Wednesday, October 19, 2016

ಥೈ ಥೈ ಬಂಗಾರಿ

ಚಿತ್ರ: ಗಿರಿಕನ್ಯೆ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯಕ/ನಟ: ಡಾ. ರಾಜಕುಮಾರ್

ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ ।೨।
ಬೆಟ್ಟಾದ ಮೇಲಿಂದ ಓಡೋಡಿ ಬಂದಂತ ಕಾವೇರಿ, ವ್ಯಯಾರಿ
ಆಡಿ ನಲಿ ನಲಿ ಮಯೂರಿ
ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ ।೨।

ದಾನನದ ದೇವತೆಯಂತೆ ಬಂದಿರುವೆ ಎದುರಲ್ಲಿ
ಜೇನಾಗಿ ನೀ ತುಂಬಿರುವೆ ನನ್ನೆದೆಯ ಹೂವಲ್ಲಿ
ನೀನಾಗಿ ಆಡುತಲಿರುವೆ ಮನಸೆಂಬ ಮಾಡುವಲ್ಲಿ
ಮಿಂಚಾಗಿ ಹರಿದಾಡಿರುವೆ ಈ ನನ್ನ ಮೈಯ್ಯಲ್ಲಿ
ಈ ನನ್ನ ಮೈಯ್ಯಲ್ಲಿ

ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ
ಥೈ ಥೈ ಥೈ ಥೈ ಬಂಗಾರಿ

ಹಾರಾಡೋ ಹಕ್ಕಿಗಳಲ್ಲಿ ಅರಗಿಳಿಯೆ ಅಂದವು
ನಾ ಕಂಡ ಹೆಣ್ಣುಗಳಲ್ಲಿ ಚೆಲುವೆ ನೀ ಚೆಂದವು
ಮುಳ್ಳೆಲ್ಲ ಹೂವಿನ ಹಾಗೆ ನಿನ್ನೊಡನೆ ನೆಡೆವಾಗ
ಉರಿ ಬಿಸಿಲು ಹುಣ್ಣಿಮೆಯಂತೆ ಹೆಣ್ಣೇ ನೀ ನಗುವಾಗ
ಹೆಣ್ಣೇ ನೀ ನಗುವಾಗ

ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ
ಥೈ ಥೈ ಥೈ ಥೈ ಬಂಗಾರಿ

ಜಿಗಿದಾಡೋ ಜಿಂಕೆಗಳಂತೆ ಕಾಡೆಲ್ಲಾ ಓಡುವ
ನಲಿದಾಡೋ ಚಿಟ್ಟೆಗಳಂತೆ ವನವೆಲ್ಲ ನೋಡುವ
ಹರಿದಾಡೋ ನದಿಯಂತಾಗಿ ಗಿರಿಯಿಂದ ಜಾರುವ
ಕಡಲನ್ನು ಕೂಡುವ ಹಾಗೆ ಒಂದಾಗಿ ಸೇರುವ
ಒಂದಾಗಿ ಸೇರುವ

ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ ।೨।
ಬೆಟ್ಟಾದ ಮೇಲಿಂದ ಓಡೋಡಿ ಬಂದಂತ ಕಾವೇರಿ, ವ್ಯಯಾರಿ
ಆಡಿ ನಲಿ ನಲಿ ಮಯೂರಿ ।೪।

Song: Thai Thai Bangari 
Movie: Girikanye 

No comments:

Post a Comment