Saturday, November 26, 2016

ಅಲ್ಲಿ ಇಲ್ಲಿ ನೋಡುವೆ ಏಕೆ

ಚಿತ್ರ : ಆಪರೇಷನ್ ಡೈಮಂಡ್  ರಾಕೆಟ್
ರಚನೆ : ಚಿ. ಉದಯಶಂಕರ್ 
ಸಂಗೀತ : ಜಿ. ಕೆ. ವೆಂಕಟೇಶ್ 
ಗಾಯಕ/ನಟ : ಡಾ. ರಾಜಕುಮಾರ್, ಎಸ್. ಜಾನಕಿ   

ಗಂ:  ಅಲ್ಲಿ ಇಲ್ಲಿ ನೋಡುವೆ ಏಕೆ, ನಿಲ್ಲು ಅಲ್ಲೆ ಓಡುವೆ ಏಕೆ ।೨।
        ಕಂಡ ಕಂಡ ಹೆಣ್ಣ ನೋಡೋವನಲ್ಲ
        ನಿನ್ನ ಬಿಟ್ಟು ಎಲ್ಲು ಹೋಗೋವನಲ್ಲ
        ಎಂದು ನಿನ್ನ ಮರೆಯೋವನಲ್ಲ
        ಅಲ್ಲಿ ಇಲ್ಲಿ ನೋಡುವೆ ಏಕೆ, ನಿಲ್ಲು ಅಲ್ಲೆ ಓಡುವೆ ಏಕೆ
        ಅಲ್ಲಿ ಇಲ್ಲಿ ನೋಡುವೆ ಏಕೆ

ಹೆ:   ನೀನು ನಗುತಿರೆ ತನುವೆಲ್ಲ ಕುಣಿವುದು ನಿನ್ನಾ ನೋಡುತಾ
ಗಂ:  ನೀನು ನಲಿದರೆ ಮನವೆಲ್ಲ ನಲಿವುದು ನಾನು ಆಡುತಾ
ಹೆ:   ಹರುಷದಲಿ ತೆಲುತಾ, ಸರಸದಲ್ಲಿ ಕೂಡುತಾ ।೨।
ಗಂ:  ಬಯಕೆಗಳು ಮೂಡುತಾ, ಹೃದಯಗಳು ಕಾಡುತಾ, ಆನಂದ ಬೇಡಿದೆ

ಗಂ:  ಅಲ್ಲಿ ಇಲ್ಲಿ ನೋಡುವೆ ಏಕೆ, ನಿಲ್ಲು ಅಲ್ಲೆ ಓಡುವೆ ಏಕೆ
        ಅಲ್ಲಿ ಇಲ್ಲಿ ನೋಡುವೆ ಏಕೆ

ಹೆ:   ನೀನು ನಗುವಲೆ ನನ್ನನು ಕೊಲ್ಲುವೇ ಒಮ್ಮೆ ಗೆಲ್ಲುವೇ
ಗಂ:  ನೀನು ಜೊತೆ ಇರೆ ನನ್ನನ್ನೇ ಮರೆಯುವೆ ಸೋತೇ ಹೋಗುವೇ
ಹೆ:   ಮಾತಿನಲಿ ಸೋಲುವೇ ಪ್ರೀತಿಯಲಿ ಗೆಲ್ಲುವೇ ।೨।
ಗಂ:  ಸವಿನುಡಿಯನಾಡುವೇ ಹಿತವನ್ನೆ ನೀಡುವೇ ಒಲವಿಂದ ಸೇರುವೇ

ಹೆ:   ಅಲ್ಲಿ ಇಲ್ಲಿ ನೋಡುವೆ ಏಕೆ
ಗಂ:  ನಾನ
ಹೆ:   ನಿಲ್ಲು ಅಲ್ಲೆ ಓಡುವೆ ಏಕೆ
ಗಂ:  ಕಂಡ ಕಂಡ ಹೆಣ್ಣ ನೋಡೋವನಲ್ಲ
        ನಿನ್ನ ಬಿಟ್ಟು ಎಲ್ಲು ಹೋಗೋವನಲ್ಲ
        ಎಂದು ನಿನ್ನ ಮರೆಯೋವನಲ್ಲ

Song: Alli Illi Noduve Eke
Movie: Operation Diamond Racket

ಗಿಣಿಯೇ ನನ್ನ ಅರಗಿಣಿಯೆ

ಚಿತ್ರ: ಒಲವು ಗೆಲುವು 
ರಚನೆ: ಎಸ್. ಜಾನಕಿ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಡಾ. ರಾಜಕುಮಾರ್ 

ಗಿಣಿಯೇ ನನ್ನ ಅರಗಿಣಿಯೆ ।೨।
ಸಂಜೆಯಲಿ, ಈ ಏಕಾಂತದಲ್ಲಿ, ಹಿತವಿಲ್ಲವೇನು, ಸುಖವಿಲ್ಲವೇನು 
ಗಿಣಿಯೇ  ನನ್ನ ಅರಗಿಣಿಯೆ

ಎಂದೂ, ನನ್ನನು ನೋಡಿದಾಗ 
ನಗುತಲಿ ಬಂದು, ಮಾತನು ಆಡುವಾಗ 
ನಾ ಕಂಡ ಹರುಷ, ಆ ನಿನ್ನ ಸರಸ 
ಈ ದಿನ ಏನಾಯಿತು, ಏತಕೆ ಹೀಗಾಯಿತು ।೨।

ಹೇ
ಗಿಣಿಯೇ ನನ್ನ ಅರಗಿಣಿಯೆ ।೨।
ಸಂಜೆಯಲಿ, ಈ ಏಕಾಂತದಲ್ಲಿ, ಹಿತವಿಲ್ಲವೇನು, ಸುಖವಿಲ್ಲವೇನು

ನಿನ್ನಾ, ಮನಸಿನ ಆಸೆಯಂತೆ 
ಇರುವೆನು ಚಿನ್ನ, ಜೊತೆಯಲಿ ಜೋಡಿಯಂತೆ 
ಸಂತೋಷ ತಾನೆ, ನೀ ಹೇಳೆ ಜಾಣೇ  
ರೋಹಿಣಿ ನೀನಾದರೆ, ಚಂದಿರ ನಾನಾಗುವೆ ।೨। 

ಹೇ
ಗಿಣಿಯೇ ನನ್ನ ಅರಗಿಣಿಯೆ ।೨।
ಸಂಜೆಯಲಿ, ಈ ಏಕಾಂತದಲ್ಲಿ, ಹಿತವಿಲ್ಲವೇನು, ಸುಖವಿಲ್ಲವೇನು 
ಗಿಣಿಯೇ, ಹೇ, ನನ್ನ ಅರಗಿಣಿಯೆ

Song: Giniye Nanna Araginiye
Movie: Olavu Geluvu

Friday, November 25, 2016

ನಾ ನಿನ್ನ ಆಸೆ ಕಂಡೆ

ಚಿತ್ರ: ರವಿಚಂದ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ 

ಹೆ:  ಕಂಗಳಲೀ ಪ್ರಣಯದ ಹಣತೆ ಬೆಳಗಿರಲು
       ನಿನ್ನದರ ಪ್ರೇಮದ ಕವಿತೆ ಹಾಡಿರಲು
       ನಿನ್ನೊಲವ ನಾ ಕಂಡು ಸೋತು ಹೋಗಿರಲು

ಹೆ:  ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ ।೨।
       ನಾನೇನು ಹಾಡಲೀಗ ।೨।
       ನೀ ಹೇಳು ಪ್ರಿಯ ಬೇಗ
       ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ ।೨।

ಗಂ: ಹೂವಿಗೆ ಗಂಧವನು ನಾ ಚೆಲ್ಲ ಬೇಕೇ 
       ನವಿಲಿಗೆ ನಾಟ್ಯವನು ನಾ ಕಲಿಸ ಬೇಕೇ 
       ಕೋಗಿಲೆಗೆ ಹಾಡೆಂದು, ಕೋಗಿಲೆಗೆ ಹಾಡೆಂದು ನಾ ಹೇಳ ಬೇಕೇ

ಗಂ: ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ 
       ನಾನೇನು ಮಾಡಲೀಗ ।೨।
       ನೀ ಹೇಳೇ ಪ್ರಿಯೆ ಬೇಗ 
       ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ 

ಹೆ:  ವೀಣೆಯು ಆದರೆ ನಾ ।೨।
       ವ್ಯಣಿಕ ಪ್ರಿಯ ನೀನು 
       ಗಾಯಕಿ ಆದರೆ ನಾ, ಗಾನವು ಪ್ರಿಯ ನೀನು
       ನುಡಿಸಲು ನಾ ನುಡಿವೇ, ನೆಡೆಸಲು ನಾ ನೆಡೆವೇ ।೨।
       ನಿನ್ನಾಣೆ ನಲ್ಲ

ಹೆ:  ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ ।೨।

ಗಂ: ವೀಣೆಯು ನೀನಲ್ಲ ।೨।
       ವ್ಯಣಿಕ ನಾನು ಅಲ್ಲ
       ವಾಣಿಗೆ ವೀಣೆಯನು ಕಳಿಸುವರಾರು ಇಲ್ಲ
       ಕುಣಿಸುವೆ ಕಂಗಳಲೇ ತಣಿಸುವೆ ಮಾತಿನಲೇ ।೨।
       ಅಂತ ಜಾಣೆ ನೀನೆ

ಗಂ: ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ಹೆ:  ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ
ಗಂ:  ನಾನೇನು ಮಾಡಲೀಗ
ಹೆ:  ನಾನೇನು ಹಾಡಲೀಗ
ಗಂ: ನೀ ಹೇಳೇ ಪ್ರಿಯೆ ಬೇಗ
ಹೆ:  ನೀ ಹೇಳು ಪ್ರಿಯ ಬೇಗ

Song: Naa Ninna Aase Kande
Movie: Ravichandra

ಇದು ರಾಮ ಮಂದಿರ

ಚಿತ್ರ: ರವಿಚಂದ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ/ನಟ: ಡಾ. ರಾಜಕುಮಾರ್,  ಸುಲೋಚನ 

ಹೆ:  ಇದು ರಾಮ ಮಂದಿರ ನೀ ರಾಮಚಂದಿರ ।೨।
       ಜೊತೆಯಾಗಿ ನೀನಿರಲು ಬಾಳು ಸಹಜ ಸುಂದರ
       ಇದು ರಾಮ ಮಂದಿರ ನೀ ರಾಮಚಂದಿರ

ಹೆ:  ಸ್ವಾಮಿ ನಿನ್ನ ಕಂಗಳಲಿ ।೨।
       ಚಂದ್ರೋದಯ ಕಾಣುವೇ
       ಸ್ವಾಮಿ ನಿನ್ನ ನಗುವಲಿ ಅರುಣೋದಯ ನೋಡುವೇ
       ಸರಸದಲ್ಲಿ ಚತುರ ಚತುರ ।೨।
       ನಿನ್ನ ಸ್ನೇಹ ಅಮರ
ಗಂ:  ನಿನ್ನ ಬಾಳ ಕಮಲದಲೀ, ನಾನು ನಲಿವ ಭ್ರಮರ

ಹೆ:  ಇದು ರಾಮ ಮಂದಿರ ನೀ ರಾಮಚಂದಿರ

ಗಂ:  ನನ್ನ ಸೀತೆ ಇರುವ ತಾಣ ।೨।
        ಕ್ಷೀರ ಸಾಗರದಂತೆ 
       ನನ್ನ ಸೀತೆ ಬೆರೆತಾ ಮನವು, ಹೊನ್ನ ಹೂವಿನಂತೆ 
       ನುಡಿವ ಮಾತು ಮಧುರ ಮಧುರ ।೨।
       ನಿನ್ನ ಪ್ರೇಮ ಅಮರ 
ಹೆ:  ನೀನು ಹೃದಯ ತುಂಬಿರಲು, ಬಾಳು ಪ್ರೇಮ ಮಂದಿರ 

ಗಂ:  ಇದು ರಾಮ ಮಂದಿರ ಆನಂದ ಸಾಗರ ।೨।
       ಜೊತೆಯಾಗಿ ನೀನಿರಲು ಬಾಳು ಸಹಜ ಸುಂದರ

ಹೆ:  ಇದು ರಾಮ ಮಂದಿರ ನೀ ರಾಮಚಂದಿರ

Song: Idu Rama Mandira
Movie: Ravichandra

ಓ ಎಂತ ಸೌಂದರ್ಯ ಕಂಡೆ

ಚಿತ್ರ: ರವಿಚಂದ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ/ನಟ: ಡಾ. ರಾಜಕುಮಾರ್ 

ಓ ಎಂಥ ಸೌಂದರ್ಯ ಕಂಡೆ ।೨।
ಆದಿಶಕ್ತಿಯೋ ಮಹಾಲಕ್ಷ್ಮಿಯೋ ವಾಣಿಯೋ ಕಾಣೆ ನಾ
ಓ ಎಂಥ ಸೌಂದರ್ಯ ಕಂಡೆ ।೨।

ಹೊಳೆಯುವ ಕಣ್ಣುಗಳೋ, ಬೆಳಗುವ ದೀಪಗಳೋ
ತುಂಬಿದ ಕೆನ್ನೆಗಳೋ, ಹೊನ್ನಿನ ಕಮಲಗಳೋ
ಅರಳಿದ ಹೂವು ನಗೆಯಾಯಿತು, ಚಂದ್ರಿಕೆಯೇ ಹೆಣ್ಣಾಯಿತು
ನನಗಾಗಿ ಧರೆಗಿಳಿದ ದೇವತೆಯೋ ಏನೊ ಕಾಣೆ ನಾ

ಓ ಎಂಥ ಸೌಂದರ್ಯ ಕಂಡೆ ।೨।

ಕಡಲಲೆ ಮುತ್ತಿರಲೀ, ಲತೆಯಲೆ ಸುಮವಿರಲೀ 
ನಯನವು ನೋಡುತಲೀ, ಸಂತಸ ಹೊಂದಿರಲೀ 
ಕರೆಯದಿರೂ ಕೆಣಕದಿರೂ, ಬಯಕೆಗಳಾ ನುಡಿಯದಿರೂ 
ನಿನ್ನನ್ನು ನೋಡುತಿರೆ ಕೈಮುಗಿವ ಆಸೆ ಏಕೊ ಕಾಣೇ 

ಓ ಎಂಥ ಸೌಂದರ್ಯ ಕಂಡೆ ।೨।
ಆದಿಶಕ್ತಿಯೋ ಮಹಾಲಕ್ಷ್ಮಿಯೋ ವಾಣಿಯೋ ಕಾಣೆ ನಾ

ಓ ಎಂಥ ಸೌಂದರ್ಯ ಕಂಡೆ ।೨।

Song: O Entha Soundarya Kande
Movie: Ravichandra

Thursday, November 24, 2016

ನಸು ನಗುತ

ಚಿತ್ರ: ರವಿಚಂದ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ/ನಟ: ಡಾ. ರಾಜಕುಮಾರ್ 

।। ನಸು ನಗುತ ಬಾ ಚಿನ್ನ, ನಲಿಯುತಿರೆ ನೀ ಚೆನ್ನ
    ಅಗಲೆನು ಅಳಿಸೆನು ಇನ್ನೆಂದು ನಿನ್ನ ।।೨।।

।। ಬಿಸಿಲು ಮಳೆಗೆ ನೆರಳನು ನೀಡುವೇ
    ಸಿಡಿಲೋ ಗುಡುಗೋ ಜೊತೆಯಲಿ ನಿಲ್ಲುವೇ ।।೨।।
ನೋವ ನುಂಗುವೇ, ಸುಖವ ನೀಡುವೇ ।೨।
ಜೀವದ ಜೀವವೇ ನಾನಾಗಿ ಬಾಳುವೆ 

ನಸು ನಗುತ ಬಾ ಚಿನ್ನ, ನಲಿಯುತಿರೆ ನೀ ಚೆನ್ನ
ಅಗಲೆನು ಅಳಿಸೆನು ಇನ್ನೆಂದು ನಿನ್ನ

।। ನಿನ್ನ ನೆಡೆಗೆ ಹೃದಯವ ಹಾಸುವೇ
    ನಿನ್ನ ನುಡಿಗೆ ಜೀವವ ತುಂಬುವೇ ।।೨।।
ನಿನ್ನ ಕಣ್ಣಲೇ, ಎಲ್ಲಾ ಕಾಣುವೇ ।೨।
ಕಂಬನಿ ಮಿಡಿದರೇ ನಾ ಸೋತು ಹೋಗುವೆ 

ನಸು ನಗುತ ಬಾ ಚಿನ್ನ, ನಲಿಯುತಿರೆ ನೀ ಚೆನ್ನ

ಅಗಲೆನು ಅಳಿಸೆನು ಇನ್ನೆಂದು ನಿನ್ನ
ನಸು ನಗುತ ಬಾ ಚಿನ್ನ, ನಲಿಯುತಿರೆ ನೀ ಚೆನ್ನ

Song: Nasu Nagutha
Movie: Ravichandra

Monday, November 21, 2016

ನಿನ್ನ ಮನ ಮೆಚ್ಚಿಸಲು

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ನಿನ್ನ, ನಿನ್ನ ಮನ ಮೆಚ್ಚಿಸಲು, ನಿನ್ನ ಮನ ಮೆಚ್ಚಿಸಲು

ನಿನ್ನ ನಾ ಅರ್ಪಿಸಲು, ಏನು ಮಾಡಲಿ ಹೇಳು, ಪಾವನಸುತ
ನಿನ್ನ ಮನ ಮೆಚ್ಚಿಸಲು, ನಿನ್ನ ಮನ ಮೆಚ್ಚಿಸಲು

ನಿನ್ನ ನಾ ಅರ್ಪಿಸಲು, ಏನು ಮಾಡಲಿ ಹೇಳು, ಪಾವನಸುತ

ಅಭಿಷೇಕ ಮಾಡಿದರೆ ಹನಿಹನಿಯ ಹುಡುಕಿ ಶ್ರೀರಾಮನಿರುವನೇ ಎಂದು ನೀ ನೋಡುವೆ ।೨।
ಪೂಜೆಯನು ಮಾಡಿದರೆ ।೨।
ಹೂವುಗಳ ಕೆದಕಿ ಆ ರಾಮನಿರುವನೇ ಎಂದು ನೀ ಕೇಳುವೇ

ನಿನ್ನ ಮನ ಮೆಚ್ಚಿಸಲು, ನಿನ್ನ ಮನ ಮೆಚ್ಚಿಸಲು
ನಿನ್ನ ನಾ ಅರ್ಪಿಸಲು, ಏನು ಮಾಡಲಿ ಹೇಳು, ಪಾವನಸುತ

ಮುತ್ತು ರತ್ನದ ಹಾರ ಕೊರಳಲಿ ಹಾಕಿದರೆ ।೨।
ಮುತ್ತು ರತ್ನವ ಹೊಡೆದು ನೀ ನೋಡುವೇ 
ಮಣಿ ಮಣಿಯ ಚೂರಿನಲು ಶ್ರೀರಾಮಚಂದಿರನು ।೨।
ಕಾಣುವನೇ ಎಂದು ನೀ ಹುಡುಕಾಡುವೇ 

ನಿನ್ನ ಮನ ಮೆಚ್ಚಿಸಲು, ನಿನ್ನ ಮನ ಮೆಚ್ಚಿಸಲು

ನಿನ್ನ ನಾ ಅರ್ಪಿಸಲು, ಏನು ಮಾಡಲಿ ಹೇಳು, ಪಾವನಸುತ

ನಿನ್ನೆದೆಯ ಗುಡಿಯಲ್ಲಿ ರಾಮನು ಸ್ಥಿರವಾಗಿರಲು, ಹೀಗೇಕೆ ನೀ ಸ್ವಾಮಿ ಹಂಬಲಿಸುವೇ ।೨।
ನನ್ನ ಮನ ಮಂದಿರದಿ ।೨।
ಕ್ಷಣಕಾಲ ನೀ ನೆಲೆಸು, ನಿನ್ನೊಡನೆ ಶ್ರೀ ರಾಮನ, ನಾ ಕಾಣುವೇ

ನಿನ್ನ ಮನ ಮೆಚ್ಚಿಸಲು, ನಿನ್ನ ಮನ ಮೆಚ್ಚಿಸಲು

ನಿನ್ನ ನಾ ಅರ್ಪಿಸಲು, ಏನು ಮಾಡಲಿ ಹೇಳು, ಪಾವನಸುತ

Song: Ninna Mana Mecchisalu
Album: Elli Hanumano Alli Ramanu

ಎತ್ತಲೋ ಮಾಯವಾದ

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಎತ್ತಲೋ ಮಾಯವಾದ...
ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ।೨।
ಎತ್ತಿ ತಂದೆ ಎಲ್ಲಿಂದ ರಾಯ, ಮುತ್ತೆತ್ತ ರಾಯ 
ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು 
ಎತ್ತಿ ತಂದೆ ಎಲ್ಲಿಂದ ರಾಯ, ಮುತ್ತೆತ್ತ ರಾಯ 
ಅತ್ತ ಸೀತಮ್ಮನ ಮುದ್ದು ಮೊಗದಲ್ಲಿ ಮತ್ತೆ ನಗೆಯ ತಂದೆಯ ಮಹನೀಯ, ಮಾರುತಿರಾಯ 
ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು 
ಎತ್ತಿ ತಂದೆ ಎಲ್ಲಿಂದ ರಾಯ, ಮುತ್ತೆತ್ತ ರಾಯ 

ಸೀತಮ್ಮ ಸ್ನಾನ ಮಾಡಿ, ಮೂಗುತಿಯ ಹುಡುಕಾಡಿ ।೨।
ನಿನ್ನ ಕೂಗಿದಳೇನೋ ಹನುಮಂತರಾಯ ।೨।
ನೀರಿಲ್ಲಿ ಬಾಲ ಬಿಟ್ಟು ನದಿಯನ್ನೇ ಶೋಧಿಸಿದೆ ಎಂಥ ಶ್ರದ್ಧೆಯೋ, ಮಹನೀಯ, ಹನುಮಂತರಾಯ 

ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು 
ಎತ್ತಿ ತಂದೆ ಎಲ್ಲಿಂದ ರಾಯ, ಮುತ್ತೆತ್ತ ರಾಯ 

ಅಮ್ಮ ಸೀತಮ್ಮನು ನಿನ್ನ ಭಕ್ತಿಗೆ ಮೆಚ್ಚಿ ।೨।
ಮುತ್ತೆತ್ತರಾಯನೆಂದು ಹರಸಿದಳೇನು ।೨।
ನಿನ್ನಂತ ದಾಸನನು ಪಡೆದ ಆ ರಾಮನು ಎಂಥ ಭಾಗ್ಯವಂತನಯ್ಯ, ಮಾರುತಿರಾಯ 

ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು 
ಎತ್ತಿ ತಂದೆ ಎಲ್ಲಿಂದ ರಾಯ, ಮುತ್ತೆತ್ತ ರಾಯ 

ನಿನ್ನಂತೆ ಭಕ್ತಿ ಇಲ್ಲ, ನಿನ್ನಂತೆ ಶಕ್ತಿ ಇಲ್ಲ ।೨।
ಏನೂ ಇಲ್ಲದ ಜೀವ, ನನ್ನದು ಸ್ವಾಮಿ ।೨।
ನಿನ್ನೇ ನಾ ನಂಬಿ ಬಂದೆ ನೀನೆ ನನ್ನ ತಾಯಿ ತಂದೆ ಕಾಪಾಡುವ ಹೊಣೆಯು ನಿನ್ನದು, ತಂದೆ ನಿನ್ನದು 

ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ।೨।
ಎತ್ತಿ ತಂದೆ ಎಲ್ಲಿಂದ ರಾಯ, ಮುತ್ತೆತ್ತ ರಾಯ
ಮುತ್ತೆತ್ತರಾಯ ।೨।

Song: Etthalo Mayavada
Album: Elli Hanumano Alli Ramanu