Saturday, September 24, 2016

ಆಡೋಣ ನೀನು ನಾನು

ಚಿತ್ರ: ಕಸ್ತೂರಿ ನಿವಾಸ
ರಚನೆ: ವಿಜಯ ನರಸಿಂಹ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಪಿ. ಬಿ. ಶ್ರೀನಿವಾಸ್, ಎಸ್.ಜಾನಕಿ  

।। ಆಡೋಣ ನೀನು ನಾನು, ಎನ್ನಾ ಆಸೆ ತಾರೆ ನೀನು 
ನೋಡಿ ನಿನ್ನ ಈ ಅಂದ ಚಂದ, ಚಂದಾಮಾಮ ನಾಚಿ ನಿಂದ ।।೨।।
ಆ ಚಂದಾಮಾಮ ನಾಚಿ ನಿಂದ 

ಕಣ್ಣಾ ಗೊಂಬೆ ನೀನಾದೆ, ನಿನ್ನಾ ಕೈಗೊಂಬೆ ನಾನಾದೆ ।೨।
ನಿನ್ನಂದ ಮುದ್ದಾಡಲೆಂದೇ, ಬಂದಿದೆ ಕಣ್ಣಲ್ಲಿ ನಿದ್ದೆ
ಎನ್ನೆದೆ ನೀ ಮೀಟಿ ಬಂದೆ, ಬಾಳಿನ ಬಂಧನ ನೀ ತಂದೆ 

ಆಡೋಣ ನೀನು ನಾನು, ಎನ್ನಾ ಆಸೆ ತಾರೆ ನೀನು 
ನೋಡಿ ನಿನ್ನ ಈ ಅಂದ ಚಂದ,  ಚಂದಾಮಾಮ ನಾಚಿ ನಿಂದ

।। ಇಲ್ಲೀ ಚೆಲುವಾಗಿ ನಗುವೆ, ಅಲ್ಲಿ ಕರುಳನ್ನೆ ಮಿಡಿವೆ
ಹಾಗು ಹೀಗೂ ಸೆಳೆವೆ, ನಾನಿನ್ನ ಕೈಗೊಂಬೆ ಅಲ್ಲವೆ  ।।೨।।
ನೀ ಎನ್ನ ಉಸಿರಾದೆ ಮಗುವೆ, ದೇವರ ನಿನ್ನಲ್ಲಿ ಕಾಣುವೆ

ಆಡೋಣ ನೀನು ನಾನು, ಎನ್ನಾ ಆಸೆ ತಾರೆ ನೀನು 
ನೋಡಿ ನಿನ್ನ ಈ ಅಂದ ಚಂದ,  ಚಂದಾಮಾಮ ನಾಚಿ ನಿಂದ

Song: Aadonaa Neenu Naanu
Movie: Kasturi Nivasa

No comments:

Post a Comment