Thursday, September 15, 2016

ಆಗದು ಎಂದು ಕೈಕಟ್ಟಿ ಕುಳಿತರೆ

ಚಿತ್ರ: ಬಂಗಾರದ  ಮನುಷ್ಯ
ರಚನೆ: ಆರ್. ಏನ್. ಜಯಗೋಪಾಲ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ: ಪಿ. ಬಿ. ಶ್ರೀನಿವಾಸ್
ನಟ: ಡಾ. ರಾಜಕುಮಾರ್ 

ಆಗದು ಎಂದು, ಕೈಲಾಗದು ಎಂದು ।೨।
ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ 
ಮನಸ್ಸೊಂದ್ದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು
ಕೆಚ್ಚೆದೆ ಇರಬೇಕೆಂದೆಂದು

ಆಗದು ಎಂದು, ಕೈಲಾಗದು ಎಂದು 
ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ

ಕೆತ್ತಲಾಗದು ಕಗ್ಗಲ್ಲೆಂದು ಎದೆ ಗುಂದಿದ್ದರೆ ಶಿಲ್ಪಿ
।। ಕೆತ್ತಲಾಗದು ಕಗ್ಗಲ್ಲೆಂದು ಎದೆ ಗುಂದಿದ್ದರೆ ಶಿಲ್ಪಿ
    ಆಗುತಿತ್ತೇ ಕಲೆಗಳ ಬೀಡು
    ಗೊಮ್ಮಟೇಶನ ನೆಲೆ ನಾಡು
    ಬೇಲೂರು ಹಳೇಬೀಡು ।೨।  ।।೨।।

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ ।೨।

।। ಕಾವೇರಿಯನು ಹರಿಯಲು ಬಿಟ್ಟು
    ವಿಶ್ವೇಶ್ವರಯ್ಯ ಶ್ರಮ ಬಡದಿದ್ದರೆ
    ಕನ್ನಂಬಾಡಿಯ ಕಟ್ಟದಿದ್ದರೆ  ।।೨।।
ಬಂಗಾರ ಬೆಳೆವ ಹೊನ್ನಾಡು ।೨।
ಆಗುತ್ತಿತ್ತೆ ಈ ನಾಡು, ಕನ್ನಡ ಸಿರಿನಾಡು
ನಮ್ಮ ಕನ್ನಡ ಸಿರಿನಾಡು

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ।೨।
ಸಾಗದು ಕೆಲಸವೂ ಮುಂದೆ

।। ಕೈ ಕೆಸರಾದರೆ ಬಾಯಿ ಮೊಸರೆಂಬ
    ಹಿರಿಯರ ಅನುಭವ ಸತ್ಯ
    ಇದ ನೆನಪಿಡಬೇಕು ನಿತ್ಯ ।।೨।।
ದುಡಿಮೆಯ ನಂಬಿ ಬದುಕು ।೨।
ಅದರಲಿ ದೇವರ ಹುಡುಕು
ಬಾಳಲಿ ಬರುವುದು ಬೆಳಕು
ನಮ್ಮ ಬಾಳಲಿ ಬರುವುದು ಬೆಳಕು

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ।೨।
ಸಾಗದು ಕೆಲಸವೂ ಮುಂದೆ
ಮನಸ್ಸೊಂದ್ದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು
ಕೆಚ್ಚೆದೆ ಇರಬೇಕೆಂದೆಂದು

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ ।೨।

Song: Aagadu Endu Kaikatti Kulithare Movie: Bangarada Manushya Actor: Dr. Rajkumar

No comments:

Post a Comment