Saturday, October 22, 2016

ನಗುವೆಯಾ ಹೆಣ್ಣೆ ನಾನು

ಚಿತ್ರ : ಪ್ರೇಮದ ಕಾಣಿಕೆ
ರಚನೆ : ವಿಜಯ ನರಸಿಂಹ 
ಸಂಗೀತ : ಉಪೇಂದ್ರ ಕುಮಾರ್ 
ಗಾಯಕ/ನಟ : ಡಾ. ರಾಜ್ಕುಮಾರ್, ಎಚ್. ಪಿ. ಗೀತ

ಗಂ:  ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ, ಅರಿತೆಯಾ ಕಲಿಯುವಾ ದಾರಿ ಈಗ
        ಸಹಜವು ನೆಡೆವನು ಎಡವುವುದು, ಸಹಜವು ಜಾರೋನು ಉರುಳೋದು
        ಇನ್ನೆಂದು ಹಿರಿಯರ ಈ ಹೊನ್ನ ನುಡಿಯ, ಮರೆಯಬೇಡವೆ 
        ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ, ಅರಿತೆಯಾ ಕಲಿಯುವಾ ದಾರಿ ಈಗ
ಹೆ:   ಕಲಿತೆನು ನೀತಿಯ ನುಡಿಗಳನು, ಕಲಿಸಿದೆ ನೆಡೆಯುವ ರೀತಿಯನು
        ಎಂದೆಂದು ನಾನಿನ್ನ ಈ ಜಾಣೆ ನುಡಿಯ ಮರೆತು ಬಾಳೆನು

ಗಂ:  ಚೆಲುವೆಯೆ ನೀ ಜಾಣೆ ಮುತ್ತಂತ ಮಾತಾಡಿ, ಮನಕೆ ಆನಂದ ತಂದೆ ।೨।
ಹೆ:   ರಸಿಕನೆ ಸಾಕಿನ್ನು ಹೊಗಳಿಕೆ ಏಕಿನ್ನು
        ನಿನಗೆ ನಾ ಸೋತುಹೋದೆ ।೨।

ಗಂ:  ನಗುವೆಯಾ ।೨।

ಹೆ:   ಬಯಸದೆ ನೀ ಬಂದೆ ನೂರಾಸೆಯಾ ತಂದೆ, ಮರೆವೆನೇ ಇನ್ನು ನಿನ್ನ ।೨।
ಗಂ:  ಬಯಕೆಯ ಹೂವಾದೆ, ಒಲವಿನ ಜೇನಾದೆ
        ಬಿಡುವೆನೆ ನಾನು ನಿನ್ನ ।೨।

ಗಂ:  ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ, ಅರಿತೆಯಾ ಕಲಿಯುವಾ ದಾರಿ ಈಗ
        ಸಹಜವು ನೆಡೆವನು ಎಡವುವುದು, ಸಹಜವು ಜಾರೋನು ಉರುಳೋದು
        ಇನ್ನೆಂದು ಹಿರಿಯರ ಈ ಹೊನ್ನ ನುಡಿಯ, ಮರೆಯಬೇಡವೆ
        ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ, ಅರಿತೆಯಾ ಕಲಿಯುವಾ ದಾರಿ ಈಗ

Song: Naguveya Henne Naanu
Movie: Premada Kanike 

No comments:

Post a Comment