Sunday, September 25, 2016

ನೀ ಬಂದು ನಿಂತಾಗ

ಚಿತ್ರ: ಕಸ್ತೂರಿ ನಿವಾಸ
ರಚನೆ: ಆರ್. ಏನ್. ಜಯಗೋಪಾಲ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಪಿ. ಬಿ. ಶ್ರೀನಿವಾಸ್, ಎಸ್.ಜಾನಕಿ  

ಗಂ:  ।। ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ
         ನಕ್ಕು ನೀ ಸೆಳೆದಾಗ ಸೋತೇ ನಾನಾಗ  ।।೨।।

ಹೆ:    ವಾಸಂತಿ ನಲಿದಾಗ ।೨।
         ಹಸಿರುಟ್ಟು ನಗುವಾಗ 
         ವನದೇವಿ ಅಡಿ ಮೇಲೆ ಅಡಿ ಇಟ್ಟು ಬರುವಾಗ 
         ಮುಗಿಲೊಂದು ಕರೆದಾಗ, ನವಿಲೊಂದು ಬೆರೆದಾಗ 
         ಒಡಲಲ್ಲಿ ಹೊಸದೊಂದು ನವಜೀವ ಬಂದಾಗ 
         ಕೈ ಕೈ ಸೋತಾಗ ಮನವೆರೆಡು ಬೆರೆತಾಗ 
         ನುಡಿದಂತ ಹೊಸ ರಾಗ ಅದುವೇ ಅನುರಾಗ
         ಬಾರಾ.. 

         ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ
         ನಕ್ಕು ನೀ ಸೆಳೆದಾಗ ಸೋತೇ ನಾನಾಗ

ಗಂ:  ಜೇನಂತ ಮಾತಲ್ಲಿ ।೨।
         ಕುಡಿಗಣ್ಣ ಸಂಚಲ್ಲಿ 
         ನಗುವೆಂಬ ಹೂಚೆಲ್ಲಿ ನಿಂತೆ ನೀ ಮನದಲ್ಲಿ 
         ಎದುರಾದೆ ಹಗಲಲ್ಲಿ ಮರೆಯಾದೆ ಇರುಳಲ್ಲಿ 
         ನೀ ತಂದ ನೋವಿಗೆ ಕೊನೆಯಲ್ಲಿ ಮೊದಲೆಲ್ಲಿ 
         ಬಲು ದೂರ ನೀ ಹೋಗೆ ನಾ ತಾಳೆ ಈ ಬೇಗೆ 
         ಬಾ ಬಾರೆ ಚೆಲುವೆ ಬಾರೆ ಒಲವೆ
         ಬಾರಾ... 

ಹೆ:     ಬಾಳೆಂಬ ಪಥದಲ್ಲಿ ।೨।
ಗಂ:   ಒಲವೆಂಬ ರಥದಲ್ಲಿ 
ಹೆ:     ಕನಸೆಲ್ಲ ನನಸಾಗಿ 
ಗಂ:   ನನಸೆಲ್ಲ ಸೊಗಸಾಗಿ 
ಹೆ:     ಯುಗ ಒಂದು ದಿನವಾಗಿ 
ಗಂ:   ದಿನವೊಂದು ಕ್ಷಣವಾಗಿ 
ಹೆ:     ನಮ್ಮಾಸೆ ಹೂವಾಗಿ 
ಗಂ:   ಇಂಪಾದ ಹಾಡಾಗಿ 
ಜೊ:  ಕಹಿಯಲ್ಲಿ ಸಿಹಿಯಲ್ಲಿ ಮಳೆಯಲ್ಲಿ ಬಿಸಿಲಲ್ಲಿ 
          ಎಂದೆಂದು ಜೊತೆಯಾಗಿ ನೆಡೆವ ಒಂದಾಗಿ 
          ಬಾರಾ.... 

        ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ
        ನಕ್ಕು ನೀ ಸೆಳೆದಾಗ ಸೋತೇ ನಾನಾಗ

Song: Nee Bandu Nintaaga
Movie: Kasturi Nivasa

No comments:

Post a Comment