Tuesday, May 30, 2017

ಹೊಸ ಬೆಳಕೂ ಮೂಡುತಿದೇ

ಚಿತ್ರ: ಹೊಸಬೆಳಕು 
ರಚನೆ: ಚಿ. ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕ: ಡಾ. ರಾಜಕುಮಾರ್ 

ಹೊಸ ಬೆಳಕೂ, ಮೂಡುತಿದೇ 
ಬಂಗಾರದ, ರಥವೇರುತ, ಆಕಾಶದಿ ಓಡಾಡುತ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ
ಕಾಂತಿಯಾ, ರವಿ ಕಾಂತಿಯಾ

।। ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೇ 
   ತಣ್ಣನೆ ಗಾಳಿ ಪರಿಮಳ ಹೀರಿ
   ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೇ  ।।೨।।
ಹಕ್ಕಿ ಮುಗಿಲನ್ನು ನೋಡೀ, ಬೆಳಕು ಬಂತೆಂದು ಹಾಡೀ ।೨।
ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೇ, ಹಾರಿದೇ

ಹೊಸ ಬೆಳಕೂ, ಮೂಡುತಿದೇ 

।। ಬೆಟ್ಟದಿಂದ ನೀರು ಜಾರಿ ಧುಮುಕುತಿದೇ
   ಸಾಗರ ಸೇರೋ, ಆಸೆಯ ತೋರಿ
   ಗಾಳಿಯಂತೆ ವೇಗವಾಗಿ ಹರಿಯುತಲಿದೇ ।।೨।।
ಬೆಳ್ಳಿ ಬೆಳಕನ್ನು ನೋಡೀ, ಮಂಜು ಮರೆಯಾಗಿ ಓಡೀ ।೨।
ಎಲೆಯ ಮರೆಯ ಸೇರೀ ನಲಿವ ಕೋಗಿಲೇ, ಹಾಡಿದೇ

ಹೊಸ ಬೆಳಕೂ, ಮೂಡುತಿದೇ 
ಬಂಗಾರದ, ರಥವೇರುತ, ಆಕಾಶದಿ ಓಡಾಡುತ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ
ಕಾಂತಿಯಾ, ರವಿ ಕಾಂತಿಯಾ

Song: Hosa Belakoo Mooduthide
Movie: Hosabelaku

No comments:

Post a Comment