Friday, September 16, 2016

ಬಾಳುವಂತ ಹೂವೆ ಬಾಡುವಾಸೆ ಏಕೆ

ಚಿತ್ರ: ಆಕಸ್ಮಿಕ
ರಚನೆ/ಸಂಗೀತ: ಹಂಸಲೇಖ
ಗಾಯಕ/ನಟ: ಡಾ. ರಾಜಕುಮಾರ್

ಬಾಳುವಂತ ಹೂವೆ ಬಾಡುವಾಸೆ ಏಕೆ ।೨।
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ 
ಕಾವಲು ದಾರಿಯಲ್ಲಿ ಬಾಳು ಸಾಧ್ಯವೇ 
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ 

ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ 

ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು 
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು 
ಬಾಳು ಒಂದು ಸಂತೆ, ಸಂತೆ ತುಂಬ ಚಿಂತೆ
ಮಧ್ಯ ಮದಗಳಿಂದ ಚಿಂತೆ ಬೆಳೆವುದಂತೆ
ಅಂಕೆ ಇರದ ಮನಸನು ದಂಡಿಸುವುದು ನ್ಯಾಯ
ಮೂಕ ಮುಗ್ದ ದೇಹವ ಹಿಂಸಿಸುವುದು ಹೇಯ
ಸಣ್ಣ ತಿರುಪು ಸಾಲದೇ, ತುಂಬು ದೋಣಿ ದಡ ಸೇರಲು
ಸಣ್ಣ ಅಳುಕು ಸಾಲದೇ, ತುಂಬು ಬದುಕು ಬರಡಾಗಲು

ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ 

ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವ ರಾಶಿಗಿಲ್ಲಿ ಮಾನವನಿಗೆ ಆದ್ಯತೆ
ನಾವೆ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ
ಇಲ್ಲಿ ಈಸ ಬೇಕು ಇದ್ದು ಜಯಿಸಬೇಕು
ನಾಗಿರೀಕರಾದ ಮೇಲೆ ಸುಗುಣರಾಗ ಬೇಕು
ನಿನ್ನ ಹಳದಿಗಣ್ಣಲಿ ಜನರನೇಕೆ ನೀ ನೋಡುವೆ
ಮನದ ಕೊಂಕು ಕಾಣದೆ ಜಗವನೇಕೆ ನೀ ದೂರುವೆ


ಬಾಳುವಂತ ಹೂವೆ ಬಾಡುವಾಸೆ ಏಕೆ

ಹಾಡುವಂತ ಕೋಗಿಲೆ ಅಳುವ ಆಸೆ ಏಕೆ 
ಕಾವಲು ದಾರಿಯಲ್ಲಿ ಬಾಳು ಸಾಧ್ಯವೇ 

ಅವಳಿ ದೋಣಿ ಮೇಲೆ ಯಾನ ಯೋಗ್ಯವೇ 

ಬಾಳುವಂತ ಹೂವೆ ಬಾಡುವಾಸೆ ಏಕೆ 
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ 

Song: Baaluvanta Hoove 
Movie: Aakasmika
Singer/Actor: Dr. Rajkumar

No comments:

Post a Comment