Thursday, October 27, 2016

ಸೋಲೆ ಗೆಲುವೆಂದು ಬಾಳಲಿ

ಚಿತ್ರ: ಒಡಹುಟ್ಟಿದವರು
ರಚನೆ: ಗೀತಪ್ರಿಯ
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ. ರಾಜಕುಮಾರ್

।।  ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ 
     ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ 
     ಈ ಸುಖ ದುಖ್ಖವು, ಅಳುವೂ ನಗುವು, ಎಲ್ಲ ಆ ದೇವನ ಕೊಡುಗೆ ।।೨।।
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ 
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

ದೇಹವ ಸಹಿಸುತ ಪರಿಮಳ ಕೊಡುವ, ಗಂಧವು ನೋವಿಗೆ ನರಳುವುದೇ 
ತನ್ನನೆ ದಹಿಸುತ ಬೆಳಕನು ತರುವ, ದೀಪವು ಅಳಲನು ಹೇಳುವುದೇ 
ನಿನ್ನಯ ಸಹನೆಗೆ ಹೋಲಿಕೆ ಧರೆಯು
ಕರುಣೆಯು ನಿನ್ನಲಿ ಮೈದುಂಬಿರಲು 
ಈ ಜನ್ಮ ಸಾರ್ಥಕವೂ 

ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ 
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

ಗಾಳಿಯ ಭೀಕರ ಧಾಳಿಗೆ ಪರ್ವತ, ಸ್ಥೈರ್ಯವನೆಂದಿಗು ಕಳೆಯುವುದೇ 
ಸುಖ ಸಂಸಾರಕೆ ದುಡಿಯುವ ಹೆಣ್ಣು, ಸ್ವಾರ್ಥಕೆ ಮನಸನು ನೀಡುವಳೇ 
ನಿನ್ನಲಿ ಮಾತಿಗೆ ಕುಂದದೆ ಇರುವ 
ಮಮತೆಯ ಮೂರ್ತಿಯೆ ನೀನಾಗಿರಲು 
ಜೀವನ ಪಾವನವೂ 

ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ 
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಖ್ಖವು, ಅಳುವೂ ನಗುವು, ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ 
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

Song: Sole Geluvendu Balali
Movie: Odahuttidavaru

No comments:

Post a Comment