Friday, September 23, 2016

ನಗುತ ನಗುತ ಬಾಳು

ಚಿತ್ರ: ಪರಶುರಾಮ್ 
ರಚನೆ/ಸಂಗೀತ: ಹಂಸಲೇಖ 
ಗಾಯಕ: ಡಾ. ರಾಜಕುಮಾರ್ 

ನಗುತ ನಗುತ ಬಾಳು ನೀನು ನೂರು ವರುಷ 
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ 
ಬಾಳಿನ ದೀಪ ನಿನ್ನ ನಗು, ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷ 
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ
ಉಲ್ಲಾಸದ ಶುಭ ದಿನಕೆ ಸಂತೋಷವೇ ಉಡುಗೊರೆಯು 

ಹೂವು ನಕ್ಕಾಗ ತಾನೆ ಅಂದ ಇರುವುದು ದುಂಬಿ ಬರುವುದು 
ಚಂದ್ರ ನಕ್ಕಾಗ ತಾನೇ ಬೆಳಕು ಬರುವುದು ಕಡಲು ಕುಣಿವುದು 
ಸೂರ್ಯನಾಡೋ ಜಾರೊ ಆಟ ಬಾನು ನಗಲೆಂದೆ 
ಬೀಸೊ ಗಾಳಿ ತೂಗೊ ಪೈರು ಭೂಮಿ ನಗಲೆಂದೆ 
ದೇವರು ತಂದ ಶೃಷ್ಠಿಯ ಅಂದ ಎಲ್ಲರು ನಗಲೆಂದೆ 

ನಗುತ ನಗುತ ಬಾಳು ನೀನು ನೂರು ವರುಷ 
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ

ಆಕಾಶದಾಚೆ ಎಲ್ಲೋ ದೇವರಿಲ್ಲವೋ ಹುಡುಕಬೇಡವೊ 
ಆ ಮಾಯಗಾರ ತಾನು ಇಡಿಯಲಿಲ್ಲವೋ ಗುಡಿಯಲಿಲ್ಲವೋ 
ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವನು ಒಂದಾಗಿ 
ತಂಪಿನಲ್ಲೂ ಕಂಪಿನಲ್ಲೂ ಬರುವನು ಹಿತವಾಗಿ 
ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ 

ನಗುತ ನಗುತ ಬಾಳು ನೀನು ನೂರು ವರುಷ 
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ 
ಬಾಳಿನ ದೀಪ ನಿನ್ನ ನಗು, ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷ 
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ
ಉಲ್ಲಾಸದ ಶುಭ ದಿನಕೆ ಸಂತೋಷವೇ ಉಡುಗೊರೆಯು 

Song: Naguta Naguta BaaLu
Movie: Parashuram

No comments:

Post a Comment