Saturday, September 24, 2016

ಕೃಷ್ಣಾ ಮುರಾರಿ

ಚಿತ್ರ: ದಾರಿ ತಪ್ಪಿದ ಮಗ
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ: ಡಾ. ರಾಜಕುಮಾರ್

ಕೃಷ್ಣಾ ಮುರಾರೀ ಯಮುನಾ ತೀರ ವಿಹಾರೀ 
ಗೋಪಿ ಮಾನಸ ಹಾರಿ, ಶೂರೀ, ಶೂರೀ 
ಬೊಲೊ ಶ್ರೀ ಕೃಷ್ಣ ಪರಮಾತ್ಮಕಿ ಜೈ 

ನಾರಿಯ ಸೀರೆ ಕದ್ದ, ರಾಧೆಯ ಮನವ ಗೆದ್ದ 
ಕಳ್ಳರ ಕಳ್ಳ ಕೃಷ್ಣನೂ ಬಂದ, ಮೋಹದ ಮೋಡಿ ಹಾಕಿದ 
ಕೃಷ್ಣಾ ಮುರಾರೀ

ಮಗುವಾಗಿರುವಾಗ ಬೆಣ್ಣೆಯ ಕದ್ದ, ಕದ್ದ
ಮಣಿಯೊಡನೆ ರಮಣಿಭಾಮೆಯಾ ಗೆದ್ದ, ಗೆದ್ದ 
ಮದುವೆ ಮನೆಗೆ ನುಗ್ಗಿ, ಏನ್ ಮಾಡ್ದ ಗೊತ್ತೇ, ರುಕ್ಮಿಣಿಯ ಕದ್ದ 
ನರಕಾಸುರನ ಕೊಂದು, ಹದಿನಾರು ಸಾವಿರ ನಾರಿಯರ ಗೆದ್ದ, ಗೆದ್ದ 
ಕದ್ದ ಗೆದ್ದ ಗೆದ್ದ ಕದ್ದ 

ನಾರಿಯ ಸೀರೆ ಕದ್ದ, ರಾಧೆಯ ಮನವ ಗೆದ್ದ 
ಕಳ್ಳರ ಕಳ್ಳ ಕೃಷ್ಣನೂ ಬಂದ, ಮೋಹದ ಮೋಡಿ ಹಾಕಿದ 
ಕೃಷ್ಣಾ ಮುರಾರೀ

ಯಮುನಾ ತೀರದಲಿ ತಣ್ಣನೆ ಗಾಳಿಯಲಿ ।೨।
ರಾಧೆ ಕಾದಿರಲು ಮೆಲ್ಲನೆ 
ಯಮುನಾ ತೀರದಲಿ ತಣ್ಣನೆ ಗಾಳಿಯಲಿ
ರಾಧೆ ಕಾದಿರಲು ಮೆಲ್ಲನೆ
ಕೊಳಲನೂದುತಲಿ ಮನವ ಕೆಣಕುತಲಿ ।೨।
ಕಂಡೂ ಕಾಣಿಸದೆ ಮೋಹನ, ಕಾಡಿ ಓಡಿದನು 
ಬೊಲೊ ಶ್ರೀ ಕೃಷ್ಣ ಪರಮಾತ್ಮಕಿ ಜೈ 

ನಾರಿಯ ಸೀರೆ ಕದ್ದ, ರಾಧೆಯ ಮನವ ಗೆದ್ದ 
ಕಳ್ಳರ ಕಳ್ಳ ಕೃಷ್ಣನೂ ಬಂದ, ಮೋಹದ ಮೋಡಿ ಹಾಕಿದ

ಕೃಷ್ಣ ಎಲ್ಲಿರುವೆ ಏಕೆ ಕಾಡಿರುವೆ, ವಿರಹದಿ ನೊಂದಿರುವೆ ಕಾಣದೆ 
ರಾಧಾ ಮೋಹನನೆ ಬಾರೊ ಮಾಧವನೆ ।೨।
ಎಂದು ಕೂಗಿರಲು ಬಂದು, ತನುವ ಬಳಸಿ ನಿಂದನು 

ನಾರಿಯ, ನಾರಿಯ ಸೀರೆ ಕದ್ದ, ರಾಧೆಯ ಮನವ ಗೆದ್ದ 
ಕಳ್ಳರ ಕಳ್ಳ ಕೃಷ್ಣನೂ ಬಂದ, ಮೋಹದ ಮೋಡಿ ಹಾಕಿದ

ಕೃಷ್ಣ ಎನ್ನಿ, ರಾಮ ಎನ್ನಿ ।೨।
ಮುಕುಂದ ಎನ್ನಿ, ಗೋವಿಂದ ಎನ್ನಿ 
ರಾಧೇಕೃಷ್ಣ ಗೋಪಿಕೃಷ್ಣ ।೨।
ರಾಧೇಕೃಷ್ಣ ಜೈ ಜೈ ಕೃಷ್ಣ ।೫।

ಕೃಷ್ಣಾ ಮುರಾರೀ..
ಬೊಲೊ ಶ್ರೀ ಕೃಷ್ಣ ಪರಮಾತ್ಮಕಿ ಜೈ 

Song: Krishna Murari
Movie: Daari Tappida Maga

No comments:

Post a Comment