Tuesday, May 30, 2017

ನಗುವುದೋ ಅಳುವುದೋ

ಚಿತ್ರ          : ಸಂಪತ್ತಿಗೆ ಸವಾಲ್
ರಚನೆ       : ಚಿ ಉದಯಶಂಕರ್
ಸಂಗೀತ    : ಜಿ. ಕೆ. ವೆಂಕಟೇಶ್
ಗಾಯಕ    : ಪಿ. ಬಿ. ಶ್ರೀನಿವಾಸ್ 

ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ನಗುವುದೋ ಅಳುವುದೋ, ಈಗ ಏನು ಮಾಡಲೀ

ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ

ಬಡವರ ಕಂಬನಿಗೇ ಬೆಲೆಯೇ ಇಲ್ಲ
ಧನಿಕರ ವಂಚನೆಗೇ ಕೊನೆಯೇ ಇಲ್ಲ
ತಳುಕಿನಾ ಮಾತುಗಳ ನಂಬುವರೆಲ್ಲಾ
ಸತ್ಯವನು ನುಡಿದಾಗ ಸಿಡಿಯುವರೆಲ್ಲ
ದೂರ ತಳ್ಳುವರಲ್ಲ ।೨।

ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ನಗುವುದೋ ಅಳುವುದೋ, ಈಗ ಏನು ಮಾಡಲೀ

ನಗುವುದೋ ಅಳುವುದೋ ನೀವೇ ಹೇಳೀ

ತಾಯಿಯೇ ಮಗನನ್ನು ನಂಬದೆ ಇರಲು 
ಅಣ್ಣನೇ ಮನೆಯಿಂದ ಹೊರಗೆ ತಳ್ಳಲು
ಕಾಲವೇ ಎದುರಾಗಿ ವೈರಿಯಾಗಲು
ಅತ್ತಿಗೆಯ ಕಂಗಳಲಿ ಕಂಡೆನು ನಾನು
ಮಾತೃ ವಾತ್ಸಲ್ಯವನು ।೨।

ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ

ಬಡ್ಡಿಯಾ ಹಣ ತಿಂದು ಬಡವರ ಕೊಂದು
ಕೊಬ್ಬಿದಾ ಶ್ರೀಮಂತನೆ ನಾ ನಿನಗಿಂದು
ಹಾಕುವೆವ್ ಸಂಪತ್ತಿಗೆ ನನ್ನ ಸವಾಲು
ಸಿರಿತನದಾ ಗರ್ವವನು ಮೆಟ್ಟಿ ಮೆರೆಯುವೆ
ಸೊಕ್ಕು ಮುರಿಯುವೇ, ನಿನ್ನ ಸೊಕ್ಕು ಮುರಿಯುವೆ!

Movie: Sampattige Savaal 
Song: Naguvudo Aluvudo

No comments:

Post a Comment