Sunday, September 18, 2016

ಕಣ್ಣೀರ ಧಾರೆ ಇದೇಕೆ

ಚಿತ್ರ: ಹೊಸಬೆಳಕು 
ರಚನೆ: ಚಿ. ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕ/ನಟ: ಡಾ. ರಾಜಕುಮಾರ್ 

ಕಣ್ಣೀರ ಧಾರೆ ಇದೇಕೆ ಇದೇಕೆ ।೨।
ನನ್ನೊಲವಿನಾ ಹೂವೆ, ಈ ಶೋಕವೇಕೆ ।೨।
ಕಣ್ಣೀರ ಧಾರೆ ಇದೇಕೆ ಇದೇಕೆ 

ವಿಧಿಯಾಟವೇನು ಬಲ್ಲವರು ಯಾರೂ, ಮುಂದೇನು ಎಂದು ಹೇಳುವರು ಯಾರು ।೨।
ಬರುವುದು ಬರಲೆಂದು ನಗುನಗುತ ಬಾಳದೆ ।೨।
ನಿರಾಶೆ ವಿಷಾದ ಇದೇಕೆ ಇದೇಕೆ ।೨।

ಕಣ್ಣೀರ ಧಾರೆ ಇದೇಕೆ ಇದೇಕೆ

ಬಾಳೆಲ್ಲ ನನಗೆ ಇರುಳಾದರೇನು, ಜೊತೆಯಾಗಿ ಎಂದೆಂದು ನೀನಿಲ್ಲವೇನು ।೨।
ನಾನಿನ್ನ ಕಣ್ಣಿಂದ ನೋಡುತಿರೆ ಸೊಗಸೆಲ್ಲ ।೨।
ನಿನ್ನಲ್ಲಿ ನೋವು ಇದೇಕೆ ।೨।

ಕಣ್ಣೀರ ಧಾರೆ ಇದೇಕೆ ಇದೇಕೆ
ನನ್ನೊಲವಿನಾ ಹೂವೆ, ಈ ಶೋಕವೇಕೆ
ಕಣ್ಣೀರ ಧಾರೆ ಇದೇಕೆ ಇದೇಕೆ

Song: Kannera Dhaare Ideke
Movie: Hosabelaku 

No comments:

Post a Comment