Monday, September 19, 2016

ಮಾನವ ದೇಹವು ಮೂಳೆ ಮಾಂಸದ ತಳಿಕೆ

ಚಿತ್ರ: ಭಕ್ತ ಕುಂಬಾರ  
ರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ: ಪಿ. ಬಿ. ಶ್ರೀನಿವಾಸ್

ಪರಿತತ್ವವನು ಬಲ್ಲ ಪಂಡಿತನು ನಾನಲ್ಲ
ಹರಿನಾಮ ಒಂದುಳಿದು ನನಗೇನು ತಿಳಿದಿಲ್ಲ, ನನಗೇನು ತಿಳಿದಿಲ್ಲ

ಮಾನವ, ದೇಹವು, ಮೂಳೆ ಮಾಂಸದ ತಡಿಕೆ
ಮಾನವ ಮೂಳೆ ಮಾಂಸದ ತಡಿಕೆ
ಇದರ ಮೇಲಿದೆ ತೊದಲಿನ ಓದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ

ಮಾನವ ಮೂಳೆ ಮಾಂಸದ ತಡಿಕೆ

ನವಮಾಸಗಳು ಹೊಳಸಲಿ ಕಳೆದು ಅ ಅ ಆ ..
ನವ ರಂದಗಳ ತಳೆದು ಬೆಳೆದು
ಬಂದಿದೆ ಭುವಿಗೆ ಈ ನರ ಬೊಂಬೆ
ನಂಬಲು ಏನಿದೆ ಸೌಭಾಗ್ಯವೆಂಬೆ

ಮಾನವ ಮೂಳೆ ಮಾಂಸದ ತಡಿಕೆ, ದೇಹವು, ಮೂಳೆ ಮಾಂಸದ ತಡಿಕೆ

ಉಸಿರಾಡುವ ತನಕ ನಾನು ನನದೆಂಬ ಮಮಕಾರ
ನಿಂತ ಮರುಗಳಿಗೆ ಮಸಣದೆ ಸಂಸ್ಕಾರ
ಮಣ್ಣಲಿ ಬೆರೆತು ಮೆಲ್ಲಗೆ ಕೊಳೆತು
ಮುಗಿಯುವ ದೇಹಕೆ ವ್ಯಾಮೋಹವೇಕೆ

ಮಾನವ ಮೂಳೆ ಮಾಂಸದ ತಡಿಕೆ, ದೇಹವು, ಮೂಳೆ ಮಾಂಸದ ತಡಿಕೆ

ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ
ಬಂದು ಹೋಗುವ ನಡುವೆ, ಬರೀ ಕತ್ತಲೆ
ಭಕ್ತಿಯ ಬೆಳಕು, ಬಾಳಿಗೆ ಬೇಕು
ಮುಕ್ತಿಗೆ ವಿಠಲನ ಕೊಂಡಾದ ಬೇಕು

ಮಾನವ ಮೂಳೆ ಮಾಂಸದ ತಡಿಕೆ
ದೇಹವು, ಮೂಳೆ ಮಾಂಸದ ತಡಿಕೆ
ಇದರ ಮೇಲಿದೆ ತೊದಲಿನ ಓದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ

ಮಾನವ ಮೂಳೆ ಮಾಂಸದ ತಡಿಕೆ
ವಿಠಲ ವಿಠಲ ಪಾಂಡುರಂಗ ವಿಠಲ ।೪।

Song: Manava Dehavu Moole Mamsada Thalike
Movie: Bhakta Kumbara

1 comment: