Friday, June 2, 2017

ಶ್ರುತಿ ಸೇರಿದೆ ಹಿತವಾಗಿದೆ

ಚಿತ್ರ: ಶ್ರುತಿ ಸೇರಿದಾಗ
ರಚನೆ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ 

ಹೆ:   ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ 
ಗಂ:  ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ 
ಹೆ:   ಶ್ರುತಿ ಸೇರಿದೆ
ಗಂ:  ಹಿತವಾಗಿದೆ

ಗಂ:  ಹೊಸ ರಾಗದ ಲತೆಯಲ್ಲಿ ಹೊಸ ಪಲ್ಲವಿ ಹೂವಾಗಿದೆ ।೨।
        ಹೊಸ ಆಸೆಯ ಕಂಪಿಂದ ಹೊಸ ಪ್ರೇಮವು ಸವಿಯಾಗಿದೆ ।೨।
ಹೆ:   ಹೊಸ ಲೋಕವು ಕಣ್ತುಂಬಿ ಹೊಸ ರೀತಿಯು ತಂದಾಗಿದೆ ।೨।
        ಬದುಕೆಲ್ಲಾ ಹಸಿರಾಗಿ, ಒಲವೊಂದೇ ಉಸಿರಾಗಿ 

ಗಂ:  ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ 
ಹೆ:   ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ 

ಹೆ:   ಮಳೆಗಾಲವು ಬಂದಾಗಿದೆ, ನೆಲವೆಲ್ಲಾ ಹಸಿರಾಗಿದೆ ।೨।
        ಚಳಿಗಾಲವ ಕಂಡಾಗಿದೆ ಮಂಜಿನ ತೆರೆ ಹಾಸಿದೆ ।೨।
ಗಂ:  ಋತು ಚಕ್ರವು ಉರುಳಿರಲು ಬಾಳೆಂಬುವ ಬಳ್ಳಿಯಲಿ ।೨।
        ಹೊಸದೊಂದು ಮೊಗ್ಗಾಗಿ ತಂಪಾರದ ಬೆಳಕಾಗಿ 

ಹೆ:   ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ 
ಗಂ:  ಹಿತವಾಗಿದೆ
ಜೊ: ಮಾತೆಲ್ಲವು ಹಿಂಪಾಗಿದೆ 
        ಶ್ರುತಿ ಸೇರಿದೆ, ಹಿತವಾಗಿದೆ

Song: Shruti Seride Hitavagide
Movie: Shruti Seridaga

ರಾಜಾ ಮುದ್ದು ರಾಜ

ಚಿತ್ರ          : ಸಂಪತ್ತಿಗೆ ಸವಾಲ್
ರಚನೆ       : ಚಿ ಉದಯಶಂಕರ್
ಸಂಗೀತ    : ಜಿ. ಕೆ. ವೆಂಕಟೇಶ್
ಗಾಯಕ    : ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ 

ಹೆ:  ರಾಜಾ ಮುದ್ದು ರಾಜಾ
       ನೂಕುವಂತ ಕೋಪ ನನ್ನಲ್ಲೇಕೇ
       ಸರಸದ ವೇಳೆ ದೂರ ನಿಲ್ಲಬೇಕೇ, ಕೋಪವೇಕೇ 
       ನಿನಗಾಗಿ ಬಂದೆ, ಬಲವನ್ನು ತಂದೆ, ನನದೆಲ್ಲ ನಿಂದೇ 
       ರಾಜಾ ಮುದ್ದು ರಾಜಾ
       ನೂಕುವಂತ ಕೋಪ ನನ್ನಲ್ಲೇಕೇ, ಮುದ್ದು ರಾಜಾ

ಹೆ:  ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ, ರಾಜಾ ನನ್ನ ರಾಜಾ
       ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ, ರಾಜಾ 
       ಆಸೆ ಬಾರದೇನು, ನಾ ಅಂದವಿಲ್ಲವೇನು
       ಮನಸ್ಸಿನ್ನು ಕಲ್ಲೇನು, ರಾಜಾ ಬೇಡ ರಾಜಾ
       ನೂಕುವಂತ ಕೋಪ ನನ್ನಲ್ಲೇಕೇ, ಮುದ್ದು ರಾಜಾ

ಗಂ: ಹಣದ ಸೊಕ್ಕಿನಿಂದ ಮೆರೆದಾಡೊ ನಿನ್ನ ಚಂದ, ಬಲ್ಲೇ ನಾ ಬಲ್ಲೇ
       ಹಣದ ಸೊಕ್ಕಿನಿಂದ ಮೆರೆದಾಡೊ ನಿನ್ನ ಚಂದ, ಬಲ್ಲೇ
       ಬೆಂಕಿಯಂತೆ ನಾನು, ತಣ್ಣೇರಿನಂತೆ ನೀನು
       ನೀನನ್ನ ಜೊತೆಯೇನು ನಿಲ್ಲೇ, ದೂರ ನಿಲ್ಲೇ

ಹೆ:  ಗಂಡುಬೀರಿಯಲ್ಲ ನಾ ಹಿಂದಿನಂತೆ ಇಲ್ಲ, ನಲ್ಲಾ ನನ್ನ ನಲ್ಲಾ
       ಗಂಡುಬೀರಿಯಲ್ಲ ನಾ ಹಿಂದಿನಂತೆ ಇಲ್ಲ, ನಲ್ಲಾ
       ತಂದೆ ಮಾತ ತಳ್ಳಿ, ನಾನೋಡಿ ಬಂದೆ ನಲ್ಲ
       ನಿನ್ನಾಣೆ ಸುಳ್ಳಲ್ಲ, ರಾಜಾ ಮುದ್ದು ರಾಜಾ
       ನೂಕುವಂತ ಕೋಪ ನನ್ನಲ್ಲೇಕೇ ಮುದ್ದು ರಾಜಾ

ಗಂ: ನನ್ನಲೇನು ಮೋಹ ಇದೇನು ನಿನ್ನ ಸ್ನೇಹ, ಇಲ್ಲಾ ಸರಿ ಅಲ್ಲಾ
ಹೆ:  ನಮ್ಮ ಊರಲೆಲ್ಲಾ ಗಂಡೊಬ್ಬರು ಹುಟ್ಟಿಲ್ಲ
       ಅದಕ್ಕಾಗೆ ಬಿಡಲಾರೆ ವೀರಾ, ಹಮ್ಮೀರಾ
       ರಾಜಾ ಮುದ್ದು ರಾಜಾ
       ನೂಕುವಂತ ಕೋಪ ನನ್ನಲ್ಲೇಕೇ

ಗಂ: ಪ್ರೀತಿಯಿಂದ ಮೈಯ್ಯ ಬಳಸಬೇಕೇ ಇನ್ನು ಸಾಕೇ
       ಸಾಕೇ ಇಲ್ಲ ಬೇಕೇ ।೨।

Movie: Sampattige Savaal 
Song: Raja Muddu Raja

Tuesday, May 30, 2017

ನಗುವುದೋ ಅಳುವುದೋ

ಚಿತ್ರ          : ಸಂಪತ್ತಿಗೆ ಸವಾಲ್
ರಚನೆ       : ಚಿ ಉದಯಶಂಕರ್
ಸಂಗೀತ    : ಜಿ. ಕೆ. ವೆಂಕಟೇಶ್
ಗಾಯಕ    : ಪಿ. ಬಿ. ಶ್ರೀನಿವಾಸ್ 

ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ನಗುವುದೋ ಅಳುವುದೋ, ಈಗ ಏನು ಮಾಡಲೀ

ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ

ಬಡವರ ಕಂಬನಿಗೇ ಬೆಲೆಯೇ ಇಲ್ಲ
ಧನಿಕರ ವಂಚನೆಗೇ ಕೊನೆಯೇ ಇಲ್ಲ
ತಳುಕಿನಾ ಮಾತುಗಳ ನಂಬುವರೆಲ್ಲಾ
ಸತ್ಯವನು ನುಡಿದಾಗ ಸಿಡಿಯುವರೆಲ್ಲ
ದೂರ ತಳ್ಳುವರಲ್ಲ ।೨।

ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ನಗುವುದೋ ಅಳುವುದೋ, ಈಗ ಏನು ಮಾಡಲೀ

ನಗುವುದೋ ಅಳುವುದೋ ನೀವೇ ಹೇಳೀ

ತಾಯಿಯೇ ಮಗನನ್ನು ನಂಬದೆ ಇರಲು 
ಅಣ್ಣನೇ ಮನೆಯಿಂದ ಹೊರಗೆ ತಳ್ಳಲು
ಕಾಲವೇ ಎದುರಾಗಿ ವೈರಿಯಾಗಲು
ಅತ್ತಿಗೆಯ ಕಂಗಳಲಿ ಕಂಡೆನು ನಾನು
ಮಾತೃ ವಾತ್ಸಲ್ಯವನು ।೨।

ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ

ಬಡ್ಡಿಯಾ ಹಣ ತಿಂದು ಬಡವರ ಕೊಂದು
ಕೊಬ್ಬಿದಾ ಶ್ರೀಮಂತನೆ ನಾ ನಿನಗಿಂದು
ಹಾಕುವೆವ್ ಸಂಪತ್ತಿಗೆ ನನ್ನ ಸವಾಲು
ಸಿರಿತನದಾ ಗರ್ವವನು ಮೆಟ್ಟಿ ಮೆರೆಯುವೆ
ಸೊಕ್ಕು ಮುರಿಯುವೇ, ನಿನ್ನ ಸೊಕ್ಕು ಮುರಿಯುವೆ!

Movie: Sampattige Savaal 
Song: Naguvudo Aluvudo

ಹೊಸ ಬೆಳಕೂ ಮೂಡುತಿದೇ

ಚಿತ್ರ: ಹೊಸಬೆಳಕು 
ರಚನೆ: ಚಿ. ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕ: ಡಾ. ರಾಜಕುಮಾರ್ 

ಹೊಸ ಬೆಳಕೂ, ಮೂಡುತಿದೇ 
ಬಂಗಾರದ, ರಥವೇರುತ, ಆಕಾಶದಿ ಓಡಾಡುತ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ
ಕಾಂತಿಯಾ, ರವಿ ಕಾಂತಿಯಾ

।। ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೇ 
   ತಣ್ಣನೆ ಗಾಳಿ ಪರಿಮಳ ಹೀರಿ
   ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೇ  ।।೨।।
ಹಕ್ಕಿ ಮುಗಿಲನ್ನು ನೋಡೀ, ಬೆಳಕು ಬಂತೆಂದು ಹಾಡೀ ।೨।
ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೇ, ಹಾರಿದೇ

ಹೊಸ ಬೆಳಕೂ, ಮೂಡುತಿದೇ 

।। ಬೆಟ್ಟದಿಂದ ನೀರು ಜಾರಿ ಧುಮುಕುತಿದೇ
   ಸಾಗರ ಸೇರೋ, ಆಸೆಯ ತೋರಿ
   ಗಾಳಿಯಂತೆ ವೇಗವಾಗಿ ಹರಿಯುತಲಿದೇ ।।೨।।
ಬೆಳ್ಳಿ ಬೆಳಕನ್ನು ನೋಡೀ, ಮಂಜು ಮರೆಯಾಗಿ ಓಡೀ ।೨।
ಎಲೆಯ ಮರೆಯ ಸೇರೀ ನಲಿವ ಕೋಗಿಲೇ, ಹಾಡಿದೇ

ಹೊಸ ಬೆಳಕೂ, ಮೂಡುತಿದೇ 
ಬಂಗಾರದ, ರಥವೇರುತ, ಆಕಾಶದಿ ಓಡಾಡುತ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ
ಕಾಂತಿಯಾ, ರವಿ ಕಾಂತಿಯಾ

Song: Hosa Belakoo Mooduthide
Movie: Hosabelaku

Monday, May 29, 2017

ನೀನಾದೆ ಬಾಳಿಗೆ ಜ್ಯೋತಿ

ಚಿತ್ರ: ಹೊಸಬೆಳಕು 
ರಚನೆ: ಚಿ. ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ 

ಹೆ:  ನೀನಾದೆ ಬಾಳಿಗೆ ಜ್ಯೋತಿ, ನಾ ಕಂಡೆ ಕಾಣದ ಪ್ರೀತಿ ।೨।
       ಮನಸು ಹೂವಾಗಿ ಕನಸು ನೂರಾಗಿ ।೨।
       ಈ ಜೀವ ಬಾನಲ್ಲಿ ತೇಲಾಡಿದೇ  
ಗಂ: ಬಾ ಎನ್ನ ಬಾಳಿನ ಜ್ಯೋತಿ, ಬಾ ನನ್ನ ಪ್ರೇಮದ ಕಾಂತಿ ।೨।
       ಮನಸು ಹೂವಾಗಿ ಕನಸು ನೂರಾಗಿ ।೨।

       ಈ ಜೀವ ಬಾನಲ್ಲಿ ತೇಲಾಡಿದೇ  

ಹೆ:  ರವಿ ಮೂಡಿ ಆಗಸದಲ್ಲಿ, ಬೆಳಕನ್ನು ಚೆಲ್ಲಿದ ಹಾಗೆ 
       ಇರುಳಾದ ಬಾಳಲ್ಲಿ ಬಂದೆ, ಸಂತೋಷ ಸಂಭ್ರಮ ತಂದೆ 
       ಈ ಜೀವವು ನಲಿದಾಡಿದೇ ।೨।
ಗಂ: ಇನ್ನು ಎಂದೆಂದು ನೋವು ನಿನಗಿಲ್ಲ ।೨।
       ಬಿಸಿಲಲ್ಲಿ ನೆರಳಾಗಿ ಹಿತ ನೀಡುವೇ  

ಹೆ:  ನೀನಾದೆ ಬಾಳಿಗೆ ಜ್ಯೋತಿ
ಗಂ: ಬಾ ನನ್ನ ಪ್ರೇಮದ ಕಾಂತಿ

ಗಂ: ಹೊಸ ರಾಗ ಹಾಡಲು ನೀನು, ಹೊಸ ಲೋಕ ಕಂಡೆನು ನಾನು 
       ಹೊಸ ದಾರಿ ನೋಡಿದೆ ಏನು, ಜೊತೆಯಾಗಿ ಬರುವೆಯ ಇನ್ನೂ 
       ನನ್ನಾಸೆಯಾ ಪೂರೈಸೆಯಾ ।೨।
ಹೆ:  ನಿನ್ನ ಹುಸಿರಾಗಿ, ಬಾಳ ಹಸಿರಾಗಿ ।೨।
       ಎಂದೆಂದು ಒಂದಾಗಿ ನಾ ಬಾಳುವೇ 

ಗಂ: ಬಾ ಎನ್ನ ಬಾಳಿನ ಜ್ಯೋತಿ
ಹೆ:  ನೀನಾದೆ ಬಾಳಿಗೆ ಜ್ಯೋತಿ, ನಾ ಕಂಡೆ ಕಾಣದ ಪ್ರೀತಿ
ಜೊ:ಮನಸು ಹೂವಾಗಿ ಕನಸು ನೂರಾಗಿ ।೨।


       ಈ ಜೀವ ಬಾನಲ್ಲಿ ತೇಲಾಡಿದೇ  

Song: Neenade Balige Jyothi
Movie: Hosabelaku

ಚಳಿ ಚಳಿ ನಡುಕವು

ಚಿತ್ರ: ತಾಯಿಗೆ ತಕ್ಕ ಮಗ 
ರಚನೆ: ಚಿ. ಉದಯಶಂಕರ್ 
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕರು:  ಡಾ. ರಾಜಕುಮಾರ್, ಎಸ್. ಜಾನಕಿ 

ಗಂ:  ಚಳಿ ಚಳಿ ಆ ಆ ।೧।
         ನಡುಕವು, ಮಯ್ಯಲಿ, ಕಾತರ ಮನದಲಿ, ಆತುರ ತುಟಿಯಲಿ
         ನನ್ನಾ ಸೇರಿಸೆಯಾ, ಒಂದಾ ಕೊಡುವೆಯಾ
ಹೆ:    ಮದುವೆಯು ಮುಗಿಯಲಿ, ಹಿರಿಯರು ಹರಿಸಲಿ
         ಕೊರಳಿನ ತಾಳಿಯ ಅನುಮತಿ ದೊರೆಯಲಿ
         ನೀ ಬೇಡ ಎನ್ನಲು, ನಾ ನಿನ್ನಾ ಬಿಡೆನೂ

ಗಂ:  ಇಂದು ನಮದು, ಮುಂದೆ ಏನೋ, ಯಾರು ಬಲ್ಲವರೂ
         ಎಂದು ಬರುವ ಮದುವೆ ದಿನವ ಯಾರು ಕಾಯುವರೂ
ಹೆ:    ಎಂದೆ ಬರಲಿ ಹೇಗೆ ಬರಲಿ ನೀವು ನನ್ನವರೂ
         ಸಹನೆಯಿಂದ ಇರುವ ಜನರೇ ಸುಖವ ಹೊಂದುವರೂ

ಗಂ:  ಚಳಿ ಚಳಿ ಆ ಆ, ನಡುಕವು, ಮಯ್ಯಲಿ
          ಕಾತರ ಮನದಲಿ, ಆತುರ ತುಟಿಯಲಿ
          ನನ್ನಾ ಸೇರಿಸೆಯಾ, ಒಂದಾ ಕೊಡುವೆಯಾ

ಹೆ:    ಒಲಿದ ಹೆಣ್ಣ ತೋಳಿನಲ್ಲಿ ಹೀಗೆ ಅಳುಕದಿರೂ 
         ಮೈಗೆ ಮೈಯ್ಯ ಮಸೆದು ಬಿಸಿಯ ತುಂಬಿ ಕೆಣಕದಿರೂ 
ಗಂ:  ಏನೇ ಮಾಡು ಯಾರು ಇಲ್ಲ ನಮ್ಮ ನೋಡುವರೂ
         ಮುತ್ತನೊಂದು ಕೊಡೆನು ಈಗ ಯಾರು ಕೇಳುವರೂ


ಹೆ:    ಚಳಿ ಚಳಿ, ಮದುವೆಯು ಮುಗಿಯಲಿ, ಹಿರಿಯರು ಹರಿಸಲಿ
         ಕೊರಳಿನ ತಾಳಿಯ ಅನುಮತಿ ದೊರೆಯಲಿ

         ನೀ ಬೇಡ ಎನ್ನಲು, ನಾ ನಿನ್ನಾ ಬಿಡೆನೂ
ಗಂ:  ನಾ ನಿನ್ನಾ ಬಿಡೆನೂ

Song: Chali Chali Nadukavu
Movie: Thayige Thakka Maga