ಚಿತ್ರ: ಶ್ರಾವಣ ಬಂತು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕರು: ಡಾ. ರಾಜಕುಮಾರ್, ವಾಣಿ ಜಯರಾಂ
ಗಂ: ಮೂಡಣದ ಅರಮನೆಯ ಕದವು ತೆರೆಯುತಿರೆ
ಬಾಲ ರವಿ ನಸುನಗುತ ಇಣುಕಿ ನೋಡುತಿರೆ
ಆಕಾಶ ಕೆಂಪಾಗಿ, ಭುವಿಯೆಲ್ಲ ರಂಗಾಗಿ
ನಲಿಯುತ, ಕುಣಿಯುತ, ಬರುತಿರಲು ಉಷೆ, ಮರೆಯಾದಳು ನಿಶೆ
।। ಗಂ: ಬಾನಿನ ಅಂಚಿಂದ ಬಂದೆ ಬಳಿ ನಿಂದೆ
ಬೆಳಕನ್ನು ಚೆಲ್ಲುತ್ತ ಉದಯರಾಗ ಹಾಡುತಿರುವೆ ।।೨।।
ಗಂ: ಹೆಜ್ಜೆ ಇಡಲು ನಿನ್ನ ಗೆಜ್ಜೆ ನಗಲು, ನಾದ ತೇಲಿ ಮೊಗ್ಗು ಹೂವಾಗಿದೆ
ಹೆ: ಹೂವು ನಗಲು ಅದರ ಜೇನ ಒಡಲು, ಕಂಡು ದುಂಬಿ ಅಲ್ಲಿ ಹಾರಾಡಿದೆ
।। ಗಂ: ಬೆಳಕು ಮೂಡುತಿದೆ
ಹೆ: ಸೊಗಸು ಕಾಣುತಿದೆ ।।೨।।
ಗಂ: ಹೊಸದು ಜೀವ ತುಂಬುವಂತೆ
ಹೆ: ಬಾನಿನ ಅಂಚಿಂದ ಬಂದೆ ನಿನ್ನ ಕಂಡೆ
ಒಲವಿಂದ ಇಂಪಾಗಿ ಉದಯರಾಗ ಆಡುತಿರುವೆ
ಹೆ: ಎಲೆಯ ಮೇಲೆ ಹಿಮದ ಮಣಿಯ ಸಾಲು, ಬೆಳಕ ಕಂಡು ಹೊಳೆವ ಮುತ್ತಾಗಿದೆ
ಗಂ: ಮರದ ಮೇಲೆ ಕುಳಿತ ಗಿಳಿಯ ಸಾಲು, ಮುಗಿಲ ಕಡೆಗೆ ಚಿಮ್ಮಿ ಹಾರಾಡಿದೆ
।। ಹೆ: ಕಡಲ ಅಲೆ ಅಲೆಯು
ಗಂ: ಚಿಮ್ಮಿ ಕುಣಿಯುತಿರೆ ।।೨।।
ಹೆ: ಭುವಿಯ ಅಂದ ಕಾಣಲೆಂದು
ಗಂ: ಬಾನಿನ ಅಂಚಿಂದ ಬಂದೆ ಬಳಿ ನಿಂದೆ
ಬೆಳಕನ್ನು ಚೆಲ್ಲುತ್ತ ಉದಯರಾಗ ಹಾಡುತಿರುವೆ
ಬಾನಿನ ಅಂಚಿಂದ ಬಂದೇ.....
Song: Banina Anchinda Bande
Movie: Shravana Bantu

No comments:
Post a Comment