Thursday, October 27, 2016

ನಿನ್ನಂತ ಅಪ್ಪ ಇಲ್ಲ

ಚಿತ್ರ: ದೇವತಾ ಮನುಷ್ಯ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್, ಬಿ. ಆರ್. ಛಾಯ  

ಹೆ:    ನಿನ್ನಂತ ಅಪ್ಪ ಇಲ್ಲ, ಒಂದೊಂದು ಮಾತು ಬೆಲ್ಲ ।೨।
        ನೀನೆ ನನ್ನ ಜೀವ, ನೀನೆ ನನ್ನ ಪ್ರಾಣ 
        ಯಾವ ದೇವ ತಂದ ವರವೊ ಇನ್ನು ನಾನು ಅರಿಯೆನು 
ಗಂ:  ನಿನ್ನಂತ ಮಗಳು ಇಲ್ಲ, ಬಾಳಲ್ಲಿ ನೀನೆ ಎಲ್ಲ ।೨।
        ನಿನ್ನ ಕಂಡ ಮೇಲೆ, ಬೆಳಕ ಕಂಡೆ ಬಾಲೆ 
        ಯಾವ ದೇವ ತಂದ ವರವೊ ಇನ್ನು ನಾನು ಅರಿಯೆನು 

ಹೆ:    ನೀ ಹೀಗೆ ನೆಡೆಯಲು, ನಡು ಹೀಗೆ ಕುಣಿಯಲು
        ಹದಿನೆಂಟು ವಯಸ್ಸಿನ, ಹುಡುಗನ ಆಗಿದೆ
ಗಂ:  ನೀ ಹೀಗೆ ನಗುತಿರೆ, ಜೊತೆಯಾಗಿ ಬರುತಿರೆ
        ಆನಂದ ತರುತಿರೆ, ಹುಡುಗನೇ ಎಂದಿಗು
ಜೊ: ರಂಪಂ ರಂಪಂಪ ರಂಪ ಪಂಪ ರಂಪ ಪಂಪ ।೨।
ಹೆ:    ಮಾತಿನ ಮೋಡಿಗೆ ನಿನ್ನಾಣೆ ನಾನು ಮೆಚ್ಚಿದೇ 

ಗಂ:  ನಿನ್ನಂತ ಮಗಳು ಇಲ್ಲ
ಹೆ:    ನಿನ್ನಂತ ಅಪ್ಪ ಇಲ್ಲ

ಗಂ:  ಸಂತೋಷವೆಂದರೆ, ಉಲ್ಲಾಸವೆಂದರೆ 
        ಸಂಗೀತವೆಂದರೆ, ನಿನ್ನ ಜೊತೆ ನೆಡೆದರೆ 
ಹೆ:    ಮುದ್ದಾದ ಮಾತನು, ಹಿತವಾದ ರಾಗದಿ
        ದಿನವೆಲ್ಲ ಹಾಡಲು, ಹೀಗೇನೆ ಅಂತಿಯೋ
ಜೊ: ರಂಪಂ ರಂಪಂಪ ರಂಪ ಪಂಪ ರಂಪ ಪಂಪ ।೨।
ಗಂ:  ನನ್ನ ಈ ಅರಗಿಣಿ ಮಾತಾಡೆ ನೋಡಿ ಕಲಿತೆನು

ಹೆ:    ನಿನ್ನಂತ ಅಪ್ಪ ಇಲ್ಲ, ಒಂದೊಂದು ಮಾತು ಬೆಲ್ಲ
ಗಂ:  ನಿನ್ನಂತ ಮಗಳು ಇಲ್ಲ, ಬಾಳಲ್ಲಿ ನೀನೆ ಎಲ್ಲ
ಹೆ:    ನೀನೆ ನನ್ನ ಜೀವ
ಗಂ:  ನೀನೆ ನನ್ನ ಪ್ರಾಣ
ಜೊ: ಯಾವ ದೇವ ತಂದ ವರವೊ ಇನ್ನು ನಾನು ಅರಿಯೆನು 

।।  ಹೆ:    ನಿನ್ನಂತ ಅಪ್ಪ ಇಲ್ಲ
     ಗಂ:  ನಿನ್ನಂತ ಮಗಳು ಇಲ್ಲ ।।೪।।

Song: Ninnanta Appa Illa
Movie: Devatha Manushya

No comments:

Post a Comment