Sunday, October 16, 2016

ಮೈಸೂರು ಮಲ್ಲಿಗೆ

ಚಿತ್ರ: ಬಂಗಾರದ  ಮನುಷ್ಯ
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ: ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ 

ಮೇ:  ಐಲೆಸಾ ಐಸಾ ಒ ಹೊ,  ಸಾಗಲಿ ಐಸಾ ಒ ಹೊ 
        ತೇಲಲಿ ಐಸಾ ಒ ಹೊ, ಗಾಳಿಲಿ ಐಸಾ ಒ ಹೊ 

ಗಂ:  ಆ ಹಾ ಮೈಸೂರು ಮಲ್ಲಿಗೆ, ದುಂಡು ಮಲ್ಲಿಗೆ 
        ನನ್ನಾ, ಒಲವಿನ ಸಿರಿಯಾಗಿ, ಅರಳುತ ಚೆಲುವಾಗಿ 
        ಮನಸಲಿ ನೀನೆ ತುಂಬಿರುವೆ ।೨।
ಮೇ:  ಅಲೆ ಅಲೆ ನಲಿಯುತಿದೆ, ಹನಿ ಹನಿ ಚಿಮ್ಮುತಿದೆ ।೨।
ಗಂ:  ಮುಗಿಲ ಕಡೆ ಚಪಂ ಚಪಂ  ನಾರಿ ಸುಂದಾರಿ ನೋಡೇ ವಯ್ಯಾರಿ ವಯ್ಯಾರಿ 
ಹೆ:   ಓ ಹೊ ಚೆಲುವಾಂತ ಚೆನ್ನಿಗ, ನನ್ನ ಚೆನ್ನಿಗ 
        ನಿನ್ನಾ, ಸೊಗಸಿಗೆ ಬೆರಗಾದೆ, ಮಾತಿಗೆ ಬೆರೆಗಾದೆ 
        ನನ್ನಲಿ ನೀನೆ ತುಂಬಿರುವೆ 

ಗಂ:  ಬಾಳೆಂಬ ಕಡಲಲ್ಲಿ ನಾನು, ಕಂಡೆ ಬಂಗಾರದ ಹೆಣ್ಣು ಮೀನು ।೨।
        ಕಣ್ಣಿಂದ ಬಲೆಬೀಸಿ ಸೆಳೆದೆ, ಸೆರೆಯಾಗಿ ಮನಸೋತು ನೆಡೆದೆ 
ಹೆ:   ಜೊತೆಗಾರ ನೀನಾದೆ ನನಗೆ, ಅಹ ಜೊತೆಗಾರ ನೀನಾದೆ ನನಗೆ 
        ಬಾ ಗೆಳೆಯ, ಅಹ ನನ್ನಿನಿಯ, ಚೆನ್ನ ಇನ್ನು ಎಂದು ಮುಂದೆ ನಿನ್ನದೆ ಹೃದಯ 

ಮೇ:  ಐಲೆಸಾ ಐಸಾ ।೩।
ಹೆ:   ಓ ಹೊ ಚೆಲುವಾಂತ ಚೆನ್ನಿಗ, ನನ್ನ ಚೆನ್ನಿಗ 
        ನಿನ್ನಾ, ಸೊಗಸಿಗೆ ಬೆರಗಾದೆ, ಮಾತಿಗೆ ಬೆರೆಗಾದೆ 
        ನನ್ನಲಿ ನೀನೆ ತುಂಬಿರುವೆ 

ಗಂ:  ಕೈ ಬಳೆ ಆಡುತಾ ಗಲ್ ಗಲ್ ಎನ್ನಲು, ನನ್ನೆದೆ ಸೊಲುತ ಹಾಯ್ ಹಾಯ್ ಎನ್ನಲು ।೨।
        ಗೆಜ್ಜೆಯ ತಾಳಕ್ಕೆ, ನೂಪುರ ಮೇಲಕ್ಕೆ ।೨।
ಹೆ:   ಒಲಿದು ಹಾಡಲೆಂದು ಬಂದೆ, ಮನಸು ನೀಡಲೆಂದು ಬಂದೆ 
        ಬಾ ವೀರ, ಅಹ ಹಮ್ಮೀರ, ಬಲ್ಲೆ ಎಲ್ಲ ನನ್ನ ನಲ್ಲ ಬಾ ಸರದಾರ 

ಮೇ:  ಐಲೆಸಾ ಐಸಾ ।೪।
ಗಂ:  ಆ ಹಾ ಮೈಸೂರು ಮಲ್ಲಿಗೆ, ದುಂಡು ಮಲ್ಲಿಗೆ 
ಹೆ:   ಓ ಹೊ ಚೆಲುವಾಂತ ಚೆನ್ನಿಗ, ನನ್ನ ಚೆನ್ನಿಗ 
ಜೊ:   ನಿನ್ನಾ, ಸೊಗಸಿಗೆ ಬೆರಗಾದೆ, ಮಾತಿಗೆ ಬೆರೆಗಾದೆ 
         ನನ್ನಲಿ ನೀನೆ ತುಂಬಿರುವೆ ।೨।
ಮೇ:  ಐಲೆಸಾ ಐಸಾ ಒ ಹೊ,  ಸಾಗಲಿ ಐಸಾ ಒ ಹೊ 
        ತೇಲಲಿ ಐಸಾ ಒ ಹೊ, ಗಾಳಿಲಿ ಐಸಾ ಒ ಹೊ 

Song: Mysooru Mallige
Movie: Bangarada Manushya 

No comments:

Post a Comment