Wednesday, October 19, 2016

ಯಾರು ನೀನು ಎಂದು

ಚಿತ್ರ: ಗಿರಿಕನ್ಯೆ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯಕ/ನಟ: ಡಾ. ರಾಜಕುಮಾರ್

।। ಯಾರು ನೀನು ಎಂದು ನನ್ನ ಕೇಳುವೆಯಲ್ಲ
     ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ ।।೨।।
ಮೊಗವು ಚೆನ್ನ, ನಗುವು ಚೆನ್ನ ।೨।
ನುಡಿಯು ಚೆನ್ನ ನಡೆಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ
ಇವನ ಗೊತ್ತಿಲ್ಲ ಅನ್ನೋವ್ರೆ ಇಲ್ಲ

ಯಾರೆಂದು ತಿಳಿದಾಗ, ವಿಷಯವ ಅರಿತಾಗ, ನಾಚುತ ನೀನೋಡುವೆ
ತೋಟಕೆ ಬಂದಾಗ, ನನ್ನನು ಕಂಡಾಗ, ಕಣ್ಣಲೇ ನೀ ಕಾಡುವೇ
ಕೆಲಸವು ನಿಂತಾಗ, ನೆರಳಿಗೆ ಬಂದಾಗ, ಎದುರಲಿ ನೀ ನಿಲ್ಲುವೆ
ಹಸಿರೆಲೆ ಕೈಯ್ಯಲ್ಲಿ, ಅಡಿಕೆಯು ಬಾಯಲ್ಲಿ, ಸುಣ್ಣವ ತಾ ಎನ್ನುವೇ
ಹೂ ನಗೆಯ ಚೆಲ್ಲುತಲಿ ನನ್ನೇ ಗೆಲುವೆ

ಏ ಹೇ...  ಯಾರು ನೀನು ಎಂದು ನನ್ನ ಕೇಳುವೆಯಲ್ಲ
ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಮೊಗವು ಚೆನ್ನ, ನಗುವು ಚೆನ್ನ
ನುಡಿಯು ಚೆನ್ನ ನಡೆಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ
ಇವನ ಗೊತ್ತಿಲ್ಲ ಅನ್ನೋವ್ರೆ ಇಲ್ಲ

ಹುಣ್ಣಿಮೆ ರಾತ್ರೀಲಿ, ತಣ್ಣನೆ ಗಾಳೀಲಿ, ಬೇಸರ ನೀ ಹೊಂದುವೆ
ನೋವಲಿ ನೀ ಬೆಂದು, ಆಸರೆ ಬೇಕೆಂದು, ನನ್ನನು ನೀ ಕೂಗುವೇ
ಕಾಣದೆ ಹೋದಾಗ, ತಡೆಯದೆ ನೀನಾಗ, ಹುಡುಕುತ ಹೋಡಾಡುವೆ
ಗಾಳಿಗೆ ತೂರಾಡಿ, ಚಳಿಯಲಿ ಓಲಾಡಿ, ಮಳೆಯಲು ನೀ ಬೆವರುವೇ 
ಕಂಡೊಡನೆ ತೋಳಿನಲಿ ಬಳಸೇ ಬಿಡುವೆ

ಏ ಹೇ...  ಯಾರು ನೀನು ಎಂದು ನನ್ನ ಕೇಳುವೆಯಲ್ಲ
ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಮೊಗವು ಚೆನ್ನ, ನಗುವು ಚೆನ್ನ ।೨।
ನುಡಿಯು ಚೆನ್ನ ನಡೆಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ
ಇವನ ಗೊತ್ತಿಲ್ಲ ಅನ್ನೋವ್ರೆ ಇಲ್ಲ

Song: Yaaru Neenu
Movie: Girikanye 

No comments:

Post a Comment