Sunday, September 18, 2016

ಯಾವ ಕವಿಯು ಬರೆಯಲಾರ

ಚಿತ್ರ: ಭಾಗ್ಯದ ಲಕ್ಷ್ಮಿ ಬಾರಮ್ಮ 
ರಚನೆ: ಚಿ. ಉದಯಶಂಕರ್ 
ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್ 
ಗಾಯಕ/ನಾಟ: ಡಾ. ರಾಜಕುಮಾರ್ 

ಯಾವ ಕವಿಯು ಬರೆಯಲಾರ।೨।
ಒಲವಿನಿಂದ ಕಣ್ಣೋಟದಿಂದ
ಹೃದಯದಲ್ಲಿ ನೀನು ಬರೆದ ಈ ಪ್ರೇಮ ಗೀತೆಯ 

ಯಾವ ಕವಿಯು ಬರೆಯಲಾರ, ಬರೆಯಲಾ

ನಿನ್ನ ಕವಿತೆ ಎಂಥ ಕವಿತೆ, ರಸಿಕರಾಡೊ ನುಡಿಗಳಂತೆ  ।೨।
ಮಲ್ಲೆಹೂವು ಅರಳಿದಂತೆ, ಚಂದ್ರ ಕಾಂತಿ ಚೆಲ್ಲಿದಂತೆ ।೨।
ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ

ಯಾವ ಕವಿಯು ಬರೆಲಯಾರ, ಒಲವಿನಿಂದ ಕಣ್ಣೋಟದಿಂದ
ಹೃದಯದಲ್ಲಿ ನೀನು ಬರೆದ ಈ ಪ್ರೇಮ ಗೀತೆಯ 
ಯಾವ ಕವಿಯು ಬರೆಯಲಾರ, ಬರೆಯಲಾ

ಪ್ರೇಮ ಸುಮವು ಅರಳುವಂತೆ, ಪ್ರಣಯ ಗಂಧ ಚೆಲ್ಲುವಂತೆ ।೨।
ಕಂಗಳೆರಡೂ ದುಂಬಿಯಾಗಿ ಭ್ರಮರಗೀತೆ ಹಾಡುವಂತೆ।೨।
ಜೇನಿಗಾಗಿ ತುಟಿಗಳೆರಡು ಸನಿಹ ಸೇರುವಂತೆ

ಯಾವ ಕವಿಯು ಬರೆಲಯಾರ, ಒಲವಿನಿಂದ ಕಣ್ಣೋಟದಿಂದ
ಹೃದಯದಲ್ಲಿ ನೀನು ಬರೆದ ಈ ಪ್ರೇಮ ಗೀತೆಯ 
ಯಾವ ಕವಿಯು ಬರೆಯಲಾರ, ಬರೆಯಲಾ

Song: Yaava Kaviyu Bareyalaara
Movie: Bhagyada Lakshmi Baaramma 

No comments:

Post a Comment