Wednesday, October 19, 2016

ಕೂಡಿ ಬಾಳೋಣ

ಚಿತ್ರ: ಗಿರಿಕನ್ಯೆ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ, ಎಸ್. ಪಿ. ಬಾಲಸುಬ್ರಮಣಿಯಂ

ರಾಜ್:
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ದುಡಿಮೆಯೆ ಬಡತನ ಅಳಿಸಲು ಸಾಧನ
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ಎಸ್.ಪಿ:
ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲಾ ಹಾಡುವ
ಮೇ:
ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ।೨।

ಎಸ್.ಪಿ:
ರೋಷವು ಎಂದು ಶಾಂತಿಯನ್ನು ನೀಡುವುದಿಲ್ಲ
ದ್ವೇಷವು ಎಂದು ಸುಖವನ್ನು ಕೊಡುವುದೆ ಇಲ್ಲ
ವಿರಸ ವಿಷವು ಸುಳ್ಳಲ್ಲ
ರಾಜ್:
ಪ್ರೇಮದಿ ನೀನು ಎಲ್ಲಾ ಗೆಲ್ಲುವೆ
ಸರಸದಿ ಹರುಷವ ನೀ ಪಡೆವೆ ।೨।
ಮೇ:
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ।೨।

ರಾಜ್:
ನೆಲವ ನಂಬಿ ಬಾಳೋರು ನಾವುಗಳೆಲ್ಲ
ಮಳೆಯ ನಂಬಿ ಬದುಕೋದು ಇಲ್ಲಿ ಎಲ್ಲ
ಹಸಿರೇ ಉಸಿರು ನಮಗೆಲ್ಲ
ಎಸ್.ಜೆ 
ಮೆರೆವ ಜನರ ಭೂತಾಯಿ ಮೆಚ್ಚುವುದಿಲ್ಲ
ದುಡಿವ ಜನರ ಈ ತಾಯಿ ಮರೆಯುವುದಿಲ್ಲ
ಮಣ್ಣೇ ಹೊನ್ನು ನಮಗೆಲ್ಲ
ರಾಜ್:
ದುಡಿಮೆಗೆ ಫಲವ ಕಂಡೇಕಾಣುವೆ
ಬೆವರಿಗೆ ಬೆಲೆಯನು ನೀ ಪಡೆವೆ
ಮೇ:
ಬೆವರಿಗೆ ಬೆಲೆಯನು ನೀ ಪಡೆವೆ

ಮೇ:
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ।೨।
ದುಡಿಮೆಯೆ ಬಡತನ ಅಳಿಸಲು ಸಾಧನ
।। ಎಂದೂ ನಾವು ಒಂದೆಂದು ಕೂಗಿ ಹೇಳುವ
    ಸ್ನೇಹ ನಮ್ಮ ಬಲವೆಂದು ಎಲ್ಲಾ ಹಾಡುವ  ।।
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ।೨।

Song: Koodi Balona
Movie: Girikanye 

No comments:

Post a Comment