Wednesday, November 9, 2016

ಕೆಂಗಲ್ಲ ಹನುಮಂತರಾಯ

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ ।೨।
ಅರುಣೋದಯ ಕಾಂತಿಯ ಕೆಂಪಾದ ಮೊಗದಲ್ಲಿ
ಕಣ್ತುಂಬ ಕಂಡು  ಕಣ್ತುಂಬಿ ಬಂದು
ಕೈ ಮುಗಿದೇ ಅರಿಯದೆಯೆ ಬೆರಗಾಗಿ ಜೀಯ
ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ

।। ದೈನತೆಯೇ ತುಂಬಿದ ಈ ನನ್ನ ಕಣ್ಣುಗಳು
    ಕರುಣೆಯೇ ತುಂಬಿದ ಆ ನಿನ್ನ ಕಣ್ಣುಗಳು ।।೨।।
ಒಂದಾಗಿ ಬೆರೆತಾಗ ಆನಂದದಾ ಬೇಗ
ಮನ ಹಿಗ್ಗಿ ಹೂವಾಗಿ ಪದದಲಿ ಬಿದ್ದಾಗ

ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ
ಧನ್ಯನಾದೆ ಎಂದು ಹೃದಯ ಕೂಗಿತು ಜೀಯ

।। ಎಲ್ಲಿಗೋ ಹೋಗುವ ಆತುರ ಏಕಯ್ಯಾ
    ಯಾರನೋ ನೋಡುವ ಕಾತುರ ಏನಯ್ಯಾ ।।೨।।
ಈ ನಿನ್ನ ಮಂದಿರಕೆ ಈ ದಿವ್ಯ ಸನ್ನಿದಿಗೆ
ಆಸೆಯಿಂದ ಜನರು ಬರುತಿರಲು ದರುಶನಕೆ

ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ
ಎತ್ತ ಹೋಗುವೆ ನೀನು ಹೇಳಯ್ಯ ಮಹನೀಯ
ಕೆಂಗಲ್ಲ ಹನುಮಂತರಾಯ

।। ನಾ ನಿನ್ನ ಮರೆತರೆ ನನ್ನಾತಾಯಾಣೆ
    ನೀ ಕೈಯ್ಯ ಬಿಟ್ಟರೆ ಶ್ರೀರಾಮನಾಣೆ ।।೨।।
ಉಸಿರಲ್ಲಿ ಉಸಿರಾಗಿ ಮನದಲ್ಲಿ ಸ್ಥಿರವಾಗಿ
ಮನೆ ಮಾಡಿ ನೀ ನೆಲೆಸು ಕೈ ಹಿಡಿದು ಉಧ್ಧರಿಸಿ

ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ
ಜನುಮ ಸಾರ್ಥಕ ಮಾಡು ಸ್ವಾಮೀ ಮಾರುತಿರಾಯ
ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ ।೨।

Song: Kengalla Hanumantharaaya
Album: Elli Hanumano Alli Ramanu

No comments:

Post a Comment