Wednesday, September 21, 2016

ಹಳ್ಳಿಯಾದರೇನು ಶಿವ

ಚಿತ್ರ: ಮೇಯರ್ ಮುತ್ತಣ್ಣ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕ: ಪಿ. ಬಿ. ಶ್ರೀನಿವಾಸ್

ಹಳ್ಳಿಯಾದರೇನು ಶಿವ, ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ, ಎಲ್ಲ ನಿನ್ನಂತೆ ಶಿವ
ಜಗವೆಲ್ಲ ನಿನ್ನದೇ ಶಿವ

ಎಲ್ಲಾ ಸಂಪತ್ತನಿಟ್ಟೆ ಎಲ್ಲರಿಗೆಂದೇ ಕೊಟ್ಟೆ ।೨।
ಹಂಚಿಕೊಂಡು ಬಾಳಲಾರಿಯದ ದುರಾಸೆ ಜನ
ವಂಚನೆಯ ಮಾಡುತಿರುವರೋ
ಬಡವರನ್ನು ತುಳಿದು ಅಹಂಕಾರದಲ್ಲಿ ಮೆರೆದು
ಅನ್ಯಾಯ  ಮಾಡುತಿರುವರೋ

ಹಳ್ಳಿಯಾದರೇನು ಶಿವ, ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ, ಎಲ್ಲ ನಿನ್ನಂತೆ ಶಿವ
ಜಗವೆಲ್ಲ ನಿನ್ನದೇ ಶಿವ

ಮಹಡಿಯಲ್ಲಿದ್ದರೇನು ಗುಡಿಸಲಲ್ಲಿದ್ದರೇನು ।೨।
ಹಸಿವಿಗೆ ಅಣ್ಣ ತಿನ್ನದೇ, ಚಿನ್ನವನು ತಿನ್ನಲು ಸಾಧ್ಯವೇನು
ಸ್ವಾರ್ಥದಿಂದ ಕೂಡಿ ಏನೇನೋ ಆಟವಾಡಿ
ಬರಿಗೈಲಿ ಕಡೆಗೆ ನೆಡೆವರು

ಹಳ್ಳಿಯಾದರೇನು ಶಿವ, ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ, ಎಲ್ಲ ನಿನ್ನಂತೆ ಶಿವ
ಜಗವೆಲ್ಲ ನಿನ್ನದೇ ಶಿವ
ಎಲ್ಲ ನಿನ್ನಂತೆ ಶಿವ, ಜಗವೆಲ್ಲ ನಿನ್ನದೇ ಶಿವ

Song: Halliyadarenu Shiva
Movie: Mayor Mutthanna

No comments:

Post a Comment