Friday, September 16, 2016

ನಿನದೇ ನೆನಪು ದಿನವೂ ಮನದಲ್ಲಿ

ಚಿತ್ರ: ರಾಜ ನನ್ನ ರಾಜ
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ/ನಟ: ಡಾ. ರಾಜಕುಮಾರ್

।। ನಿನದೇ ನೆನಪು ದಿನವೂ ಮನದಲ್ಲಿ
     ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ ।।೨।।

ತಂಗಾಳಿಯಲ್ಲಿ ಬೆಂದೆ, ಏಕಾಂತದಲ್ಲಿ ನಾನೊಂದೆ ।೨।
ಹಗಲಲಿ ತಿರುಗಿ ಬಳಲಿದೆ, ಇರುಳಲಿ ಬಯಸಿ ಕೊರಗಿದೆ
ದಿನವೂ ನಿನ್ನನಾ ಕಾಣದೆ

ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ

ಕಡಲಿಂದ ಬೇರೆಯಾಗಿ ತೆಲಾಡೊ ಮೋಡವಾಗಿ ।೨।
ಕರಗುತ ಧರೆಗೆ ಇಳಿವುದು, ಹರಿಯುತ ಕಡಲ ಬೆರೆವುದು
ನಮ್ಮೀ ಬಾಳಿನ ಬಗೆಯಿದು

ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ

ಚಂದಿರನ ಕಾಣದಿರುಳು ನೀನಿರದೆ ನನ್ನ ಬಾಳು ।೨।
ಮನಸಲಿ ಏನೋ ತಳಮಳ, ಹೃದಯದಿ ತುಂಬ ಕಳವಳ
ದಿನವೂ ನಿನ್ನದೇ ಹಂಬಲ

ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ

Song:Ninade Nenapu
Movie: Raja Nanna Raja
Singer/Actor: Dr. Rajkumar

5 comments:

  1. ಚಂದಿರನ ಕಾಣದಿರುಳು
    ನೀನಿರದೆ ನನ್ನ ಬಾಳು
    ಮನಸಲಿ ಏನೋ ತಳಮಳ
    ಹೃದಯದಿ ತುಂಬ ಕಳವಳ
    ದಿನವೂ ನಿನ್ನದೇ ಹಂಬಲ ||3||
    ನಿನದೇ ನೆನಪು ದಿನವೂ ಮನದಲ್ಲಿ ನೋಡುವ ಆಸೆಯು ತುಂಬಿದೇ ನನ್ನಲೀ ನನ್ನಲೀ

    ReplyDelete
    Replies
    1. ನಾರಾಯಣ್ ,
      ಯೂಟ್ಯೂಬ್ ನಲ್ಲಿ ಸಿಕ್ಕ ಈ ಹಾಡಿನ ಚಿತ್ರದಿಂದ ಬರೆದದ್ದು
      https://www.youtube.com/watch?v=GwpMCNMUYb4

      Delete
    2. ನನ್ ರಿಂಗ್ ಟೋನ್ ಇದೆ ಹಾಡು

      Delete
  2. ನಾಲ್ಕನೆಯ ಚಾರಣ:
    "ಸೊಡರಲ್ಲಿ ಜ್ಯೋತಿಯಂತೆ ..."

    ದಯೆಯಿಟ್ಟು ಅದನ್ನೂ ಸೇರಿಸಿ ... _/|\_

    ReplyDelete