Sunday, September 18, 2016

ನಿನ್ನ ಕಣ್ಣ ನೋಟದಲಿ

ಚಿತ್ರ: ಬಬ್ರುವಾಹನ
ರಚನೆ:ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕ: ಪಿ. ಬಿ. ಶ್ರೀನಿವಾಸ್ 

ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು ।೨।
ನಿನ್ನ ತುಟಿಯ ನಗುವಿನಲ್ಲಿ ನನ್ನೆ ಮರೆತುಹೋದೆನು 
ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು 

ನಿನ್ನ ನಡುವ ಕಂಡುತಾನೆ ಬಳ್ಳಿ ಬಳುಕಿತು ।೨।
ನಿನ್ನ ನಡೆಯ ಕಂಡ ಹಂಸೆ ನಾಚಿ ಓಡಿತು ।೨।
ನಿನ್ನ ನಾಟ್ಯ ಕಂಡ ನವಿಲು ಕುಣಿಯದಾಯಿತು 
ಚೆಲುವಿನರಸಿ ನನ್ನ ಮನವು ಇಂದು ನಿನ್ನದಾಯಿತು  

ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು 

ಸೋಲನೆಂದು ಕಾಣದಂತ ವೀರ ಪಾರ್ಥನು ।೨।
ನಿನ್ನ ಕಣ್ಣ ಬಾಣದಿಂದ ಸೋತು ಹೋದನು ।೨।
ಚೆಲುವೆ ನಿನ್ನ ಸ್ನೇಹದಲ್ಲಿ ಕರಗಿಹೋದೆನು 
ತೋಳಿನಲ್ಲಿ ಬಳಸಿದಾಗ ನಾನೇ ನೀನಾದೆನು 

ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು 
ನಿನ್ನ ತುಟಿಯ ನಗುವಿನಲ್ಲಿ ನನ್ನೆ ಮರೆತುಹೋದೆನು 
ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು 

Song: Ninna Kanna Notadalli
Movie: Babruvahana 

No comments:

Post a Comment