Wednesday, October 19, 2016

ನಾ ಬೆಂಕಿಯಂತೆ, ನಾ ಗಾಳಿಯಂತೆ

ಚಿತ್ರ: ಶಂಕರ್ ಗುರು
ರಚನೆ:ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್, ಪಿ. ಬಿ. ಶ್ರೀನಿವಾಸ್

।। ನಾ ಬೆಂಕಿಯಂತೆ
    ನಾ ಗಾಳಿಯಂತೆ
    ಈ ಜೋಡಿ ಮುಂದೆ ವ್ಯರಿ ಉಳಿಯುವನೆ ।।೨।।

ಸೂರ್ಯ ಬಾನಿಂದ ಓಡಿ ಬಂದಂತೆ ನೀನು ಬಂದಾಗ ನನಗಾಯಿತು
ಮಿಂಚು ಮೇಲಿಂದ ಜಾರಿ ಬಂದಂತೆ  ನಿನ್ನ ಕಂಡಾಗ ನನಗಾಯಿತು
ಒಂದೇ ಬಳ್ಳಿ ತಂದ
ಜೋಡಿ ಹೂವು ನಾವು
ಒಂದೇ ಬಳ್ಳಿ ತಂದ
ಜೋಡಿ ಹೂವು ನಾವು, ಹಾ ಹಾ ಹ

ನಾ ಬೆಂಕಿಯಂತೆ
ನಾ ಗಾಳಿಯಂತೆ
ಈ ಜೋಡಿ ಮುಂದೆ ವ್ಯರಿ ಉಳಿಯುವನೆ

ಸ್ನೇಹ ಕಂಡಾಗ ಪ್ರೀತಿ ಬಂದಾಗ ನಾವು ಹೂವಾಗಿ ಸೇರೋಣ
ದ್ವೇಷ ಕಂಡಾಗ ರೋಷ ಬಂದಾಗ ಜೋಡಿ ಹಾವಾಗಿ ಬೀಳೋಣ
ಸೋಲೋ ಮಾತೆ ಇಲ್ಲ
ಗೆಲುವೇ ಇನ್ನು ಎಲ್ಲ
ಸೋಲೋ ಮಾತೆ ಇಲ್ಲ
ಗೆಲುವೇ ಇನ್ನು ಎಲ್ಲ ಹಾ ಹಾ ಹ

ನಾ ಬೆಂಕಿಯಂತೆ
ನಾ ಗಾಳಿಯಂತೆ
ಈ ಜೋಡಿ ಮುಂದೆ ವ್ಯರಿ ಉಳಿಯುವನೆ
ನೀ ಬೆಂಕಿಯಂತೆ
ನೀ ಗಾಳಿಯಂತೆ
ಈ ಜೋಡಿ ಮುಂದೆ ವ್ಯರಿ ಉಳಿಯುವನೆ

Song: Naa Benkiyanthe Naa Gaaliyante
Movie: Shankar Guru

No comments:

Post a Comment