Tuesday, September 13, 2016

ಆಕಾಶವೆ ಬೀಳಲಿ ಮೇಲೆ

ಚಿತ್ರ                 : ನ್ಯಾಯವೇ ದೇವರು
ಗಾಯಕರು         : ಪಿ.ಬಿ. ಶ್ರೀನಿವಾಸ್
ರಚನೆ               : ಚಿ.ಉದಯಶಂಕರ್
ಸಂಗೀತ            : ರಾಜನ್ ನಾಗೇಂದ್ರ
ನಟರು              : ಡಾ ರಾಜಕುಮಾರ್, ಬಿ ಸರೋಜಾದೇವಿ

ಆಕಾಶವೆ ಬೀಳಲಿ ಮೇಲೆ, ನಾನೆಂದು ನಿನ್ನವನು
ಭೂಮಿಯೆ ಬಾಯಿ ಬಿರಿಯಲಿ ಇಂದು, ನಾನಿನ್ನ ಕೈ ಬಿಡೆನು
ನೀನಿರುವುದೆ ನನಗಾಗಿ, ಜೀವ ನಿನಗಾಗಿ

ಎದರಿಕೆಯಾ ನೋಟವೇಕೆ, ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ, ಜೊತೆಗೂಡಿ ನಾ ಬರುವೆ
ಕಲ್ಲಿರಲಿ ಮುಳ್ಳೇಯಿರೊಲಿ, ನಾ ಮೊದಲು ಮುನ್ನೆಡೆವೆ
ನೀ ಇಡುವಾ ಇಡು ನಡೆಯಲ್ಲಿ, ಒಲವಿನ ಹೂವಾಸುವೆ
ಮಾತಿಗೆ ಮನವೇ ಸಾಕ್ಷೀ, ಭಾಷೆಗೆ ದೇವರೆ ಸಾಕ್ಷಿ
ಇನ್ನಾದರು ನನ್ನಾ ನಂಬಿ ನಗೆಯಾ ಚೆಲ್ಲು ಚೆಲುವೆ

ಆಕಾಶವೆ ಬೀಳಲಿ ಮೇಲೆ, ನಾನೆಂದು ನಿನ್ನವನು

ಹಸೆಮಣೆಯೇ ನಮಗೆ ಇಂದು, ನಾವು ನಿಂತ ತಾಣವು
ತೂಗಡುವ ಹಸಿರೆಲೆಯೇ, ಶುಭ ಕೋರುವ ತೋರಣವು
ಹಕ್ಕಿಗಳ ಚಿಳಿಪಿಳಿ ಗಾನ, ಮಂಗಳಕರ ನಾದವು
ನದಿಯ ಕಲರವವೇ ಮಂತ್ರಗಳಾ ಘೊಷವು
ಸಪ್ತಪದಿ ನಡೆಯಾಯ್ತು, ಸಂಜೆ ರಂಗು ಆರತಿಯಾಯ್ತು
ಇನ್ನೀಗ ಎರಡು ಜೀವ ಬೆರೆತು ಸ್ವರ್ಗವಾಯ್ತು

ಆಕಾಶವೆ ಬೀಳಲಿ ಮೇಲೆ, ನಾನೆಂದು ನಿನ್ನವನು
ಭೂಮಿಯೆ ಬಾಯಿ ಬಿರಿಯಲಿ ಇಂದು, ನಾನಿನ್ನ ಕೈ ಬಿಡೆನು

ನೀನಿರುವುದೆ ನನಗಾಗಿ, ಜೀವ ನಿನಗಾಗಿ
Movie: Nyayave Devaru Song: Aakashave Beelali Mele Actors: Dr. Rajkumar, Sarojadevi Singer: P B Srinivas

No comments:

Post a Comment