Saturday, December 3, 2016

ಚಿನ್ನದ ಮಲ್ಲಿಗೆ ಹೂವೆ

ಚಿತ್ರ : ಹುಲಿಯ ಹಾಲಿನ ಮೇವು
ರಚನೆ : ಗೀತಪ್ರಿಯ 
ಸಂಗೀತ : ಜಿ. ಕೆ. ವೆಂಕಟೇಶ್ 
ಗಾಯಕ/ನಟ : ಡಾ. ರಾಜಕುಮಾರ್, ಎಸ್. ಜಾನಕಿ  

ಗಂ:   ।। ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
              ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ ।।೨।।
          ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ

ಹೆ:     ಮಾತಲ್ಲೆ ಜೇನು ತುಂಬಿ, ನೂರೆಂಟು ಹೇಳುವೇ
          ನನಗಿಂತ ಚೆಲುವೆ ಬರಲು, ನೀ ಹಿಂದೆ ಓಡುವೇ
ಗಂ:   ನಿನ್ನನ್ನು ಕಂಡ ಕಣ್ಣು, ಬೇರೇನು ನೋಡದಿನ್ನು ।೨।
          ನಿನಗಾಗಿಯೇ, ಬಾಳುವೇ, ಇನ್ನು ನಾನು

ಹೆ:     ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ, ನಂಬೆನು ನಾನು
          ನನ್ನ ನೆನಪು ಬಂದಾಗ, ಮೊಗವ ಕಂಡಾಗ,  ಒಲವು ಬೇಕೆಂದು ಬರುವೆ, ಏ
          ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ ನಂಬೆನು ನಾನು

ಗಂ:   ಆ ಸೂರ್ಯ ಚಂದ್ರ ಸಾಕ್ಷಿ, ತಂಗಾಳಿ ಸಾಕ್ಷಿಯೂ
          ಎಂದೆಂದು ಬಿಡದಾ ಬೆಸುಗೆ,  ಈ ನಮ್ಮ ಪ್ರೀತಿಯೂ
ಹೆ:     ಬಂಗಾರದಂಥ ನುಡಿಯ, ಸಂಗಾತಿಯಲ್ಲಿ ನುಡಿದು ।೨।
          ಆನಂದದ, ಕಂಬನಿ, ತಂದೆ ನೀನು

ಗಂ:   ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
ಹೆ:     ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ ನಂಬೆನು ನಾನು
ಗಂ:   ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ
          ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ

Song: Chinnada Mallige Hoove
Movie: Huliya Haalina Mevu

Saturday, November 26, 2016

ಅಲ್ಲಿ ಇಲ್ಲಿ ನೋಡುವೆ ಏಕೆ

ಚಿತ್ರ : ಆಪರೇಷನ್ ಡೈಮಂಡ್  ರಾಕೆಟ್
ರಚನೆ : ಚಿ. ಉದಯಶಂಕರ್ 
ಸಂಗೀತ : ಜಿ. ಕೆ. ವೆಂಕಟೇಶ್ 
ಗಾಯಕ/ನಟ : ಡಾ. ರಾಜಕುಮಾರ್, ಎಸ್. ಜಾನಕಿ   

ಗಂ:  ಅಲ್ಲಿ ಇಲ್ಲಿ ನೋಡುವೆ ಏಕೆ, ನಿಲ್ಲು ಅಲ್ಲೆ ಓಡುವೆ ಏಕೆ ।೨।
        ಕಂಡ ಕಂಡ ಹೆಣ್ಣ ನೋಡೋವನಲ್ಲ
        ನಿನ್ನ ಬಿಟ್ಟು ಎಲ್ಲು ಹೋಗೋವನಲ್ಲ
        ಎಂದು ನಿನ್ನ ಮರೆಯೋವನಲ್ಲ
        ಅಲ್ಲಿ ಇಲ್ಲಿ ನೋಡುವೆ ಏಕೆ, ನಿಲ್ಲು ಅಲ್ಲೆ ಓಡುವೆ ಏಕೆ
        ಅಲ್ಲಿ ಇಲ್ಲಿ ನೋಡುವೆ ಏಕೆ

ಹೆ:   ನೀನು ನಗುತಿರೆ ತನುವೆಲ್ಲ ಕುಣಿವುದು ನಿನ್ನಾ ನೋಡುತಾ
ಗಂ:  ನೀನು ನಲಿದರೆ ಮನವೆಲ್ಲ ನಲಿವುದು ನಾನು ಆಡುತಾ
ಹೆ:   ಹರುಷದಲಿ ತೆಲುತಾ, ಸರಸದಲ್ಲಿ ಕೂಡುತಾ ।೨।
ಗಂ:  ಬಯಕೆಗಳು ಮೂಡುತಾ, ಹೃದಯಗಳು ಕಾಡುತಾ, ಆನಂದ ಬೇಡಿದೆ

ಗಂ:  ಅಲ್ಲಿ ಇಲ್ಲಿ ನೋಡುವೆ ಏಕೆ, ನಿಲ್ಲು ಅಲ್ಲೆ ಓಡುವೆ ಏಕೆ
        ಅಲ್ಲಿ ಇಲ್ಲಿ ನೋಡುವೆ ಏಕೆ

ಹೆ:   ನೀನು ನಗುವಲೆ ನನ್ನನು ಕೊಲ್ಲುವೇ ಒಮ್ಮೆ ಗೆಲ್ಲುವೇ
ಗಂ:  ನೀನು ಜೊತೆ ಇರೆ ನನ್ನನ್ನೇ ಮರೆಯುವೆ ಸೋತೇ ಹೋಗುವೇ
ಹೆ:   ಮಾತಿನಲಿ ಸೋಲುವೇ ಪ್ರೀತಿಯಲಿ ಗೆಲ್ಲುವೇ ।೨।
ಗಂ:  ಸವಿನುಡಿಯನಾಡುವೇ ಹಿತವನ್ನೆ ನೀಡುವೇ ಒಲವಿಂದ ಸೇರುವೇ

ಹೆ:   ಅಲ್ಲಿ ಇಲ್ಲಿ ನೋಡುವೆ ಏಕೆ
ಗಂ:  ನಾನ
ಹೆ:   ನಿಲ್ಲು ಅಲ್ಲೆ ಓಡುವೆ ಏಕೆ
ಗಂ:  ಕಂಡ ಕಂಡ ಹೆಣ್ಣ ನೋಡೋವನಲ್ಲ
        ನಿನ್ನ ಬಿಟ್ಟು ಎಲ್ಲು ಹೋಗೋವನಲ್ಲ
        ಎಂದು ನಿನ್ನ ಮರೆಯೋವನಲ್ಲ

Song: Alli Illi Noduve Eke
Movie: Operation Diamond Racket

ಗಿಣಿಯೇ ನನ್ನ ಅರಗಿಣಿಯೆ

ಚಿತ್ರ: ಒಲವು ಗೆಲುವು 
ರಚನೆ: ಎಸ್. ಜಾನಕಿ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಡಾ. ರಾಜಕುಮಾರ್ 

ಗಿಣಿಯೇ ನನ್ನ ಅರಗಿಣಿಯೆ ।೨।
ಸಂಜೆಯಲಿ, ಈ ಏಕಾಂತದಲ್ಲಿ, ಹಿತವಿಲ್ಲವೇನು, ಸುಖವಿಲ್ಲವೇನು 
ಗಿಣಿಯೇ  ನನ್ನ ಅರಗಿಣಿಯೆ

ಎಂದೂ, ನನ್ನನು ನೋಡಿದಾಗ 
ನಗುತಲಿ ಬಂದು, ಮಾತನು ಆಡುವಾಗ 
ನಾ ಕಂಡ ಹರುಷ, ಆ ನಿನ್ನ ಸರಸ 
ಈ ದಿನ ಏನಾಯಿತು, ಏತಕೆ ಹೀಗಾಯಿತು ।೨।

ಹೇ
ಗಿಣಿಯೇ ನನ್ನ ಅರಗಿಣಿಯೆ ।೨।
ಸಂಜೆಯಲಿ, ಈ ಏಕಾಂತದಲ್ಲಿ, ಹಿತವಿಲ್ಲವೇನು, ಸುಖವಿಲ್ಲವೇನು

ನಿನ್ನಾ, ಮನಸಿನ ಆಸೆಯಂತೆ 
ಇರುವೆನು ಚಿನ್ನ, ಜೊತೆಯಲಿ ಜೋಡಿಯಂತೆ 
ಸಂತೋಷ ತಾನೆ, ನೀ ಹೇಳೆ ಜಾಣೇ  
ರೋಹಿಣಿ ನೀನಾದರೆ, ಚಂದಿರ ನಾನಾಗುವೆ ।೨। 

ಹೇ
ಗಿಣಿಯೇ ನನ್ನ ಅರಗಿಣಿಯೆ ।೨।
ಸಂಜೆಯಲಿ, ಈ ಏಕಾಂತದಲ್ಲಿ, ಹಿತವಿಲ್ಲವೇನು, ಸುಖವಿಲ್ಲವೇನು 
ಗಿಣಿಯೇ, ಹೇ, ನನ್ನ ಅರಗಿಣಿಯೆ

Song: Giniye Nanna Araginiye
Movie: Olavu Geluvu

Friday, November 25, 2016

ನಾ ನಿನ್ನ ಆಸೆ ಕಂಡೆ

ಚಿತ್ರ: ರವಿಚಂದ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ 

ಹೆ:  ಕಂಗಳಲೀ ಪ್ರಣಯದ ಹಣತೆ ಬೆಳಗಿರಲು
       ನಿನ್ನದರ ಪ್ರೇಮದ ಕವಿತೆ ಹಾಡಿರಲು
       ನಿನ್ನೊಲವ ನಾ ಕಂಡು ಸೋತು ಹೋಗಿರಲು

ಹೆ:  ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ ।೨।
       ನಾನೇನು ಹಾಡಲೀಗ ।೨।
       ನೀ ಹೇಳು ಪ್ರಿಯ ಬೇಗ
       ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ ।೨।

ಗಂ: ಹೂವಿಗೆ ಗಂಧವನು ನಾ ಚೆಲ್ಲ ಬೇಕೇ 
       ನವಿಲಿಗೆ ನಾಟ್ಯವನು ನಾ ಕಲಿಸ ಬೇಕೇ 
       ಕೋಗಿಲೆಗೆ ಹಾಡೆಂದು, ಕೋಗಿಲೆಗೆ ಹಾಡೆಂದು ನಾ ಹೇಳ ಬೇಕೇ

ಗಂ: ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ 
       ನಾನೇನು ಮಾಡಲೀಗ ।೨।
       ನೀ ಹೇಳೇ ಪ್ರಿಯೆ ಬೇಗ 
       ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ 

ಹೆ:  ವೀಣೆಯು ಆದರೆ ನಾ ।೨।
       ವ್ಯಣಿಕ ಪ್ರಿಯ ನೀನು 
       ಗಾಯಕಿ ಆದರೆ ನಾ, ಗಾನವು ಪ್ರಿಯ ನೀನು
       ನುಡಿಸಲು ನಾ ನುಡಿವೇ, ನೆಡೆಸಲು ನಾ ನೆಡೆವೇ ।೨।
       ನಿನ್ನಾಣೆ ನಲ್ಲ

ಹೆ:  ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ ।೨।

ಗಂ: ವೀಣೆಯು ನೀನಲ್ಲ ।೨।
       ವ್ಯಣಿಕ ನಾನು ಅಲ್ಲ
       ವಾಣಿಗೆ ವೀಣೆಯನು ಕಳಿಸುವರಾರು ಇಲ್ಲ
       ಕುಣಿಸುವೆ ಕಂಗಳಲೇ ತಣಿಸುವೆ ಮಾತಿನಲೇ ।೨।
       ಅಂತ ಜಾಣೆ ನೀನೆ

ಗಂ: ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ಹೆ:  ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ
ಗಂ:  ನಾನೇನು ಮಾಡಲೀಗ
ಹೆ:  ನಾನೇನು ಹಾಡಲೀಗ
ಗಂ: ನೀ ಹೇಳೇ ಪ್ರಿಯೆ ಬೇಗ
ಹೆ:  ನೀ ಹೇಳು ಪ್ರಿಯ ಬೇಗ

Song: Naa Ninna Aase Kande
Movie: Ravichandra

ಇದು ರಾಮ ಮಂದಿರ

ಚಿತ್ರ: ರವಿಚಂದ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ/ನಟ: ಡಾ. ರಾಜಕುಮಾರ್,  ಸುಲೋಚನ 

ಹೆ:  ಇದು ರಾಮ ಮಂದಿರ ನೀ ರಾಮಚಂದಿರ ।೨।
       ಜೊತೆಯಾಗಿ ನೀನಿರಲು ಬಾಳು ಸಹಜ ಸುಂದರ
       ಇದು ರಾಮ ಮಂದಿರ ನೀ ರಾಮಚಂದಿರ

ಹೆ:  ಸ್ವಾಮಿ ನಿನ್ನ ಕಂಗಳಲಿ ।೨।
       ಚಂದ್ರೋದಯ ಕಾಣುವೇ
       ಸ್ವಾಮಿ ನಿನ್ನ ನಗುವಲಿ ಅರುಣೋದಯ ನೋಡುವೇ
       ಸರಸದಲ್ಲಿ ಚತುರ ಚತುರ ।೨।
       ನಿನ್ನ ಸ್ನೇಹ ಅಮರ
ಗಂ:  ನಿನ್ನ ಬಾಳ ಕಮಲದಲೀ, ನಾನು ನಲಿವ ಭ್ರಮರ

ಹೆ:  ಇದು ರಾಮ ಮಂದಿರ ನೀ ರಾಮಚಂದಿರ

ಗಂ:  ನನ್ನ ಸೀತೆ ಇರುವ ತಾಣ ।೨।
        ಕ್ಷೀರ ಸಾಗರದಂತೆ 
       ನನ್ನ ಸೀತೆ ಬೆರೆತಾ ಮನವು, ಹೊನ್ನ ಹೂವಿನಂತೆ 
       ನುಡಿವ ಮಾತು ಮಧುರ ಮಧುರ ।೨।
       ನಿನ್ನ ಪ್ರೇಮ ಅಮರ 
ಹೆ:  ನೀನು ಹೃದಯ ತುಂಬಿರಲು, ಬಾಳು ಪ್ರೇಮ ಮಂದಿರ 

ಗಂ:  ಇದು ರಾಮ ಮಂದಿರ ಆನಂದ ಸಾಗರ ।೨।
       ಜೊತೆಯಾಗಿ ನೀನಿರಲು ಬಾಳು ಸಹಜ ಸುಂದರ

ಹೆ:  ಇದು ರಾಮ ಮಂದಿರ ನೀ ರಾಮಚಂದಿರ

Song: Idu Rama Mandira
Movie: Ravichandra

ಓ ಎಂತ ಸೌಂದರ್ಯ ಕಂಡೆ

ಚಿತ್ರ: ರವಿಚಂದ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ/ನಟ: ಡಾ. ರಾಜಕುಮಾರ್ 

ಓ ಎಂಥ ಸೌಂದರ್ಯ ಕಂಡೆ ।೨।
ಆದಿಶಕ್ತಿಯೋ ಮಹಾಲಕ್ಷ್ಮಿಯೋ ವಾಣಿಯೋ ಕಾಣೆ ನಾ
ಓ ಎಂಥ ಸೌಂದರ್ಯ ಕಂಡೆ ।೨।

ಹೊಳೆಯುವ ಕಣ್ಣುಗಳೋ, ಬೆಳಗುವ ದೀಪಗಳೋ
ತುಂಬಿದ ಕೆನ್ನೆಗಳೋ, ಹೊನ್ನಿನ ಕಮಲಗಳೋ
ಅರಳಿದ ಹೂವು ನಗೆಯಾಯಿತು, ಚಂದ್ರಿಕೆಯೇ ಹೆಣ್ಣಾಯಿತು
ನನಗಾಗಿ ಧರೆಗಿಳಿದ ದೇವತೆಯೋ ಏನೊ ಕಾಣೆ ನಾ

ಓ ಎಂಥ ಸೌಂದರ್ಯ ಕಂಡೆ ।೨।

ಕಡಲಲೆ ಮುತ್ತಿರಲೀ, ಲತೆಯಲೆ ಸುಮವಿರಲೀ 
ನಯನವು ನೋಡುತಲೀ, ಸಂತಸ ಹೊಂದಿರಲೀ 
ಕರೆಯದಿರೂ ಕೆಣಕದಿರೂ, ಬಯಕೆಗಳಾ ನುಡಿಯದಿರೂ 
ನಿನ್ನನ್ನು ನೋಡುತಿರೆ ಕೈಮುಗಿವ ಆಸೆ ಏಕೊ ಕಾಣೇ 

ಓ ಎಂಥ ಸೌಂದರ್ಯ ಕಂಡೆ ।೨।
ಆದಿಶಕ್ತಿಯೋ ಮಹಾಲಕ್ಷ್ಮಿಯೋ ವಾಣಿಯೋ ಕಾಣೆ ನಾ

ಓ ಎಂಥ ಸೌಂದರ್ಯ ಕಂಡೆ ।೨।

Song: O Entha Soundarya Kande
Movie: Ravichandra

Thursday, November 24, 2016

ನಸು ನಗುತ

ಚಿತ್ರ: ರವಿಚಂದ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ/ನಟ: ಡಾ. ರಾಜಕುಮಾರ್ 

।। ನಸು ನಗುತ ಬಾ ಚಿನ್ನ, ನಲಿಯುತಿರೆ ನೀ ಚೆನ್ನ
    ಅಗಲೆನು ಅಳಿಸೆನು ಇನ್ನೆಂದು ನಿನ್ನ ।।೨।।

।। ಬಿಸಿಲು ಮಳೆಗೆ ನೆರಳನು ನೀಡುವೇ
    ಸಿಡಿಲೋ ಗುಡುಗೋ ಜೊತೆಯಲಿ ನಿಲ್ಲುವೇ ।।೨।।
ನೋವ ನುಂಗುವೇ, ಸುಖವ ನೀಡುವೇ ।೨।
ಜೀವದ ಜೀವವೇ ನಾನಾಗಿ ಬಾಳುವೆ 

ನಸು ನಗುತ ಬಾ ಚಿನ್ನ, ನಲಿಯುತಿರೆ ನೀ ಚೆನ್ನ
ಅಗಲೆನು ಅಳಿಸೆನು ಇನ್ನೆಂದು ನಿನ್ನ

।। ನಿನ್ನ ನೆಡೆಗೆ ಹೃದಯವ ಹಾಸುವೇ
    ನಿನ್ನ ನುಡಿಗೆ ಜೀವವ ತುಂಬುವೇ ।।೨।।
ನಿನ್ನ ಕಣ್ಣಲೇ, ಎಲ್ಲಾ ಕಾಣುವೇ ।೨।
ಕಂಬನಿ ಮಿಡಿದರೇ ನಾ ಸೋತು ಹೋಗುವೆ 

ನಸು ನಗುತ ಬಾ ಚಿನ್ನ, ನಲಿಯುತಿರೆ ನೀ ಚೆನ್ನ

ಅಗಲೆನು ಅಳಿಸೆನು ಇನ್ನೆಂದು ನಿನ್ನ
ನಸು ನಗುತ ಬಾ ಚಿನ್ನ, ನಲಿಯುತಿರೆ ನೀ ಚೆನ್ನ

Song: Nasu Nagutha
Movie: Ravichandra

Monday, November 21, 2016

ನಿನ್ನ ಮನ ಮೆಚ್ಚಿಸಲು

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ನಿನ್ನ, ನಿನ್ನ ಮನ ಮೆಚ್ಚಿಸಲು, ನಿನ್ನ ಮನ ಮೆಚ್ಚಿಸಲು

ನಿನ್ನ ನಾ ಅರ್ಪಿಸಲು, ಏನು ಮಾಡಲಿ ಹೇಳು, ಪಾವನಸುತ
ನಿನ್ನ ಮನ ಮೆಚ್ಚಿಸಲು, ನಿನ್ನ ಮನ ಮೆಚ್ಚಿಸಲು

ನಿನ್ನ ನಾ ಅರ್ಪಿಸಲು, ಏನು ಮಾಡಲಿ ಹೇಳು, ಪಾವನಸುತ

ಅಭಿಷೇಕ ಮಾಡಿದರೆ ಹನಿಹನಿಯ ಹುಡುಕಿ ಶ್ರೀರಾಮನಿರುವನೇ ಎಂದು ನೀ ನೋಡುವೆ ।೨।
ಪೂಜೆಯನು ಮಾಡಿದರೆ ।೨।
ಹೂವುಗಳ ಕೆದಕಿ ಆ ರಾಮನಿರುವನೇ ಎಂದು ನೀ ಕೇಳುವೇ

ನಿನ್ನ ಮನ ಮೆಚ್ಚಿಸಲು, ನಿನ್ನ ಮನ ಮೆಚ್ಚಿಸಲು
ನಿನ್ನ ನಾ ಅರ್ಪಿಸಲು, ಏನು ಮಾಡಲಿ ಹೇಳು, ಪಾವನಸುತ

ಮುತ್ತು ರತ್ನದ ಹಾರ ಕೊರಳಲಿ ಹಾಕಿದರೆ ।೨।
ಮುತ್ತು ರತ್ನವ ಹೊಡೆದು ನೀ ನೋಡುವೇ 
ಮಣಿ ಮಣಿಯ ಚೂರಿನಲು ಶ್ರೀರಾಮಚಂದಿರನು ।೨।
ಕಾಣುವನೇ ಎಂದು ನೀ ಹುಡುಕಾಡುವೇ 

ನಿನ್ನ ಮನ ಮೆಚ್ಚಿಸಲು, ನಿನ್ನ ಮನ ಮೆಚ್ಚಿಸಲು

ನಿನ್ನ ನಾ ಅರ್ಪಿಸಲು, ಏನು ಮಾಡಲಿ ಹೇಳು, ಪಾವನಸುತ

ನಿನ್ನೆದೆಯ ಗುಡಿಯಲ್ಲಿ ರಾಮನು ಸ್ಥಿರವಾಗಿರಲು, ಹೀಗೇಕೆ ನೀ ಸ್ವಾಮಿ ಹಂಬಲಿಸುವೇ ।೨।
ನನ್ನ ಮನ ಮಂದಿರದಿ ।೨।
ಕ್ಷಣಕಾಲ ನೀ ನೆಲೆಸು, ನಿನ್ನೊಡನೆ ಶ್ರೀ ರಾಮನ, ನಾ ಕಾಣುವೇ

ನಿನ್ನ ಮನ ಮೆಚ್ಚಿಸಲು, ನಿನ್ನ ಮನ ಮೆಚ್ಚಿಸಲು

ನಿನ್ನ ನಾ ಅರ್ಪಿಸಲು, ಏನು ಮಾಡಲಿ ಹೇಳು, ಪಾವನಸುತ

Song: Ninna Mana Mecchisalu
Album: Elli Hanumano Alli Ramanu

ಎತ್ತಲೋ ಮಾಯವಾದ

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಎತ್ತಲೋ ಮಾಯವಾದ...
ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ।೨।
ಎತ್ತಿ ತಂದೆ ಎಲ್ಲಿಂದ ರಾಯ, ಮುತ್ತೆತ್ತ ರಾಯ 
ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು 
ಎತ್ತಿ ತಂದೆ ಎಲ್ಲಿಂದ ರಾಯ, ಮುತ್ತೆತ್ತ ರಾಯ 
ಅತ್ತ ಸೀತಮ್ಮನ ಮುದ್ದು ಮೊಗದಲ್ಲಿ ಮತ್ತೆ ನಗೆಯ ತಂದೆಯ ಮಹನೀಯ, ಮಾರುತಿರಾಯ 
ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು 
ಎತ್ತಿ ತಂದೆ ಎಲ್ಲಿಂದ ರಾಯ, ಮುತ್ತೆತ್ತ ರಾಯ 

ಸೀತಮ್ಮ ಸ್ನಾನ ಮಾಡಿ, ಮೂಗುತಿಯ ಹುಡುಕಾಡಿ ।೨।
ನಿನ್ನ ಕೂಗಿದಳೇನೋ ಹನುಮಂತರಾಯ ।೨।
ನೀರಿಲ್ಲಿ ಬಾಲ ಬಿಟ್ಟು ನದಿಯನ್ನೇ ಶೋಧಿಸಿದೆ ಎಂಥ ಶ್ರದ್ಧೆಯೋ, ಮಹನೀಯ, ಹನುಮಂತರಾಯ 

ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು 
ಎತ್ತಿ ತಂದೆ ಎಲ್ಲಿಂದ ರಾಯ, ಮುತ್ತೆತ್ತ ರಾಯ 

ಅಮ್ಮ ಸೀತಮ್ಮನು ನಿನ್ನ ಭಕ್ತಿಗೆ ಮೆಚ್ಚಿ ।೨।
ಮುತ್ತೆತ್ತರಾಯನೆಂದು ಹರಸಿದಳೇನು ।೨।
ನಿನ್ನಂತ ದಾಸನನು ಪಡೆದ ಆ ರಾಮನು ಎಂಥ ಭಾಗ್ಯವಂತನಯ್ಯ, ಮಾರುತಿರಾಯ 

ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು 
ಎತ್ತಿ ತಂದೆ ಎಲ್ಲಿಂದ ರಾಯ, ಮುತ್ತೆತ್ತ ರಾಯ 

ನಿನ್ನಂತೆ ಭಕ್ತಿ ಇಲ್ಲ, ನಿನ್ನಂತೆ ಶಕ್ತಿ ಇಲ್ಲ ।೨।
ಏನೂ ಇಲ್ಲದ ಜೀವ, ನನ್ನದು ಸ್ವಾಮಿ ।೨।
ನಿನ್ನೇ ನಾ ನಂಬಿ ಬಂದೆ ನೀನೆ ನನ್ನ ತಾಯಿ ತಂದೆ ಕಾಪಾಡುವ ಹೊಣೆಯು ನಿನ್ನದು, ತಂದೆ ನಿನ್ನದು 

ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ।೨।
ಎತ್ತಿ ತಂದೆ ಎಲ್ಲಿಂದ ರಾಯ, ಮುತ್ತೆತ್ತ ರಾಯ
ಮುತ್ತೆತ್ತರಾಯ ।೨।

Song: Etthalo Mayavada
Album: Elli Hanumano Alli Ramanu

Thursday, November 17, 2016

ಹನುಮನ ನೋಡಿದಿರಾ

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಹನುಮನ ನೋಡಿದಿರಾ, ನಮ್ಮ, ಹನುಮನ ನೋಡಿದಿರಾ ।೨।
ರಾಮಚಂದ್ರನಿಗೆ ಪ್ರೀತಿಪಾತ್ರನು, ವಾಯುದೇವರ ಪ್ರೇಮದ ಸುತನು 
ಹನುಮನ ನೋಡಿದಿರಾ ।೨।
ಅವನ ಸಾಹಸ ಕೇಳಿದಿರಾ 

ನಾನು ಎಂಬುವ ಮಾತ ಅರಿಯದೇ, ನನದು ಎನ್ನುವ ನುಡಿಯನಾಡದೇ ।೨।
ನೀನೇ ಎನ್ನುತ ಸೇವೆ ಮಾಡಿ ಶ್ರೀರಾಮನ ನಂಬಿ ಬಾಳಿದ ನಮ್ಮ 
ಹನುಮನ ನೋಡಿದಿರಾನಮ್ಮ, ಹನುಮನ ನೋಡಿದಿರಾ

ಶಕ್ತನೆನ್ನುತಾ ಸೊಕ್ಕಿ ಮೆರೆಯದೆ, ಭಕ್ತನೆನ್ನುತಾಡಂಭ ಮಾಡದೆ ।೨।
ರಾಮಚಂದ್ರನ ಸೇವೆಗಾಗಿ, ಶ್ರೀರಾಮಚಂದ್ರನ ಸೇವೆಗಾಗಿ ಭುವಿಯಲಿ ಜನ್ಮವನ್ನೆತ್ತಿದ
ನಮ್ಮ, ಹನುಮನ ನೋಡಿದಿರಾ ।೨।

ಕಡಲ ಹಾರಿದನು ಸೀತೆಗಾಗಿ, ಸೇತುವೆ ಕಟ್ಟಿದ ರಾಮನಿಗಾಗಿ ।೨।
ಬೆಟ್ಟ ಹೊತ್ತ ಲಕ್ಷ್ಮಣನಿಗಾಗಿ, ಪ್ರಭು ಚರಣದೆ ಶಿರ ಬಾಗಿದ ತನಗಾಗಿ 
ಹನುಮನ ನೋಡಿದಿರಾನಮ್ಮ, ಹನುಮನ ನೋಡಿದಿರಾ

ರಾಮಚಂದ್ರನಿಗೆ ಪ್ರೀತಿಪಾತ್ರನು, ವಾಯುದೇವರ ಪ್ರೇಮದ ಸುತನು 
ಹನುಮನ ನೋಡಿದಿರಾ ।೨।
ನಮ್ಮ, ಹನುಮನ ನೋಡಿದಿರಾ

Song: Hanumana Nodidira
Album: Elli Hanumano Alli Ramanu

Wednesday, November 9, 2016

ಎಲ್ಲಿ ಹನುಮನೋ

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಎಲ್ಲೀ ಹನುಮನೋ ಅಲ್ಲಿ ರಾಮನು ।೨।
ಎಲ್ಲೀ ರಾಮನೋ ಅಲ್ಲಿ ಹನುಮನು 
ಎಲ್ಲೀ ಹನುಮನೋ ಅಲ್ಲಿ ರಾಮನು
ರಾಮನ ಹುಸಿರೇ ಹನುಮಾ ।೨।
ಹನುಮನ ಪ್ರಾಣವೇ ರಾಮಾ
ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು 
ಎಲ್ಲೀ ಹನುಮನೋ ಅಲ್ಲಿ ರಾಮನು

ಎಲ್ಲೀ ನೆನೆದರು ಅಲ್ಲಿಯೇ ಇರುವನು ।೨।
ಎಲ್ಲೀ ಕರೆದರೂ ಅಲ್ಲಿ ಬರುವನು
ಎಲ್ಲೀ ನೆನೆದರು ಅಲ್ಲಿಯೇ ಇರುವನು
ಎಲ್ಲೀ ಕರೆದರೂ ಅಲ್ಲಿ ಬರುವನು
ನೆರಳಿನಂತೆಯೇ ಬಳಿಯಲಿರುವನೂ ।೨।
ಕರುಣೆಯಿಂದ ಸುಖ ಶಾಂತಿ ನೀಡುವ ಮುಖ್ಯ ಪ್ರಾಣ

ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು 
ಎಲ್ಲೀ ಹನುಮನೋ ಅಲ್ಲಿ ರಾಮನು

ಮಂತ್ರ ಕೇಳನು ತಂತ್ರ ಕೇಳನು ।೨।
ಗೋತ್ರ ಮಾಡುತ ತನ್ನ ಹೊಗಳು ಎನ್ನನು 
ಮಂತ್ರ ಕೇಳನು ತಂತ್ರ ಕೇಳನು 
ಗೋತ್ರ ಮಾಡುತ ತನ್ನ ಹೊಗಳು ಎನ್ನನು 
ಪ್ರೇಮದಿಂದ ನೀ ಕರೆಯೆ ಬರುವನೂ ।೨।
ಭಕ್ತನೊಬ್ಬನೇ ಅವನ ಗೆಲುವನು ಎಂದೆಂದು

ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು 
ಎಲ್ಲೀ ಹನುಮನೋ ಅಲ್ಲಿ ರಾಮನು

।। ಸ್ಮರಣೆ ಮಾತ್ರದಿ ಮನದಿ ಬೆರೆವನು ।೨। 
    ಕಾಮ ಕ್ರೋಧ ಕ್ಷಣದಲ್ಲಿ ದಹಿಸಿ ಬಿಡುವನು ।।೨।।
ಶಾಂತಿ ಕೊಡುವನು ನೆಮ್ಮದಿಯ ತರುವನು ।೨।
ಮನಸಿಗೆ ಮಹದಾನಂದ ನೀಡುವ ಮುಖ್ಯ ಪ್ರಾಣ

ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು 
ಎಲ್ಲೀ ಹನುಮನೋ ಅಲ್ಲಿ ರಾಮನು
ರಾಮನ ಹುಸಿರೇ ಹನುಮಾ ।೨।
ಹನುಮನ ಪ್ರಾಣವೇ ರಾಮಾ
ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು 
ಎಲ್ಲೀ ಹನುಮನೋ ಅಲ್ಲಿ ರಾಮನು

Song: Anjaneyana Manadali
Album: Elli Hanumano Alli Ramanu

ಆಂಜನೇಯನ ಮನದಲಿ

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

।। ಆಂಜನೇಯನ ಮನದಲಿ ನೆನೆದರೆ ಸಾಲದೇ 
    ಅವನಿಂದಾಗದ ಕಾರ್ಯ ಜಗದಲಿ ಏನಿದೆ ।।೨।।
ಆ ಸುಂದರ ಮೂರುತಿ ಮನದಲಿ ನಿಂತರೆ ಸಾಲದೇ 
ಮಾರುತಿರಾಯನು ಒಲಿದರೆ ಚಿಂತೆಯು ಏನಿದೆ  
ಆಂಜನೇಯನ ಮನದಲಿ ನೆನೆದರೆ ಸಾಲದೇ 

।। ರಾಮಚಂದ್ರನ ದುಃಖವ ಕಳೆದವನಲ್ಲವೇ
    ನಿನ್ನ ದುಃಖವನು ಕಳೆಯಲು ಅವಿನಗಸಾಧ್ಯವೇ ।। ।೨।।
ದುಷ್ಟ ರಕ್ಕಸರ ನಾಶ ಮಾಡಿದವನಲ್ಲವೇ ।೨।
ನಿನ್ನ ದುಷ್ಟ ಗುಣಗಳ ಅಳಿಸಲು ಅವನಿಗಸಾಧ್ಯವೇ ।೨।

ಆಂಜನೇಯನ ಮನದಲಿ ನೆನೆದರೆ ಸಾಲದೇ 

।। ಸಾಗರವನ್ನೇ ದಾಟಿದ ಸಾಹಸಿಯಲ್ಲವೇ 
    ಸಂಸಾರ ಸಾಗರವ ದಾಟಿಸಲವನಿಗಸಾಧ್ಯವೇ ।।।। 
ಹನುಮನ ಹೃದಯವೆ ರಾಮನ ಮಂದಿರವಲ್ಲವೇ
ಆ, ಹನುಮನ ಹೃದಯವೆ ರಾಮನ ಮಂದಿರವಲ್ಲವೇ
ಆ ಮಾರುತಿ ಒಲಿದರೆ ರಾಮನು ನಿನ್ನವನಲ್ಲವೇ ।೨।

ಆಂಜನೇಯನ ಮನದಲಿ ನೆನೆದರೆ ಸಾಲದೇ 
ಅವನಿಂದಾಗದ ಕಾರ್ಯ ಜಗದಲಿ ಏನಿದೆ 
ಆ ಸುಂದರ ಮೂರುತಿ ಮನದಲಿ ನಿಂತರೆ ಸಾಲದೇ 
ಮಾರುತಿರಾಯನು ಒಲಿದರೆ ಚಿಂತೆಯು ಏನಿದೆ  
ಆಂಜನೇಯನ ಮನದಲಿ ನೆನೆದರೆ ಸಾಲದೇ

Song: Anjaneyana Manadali
Album: Elli Hanumano Alli Ramanu

ಸೇವಕನ ಮಾಡು

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಮಾರುತೀ.... 
ಸೇವಕನ ಮಾಡು, ಸೇವಕನ ಮಾಡು 
ಮಾರುತೀಸೇವಕನ ಮಾಡು
ನಿನ್ನಂತೆ ನನ್ನಾ, ಸೇವಕನ ಮಾಡು ।೨।
ರಾಮಚಂದ್ರನ ಸೇವಿಸೀ, ಪೂಜಿಸೀ 
ಶ್ರೀ ರಾಮಚಂದ್ರನ ಸೇವಿಸೀ, ಪೂಜಿಸಿ 
ಧನ್ಯನಾಗುವಂತೆ ಹರಸಿ ನನ್ನಾ ।೨।
ಸೇವಕನ ಮಾಡು, ಸೇವಕನ ಮಾಡು 
ನಿನ್ನಂತೆ ನನ್ನಾ, ಸೇವಕನ ಮಾಡು, ಮಾರುತೀ... 

ಸೇವಕನಾದರೆ ದೊರೆಯುವ ಪ್ರಭುವಿನ ಕರುಣೆಗೆ ಎಣೆಯೇ ಇಲ್ಲಾ 
ಸೇವೆಯು ನೀಡುವ ಮಹದಾನಂದ ಬಣ್ಣಿಸೆ ಮಾತುಗಳಿಲ್ಲಾ 
ಸೇವೆಯು ಕೊಡುವ ಫಲದ ಕಲ್ಪನೆ ।೨।
ಕಲ್ಪವೃಕ್ಷಕು ಇಲ್ಲಾ.... 

ಸೇವಕನ ಮಾಡು, ಸೇವಕನ ಮಾಡು 
ನಿನ್ನಂತೆ ನನ್ನಾ, ಸೇವಕನ ಮಾಡು, ಮಾರುತೀ.... 

ಸೇವಕನೆಂದೇ ನಂದಿಗೆ ದೊರಕಿತು ಕೈಲಾಸದಲೀ ಸ್ಥಾನ  
ಸೇವಕನಾಗೇ ಗರುಡನು ಪಡೆದ ವ್ಯಕುಂಠದಲೀ ತಾಣ
ಸೇವಕನಾದರೆ ನನ್ನಲಿ ಆಗ ।೨।
ಕರಗುವುದು ಅಜ್ಞಾನ.... 

ಸೇವಕನ ಮಾಡು, ಸೇವಕನ ಮಾಡು 
ನಿನ್ನಂತೆ ನನ್ನಾ, ಸೇವಕನ ಮಾಡು, ಮಾರುತೀ.... 

ಸೇವಕನಾಗೆ ಎಲ್ಲಾ ಶಕ್ತಿಯು ನಿನ್ನ ಕೈ ಸೇರಿತು ಹನುಮಾ 
ಪೂಜೆಯು ಹೊಂದುವ ಭಾಗ್ಯ ನೀಡಿತು ನಿನಗಾ ರಾಮ ನಾಮ 
ನನ್ನೀ ಜನುಮವು ಸಾರ್ಥಕ ತಂದೆ ।೨।
ಪಡೆದರೆ ನಿನ್ನ ಪ್ರೇಮಾ .....

ಸೇವಕನ ಮಾಡು, ಸೇವಕನ ಮಾಡು 
ನಿನ್ನಂತೆ ನನ್ನಾ, ಸೇವಕನ ಮಾಡು, ಮಾರುತೀ.... 
ಸೇವಕನ ಮಾಡು, ಮಾರುತೀ.... 

Song: Sevakana Maadu
Album: Elli Hanumano Alli Ramanu

ಕೆಂಗಲ್ಲ ಹನುಮಂತರಾಯ

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ ।೨।
ಅರುಣೋದಯ ಕಾಂತಿಯ ಕೆಂಪಾದ ಮೊಗದಲ್ಲಿ
ಕಣ್ತುಂಬ ಕಂಡು  ಕಣ್ತುಂಬಿ ಬಂದು
ಕೈ ಮುಗಿದೇ ಅರಿಯದೆಯೆ ಬೆರಗಾಗಿ ಜೀಯ
ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ

।। ದೈನತೆಯೇ ತುಂಬಿದ ಈ ನನ್ನ ಕಣ್ಣುಗಳು
    ಕರುಣೆಯೇ ತುಂಬಿದ ಆ ನಿನ್ನ ಕಣ್ಣುಗಳು ।।೨।।
ಒಂದಾಗಿ ಬೆರೆತಾಗ ಆನಂದದಾ ಬೇಗ
ಮನ ಹಿಗ್ಗಿ ಹೂವಾಗಿ ಪದದಲಿ ಬಿದ್ದಾಗ

ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ
ಧನ್ಯನಾದೆ ಎಂದು ಹೃದಯ ಕೂಗಿತು ಜೀಯ

।। ಎಲ್ಲಿಗೋ ಹೋಗುವ ಆತುರ ಏಕಯ್ಯಾ
    ಯಾರನೋ ನೋಡುವ ಕಾತುರ ಏನಯ್ಯಾ ।।೨।।
ಈ ನಿನ್ನ ಮಂದಿರಕೆ ಈ ದಿವ್ಯ ಸನ್ನಿದಿಗೆ
ಆಸೆಯಿಂದ ಜನರು ಬರುತಿರಲು ದರುಶನಕೆ

ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ
ಎತ್ತ ಹೋಗುವೆ ನೀನು ಹೇಳಯ್ಯ ಮಹನೀಯ
ಕೆಂಗಲ್ಲ ಹನುಮಂತರಾಯ

।। ನಾ ನಿನ್ನ ಮರೆತರೆ ನನ್ನಾತಾಯಾಣೆ
    ನೀ ಕೈಯ್ಯ ಬಿಟ್ಟರೆ ಶ್ರೀರಾಮನಾಣೆ ।।೨।।
ಉಸಿರಲ್ಲಿ ಉಸಿರಾಗಿ ಮನದಲ್ಲಿ ಸ್ಥಿರವಾಗಿ
ಮನೆ ಮಾಡಿ ನೀ ನೆಲೆಸು ಕೈ ಹಿಡಿದು ಉಧ್ಧರಿಸಿ

ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ
ಜನುಮ ಸಾರ್ಥಕ ಮಾಡು ಸ್ವಾಮೀ ಮಾರುತಿರಾಯ
ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ ।೨।

Song: Kengalla Hanumantharaaya
Album: Elli Hanumano Alli Ramanu

Monday, November 7, 2016

ನಗ ಬೇಡ ನಗ ಬೇಡ

ಚಿತ್ರ: ಬಡವರ ಬಂಧು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ/ನಟ: ಪಿ. ಬಿ. ಶ್ರೀನಿವಾಸ್

।। ನಗ ಬೇಡ ನಗ ಬೇಡ ನಗ ಬೇಡ
    ಅವನ ನೋಡುತಾ ನೀನು ನಕ್ಕರೇ
    ಊರೇ ನಗುವುದು ನೀನು ಬಿದ್ದರೆ ।।೨।।

ಒಂದೇ ದಿನದಲಿ ಬೀಜವು ಮೊಳೆತು ಹೆಮ್ಮರವಾಗುವದೇ ।೨।
ಇಂದೇ ಜನಿಸದ ಕಂದನು ನೆಡೆದು ಮಾತನಾಡುವುದೇ
ದಿನಗಳು ಕಳೆದಂತೇ, ಕಾಲವು ಬಂದಂತೇ ।೨।
ಎಲ್ಲಾ ಬೆಳೆಯುವುದು ಹೊಸತನ ಮೂಡುವುದು

ನಗ ಬೇಡ ನಗ ಬೇಡ ನಗ ಬೇಡ
ಅವನ ನೋಡುತಾ ನೀನು ನಕ್ಕರೇ
ಊರೇ ನಗುವುದು ನೀನು ಬಿದ್ದರೆ

ಕಲಿಯುವುದಿನ್ನೂ ಸಾಗರದಂತೆ ಕಲಿತವರಾರಿಲ್ಲಿ ।೨।
ಶತಮಾನಗಳೇ ಕಲಿತರು ಮುಗಿಯದು ವಿದ್ಯೆಗೆ ವಯಸೆಲ್ಲೀ
ಬಾಳಿನ ಅನುಕ್ಷಣವೂ,  ಹೊಸ ಹೊಸ ಅನುಭವವು ।೨।
ಪಾಠವ ಕಳಿಸುವುದು ನೀತಿಯ ತಿಳಿಸುವುದು

ನಗ ಬೇಡ ನಗ ಬೇಡ ನಗ ಬೇಡ
ಅವನ ನೋಡುತಾ ನೀನು ನಕ್ಕರೇ
ಊರೇ ನಗುವುದು ನೀನು ಬಿದ್ದರೆ

ಮುಂದಕೆ ಬರುವರ ಕಂಡರೆ ಕಡುಗುವ ಮನುಜರು ಧಾನವರು ।೨।
ಹೊಟ್ಟೆಯ ಕಿಚ್ಚಲಿ ತಾವೇ ಬೇಯುತ ನೋವಲಿ ನರಳುವರೂ
ಸ್ನೇಹದಿ ಬಾಳಿದರೇ, ಸಂಯಮ ತೋರಿದರೇ ।೨।
ಶಾಂತಿಯ ನೀ ಪಡೆವೇ ನೀನು ಸುಖ ಪಡೆವೆ

ನಗ ಬೇಡ ನಗ ಬೇಡ ನಗ ಬೇಡ
ಅವನ ನೋಡುತಾ ನೀನು ನಕ್ಕರೇ
ಊರೇ ನಗುವುದು ನೀನು ಬಿದ್ದರೆ

Song: Naga Beda Naga Beda
Movie: Badavara Bandu 

ಏನು ಮಾಯವೋ ಏನು ಮರ್ಮವೋ

ಚಿತ್ರ: ಭಾಗ್ಯದ ಲಕ್ಷ್ಮಿ ಬಾರಮ್ಮ 
ರಚನೆ: ಚಿ. ಉದಯಶಂಕರ್ 
ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್ 
ಗಾಯರುಕರು: ಡಾ. ರಾಜಕುಮಾರ್, ವಾಣಿ ಜಯರಾಮ್ 

ಗಂ:  ಏನು ಮಾಯವೋ 
ಹೆ:   ಏನು ಮರ್ಮವೋ 
ಗಂ:  ಏನು ಮಾಯವೋ 

ಹೆ:   ಏನು ಮರ್ಮವೋ 
ಗಂ:  ಗೆಲ್ಲುವ ಕುದುರೆ ಎಂದು ಗೆಲುವುದು  
ಹೆ:   ಹಳ್ಳದ ಕಡೆಗೆ ನೀರು ಹರಿವುದು 
ಗಂ:  ಹಣವಂತರಿಗೆ ಹಣ ಸೇರುವುದು 
ಜೊ: ಏನು ಮಾಯವೋ, ಏನು ಮರ್ಮವೋ

ಹೆ:   ಸಿಮೆಂಟು ಸಿಗದು ಎನ್ನುತಲಿದ್ದರು ಮನೆಗಳು ಏಳುತಲಿವೆಯಲ್ಲ 
ಗಂ:  ಪೆಟ್ರೋಲ್ ಬೆಲೆಯು ಏರಿದರೇನು ಹೊಸ ಕಾರುಗಳಿಗೆ ಬರವಿಲ್ಲ 
ಹೆ:   ಜನರಲಿ ಹಣವೇ ಇಲ್ಲ ಎಂದರು ಪೇಟೆಯು ಜಾತ್ರೆಯು ದಿನವೆಲ್ಲ
ಗಂ:  ಯುಧ್ಧವೇ ಬರಲಿ ಕ್ಷಾಮವೆ ಬರಲಿ ಸಿನಿಮಾ ಡ್ರಾಮಾ ನಿಲ್ಲಲ್ಲ 
ಹೆ:   ಇವರಿಗೆ ದೊರೆತ ಈ ಶ್ರೀಮಂತಿಕೆ ನಮಗೆ ಏಕೆ ಸಿಕ್ಕಿಲ್ಲ
ಗಂ:  ಅಯ್ಯೋ ಮಂಕೆ ತಿಳುದುಕೋ ನಿಜವ ನಮಗೆ ಅಂತ ಲಕ್ಕಿಲ್ಲ
        ನಮಗೆ ಅಂತ ಲಕ್ಕಿಲ್ಲ

ಜೊ: ಏನು ಮಾಯವೋ, ಏನು ಮರ್ಮವೋ

ಹೆ:   ಲಾಸು ಲಾಸು ಎನ್ನುತಲಿದ್ದರು ಬಿಸಿನೆಸ್ ಯಾವುದು ಡಲ್ಲಿಲ್ಲ 
ಗಂ:  ಟ್ಯಾಕ್ಸು ರೈಡು ಎಂದರೆ ಏನು ಧನಿಕರ ಸಂಖ್ಯೆ ಕರಗಿಲ್ಲ 
ಹೆ:   ತ್ರೀ ಸ್ಟಾರ್ ಫೈವ್ ಸ್ಟಾರ್ ಹೋಟೆಲ್ಗಳಲು ಕಾಲಿ ರೂಮು ಒಂದಿಲ್ಲ 
ಗಂ:  ಬಸ್ಸು ಟ್ರೈನು ಪ್ಲಾನೇ ಆಗಲಿ ಸತ್ತರು ಟಿಕ್ಕೆಟ್ಟು ಸಿಕ್ಕಲ್ಲ 
ಹೆ:   ಹಣವನು ಮಾಡುವ ಸುಲುಭೋಪಾಯ ನಿನಗೆ ಏಕೆ ತಿಳಿದಿಲ್ಲ 
ಗಂ:  ನಿನ್ನನು ಬಿಟ್ಟು ಕಂಬಿಯ ಎಣಿಸೊ ಆಸೆಯು ಇನ್ನು ಬಂದಿಲ್ಲ 
        ಆಸೆಯು ಇನ್ನು ಬಂದಿಲ್ಲ 

ಗಂ:  ಏನು ಮಾಯವೋ 

ಹೆ:   ಏನು ಮರ್ಮವೋ 
ಗಂ:  ಏನು ಮಾಯವೋ 

ಹೆ:   ಏನು ಮರ್ಮವೋ 
ಗಂ:  ಗೆಲ್ಲುವ ಕುದುರೆ ಎಂದು ಗೆಲುವುದು  
ಹೆ:   ಹಳ್ಳದ ಕಡೆಗೆ ನೀರು ಹರಿವುದು 
ಜೊ: ಹಣವಂತರಿಗೆ ಹಣ ಸೇರುವುದು 
        ಏನು ಮಾಯವೋ, ಏನು ಮರ್ಮವೋ ।೨।

Song: Enu Mayavo Enu Marmavo
Movie: Bhagyada Lakshmi Baaramma

Saturday, November 5, 2016

ಮೇಘ ಬಂತು ಮೇಘ

ಚಿತ್ರ: ಮಣ್ಣಿನ ದೋಣಿ 
ರಚನೆ: ಹಂಸಲೇಖ 
ಸಂಗೀತ: ಹಂಸಲೇಖ 
ಗಾಯಕ: ಡಾ. ರಾಜಕುಮಾರ್ 

ಮೇಘ ಬಂತು ಮೇಘ ।೨।
।। ಮೇಘ ಬಂತು ಮೇಘ ।೨।
    ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ ।।೨।।
ಇರುಳು ಸರಿದು, ಬೆಳಕು ಹರಿದು 
ಕನಸು ಮುಗಿದು, ಮನಸು ಜಿಗಿದು 
ಸರಿಗಮಪ ಪದನಿಸ ಸಂಚಾರದಲಿ 
ಮೇಘ ಬಂತು ಮೇಘ ।೨।
ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ

ರವಿಯ ರಾಶಿಯಲಿ ಹೊನ್ನ ರಶ್ಮಿಯಲಿ ಜನಿಸಿತೊಂದು ರೂಪ 
ಬೆಳಕಿನ ಚೆಲುವೆ ಸುಳಿದಳೂ, ಬಳುಕುತಾ ಇಳೆಗೆ ಇಳಿದಳೂ 
ಉಷೆಯ ರಂಗಿನಲಿ ತೃಷೆಯ ನೋಟದಲಿ ಕವಿಯ ಬಳಿಗೆ ಬಂದು 
ಪ್ರೇಮದ ನಯನ ತೆರೆದಳು, ಕಾವ್ಯದ ಒಳಗೆ ಕುಳಿತಳು 
ಕಲಕಲಗೊಂಡವು ತ್ರಿಪದಿ ಪದಗಳು, ಪರವಶಗೊಂಡವು ಸಕಲ ರಸಗಳು 

ಇರುಳು ಸರಿದು, ಬೆಳಕು ಹರಿದು 
ಕನಸು ಮುಗಿದು, ಮನಸು ಜಿಗಿದು 
ಸರಿಗಮಪ ಪದನಿಸ ಸಂಚಾರದಲಿ 
ಮೇಘ ಬಂತು ಮೇಘ ।೨।
ಮೇಘ ಕಾವ್ಯದ ಮೇಘ, ಕನ್ಯಾ ಕವನ ಮೇಘ

ನಾದ ಮಂದಿರದ ವೇದದಿಂಚರದ ಮದುವೆ ಮಂಟಪದಲೀ  
ನಲಿದವು ಲಕ್ಷ ದಕ್ಷದೆ, ಪಡೆದವು ಧಾನ್ಯ ಧನ್ಯತೆ 
ಪ್ರೇಮ ಸಿಂಚನದ ಬಾಳ ಬಂಧನದ ಸ್ನೇಹ ಶಾಸ್ತ್ರದೊಳಗೆ 
ನೆಡೆದವು ಸಪ್ತಪದಿಗಳು, ಸಂದವು ಸಕಲ ವಿಧಿಗಳು 
ಋತುವಿನ ಪಥದಲಿ, ಬಾಳ ರಥವಿದೆ 
ಪಯಣವ ಸವೆಸಲು, ಪ್ರೇಮ ಜೊತೆಗಿದೆ 

ಇರುಳು ಸರಿದು, ಬೆಳಕು ಹರಿದು 
ಕನಸು ಮುಗಿದು, ಮನಸು ಜಿಗಿದು 
ಸರಿಗಮಪ ಪದನಿಸ ಸಂಚಾರದಲಿ 
ಮೇಘ ಬಂತು ಮೇಘ ।೨।
ಮೇಘ ಕಲ್ಯಾಣ ಮೇಘ, ಯೋಗಾಯೋಗದ ಮೇಘ

ಮೇಘ ಬಂತು ಮೇಘ ।೨।
ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ

Song: Megha Banthu Megha
Movie: Mannina Dhoni

ಸಪ್ತಪದಿ ಇದು ಸಪ್ತಪದಿ

ಚಿತ್ರ: ಸಪ್ತಪದಿ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಸಪ್ತಪದೀ ಇದು ಸಪ್ತಪದೀ ।೨।
ಈ ಏಳು ಹೆಜ್ಜೆಗಳ ಸಂಬಂಧ, ನಮಗೇಳು ಜನ್ಮಗಳ ಅನುಬಂಧ ।೨।
ಸಪ್ತಪದೀ ಇದು ಸಪ್ತಪದೀ

ನಿನ್ನೊಡನೆ ನನ್ನ ಜೀವನದ ಮೊದಲ ಹೆಜ್ಜೆ ಇಡುವೇ
ಇದಕೇ ಹರಿಯೆ ಸಾಕ್ಷಿ ಏನುವೇ
ಸ್ವರ್ಗ ಸಮಾನ ಸುಖವ ನೀಡೆಂದು ಕೈಗಳನು ಮುಗಿವೇ
ಎರಡನೆ ಹೆಜ್ಜೆಯನು ಇಡುವೇ

ಸಪ್ತಪದೀ ಇದು ಸಪ್ತಪದೀ

ಮೂರು ಕಾಲದಲು ಏಕ ರೀತಿ ನಾ ಸಹಚರನಾಗಿರುವೇ
ಮೂರನೆ ಹೆಜ್ಜೆಯನು ಇಡುವೇ
ಮಮತೆ ಮೋಹ ಸುಖ ದುಃಖ್ಖದಲಿ ಜೊತೆಯಲ್ಲೇ ಇರುವೇ
ನಾಲ್ಕನೆ ಹೆಜ್ಜೆಯನು ಇಡುವೇ

ಸಪ್ತಪದೀ ಇದು ಸಪ್ತಪದೀ

ಜೊತೆಯಾಗಿ ನಾವು ಅಜ್ಞಾನದಿಂದ ।೨।
ಮುಕ್ತರಾಗೋಣ ಏನುತಾ ಐದನೆ ಹೆಜ್ಜೆಯನು ಇಡುವೇ 
ಆರು ಋತುಗಳಲಿ ನಿಲಿವ ಪ್ರಕೃತಿಯು, ಸ್ವಾಗತ ನೀಡಲಿ ಎನುವೆ 
ಆರನೆ ಹೆಜ್ಜೆಯನು ಇಡುವೇ
ಸಪ್ತ ಋಷಿಗಳ ಸ್ಮರಣೆ ಮಾಡುತ, ಅರಸಿ ನಮ್ಮನು ಎಂದು ಬೇಡುತ 
ಏಳನೆ ಹೆಜ್ಜೆ ಇಡುವೇ, ನಾ ಏಳನೆ ಹೆಜ್ಜೆ ಇಡುವೇ 

ಸಪ್ತಪದೀ ಇದು ಸಪ್ತಪದೀ ।೨।
ಈ ಏಳು ಹೆಜ್ಜೆಗಳ ಸಂಬಂಧ, ನಮಗೇಳು ಜನ್ಮಗಳ ಅನುಬಂಧ ।೨।
ಸಪ್ತಪದೀ ಇದು ಸಪ್ತಪದೀ ।೨।

Song: Saptapadi Idu Saptapadi 
Movie: Saptapadi

ಬಾ ಮುತ್ತು ಕೊಡುವೆ

ಚಿತ್ರ: ಕಾಮನ ಬಿಲ್ಲು
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ ।೨।
ನಿನ್ನ ಹವಳದಂತ ತುಟಿಗೆ ಇಂದು, ಪ್ಪ್, ಎಂದು ನಾನು 
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ ।೨।

ನಿನ್ನ ಮೊಗವನ್ನು ಕಂಡಾಗ ನಾಚಿ, ಶಶಿ ಮೋಡದಲಿ ಮರೆಯಾದನು
ನಿನ್ನ ತುಂಟಾಟ ನೋಡಿ ಬೆರಗಾಗಿ, ಕೃಷ್ಣ ಗುಡಿಯಲ್ಲಿ ಶಿಲೆಯಾದನು 
ನೀನಾಡೋ ತೊದಲು ನುಡಿ ಅರಗಿಣಿಯ ಮಾತಂತೆ ।೨।
ಸವಿ ಜೇನ ಹನಿಯಂತೆ ನನ್ನ ಮುದ್ದು ರಾಜ 
ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ 

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ 
ನಿನ್ನ ಹವಳದಂತ ತುಟಿಗೆ ಇಂದು, ಪ್ಪ್, ಎಂದು ನಾನು 

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ ।೨।

ನೀನು ನಕ್ಕಾಗ ಬೆಳದಿಂಗಳಂತೆ, ನೀನು ಅತ್ತಾಗ ಸಂಗೀತವೋ 
ಅಂದ ಬಂಗಾರದ ಬೊಂಬೆಯಂತೆ, ಕಂದ ಈ ಮನೆಗೆ ನೀ ಪ್ರಾಣವೋ 
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ ।೨।
ನೀ ನನ್ನ ಉಸಿರಂತೆ ನನ್ನ ಮುದ್ದು ರಾಜ 
ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ 

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ 
ನಿನ್ನ ಹವಳದಂತ ತುಟಿಗೆ ಇಂದು, ಪ್ಪ್, ಎಂದು ನಾನು 


ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜ ।೨।

Song: Baa Mutthu Koduve Kandane
Movie: Kaamana Billu

ಕಣ್ಣು ಕಣ್ಣು ಕಲೆತಾಗ

ಚಿತ್ರ: ಕಾಮನ ಬಿಲ್ಲು
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್  

ಹೆ:    ಕಣ್ಣು ಕಣ್ಣು ಕಲೆತಾಗ, ಮನವು ಉಯ್ಯಾಲೆ ಆಗಿದೆ ತೂಗಿ 
        ಹೃದಯ ಬಿಡಲಾರೆ ಎಂದಿದೆ ಕೂಗಿ 
ಗಂ:  ಕಣ್ಣು ಕಣ್ಣು ಕಲೆತಾಗ, ಮನವು ಉಯ್ಯಾಲೆ ಆಗಿದೆ ತೂಗಿ 

        ಹೃದಯ ಬಿಡಲಾರೆ ಎಂದಿದೆ ಕೂಗಿ 

ಹೆ:    ಹೊಸ ಸುಖ ಕಾಣುತಿದೆ, ಹೊಸ ಕನಸಾಗುತಿದೆ, ಹೊಸ ಬಯಕೆಯು ಮೂಡುತಿದೆ 
ಗಂ:   ಹೊಸ ಹೊಸ ಭಾವನೆ, ಹೊಸ ಹೊಸ ಕಲ್ಪನೆ, ಹೊಸ ಲೋಕಕೆ ಸೆಳೆಯುತಿದೆ 
ಹೆ:    ಅಹ ಏನೋ ಹೇಳೋ ಆಸೆ, ಅಹ ಏನೋ ಕೇಳೋ ಆಸೆ, ನಾಚಿಕೆ ತಡೆಯುತಿದೆ ।೨।

ಗಂ:  ಕಣ್ಣು ಕಣ್ಣು ಕಲೆತಾಗ, ಮನವು ಉಯ್ಯಾಲೆ ಆಗಿದೆ ತೂಗಿ 


ಹೆ:    ಹೃದಯ ಬಿಡಲಾರೆ ಎಂದಿದೆ ಕೂಗಿ 

ಗಂ:  ಮೈ ನವಿರೇಳುತಿದೆ, ತನು ಹೂವಾಗುತಿದೆ, ಮನ ಕವಿತೆಯ ಹಾಡುತಿದೆ 
ಹೆ:    ನಿನ್ನ ಮನ ಹಾಡಿರುವ, ಕವಿ ನುಡಿ ಸಾಲುಗಳ, ಈ ಕಂಗಳೇ ಹೇಳುತಿದೆ 
ಗಂ:  ಈ ಮಾತು ಎಂಥ ಚೆನ್ನ, ಈ ನೋಟ ಎಂಥ ಚೆನ್ನ,. ನಿನ್ನ ಪ್ರೇಮಕೇ ನಾ ಸೋತೆ ।೨।

ಹೆ:    ಕಣ್ಣು ಕಣ್ಣು ಕಲೆತಾಗ, ಮನವು ಉಯ್ಯಾಲೆ ಆಗಿದೆ ತೂಗಿ 
ಗಂ:  ಹೃದಯ ಬಿಡಲಾರೆ ಎಂದಿದೆ ಕೂಗಿ 

Song: Kannu Kannu Kalethaga
Movie: Kaamana Billu

ಇಂದು ಆನಂದ ನಾ ತಾಳಲಾರೆ

ಚಿತ್ರ: ಕಾಮನ ಬಿಲ್ಲು
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್  

ಗಂ:  ಇಂದು ಆನಂದ ನಾ ತಾಳಲಾರೆ, ಚಿನ್ನ ಮಾತಲ್ಲಿ ನಾ ಹೇಳಲಾರೆ 
        ನನ್ನ ಕುಣಿಸಲು ಬಯಕೆಗಳು, ಕಂಡೆ ಹೊಸ ಹೊಸ ಕನಸುಗಳು ।೨।
        ನೀನೆಂದೆಂದು ನನ್ನವಳೇ 
ಹೆ:   ಇಂದು ಆನಂದ ನಾ ತಾಳಲಾರೆ, ನನ್ನ ಮಾತಲ್ಲಿ ನಾ ಹೇಳಲಾರೆ 
        ನನ್ನ ಕುಣಿಸಲು ಬಯಕೆಗಳು, ಕಂಡೆ ಹೊಸ ಹೊಸ ಕನಸುಗಳು ।೨।

        ನೀನೆಂದೆಂದು ನನ್ನವನೇ  

ಗಂ:  ಬಳಸುತಿದೆ ಲತೆ ಬಳಸುತಿದೆ, ಆಸರೆ ಬೇಕೆಂದು ಮರವನ್ನೂ, ನಮ್ಮಂತೆ ಅನುರಾಗದೀ 
ಹೆ:   ನಲಿಯುತಿದೆ ಹೊಸ ಹೂಗಳಲಿ, ಜೇನನು ಹೀರುತ್ತ ದುಂಬಿಗಳು, ನಮ್ಮಂತೆ ಉಲ್ಲಾಸದೀ 
ಗಂ:  ನೋಡು ಈ ಸಂಜೆಯಲ್ಲಿ, ಬೀಸೋ ತಂಪಾದ ಗಾಳಿ 
        ಬಂದು ಸುಯ್ನ್ ಎಂದು ಹಾಡಿ, ನನ್ನ  ಬಳಿ ಹೇಳಿದೆ 
        ನೀನೆಂದೆಂದು ನನ್ನವಳೇ 

ಹೆ:   ಇಂದು ಆನಂದ ನಾ ತಾಳಲಾರೆ, ನನ್ನ ಮಾತಲ್ಲಿ ನಾ ಹೇಳಲಾರೆ 
ಗಂ:  ನನ್ನ ಕುಣಿಸಲು ಬಯಕೆಗಳು, ಕಂಡೆ ಹೊಸ ಹೊಸ ಕನಸುಗಳು ।೨।
        ನೀನೆಂದೆಂದು ನನ್ನವಳೇ 

ಹೆ:   ಹರಿಯುತಿದೆ ನದಿ ಹರಿಯುತಿದೆ, ಸಾಗರ ಎಲ್ಲೆಂದು ಹುಡುಕುತಿದೇ, ನಮ್ಮಂತೆ ಒಂದಾಗಲೂ
ಗಂ:  ಕರೆಯುತಿದೆ ಎಲೆ ಮರೆಯಲ್ಲಿ, ಕೋಗಿಲೆಯೊಂದು ಹಾಡುತಿದೇ, ಸಂಗಾತಿಯ ಸೇರಲು
ಹೆ:   ನೋಡು ಬಾನಂಚಿನಲ್ಲಿ, ಸಂಜೆ ರಂಗನ್ನು ಚೆಲ್ಲಿ
        ನಮಗೆ ಶುಭವನ್ನು ಹಾಡಿ, ನನ್ನ ಬಳಿ ಹೇಳಿದೆ
        ನೀನೆಂದೆಂದು ನನ್ನವನೇ  

ಗಂ:  ಇಂದು ಆನಂದ ನಾ ತಾಳಲಾರೆ, ಚಿನ್ನ ಮಾತಲ್ಲಿ ನಾ ಹೇಳಲಾರೆ 
        ನನ್ನ ಕುಣಿಸಲು ಬಯಕೆಗಳು, ಕಂಡೆ ಹೊಸ ಹೊಸ ಕನಸುಗಳು ।೨।

        ನೀನೆಂದೆಂದು ನನ್ನವಳೇ 
ಹೆ:   ಇಂದು ಆನಂದ ನಾ ತಾಳಲಾರೆ, ನನ್ನ ಮಾತಲ್ಲಿ ನಾ ಹೇಳಲಾರೆ 
ಜೊ: ನನ್ನ ಕುಣಿಸಲು ಬಯಕೆಗಳು, ಕಂಡೆ ಹೊಸ ಹೊಸ ಕನಸುಗಳು ।೨।


ಹೆ:   ನೀನೆಂದೆಂದು ನನ್ನವನೇ  
ಗಂ:  ನೀನೆಂದೆಂದು ನನ್ನವಳೇ 

Song: Indu Ananda Naa Thaalalare
Movie: Kaamana Billu

ಏಕೆ ಮಲ್ಲಿ ಹಂಗೆ

ಚಿತ್ರ: ಎರಡು ನಕ್ಷತ್ರಗಳು 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕರು: ಡಾ. ರಾಜಕುಮಾರ್, ವಾಣಿ ಜಯರಾಮ್ 

ಗಂ: ಏಕೆ ಮಳ್ಳಿ ಹಂಗೆ ನನ್ನ ನೀನು ಕದ್ದು ಕದ್ದು ನೋಡುತಿಯೇ, ಭಯವು ಇನ್ನೇಕೇ 
       ಓ ಹೊ ಹೋ, ನೀನು ನನ್ನ, ಮನಸ್ಸನ್ನು, ಅರಿತಾಗ, ಎದೆಯಾಸೆ, ತಿಳಿದಾಗ 
       ಏಕೆ ಮಳ್ಳಿ  ಹಂಗೆ ನನ್ನ ನೀನು ಕದ್ದು ಕದ್ದು ನೋಡುತಿಯೇ, ಭಯವು ಇನ್ನೇಕೇ 

ಹೆ:  ಕಣ್ಣಿನ ಬಾಣ ಬಿಟ್ಟು ನನ್ನ ಏಕೆ ಕೊಲ್ಲುವೆಯೋ
       ಬಣ್ಣದ ಮಾತೀನಿಂದ ಇನ್ನೂ ಏಕೆ ಸೆಳೆಯುವೆಯೋ
ಗಂ: ಮಲ್ಲಿಗೆ ಹೂವ ಕಂಡು ಆಸೆ ನೂರು ಚಿಮ್ಮುತಿದೆ
       ಮೆಲ್ಲಗೆ ನಿನ್ನ ಸೇರೊ ಬಯಕೆ ಈಗ ಹೊಮ್ಮುತಿದೆ
ಹೆ:  ಕೆಣಕೋ ಮಾತೇಕೆ ಹೊಯ್, ಹಿಡಿವೆ ಸೆರಗೇಕೆ ಹೊಯ್ 
       ಚೆಲುವ, ಚಪಲ, ನಿನಗೇಕೆ 
ಗಂ: ಓ ಹೊ ಹೋ, ಬೆಡಗಿ ಹುಡುಗಿ, ಸಂಕೋಚ, ನಿನಗೇಕೆ, ಈ ದೂರ, ಇನ್ನೇಕೆ 

ಗಂ: ಏಕೆ ಮಳ್ಳಿ ಹಂಗೆ ನನ್ನ ನೀನು ಕದ್ದು ಕದ್ದು ನೋಡುತಿಯೇ, ಭಯವು ಇನ್ನೇಕೇ 

ಗಂ: ಕಣಿವೆಯ ಹಾದೀಯಲ್ಲಿ ಯಾರು ಈಗ ಇರುವುದಿಲ್ಲ 
       ಪ್ರಣಯದ ಆಟವನ್ನು ಯಾರು ಅಲ್ಲಿ ನೋಡೋರಿಲ್ಲ 
ಹೆ:  ಎದೆಯಲಿ ಏಕೋ ಏನೋ ಢವ ಢವ ಎನ್ನುತ್ತಿದೆ 
       ಮೈಯ್ಯಲ್ಲಿ ಏನೋ ಏನೋ ಜುಮು ಜುಮು ಎನ್ನುತ್ತಿದೆ 
ಗಂ: ಬಳಸು ತೋಳಿಂದಾ ಹೊಯ್, ಕೊಡು ಬಾ ಆನಂದಾ ಹೊಯ್ 
       ಬಿಸಿಯು ಏರಿ ಮೈಯ್ಯಲ್ಲಾ 
ಹೆ:  ಓ ಹೊ ಹೋ,  ಮಾತು ಸಾಕು, ಬಾ ನಲ್ಲ, ಹೋಗೋಣ, ಆನಂದ, ಹೊಂದೋಣಾ 

Song: Eke Malli Hange
Movie: Eradu Nakshatragalu

ಗೆಳತಿ ಬಾರದು ಇಂಥಾ ಸಮಯ

ಚಿತ್ರ: ಎರಡು ನಕ್ಷತ್ರಗಳು 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕರು: ಡಾ. ರಾಜಕುಮಾರ್ 

ಗೆಳತಿ ಬಾರದು ಇಂಥಾ ಸಮಯ ।೨।
ಅನುರಾಗ ಬೇಕಿಂದಿದೆ ಹೃದಯ
ಗೆಳತಿ ಬಾರದು ಇಂಥಾ ಸಮಯ

ನೋಡು ಹಿತವಾಗಿ ತಂಗಾಳಿ ಬೀಸಿ, ಹೂವ ತಂಪನ್ನು ಎಲ್ಲೆಲ್ಲೂ ಹಾಸಿ ।೨।
ಮೈಗೆ ಸೋಕಿ ತಂಪನ್ನು ಬೆರಸಿ
ಬಯಕೆ ಹೊಮ್ಮಿ ಹೊಮ್ಮಿ ಹಾಡುತಿದೆ ।೨।
ಹಿತವಾದ ನೋವಿಂದ ನಾ ಬೆಂದೆ 

ಗೆಳತಿ ಬಾರದು ಇಂಥಾ ಸಮಯ

ಮನದಾಸೆ ನೀನೇತಕೇ ಕಾಣೆ, ನಿನ್ನಾಸೆ ಅದೇನಿದೇ `ಜಾಣೆ ।೨।
ಚೆಲುವೆ ತಾಳೆನು ಇನ್ನೂ ವಿರಹ 
ಎದೆಯ ತುಂಬಿದೆ ನಿನ್ನಾ ಮೋಹ 
ಒಲವಿಂದ ನೀ ಬಾರೆಯಾ ಸನಿಹ 

ಗೆಳತಿ ಬಾರದು ಇಂಥಾ ಸಮಯ 
ಅನುರಾಗ ಬೇಕಿಂದಿದೆ ಹೃದಯ

ಗೆಳತಿ ಬಾರದು ಇಂಥಾ ಸಮಯ

Song: Gelathi Baradu
Movie: Eradu Nakshatragalu

Friday, November 4, 2016

ಶ್ರಾವಣ ಮಾಸ ಬಂದಾಗ

ಚಿತ್ರ: ಶ್ರಾವಣ ಬಂತು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್

ಗಂ:  ಶ್ರಾವಣ ಮಾಸ ಬಂದಾಗ, ಆನಂದ ತಂದಾಗ
        ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ
ಹೆ:   ಶ್ರಾವಣ ಮಾಸ ಬಂದಾಗ, ಆನಂದ ತಂದಾಗ
        ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ

ಗಂ:  ನೀ ನನ್ನ ಜೊತೆಯಾಗಿ, ಇರುವಾಗ ಹಿತವಾಗಿ
        ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ
ಹೆ:   ನೀ ನನ್ನ ಜೊತೆಯಾಗಿ, ಇರುವಾಗ ಹಿತವಾಗಿ
        ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ
ಗಂ:  ಮಾತೆಲ್ಲ ಹಾಡಾಗಿ, ಆ ಹಾಡು ಇಂಪಾಗಿ
        ಯುಗ ಒಂದು ದಿನವಾಗಿ, ದಿನವೊಂದು ಕ್ಷಣವಾಗಿ
        ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ

ಹೆ:   ಶ್ರಾವಣ ಮಾಸ ಬಂದಾಗ, ಆನಂದ ತಂದಾಗ
ಗಂ:  ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ

ಹೆ:   ಮುಗಿಲೆಲ್ಲ ಕಪ್ಪಾಗಿ, ಮಿಂಚಿಂದ ಬೆಳಕಾಗಿ
        ಗುಡುಗಿಂದ ಸದ್ದಾಗಿ, ಮಳೆಬಂದು ತಂಪಾಗಿ
ಗಂ:  ಮುಗಿಲೆಲ್ಲ ಕಪ್ಪಾಗಿ, ಮಿಂಚಿಂದ ಬೆಳಕಾಗಿ
        ಗುಡುಗಿಂದ ಸದ್ದಾಗಿ, ಮಳೆಬಂದು ತಂಪಾಗಿ
ಹೆ:   ಸಂತೋಷ ಹೆಚ್ಚಾಗಿ, ನವಿಲೊಂದು ಹುಚ್ಚಾಗಿ
        ಕುಣಿದಾಗ ಸೊಗಸಾಗಿ, ನಮಗಾಗ ಚಳಿಯಾಗಿ
        ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ

ಗಂ:  ಶ್ರಾವಣ ಮಾಸ ಬಂದಾಗ, ಆನಂದ ತಂದಾಗ
        ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ
ಹೆ:   ಶ್ರಾವಣ ಮಾಸ ಬಂದಾಗ, ಆನಂದ ತಂದಾಗ
        ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ

Song: Shravana Maasa Bandaga
Movie: Shravana Bantu

ಇದೇ ರಾಗದಲ್ಲಿ

ಚಿತ್ರ: ಶ್ರಾವಣ ಬಂತು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್

ಗಂ:  ಇದೇ ರಾಗದಲ್ಲಿ, ಇದೇ ತಾಳದಲ್ಲಿ
         ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಹೆ:   ಇದೇ ರಾಗದಲ್ಲಿ, ಇದೇ ತಾಳದಲ್ಲಿ
         ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಗಂ:  ಇದೇ ರಾಗದಲ್ಲಿ, ಇದೇ ತಾಳದಲ್ಲಿ

ಗಂ:  ಆ ಯಮುನೆಯಲ್ಲಿ, ಅಲೆಅಲೆಯು ಹೊಮ್ಮಿ
         ಸಂತೋಷದಿಂದ ಬಾನೆಡೆಗೆ ಚಿಮ್ಮಿ 
ಹೆ:   ಆ ಯಮುನೆಯಲ್ಲಿ, ಅಲೆಅಲೆಯು ಹೊಮ್ಮಿ
         ಸಂತೋಷದಿಂದ ಬಾನೆಡೆಗೆ ಚಿಮ್ಮಿ
ಗಂ:  ಆ ಇರುಳಿನಲಿ ಆ ನೀರ ಹನಿ ಕಾಲ್ಗೆಜ್ಜೆ ಧನಿ ಮಾಡಿರಲು
ಹೆ:   ಆ ಇರುಳಿನಲಿ ಆ ನೀರ ಹನಿ ಕಾಲ್ಗೆಜ್ಜೆ ಧನಿ ಮಾಡಿರಲು
ಗಂ:  ಬೆರಗಾದ ಚಂದ್ರನೂ, ಮೈಮರೆತ ಶ್ಯಾಮಾ

ಹೆ:   ಇದೇ ರಾಗದಲ್ಲಿ, ಇದೇ ತಾಳದಲ್ಲಿ
ಗಂ:  ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
         ಇದೇ ರಾಗದಲ್ಲಿ...

ಗಂ:  ಮಧುಮಾಸವೆಂದು ಮಾಮರವು ತೂಗಿ
         ಕೊಳಲಂತೆ ಆಗ ಕೋಗಿಲೆಯು ಕೂಗಿ
ಹೆ:   ಮಧುಮಾಸವೆಂದು ಮಾಮರವು ತೂಗಿ
         ಕೊಳಲಂತೆ ಆಗ ಕೋಗಿಲೆಯು ಕೂಗಿ
ಗಂ:  ಆಕಾಶದಲಿ ತೇಲಾಡುತಿಹ ಆ ಮೋಡಗಳು ಬೆರಗಾಗಿ
ಹೆ:   ಆಕಾಶದಲಿ ತೇಲಾಡುತಿಹ ಆ ಮೋಡಗಳು ಬೆರಗಾಗಿ
ಗಂ:  ಕಾಲ ಮರೆತು ಹೋದವೂ, ಭುವಿಗೆ ಜಾರಿ ಬಂದವು

ಹೆ:   ಇದೇ ರಾಗದಲ್ಲಿ, ಇದೇ ತಾಳದಲ್ಲಿ
ಗಂ:  ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
         ಇದೇ ರಾಗದಲ್ಲಿ.. ಆ ಆ

Song: Ide Raagadalli
Movie: Shravana Bantu

ಹೊಸ ಬಾಳಿನ ಹೊಸಿಲಲಿ

ಚಿತ್ರ: ಶ್ರಾವಣ ಬಂತು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ: ಡಾ. ರಾಜಕುಮಾರ್

ಹೊಸ ಬಾಳಿನ ಹೊಸಿಲಲಿ ನಿಂತಿರುವ, ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲಿ ತೇಲುತಿಹ, ನವ ಜೋಡಿಗೆ ಸುಖವಾಗಲಿ
ಹೊಸ ಬಾಳಿನ ಹೊಸಿಲಲಿ ನಿಂತಿರುವ, ಹೊಸ ಜೋಡಿಗೆ ಶುಭವಾಗಲಿ

ಆ ಸ್ವರ್ಗದ ಬಾಗಿಲು ತೆರೆದಿದೆ ಇಂದು ಈ ಶುಭ ವೇಳೆಯಲೀ
ಆ ದೇವತೆಗಳು ಉಲ್ಲಾಸದಿ ಬಂದರು ನಿಮ್ಮನು ಹರಸುತಲೀ
ಇದು ಬ್ರಹ್ಮನು ಬೆಸದ ಅನುಬಂಧ ।೨।
ಅನುಕಾಲವು ನೀಡಲಿ ಆನಂದ

ಹೊಸ ಬಾಳಿನ ಹೊಸಿಲಲಿ ನಿಂತಿರುವ, ಹೊಸ ಜೋಡಿಗೆ ಶುಭವಾಗಲಿ

ಈ ಹಚ್ಚನೆ ಹಸುರಿನ ತೋರಣವು ಸುಸ್ವಾಗತವನ್ನು ಹೇಳುತಿದೇ
ಈ ಮಂಗಳ ವಾದ್ಯವು ಮೊಳಗಿರಲು, ಶುಭ ಕಾರ್ಯದ ಸಂಭ್ರಮ ಕಾಣುತಿದೆ
ಜನುಮ ಜನುಮದ ಸ್ನೇಹವಿದು ।೨।
ಸಂಸಾರದ ಬಾಳಿಗೆ ನಾಂದಿಯಿದು

ಹೊಸ ಬಾಳಿನ ಹೊಸಿಲಲಿ ನಿಂತಿರುವ, ಹೊಸ ಜೋಡಿಗೆ ಶುಭವಾಗಲಿ

ಈ ಶ್ರಾವಣ ಮಾಸವು ತಂದ ಉಡುಗೊರೆ ಉಲ್ಲಾಸವ ತರಲೀ
ಆ ಮಂಜುನಾಥನ ಕೃಪಾಕಟಾಕ್ಷವು, ಎಂದೆಂದು ನಿಮಗಿರಲೀ
ಒಂದೇ ವರುಷದ ಅವದಿಯಲಿ ।೨।
ಹಸು ಕಂದನು ಮಡಿಲಲಿ ನಗುತಿರಲಿ

ಹೊಸ ಬಾಳಿನ ಹೊಸಿಲಲಿ ನಿಂತಿರುವ, ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲಿ ತೇಲುತಿಹ, ನವ ಜೋಡಿಗೆ ಸುಖವಾಗಲಿ
ಹೊಸ ಬಾಳಿನ ಹೊಸಿಲಲಿ ನಿಂತಿರುವ, ಹೊಸ ಜೋಡಿಗೆ ಶುಭವಾಗಲಿ

Song: Hosa Baalina Hosilali
Movie: Shravana Bantu