನಗೆಲ್ಲ ಸೊಗಸಾಗಿದೆ 
ಗಂ:  ಎದೆಯಲ್ಲಿ ಸಂತೋಷ ಕಡಲಾಗಿದೆ ।೨।
        ಮನದಲ್ಲಿ ಹೊಸ ಆಸೆ ಕುಣಿದಾಡಿದೆ 

ಹೆ:   ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ

ಹೆ:   ಬದುಕೆಲ್ಲ ಹೀಗೆ ಉಲ್ಲಾಸದಿಂದ ಒಂದಾಗಿ ಇರುವಾಸೆ ನನಗಾಗಿದೆ 
ಗಂ:  ಅನುರಾಗ ತಂದ ಆನಂದದಿಂದ ಈ ಬಾಳ ಸಂಗೀತ ಹಿತವಾಗಿದೆ 
ಹೆ:   ನೀನಾಡೊ ಮಾತೆಲ್ಲ ಸವಿಯಾಗಿದೆ ।೨।
        ಇಂದೇಕೊ ನನಗೆಲ್ಲ ಹೊಸದಾಗಿದೆ 

ಗಂ:  ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ
ಹೆ:   ಎಂದು ಕಾಣೆ ನೂರೆಂಟು ಬಯಕೆ ।೨।
        ಹೊಸ ರಾಗವನ್ನು ಹಾಡಿದೆ
ಗಂ:  ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ
ಹೆ:    ಆ... ಆ... 
ಗಂ:   ಆ... ಆ... 

Song: Eko Eno Ee Nanna Manavu
Movie: Jwalamukhi

ಗಂಗಾ ಯಮುನಾ ಸಂಗಮ

ಚಿತ್ರ: ಅನುರಾಗ ಅರಳಿತು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ 

ಗಂಗಾ ಯಮುನಾ ಸಂಗಮ ।೨।
ಈ ಪ್ರೇಮ, ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು

ಗಂಗಾ ಯಮುನಾ ಸಂಗಮ ।೨।
ಈ ಪ್ರೇಮ, ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು

ಹೆ:   ಅನುದಿನ ಸಂತೋಷ, ಅನುದಿನ ಉಲ್ಲಾಸ
        ಗೆಳೆಯ ನಿನ್ನ ಸೇರಿ ಪ್ರೇಮದ ಆವೇಷ
ಗಂ:  ಪ್ರಣಯದ ಕಣ್ಣೋಟ, ಸರಸದ ಚೆಲ್ಲಾಟ
        ದಿನವೂ ನೋಡಿ ನೋಡಿ ಒಲವಿನ ತುಂಟಾಟ
ಹೆ:   ಅರಿತೂ ಬೆರೆತೂ
ಗಂ:  ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆ:   ಕೆನೆ ಹಾಲು ಜೇನು ಸೇರಿದಂತೆ ಈ ಬದುಕು

ಗಂ:  ಗಂಗಾ ಯಮುನಾ ಸಂಗಮ
ಹೆ:   ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ

ಗಂ:  ಬಾಳಲಿ ಇನ್ನೆಂದು, ಚಿಂತೆಯ ಮಾತಿಲ್ಲ
        ಗೆಳತೀ ಏನೇ ಕೇಳು, ಕೊಡುವೆ ನಾನೆಲ್ಲ
ಹೆ:   ಕೇಳೆನು ಏನನ್ನು, ಬಯಸೆನು ಇನ್ನೇನು
        ಗೆಳೆಯ ಎಂದೂ ಹೀಗೆ ಪ್ರೀತಿಸು ನನ್ನನು
ಗಂ:  ನಿನ್ನಾ ಸೇರೀ
ಹೆ:   ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂ:  ಕೆನೆ ಹಾಲು ಜೇನು ಸೇರಿದಂತೆ ಈ ಬದುಕು

ಹೆ:   ಗಂಗಾ ಯಮುನಾ ಸಂಗಮ
ಗಂ:  ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ
        ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ।೨।

Song: Ganga Yamuna Sangama
Movie: Anuraga Aralithu

ಸಾರ್ಥಕವಾಯಿತು ಚಿನ್ನ ನಿನ್ನ

ಚಿತ್ರ: ಅನುರಾಗ ಅರಳಿತು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಸಾರ್ಥಕವಾಯಿತು ।೨।
ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು ।೨।

ನಿನ್ನೀ ಕಂಗಳು ನೈದಿಲೆಯಂತೆ, ಸುಂದರ ಮೊಗವು ತಾವರೆಯಂತೆ
ಮುಂಗುರುಳೇನೋ ದುಂಬಿಗಳಂತೆ, ಒಳಗೇನಿದೆಯೋ ಎಂಬುದೆ ಚಿಂತೆ

ಸಾರ್ಥಕವಾಯಿತು, ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು

ಆ ಸಾವಿತ್ರಿ ನಿನ್ನ ನೋಡಿದರೆ, ಎದೆಯೇ ಹೊಡೆದು ಸಾಯುತಲಿದ್ದಳು 
ಪತಿ ಭಕ್ತಿಯಲಿ ನಿನಗೆನೆ ಇಲ್ಲ, ಓ ಕುಲ ನಾರಿ ಕುಬೇರನ ಕುವರಿ 

ಸಾರ್ಥಕವಾಯಿತು, ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು

ಕವಿ ವಾಲ್ಮೀಕಿ ಇದ್ದರೆ ಈಗ, ಹೊಸ ಕಾವ್ಯವನೇ ಬರೆಯುತಲಿದ್ದ 
ಭಾರತ ಬರೆದ ವ್ಯಾಸರು ನಿನ್ನ, ಕಂಡರೆ ಕಾಡಿಗೆ ಓಡುತಲಿದ್ದರು 

ಸಾರ್ಥಕವಾಯಿತು, ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು ।೨।

Song: Sarthakavayithu Chinna Ninna
Movie: Anuraga Aralithu

ನಿನ್ನಾ ಸ್ನೇಹಕೆ

ಚಿತ್ರ: ಭಾಗ್ಯವಂತರು
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಡಾ. ರಾಜಕುಮಾರ್,  ಪಿ. ಸುಶೀಲ

ಗಂ: ನಿನ್ನಾ ಸ್ನೇಹಕೆ, ನಾ ಸೋತುಹೋದೆನೂ
        ಎಲ್ಲಾ ದೇವರ ನಾ ಬೇಡಿಕೊಂಡೆನು
        ದೇವರ ವರವೋ, ಪುಣ್ಯದ ಫಲವೋ ಕಾಣೆನೂ
        ನಿನ್ನ ನಾ ಪಡೆದೆನು, ಓ
ಹೆ:  ನಿಮ್ಮಾ ಸ್ನೇಹಕೆ, ನಾ ಸೋತುಹೋದೆನೂ
        ಎಲ್ಲಾ ದೇವರ ನಾ ಬೇಡಿಕೊಂಡೆನು
        ದೇವರ ವರವೋ, ಪುಣ್ಯದ ಫಲವೋ ಕಾಣೆನೂ
        ನಿಮ್ಮ ನಾ ಪಡೆದೆನು

ಗಂ: ಓ, ನಿನ್ನಾ ಸ್ನೇಹಕೆ, ನಾ ಸೋತುಹೋದೆನೂ
        ಎಲ್ಲಾ ದೇವರ ನಾ ಬೇಡಿಕೊಂಡೆನು

ಗಂ: ನಿನ್ನಾ ನಾನು ಕಂಡಾಗ, ಮಲ್ಲಿಗೆಯಂತೆ ನಕ್ಕಾಗ
        ನನ್ನ ಮನದಲಿ ಆಸೆ ಮೂಡಿತು
ಹೆ:  ಅಂದೂ ನೀವು ಬಂದಾಗ, ಮಲ್ಲಿಗೆ ಹೂವು ತಂದಾಗ
        ನನ್ನ ಹೃದಯದ ವೀಣೆ ಹಾಡಿತು
ಗಂ: ಪ್ರೇಮದ ದೇವತೆ ಆದೆ, ನನ್ನಲ್ಲಿ ಒಂದಾಗಿ ಇಂದು ಸೇರಿದೆ
ಹೆ:  ಪ್ರೇಮದ ಮೂರುತಿ ಆದೆ, ನನ್ನಲ್ಲಿ ಆನಂದ ತಂದು ತುಂಬಿದೆ
ನನ್ನಲ್ಲಿ ಆನಂದ ತಂದು ತುಂಬಿದೆ

ಗಂ: ನಿನ್ನಾ ಸ್ನೇಹಕೆ, ನಾ ಸೋತುಹೋದೆನೂ
ಹೆ:  ಎಲ್ಲಾ ದೇವರ ನಾ ಬೇಡಿಕೊಂಡೆನು

ಹೆ:  ನನ್ನೀ ಬಾಳಿನ ದೀಪ, ನಿಮ್ಮದೆ ಈ ಪ್ರತಿರೂಪ
ಗಂ: ಆ.. ನಿನ್ನೀ ಕಂದನ ರೂಪ, ಬೆಳಗುವ ನಂದಾ ದೀಪ
ಹೆ:  ಮೈ ಮರೆಸಿ ನಮ್ಮ ಮನ ತಣಿಸಿ, ಹರುಷದ ಹೊನಲನು ಹರಿಸೀ
ಜೊ: ಇಂದು ಈ ಮುದ್ದು ಕಂದ, ತಂದ ನಮಗಾನಂದ

ಹೆ:  ಓ.. ನಿಮ್ಮಾ ಸ್ನೇಹಕೆ, ನಾ ಸೋತುಹೋದೆನೂ
ಗಂ: ಎಲ್ಲಾ ದೇವರ ನಾ ಬೇಡಿಕೊಂಡೆನು

ಗಂ: ಅಮ್ಮ ಎಂದು ಅಂದಾಗ, ಅಮ್ಮನ ಮೊಗವ ಕಂಡಾಗ
        ಏನೋ ಹರುಷವು ನನ್ನಾ ಮನದಲಿ

ಹೆ:  ಅಪ್ಪ ಎಂದು ಅಂದಾಗ,  ಪ್ರೀತಿ ಮಾತು ನುಡಿದಾಗ
        ಹಾಡಿ ಕುಣಿಯುವ ಆಸೆ ನನ್ನಲಿ
        ಯಂತಹ ಭಾಗ್ಯವ ಕಂಡೆ, ಜೇನಂತ ಮಾತಿಂದ ಹೃದಯ ತುಂಬಿದೆ
ಗಂ: ಯಂತಹ ಭಾಗ್ಯವ ತಂದೆ, ಹೆಣ್ಣಾಗಿ ಕಣ್ಣಾಗಿ ಮನೆಯ ತುಂಬಿದೆ
        ಹೆಣ್ಣಾಗಿ ಕಣ್ಣಾಗಿ ಮನವ ತುಂಬಿದೆ

ಗಂ: ನಿನ್ನಾ ಸ್ನೇಹಕೆ, ನಾ ಸೋತುಹೋದೆನೂ
ಹೆ:  ಎಲ್ಲಾ ದೇವರ ನಾ ಬೇಡಿಕೊಂಡೆನು
ಜೊ: ದೇವರ ವರವೋ, ಪುಣ್ಯದ ಫಲವೋ ಕಾಣೆನೂ
ಗಂ: ನಿನ್ನ ನಾ ಪಡೆದೆನು
ಹೆ:  ಓ, ಲಾ ಲ ಲಾ ಲ ಲಾ
ಗಂ: ಆ.. ಲಾ ಲ ಲಾ ಲ ಲಾ
ಹೆ:  ಲಾ ಲ ಲಾ ಲ ಲಾ
ಗಂ: ಆ.. ಲಾ ಲ ಲಾ ಲ ಲಾ

Song: Ninnaa Snehake
Movie: Bhagyavantaru