Sunday, October 9, 2016

ವಸಂತ ಕಾಲ ಬಂದಾಗ

ಚಿತ್ರ: ಗುರಿ 
ರಚನೆ: ಚಿ. ಉದಯಶಂಕರ್ 
ಸಂಗೀತ: ರಾಜನ್- ನಾಗೇಂದ್ರ 
ಗಾಯಕ: ಡಾ. ರಾಜಕುಮಾರ್ 

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಕೋಗಿಲೆ ಹಾಡಲೆ ಬೇಕು 
ಕಂಕಣ ಕೂಡಿ ಬಂದಾಗ ಮದುವೆ ಆಗಲೇ ಬೇಕು, ಮಂಗಳ ವಾದ್ಯ ಮೊಳಗಲೇ ಬೇಕು 
ಹೊಸ ಬಾಳ ಹೊಸಿಲಲ್ಲಿ, ನಸು ನಾಚಿ ನಿಂತಾಗ ನಿನ್ನಂದ ನಾ ನೋಡ ಬೇಕು 

ರೇಷ್ಮೆ ಸೀರೆ ಹುಟ್ಟು, ಹೊಸ ಹೂವ ಮುಡಿಯೊಲಿಟ್ಟು
ಮಧುಮಗಳಾಗಿ ಕುಳಿತಿರುವಾಗ ।೨।
ನೋಡುವದೇ ಭಾಗ್ಯ ನಿನ್ನನು 
ಮಂತ್ರ ಹೇಳುವಾಗ, ಮಾಂಗಲ್ಯ ಕಟ್ಟುವಾಗ 
ಕಳ್ಳಿಯ ಹಾಗೆ ಮಳ್ಳಿಯ ಹಾಗೆ ।೨।
ನಲ್ಲನ ನೀ ನೋಡೊ ನೋಟವ 
ಕಾಣುವಾಸೆ ತಾಳಲಾರೆ ನನ್ನ ಮುದ್ದು ಸೋದರಿ 

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಕೋಗಿಲೆ ಹಾಡಲೆ ಬೇಕು 
ಕಂಕಣ ಕೂಡಿ ಬಂದಾಗ ಮದುವೆ ಆಗಲೇ ಬೇಕು, ಮಂಗಳ ವಾದ್ಯ ಮೊಳಗಲೇ ಬೇಕು 

ಜೋಡಿ ಬಂದ ಮೇಲೆ ನಿನ್ನ ಬಾಳ ರೀತಿ ಬೇರೆ 
ಬದುಕಲಿ ಜಾಲಿ ವರುಷದಿ ಲಾಲಿ ।೨।
ಬೊಂಬೆಯ ಹಾಗೊಂದು ಕೈಯಲಿ 
ನಾಳೆ ನಿನ್ನ ಮಗನು ನನ್ನ ಮಾವ ಎನ್ನುವಾಗ 
ತಂಗಿಯೆ ನಿನಗೆ ಅಂದದ ಸೊಸೆಯ ।೨।
ಎಲ್ಲಿಂದ ನಾ ತಂದು ಕೊಡಲಿ 
ಓ.... ಲಕ್ಷ ಲಕ್ಷ ಕೇಳಿದಾಗ ಎಲ್ಲಿ ಓಡಿ ಹೋಗಲಿ 

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಕೋಗಿಲೆ ಹಾಡಲೆ ಬೇಕು 
ಕಂಕಣ ಕೂಡಿ ಬಂದಾಗ ಮದುವೆ ಆಗಲೇ ಬೇಕು, ಮಂಗಳ ವಾದ್ಯ ಮೊಳಗಲೇ ಬೇಕು 
ಹೊಸ ಬಾಳ ಹೊಸಿಲಲ್ಲಿ, ನಸು ನಾಚಿ ನಿಂತಾಗ ನಿನ್ನಂದ ನಾ ನೋಡ ಬೇಕು 

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಕೋಗಿಲೆ ಹಾಡಲೆ ಬೇಕು 
ಕಂಕಣ ಕೂಡಿ ಬಂದಾಗ ಮದುವೆ ಆಗಲೇ ಬೇಕು, ಮಂಗಳ ವಾದ್ಯ ಮೊಳಗಲೇ ಬೇಕು 

Song: Vasanta Kaala Bandaga
Movie: Guri

No comments:

Post a Comment